Daughter

ಮಗಳು – ಒಂದು  ಬೀಜಕೇಂದ್ರದ ವಿಭಜನೆಯಿಂದ ಹುಟ್ಟಿದ ಇನ್ನೊಂದು ಬೀಜಕೇಂದ್ರ.

De Broglie wave

ಡಿ ಬ್ರಾಗ್ಲಿ ಅಲೆ  – ಪ್ರೋಟಾನು ಅಥವಾ ಎಲೆಕ್ಟ್ರಾನಿನಂತಹ ಒಂದು‌ ಕಣಕ್ಕೆ ಸಂಬಂಧಿಸಿದ ಅಲೆ.‌1924 ರಲ್ಲಿ ಲೂಯಿಸ್ ಡಿ ಬ್ರಾಗ್ಲಿಯವರು ಇದರ ಪ್ರಸ್ತಾಪ ಮಾಡಿದರು.

Dead beat 

ಅತಿ ಕುಗ್ಗಿದ – ಗ್ಯಾಲ್ವನೋಮೀಟರಿನಂತಹ ಉಪಕರಣದಲ್ಲಿನ ಆಂದೋಲನಗಳು ಅತ್ಯಂತ ಕಡಿಮೆ ಸಮಯದಲ್ಲಿ ನಿಂತು ಹೋದಾಗ ಅದನ್ನು ಅತಿ ಕುಗ್ಗಿದ ಸ್ಥಿತಿಯದ್ದು ಎನ್ನುತ್ತಾರೆ.

Dead earth

ಭೂ ಸಂಪರ್ಕ – ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಬಳಸುವ ಪದವಿದು.  ಯಾವುದೇ ಒಂದು ವಾಹಕಕ್ಕೂ (ವಿದ್ಯುತ್ ಹರಿಯುತ್ತಿರುವ) ಭೂಮಿಗೂ ಕಡಿಮೆ ಪ್ರತಿರೋಧವುಳ್ಳ ಸಂಪರ್ಕ ಕಲ್ಪಿಸಿರುವ ಸನ್ನಿವೇಶ ಇದು‌.

ಕನ್ನಡ ಗಾದೆಮಾತು – ಗಾಣಗಿತ್ತಿ ಅಯ್ಯೋ ಅಂದ್ರೆ ನೆತ್ತಿ ತಣ್ಣಗಾಗುತ್ತಾ?

ಕನ್ನಡಿಗರು ತಮ್ಮ  ಮಾತಿನಲ್ಲಿ ಆಗಾಗ ಬಳಸುವ ಒಂದು ಗಾದೆ ಮಾತು ಇದು. ಗಾಣ ಅಂದರೆ ಎಣ್ಣೆ ತೆಗೆಯುವ ಯಂತ್ರ, ಆದರಲ್ಲಿ ಕೆಲಸ ಮಾಡಿ ಎಣ್ಣೆ ತೆಗೆಯುವವಳು ಗಾಣಗಿತ್ತಿ. ಎಂದಾದರೂ ಮೈಯಲ್ಲಿ ಉಷ್ಣ ಹೆಚ್ಚಾಗಿ    ತಲೆಯೇನಾದರೂ ಬಿಸಿಯಾಗಿ ‘ಯಾರಾದರೂ ನೆತ್ತಿಗೆ ಒಂದು  ತೊಟ್ಟು ಎಣ್ಣೆ ತಿಕ್ಕಿದರೆ  ಚೆನ್ನ ಅಲ್ಲವೇ’ ಅನ್ನಿಸುತ್ತಿದ್ದಾಗ ನಾವು ಗಾಣಗಿತ್ತಿಯನ್ನು ಭೇಟಿಯಾದೆವು  ಎಂದಿಟ್ಟುಕೊಳ್ಳೋಣ. ಆಗ ಆಕೆ ತನ್ನ ಬಳಿ ಇರುವ ಎಣ್ಣೆಯಲ್ಲಿ ಒಂದು ಹನಿಯನ್ನೂ ಕೊಡದೆ ಬಾಯಲ್ಲಿ ಮಾತ್ರ “ಅಯ್ಯೋ ಪಾಪ, ನಿಮಗೆ ಉಷ್ಣ […]

ಪದಗಳ  ಉಚ್ಚಾರಣೆ ಅಂದರೆ ತೊಟ್ಟಿಲಲ್ಲಿ ಮಲಗಿರುವ ಎಳೆಮಗುವಿನ ಕೆನ್ನೆ ಮುಟ್ಟಿದಂತೆ….

ಈಚೆಗೆ ಬಿ.ಎಸ್ಸಿ. ಪದವಿಯ ತರಗತಿಯೊಂದರಲ್ಲಿ ಪುರಂದರ ದಾಸರ ‘ಉದರ ವೈರಾಗ್ಯವಿದು’ ಕೀರ್ತನೆಯ ಪಾಠ ಮಾಡುತ್ತಿದ್ದೆ. ಕಷ್ಟ ಪದಗಳ ಅರ್ಥಗಳನ್ನು ಬರೆಸಿ ಓದಿಸುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ‘ಉದರ = ಹೊಟ್ಟೆ’ ಎಂದು ಓದುವ ಸಂದರ್ಭದಲ್ಲಿ ‘ಉದಾರ’ ಎಂದು ಓದಿದಳು. ಆಗ ಆ ವಿದ್ಯಾರ್ಥಿನಿಯ ಉಚ್ಚಾರವನ್ನು ತಿದ್ದುವಾಗ ಒಂದೇ ಒಂದು‌ ದೀರ್ಘವು ಅರ್ಥದಲ್ಲಿ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂದು ಹೇಳಬೇಕಾಯಿತು.         ‘ಉದರ’ ಕ್ಕೆ ನಿಘಂಟಿನಲ್ಲಿ ಹೊಟ್ಟೆ, ಜಠರ, ಆಹಾರ, ಮಧ್ಯ ಭಾಗ ಎಂಬ ಅರ್ಥಗಳಿದ್ದರೆ, ‘ಉದಾರ’ಕ್ಕೆ […]

D.C. (Direct Current)

ನೇರ ವಿದ್ಯುತ್ ಪ್ರವಾಹ – ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವ ವಿದ್ಯುತ್ ಪ್ರವಾಹ.

Day

ದಿನ – ತನ್ನ ಅಕ್ಷದ ಮೇಲೆ ತಿರುಗುತ್ತಿರುವ ಭೂಮಿಯು ತನ್ನ ಒಂದು ಸುತ್ತು ಪೂರೈಸಲು ತೆಗೆದುಕೊಳ್ಳುವ ‌ಸಮಯ. 

Dating technique

ಕಾಲಗಣನೆಯ ತಂತ್ರವಿಧಾನ – ಕಲ್ಲು ಬಂಡೆಗಳು, ಉತ್ಖನನ(ಅಗೆತ) ಸ್ಥಳದ ವಸ್ತುಗಳು, ಪಳೆಯುಳಿಕೆಗಳೇ ಮುಂತಾವುಗಳ ಕಾಲವನ್ನು ನಿಗದಿ ಮಾಡುವ ಅಥವಾ ಕಂಡು ಹಿಡಿಯುವ ವಿಧಾನಗಳು

Data base

ದತ್ತಾಂಶ ಕಣಜ ಅಥವಾ ಮಾಹಿತಿ‌ ಕಣಜ – ಗಣಕ ಯಂತ್ರದಲ್ಲಿ ಸಂಕೇತ ನೀಡಿ ಸಂಗ್ರಹಿಸಬಹುದಾದ ಮತ್ತು ವಿವಿಧ ಶಿರೋನಾಮೆಗಳಡಿಯಲ್ಲಿ ಪಡೆದುಕೊಳ್ಳಬಹುದಾದ ಮಾಹಿತಿಯ ದೊಡ್ಡ ಸಂಗ್ರಹ.

Page 104 of 140

Kannada Sethu. All rights reserved.