ಕನ್ನಡದ ಡಿಜಿಟಲ್ ನವೋದಯ’ ಎಂಬ ಪದಗುಚ್ಛವೇ ರೋಮಾಂಚ ಹುಟ್ಟಿಸುವಂಥದ್ದು. ಕನ್ನಡವನ್ನು ಪ್ರೀತಿಸುವ ಯಾರೇ ಆದರೂ ಅದು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಮತ್ತು ನವೀಕರಣಗೊಳ್ಳಬೇಕು ಎಂದು ಒಪ್ಪುತ್ತಾರೆ. ಎಲ್ಲ ಜೀವಂತ ಭಾಷೆಗಳಂತೆ ಕನ್ನಡವೂ ಕಾಲದ ಕರೆಗೆ ಓಗೊಟ್ಟು ಬದಲಾಗುತ್ತಾ, ಹೊಸದಾಗುತ್ತಾ ಬಂದಿದೆ. ಮಾಹಿತಿ ತಂತ್ರಜ್ಞಾನ ಯುಗದ ಅಂತರ್ಜಾಲ ಪ್ರಪಂಚದಲ್ಲಿ ಕನ್ನಡ ಪಡೆದಿರುವ ಹೊಸ ರೂಪ ಅಂದರೆ ಅದು ಡಿಜಿಟಲ್ ರೂಪ.
ಕೂದಲಗಲದಲ್ಲಿ ಚಲನೆ – ಕೂದಲಿನಷ್ಟು ಕಡಿಮೆ ವ್ಯಾಸವುಳ್ಳ ಅತಿ ತೆಳುವಾದ ಕೊಳವೆಗಳಲ್ಲಿ ದ್ರವಗಳು ಏರುವುದನ್ನು ಅಥವಾ ಇಳಿಯುವುದನ್ನು ವಿವರಿಸಲು ಬಳಸುವ ಪದ.
ರಕ್ಷಿತ ವಿದ್ಯುತ್ ತಂತಿ – ವಿದ್ಯುತ್ ಹರಿಯುವ ಒಂದು ತಂತಿಯನ್ನು ವಾಹಕದ ಒಂದು ಪದರ, ಅದರ ಮೇಲೆ ವಿದ್ಯುತ್ ರಕ್ಷಕದ ಒಂದು ಹೊದಿಕೆ ಹಾಕಿ ಭದ್ರ ಮಾಡಿರುವುದು.
ಕ್ಯಾಲೊರಿ – ಒಂದು ಗ್ರಾಂ ನೀರಿನ ಉಷ್ಣತೆಯನ್ನು ಒಂದು ಡಿಗ್ರಿ ಸೆಂಟಿಗ್ರೇಡ್‌ಗೆ ಏರಿಸಲು ಬೇಕಾದ ತಾಪದ ಪ್ರಮಾಣ. ಹಳೆಯ ಕಾಲದ ಈ ಮೂಲಮಾನವನ್ನು ಈಗ ಜೌಲ್ ಎಂಬ ಹೊಸ ಮೂಲಮಾನದಿಂದ ಸ್ಥಳಾಂತರಿಸಲಾಗಿದೆ.
ಛಾಯಾಚಿತ್ರಗ್ರಾಹಕ – ಛಾಯಾಚಿತ್ರಗಳನ್ನು ತೆಗೆಯಲು ಅಥವಾ ಚಲನಚಿತ್ರ ಬಿಂಬಗಳನ್ನು ಪ್ರಕಟಪಡಿಸಲು ಬಳಸುವ ಒಂದು ದೃಶ್ಯೋಪಕರಣ
ಕೆನಡಾ ಅಂಟು ಅಥವಾ ಗೋಂದು(ಗುಗ್ಗಳ) – ಗಾಜಿನಂತೆ ಕಾಣುವ ಹಳದಿ ಬಣ್ಣದ ಒಂದು ಅಂಟು ಪದಾರ್ಥ. ಸೂಕ್ಷದರ್ಶಕದಲ್ಲಿ ನೋಡಲಾಗುವ ವಸ್ತುಗಳನ್ನು ನೋಡುತಟ್ಟೆಗೆ ಏರಿಸುವಾಗ ಇದನ್ನು ಬಳಸುತ್ತಾರೆ. ಉತ್ತರ ಅಮೆರಿಕಾದ ಕಾಡುಗಳಲ್ಲಿ ಸಿಗುವ ಮರದಿಂದ ಇದನ್ನು ಪಡೆಯಲಾಗುವುದರಿಂದ ಈ ವಸ್ತುವಿಗೆ ಈ ಹೆಸರು ಬಂದಿದೆ.
ಉತ್ಪತ್ತಿಸುವ ಸ್ಥಾವರ – ತಾನು ಇಂಧನವನ್ನು ಸೇವಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಅಧಿಕಾಧಿಕ ಬೀಜಕೇಂದ್ರಗಳನ್ನು ಉತ್ಪಾದಿಸುವ ಅಣುಸ್ಥಾವರ
ಪಕ್ಕದ ದಾರಿ – ಭೌತಶಾಸ್ತçದಲ್ಲಿ ಈ ಪದವನ್ನು ಸಾಮಾನ್ಯವಾಗಿ ವಿದ್ಯುತ್ತಿನ ಸಂದರ್ಭದಲ್ಲಿ ಬಳಸುತ್ತಾರೆ. ಇಲ್ಲಿ ಈ ಪದವು ಒಂದು ವಿದ್ಯುನ್ಮಂಡಲದ ಅಂಗ ಅಥವಾ ಅಂಗಗಳನ್ನು ಜೋಡಿಸುವ ಇನ್ನೊಂದು ದಾರಿಯನ್ನು ಸೂಚಿಸುತ್ತದೆ.
Like us!
Follow us!