ಭಟ್ಟಿ ಇಳಿಸುವಿಕೆ- ಒಂದು ದ್ರವವನ್ನು ಆವಿಯ ರೂಪಕ್ಕೆ ಪರಿವರ್ತಿಸುವ ಹಾಗೂ ಅದು ಮತ್ತೆ ತಂಪುಗೊಂಡು ದ್ರವರೂಪಕ್ಕೆ ಬಾಷ್ಪೀಕರಣಗೊಳ್ಳುವಂತೆ ಮಾಡುವ ಪ್ರಕ್ರಿಯೆ. ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ, ಆ ನೀರನ್ನು ಕುಡಿಯಲು ಯೋಗ್ಯವಾಗಿಸಲು ಈ ವಿಧಾನವನ್ನು ಬಳಸುತ್ತಾರೆ.
ದೃಷ್ಟಿಕ್ಷೇತ್ರದ ಹರಹು – ಛಾಯಾಗ್ರಹಕ ಯಂತ್ರ (ಕ್ಯಾಮೆರಾ) ಅಥವಾ ಅಂತಹ ದೃಶ್ಯಸಂಬಂಧೀ ಉಪಕರಣಗಳು ಒಂದು ವಸ್ತುವಿನ ಸುಸ್ಪಷ್ಟ ಬಿಂಬವನ್ನು ಉತ್ಪಾದಿಸುವಷ್ಡು ವಿಸ್ತಾರದ ಶ್ರೇಣಿ.
ಧ್ರುವೀಕರಣ ನಿವಾರಕ – ವಿದ್ಯುತ್ ರಾಸಾಯನಿಕ ( ವೋಲ್ಟಾಯಿಕ್) ಕೋಶದಲ್ಲಿ ಧ್ರುವೀಕರಣವನ್ನು ಮ್ಯಾಂಗನೀಸ್ ಡೈಯಾಕ್ಸೈಡ್ ನಂತಹ ವಸ್ತುವನ್ನು ಬಳಸಲಾಗುತ್ತದೆ.
ಸಾಂದ್ರತೆ – ಏಕಘಟಕ ಪರಿಮಾಣದಲ್ಲಿರುವ ಒಂದು ವಸ್ತುವಿನ ದ್ರವ್ಯರಾಶಿ.
ಸಾಂದ್ರತಾ ಮಾಪಕ – ಒಂದು ಚಿತ್ರಪರದೆ ಅಥವಾ ಛಾಯಾಚಿತ್ರದ ಮುದ್ರಿತ ಪ್ರತಿಯಲ್ಲಿನ ಒಂದು ಬಿಂಬದ ಸಾಂದ್ರತೆಯನ್ನು ಅಳೆಯಲು ಬಳಸುವ ಒಂದು ಮಾಪಕ.
ಗುಣಗೆಡಿಸುವುದು – ಒಂದು ವಸ್ತುವಿಗೆ ತಾಪ ನೀಡಿ ಅಥವಾ ರಾಸಾಯನಿಕ ಪದಾರ್ಥಗಳು ಮುಂತಾದುವನ್ನು ಸೇರಿಸಿ ಅದರ ಮೂಲ ಸ್ವಭಾವವನ್ನು ಕೆಡಿಸುವುದು.
ನಿಷ್ಕಾಂತೀಕರಣ – ಒಂದು ಅಯಸ್ಕಾಂತದ ಕಾಂತಕ್ಷೇತ್ರವನ್ನು ಉಷ್ಣತಾ ಉಪಚಾರ ನೀಡಿ ಅಥವಾ ಪರ್ಯಾಯಗೊಳ್ಳುವ ವಿದ್ಯುತ್ ನೀಡಿ ತೆಗೆದು ಹಾಕುವುದು.
ಅಂಕೀಯ ಗಣಕಯಂತ್ರ- 0 ಮತ್ತು 1 ಎಂಬ ಅಂಕಿಗಳಲ್ಲಿರುವ ದತ್ತಾಂಶವನ್ನು ಬಳಸಿಕೊಂಡು ಕೆಲಸ ಮಾಡುವ ಗಣಕಯಂತ್ರ. ಇದು ಭೌತಿಕ ಪರಿಮಾಣಗಳನ್ನು ಬಳಸುವ ಗಣಕಯಂತ್ರಕ್ಕಿಂತ ( analogue computer) ಗಿಂತ ಭಿನ್ನವಾದದ್ದು.
Like us!
Follow us!