ಹತ್ತ್ ಜನಕ್ಕೆ ಹುಲ್ಲ್ ಕಡ್ಡಿ, ಒಬ್ಬಂಗೆ ತಲೆಹೊರೆ.

ಕನ್ನಡದ ಒಂದು ಸತ್ವಯುತ ಗಾದೆಮಾತು. ಇದರ ಅರ್ಥ ಹೀಗಿದೆ. ಹುಲ್ಲುಹೊರೆಯೊಂದನ್ನು ಹತ್ತು ಜನ ಹಂಚಿಕೊಂಡು ಹೊತ್ತರೆ ಒಬ್ಬೊಬ್ಬರಿಗೆ ಹೊರಲು ಒಂದೊಂದೇ ಹುಲ್ಲುಕಡ್ಡಿ ಬರುವುದರಿಂದ ಅದು ಭಾರ ಅನ್ನಿಸುವುದಿಲ್ಲ. ಅದೇ ಹುಲ್ಲುಹೊರೆಯನ್ನು ಒಬ್ಬನೇ ವ್ಯಕ್ತಿ ಹೊತ್ತರೆ ಅದು ಅವನಿಗೆ ತುಂಬ ಭಾರ ಅನ್ನಿಸುತ್ತೆ.

Acceleration

ವೇಗೋತ್ಕರ್ಷ – ದಿಶಾಯುತ ವೇಗ ಅಥವಾ ದಿಕ್ಕುಳ್ಳ ವೇಗ(ವೆಲಾಸಿಟಿ)ದಲ್ಲಿ  ಉಂಟಾಗುವ ಹೆಚ್ಚಳ.

Abiogenesis

ನಿರ್ಜೀವಿಮೂಲ ಜೀವೋತ್ಪತ್ತಿ – ಜೀವವಿಲ್ಲದ ಕಣಗಳಿಂದ ಜೀವೋತ್ಪತ್ತಿ ಆಗಿರಬಹುದಾದ ಸಾಧ್ಯತೆಯ ಅಧ್ಯಯನ.

ಯಲ್ಲಮ್ಮನ ಕನ್ನಡ ಪಾಠ ಮತ್ತು ಸಾವಿರ ರೂಪಾಯಿ ಸೀರೆಯ ಕಥೆ

ದಿನವೆಲ್ಲ ಪಾತ್ರೆ ತೊಳಿ, ಬಟ್ಟೆ ಒಗಿ ಕಸ ಗುಡಿಸು, ಮನೆ ಒರೆಸು ಎಂಬಿತ್ಯಾದಿ ಕೆಲಸದಲ್ಲಿ ಮುಳುಗಿರುವ ಯಲ್ಲಮ್ಮನಿಗೆ ಹೆಚ್ಚುಕಮ್ಮಿ ನನ್ನದೇ ವಯಸ್ಸು. ಅನೇಕ ವರ್ಷಗಳಿಂದ ನಮ್ಮ ಮನೆಯ ಗೃಹವಾಳ್ತೆ, ದೇಖರೇಖಿಗಳಲ್ಲಿ ಸಹಾಯ ಮಾಡುವ ಪರಿಶ್ರಮೀ ವ್ಯಕ್ತಿ ಅವರು. ಒಂದು ದಿನ (ಸುಮಾರು ಹದಿನೆಂಟು ವರ್ಷಗಳ ಹಿಂದೆ) ಹೀಗೇ ಸುಮ್ಮನೆ ಅವರನ್ನು ಕೇಳಿದೆ “ಯಲ್ಲಮ್ಮ, ನಿಮ್ಗೆ ಓದಕ್ಕೆ, ಬರಿಯಕ್ಕೆ ಬರುತ್ತಾ?”

Amplitude

ಅಲೆಯೆತ್ತರ – ಒಂದು ಅಲೆಯ ಎತ್ತರ. ಇದನ್ನು ಆ ಅಲೆಯ ಮಧ್ಯಬಿಂದುವಿನಿಂದ ಅಳೆಯಲಾಗುತ್ತದೆ.

Alternating current

ಪರ್ಯಾಯ ಹರಿವಿನ ವಿದ್ಯುತ್ – ನಿಯತಕಾಲಿಕವಾಗಿ ವಿರುದ್ಧ ದಿಕ್ಕುಗಳಿಗೆ ಮಗುಚುತ್ತಾ ಹರಿಯುವ ವಿದ್ಯುತ್ ಪ್ರವಾಹ.

Page 113 of 113

Kannada Sethu. All rights reserved.