Component vectors

ಉಪಾಂಗ ದಿಶಾಯುತಗಳು – ಒಂದು ದಿಶಾಯುತದ ಅಂಗಭಾಗಗಳಾಗಿದ್ದು ಆ ದಿಶಾಯುತ ಮಾಡುವ ಪರಿಣಾಮವನ್ನೇ ತಾವೂ ಮಾಡುವ ಪೂರಕ ದಿಶಾಯುತಗಳು.

Complementary colours

ಪೂರಕ ಬಣ್ಣಗಳು – ಪರಸ್ಪರ ಬೆರೆತಾಗ ಬಿಳಿಬಣ್ಣವನ್ನು ಕೊಡುವ ಎರಡು ಬೇರೆ ಬೇರೆ ಬಣ್ಣಗಳು. ಈ ಜೋಡಿಯ ಸಂಖ್ಯೆ ಅನಂತ.

Compass

ದಿಕ್ಸೂಚಿ – ಕಾಂತೀಯ ಬಲಕ್ಷೇತ್ರದ ದಿಕ್ಕನ್ನು ಸೂಚಿಸಲು ಬಳಸುವ ಉಪಕರಣ ಇದು. ಇದರೊಳಗೆ ಮುಕ್ತವಾಗಿ ಓಲಾಡುತ್ತಿರುವ ಅಯಸ್ಕಾಂತವೊಂದು ಭೂಮಿಯೊಳಗಿನ ಅಯಸ್ಕಾಂತವನ್ನು ಅನುಸರಿಸಿ ಉತ್ತರ ದಿಕ್ಕನ್ನು ಸೂಚಿಸುತ್ತದೆ. ಇದರಿಂದಾಗಿ ಈ ಉಪಕರಣವನ್ನು ಭೂಸಂಚಾರ ಅಥವಾ ಜಲಸಂಚಾರದಲ್ಲಿ ದಿಕ್ಕನ್ನು ಖಚಿತ ಪಡಿಸಿಕೊಳ್ಳಲು ವ್ಯಾಪಾಕವಾಗಿ ಬಳಸುತ್ತಾರೆ.

ಸಕ್ರಿಯ ಕನ್ನಡ ತರಗತಿ – ಕನ್ನಡ ಕಲಿಕೆಯ ಶಕ್ತ ರೀತಿ

ಚಟುವಟಿಕೆಯಿಂದ ಪುಟಿಯುವ ಹದಿಹರೆಯದವರನ್ನು ಕಾಲೇಜಿನ ತರಗತಿ ಕೋಣೆಗಳಲ್ಲಿ ಒಂದೇ ಕಡೆ ಕೂರುವಂತೆ ಮಾಡಿ ಅವರಿಗೆ ಆಸಕ್ತಿ ಮೂಡದ ವಿಷಯಗಳನ್ನು ಯಾಂತ್ರಿಕವಾಗಿ ತಲುಪಿಸುವುದು ಅಷ್ಟೇನೂ ಸಂತೋಷದ ವಿಷಯವಲ್ಲ. ವಿಷಯ ಹೀಗಿರುವಾಗ, `ಕನ್ನಡ ತರಗತಿಗಳನ್ನು ಆಸಕ್ತಿದಾಯಕವಾಗಿಸುವುದು ಹೇಗೆ’ ಎಂದು ಯಾವಾಗಲೂ ಯೋಚಿಸುವ ನನ್ನಂತಹ ಅಧ್ಯಾಪಕರಿಗೆ ಸಹಾಯ ಮಾಡುವ ಒಂದು ಪರಿಕಲ್ಪನೆ ಅಂದರೆ ಸಕ್ರಿಯ ತರಗತಿಯದ್ದು. ಸಕ್ರಿಯ ತರಗತಿ ಎಂದರೆ ಏನು? ಮಕ್ಕಳು ನಗುವ, ತಮ್ಮ ಭಾವನೆಗಳನ್ನು, ಪಾಠವು ಕೊಟ್ಟ ಹಾಗೂ ಜೀವನವು ಕೊಟ್ಟ ಅನುಭವಗಳನ್ನು ಮತ್ತು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ […]

ಅತ್ತೆಗೆ ಮೀಸೆ ಬಂದ್ರೆ ಚಿಕ್ಕಪ್ಪಾ ಅನ್ಬಹುದು

ತಮಾಷೆಯಾಗಿ ಕೇಳಿಸುವುದಾದರೂ ತುಂಬ ಅರ್ಥಗರ್ಭಿತವಾದ ಗಾದೆ ಮಾತಿದು. ಅತ್ತೆಗೆ ಮೀಸೆ ಬರುವುದೂ ಇಲ್ಲ, ಅವರನ್ನು ಚಿಕ್ಕಪ್ಪ ಅಂತ ಕರೆಯಲಾಗುವುದೂ ಇಲ್ಲ. ಯಾರಾದರೂ ಆಗದ ಹೋಗದ ಕೆಲಸಗಳ ಬಗ್ಗೆ ಮಾತಾಡಿದರೆ ಅಥವಾ ಪಾಲಿಸಲು ಸಾಧ್ಯವಾಗದ ವಾಗ್ದಾನಗಳನ್ನು ಕೊಟ್ಟರೆ ಈ ಗಾದೆ ಮಾತನ್ನು ನೆನಪಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ನೂರು ರೂಪಾಯಿ ಕೂಡ ಸಂಪಾದಿಸಲಾಗದವನು ತಾನು ಒಂದು ಲಕ್ಷ ರೂಪಾಯಿ ಉಡುಗೊರೆ ಕೊಡುವ ಮಾತಾಡಿದಾಗ ಅಥವಾ ಒಂದು ಹಾಡೂ ಬರದೆ ಇದ್ದವನು ಸಂಗೀತ ಕಛೇರಿ ಮಾಡುತ್ತೇನೆ ಎಂದಾಗ ಜನರು ಮೇಲಿನ ಗಾದೆ ಮಾತನ್ನು […]

Commutator

ವಿನಿಮಯಕ – ಇದು ಏಕಮುಖೀ ವಿದ್ಯುತ್ತು ಹರಿಯುವ ವಿದ್ಯುತ್‌ಚಾಲಕ ಅಥವಾ ವಿದ್ಯುಜ್ಜನಕ ಯಂತ್ರದ ಒಂದು ಇದು ಭಾಗ. ಇದು ಯಂತ್ರದ ವಿದ್ಯುತ್ ಸುರುಳಿಗಳನ್ನು ಹೊರಗಿನ ವಿದ್ಯುನ್ಮಂಡಲಕ್ಕೆ ಜೋಡಿಸುತ್ತದೆ, ಹಾಗೂ ವಿದ್ಯುತ್ ಸುರುಳಿಯು ಸುತ್ತುತ್ತಿರುವಾಗ ಅದರಲ್ಲಿ ಹರಿಯುವ ವಿದ್ಯುತ್ ಪ್ರವಾಹದ ದಿಕ್ಕು ಒಂದೇ ಆಗಿರುವಂತೆ ನೋಡಿಕೊಳ್ಳುತ್ತದೆ.

Comet

ಧೂಮಕೇತು – ಸೂರ್ಯನ ಆಕರ್ಷಣೆಗೊಳಪಟ್ಟು ಚಲಿಸುವ ಒಂದು ಆಕಾಶಕಾಯ. ಮಬ್ಬುಮಬ್ಬು ಅನಿಲದ ಮೋಡಗಳಿಂದ ಉಂಟಾಗಿರುವ ಇದರಲ್ಲಿ ಹೆಚ್ಚು ಪ್ರಕಾಶಮಾನವಾದ ಬೀಜಕೇಂದ್ರ ಮತ್ತು ಅಷ್ಟೇನೂ ಪ್ರಕಾಶಮಾನವಲ್ಲದ ಬಾಲ ಇರುತ್ತದೆ.

Coma

ಧೂಮಕೇತು ಬಿಂಬ – ಒಂದು ರೀತಿಯ ಬಿಂಬದೋಷ ಇದು. ಗೋಳಾಕಾರದ ಮಸೂರಗಳಲ್ಲಿ ಬೆಳಕು ಓರೆಯಾಗಿ ಬಿದ್ದಾಗ, ಬಿಂಬವು ಸಮಕಟ್ಟಿಲ್ಲದೆ ರೂಪುಗೊಳ್ಳುತ್ತದೆ. ಇಲ್ಲಿ ಒಂದು ಬಿಂದುವಿನ ಬಿಂಬವು ಧೂಮಕೇತುವಿನ ಆಕಾರದಲ್ಲಿರುವುದರಿಂದ ಇದನ್ನು ಧೂಮಕೇತು ಬಿಂಬ ಎನ್ನುತ್ತಾರೆ.

Colour vision

ಬಣ್ಣಯುತ ದೃಷ್ಟಿ – ಮನುಷ್ಯನ ಕಣ್ಣಿಗಿರುವ ಒಂದು ಸಾಮರ್ಥ್ಯ ಇದು. ಬೇರೆ ಬೇರೆ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಸಾಮರ್ಥ್ಯ.

Colour Television

ಬಣ್ಣದ ದೂರದರ್ಶನ(ಟಿವಿ) – ಪರದೆಯೊಂದರ ಮೇಲೆ ಬಣ್ಣದ ಚಿತ್ರಗಳನ್ನು ಮೂಡಿಸುವ ವ್ಯವಸ್ಥೆ. ಕೆಂಪು, ಹಸುರು ಮತ್ತು ನೀಲಿ ಎಂಬ ಮೂಲಭೂತ ಬಣ್ಣಗಳನ್ನು ಹೊಂದಿರುವ ಬಿಂಬಗಳನ್ನು ಒಂದಾದ ಮೇಲೊಂದರಂತೆ ತುಂಬ ವೇಗದಲ್ಲಿ ಪ್ರಸಾರ ಮಾಡಿ ಎಲ್ಲ ಬಣ್ಣವುಳ್ಳ ಬಿಂಬವನ್ನು ರೂಪಿಸುವುದು.

Page 112 of 140

Kannada Sethu. All rights reserved.