ಐಕೋನೋಸ್ಕೋಪ್ – ಸಮಬಿಂಬ ದರ್ಶಕ – ಇದು ಒಂದು ರೀತಿಯ ದೂರದರ್ಶನ ಯಂತ್ರದ ಛಾಯಾಗ್ರಾಹಕ ಕೊಳವೆ. ಇದರಲ್ಲಿ ತುಂಬ ಹೆಚ್ಚು ವೇಗವನ್ನು ಹೊಂದಿರುವ ಎಲೆಕ್ಟ್ರಾನು ಕಿರಣಪುಂಜವು ಬೆಳಕಿಗೆ ಸ್ಪಂದಿಸುವ ಚಿತ್ರಸಮೂಹವನ್ನು ಹಾಯ್ದು ಬರುತ್ತದೆ. ಈ ಚಿತ್ರಸಮೂಹಕ್ಕೆ ವಿದ್ಯುತ್ ಸಂಗ್ರಹ ಮಾಡುವ ಸಾಮರ್ಥ್ಯ ಇರುತ್ತದೆ.
ಐಸ್ ಪಾಯಿಂಟ್ – ಮಂಜುಗಟ್ಟುವ ಬಿಂದು – ಒಂದು ಪ್ರಮಾಣೀಕೃತ ಹವಾಮಾನೀಯ ಒತ್ತಡದಲ್ಲಿ ಮಂಜುಗಡ್ಡೆಯು ಕರಗುವ ಬಿಂದು. ಇದಕ್ಕೆ ೦(ಸೊನ್ನೆ) ಡಿಗ್ರಿ ಸೆಂಟಿಗ್ರೇಡ್ ಮೌಲ್ಯವನ್ನು ಕೊಟ್ಟಿದ್ದಾರೆ.
ಐಸ್ – ಮಂಜುಗಡ್ಡೆ – ನೀರಿನ ಘನ ರೂಪ.
Like us!
Follow us!