ತುಂಬ ಕಷ್ಟ ಸುಖ ಕಂಡ ಹಿರಿಯರು ತಮ್ಮ ಜೀವನಾನುಭವವನ್ನು ಭಟ್ಟಿ ಇಳಿಸಿದ ಗಾದೆಮಾತಿದು. ಹಣ್ಣಿನ ತೋಪಿನಲ್ಲಿ ಯಾವ ಮರದಲ್ಲಿ ಹಣ್ಣು ಹೆಚ್ಚಾಗಿ ಬಿಟ್ಟಿರುತ್ತದೆಯೋ ಜನ ಆ ಮರಕ್ಕೆ ತಾನೇ ಕಲ್ಲು ಹೊಡೆಯುವುದು? ಹೀಗೆಯೇ ಯಾವ ಮನುಷ್ಯರಲ್ಲಿ ಸಂಪನ್ಮೂಲ ( ಪ್ರತಿಭೆ, ಹಣ, ಕಾರ್ಯಸಾಮರ್ಥ್ಯ….ಇಂಥದ್ದು) ಇರುತ್ತದೋ ಅಂಥವರ ಮೇಲೆ ಬೇರೆಯವರ ಹಕ್ಕೊತ್ತಾಯ ಹೆಚ್ಚು. ಅಸೂಯೆಯ ಮಾತುಗಳ ಪ್ರಹಾರ, ಕೆಲಸದ ಮೇಲೆ ಕೆಲಸ, ಆದೇಶದ ಮೇಲೆ ಆದೇಶ…ಹೀಗೆ ಅನೇಕ ಹೊಡೆತಗಳ ಪರಂಪರೆಗೆ ಅವರು ಒಳಗಾಗುತ್ತಾರೆ. ಹೀಗೆ ಕಷ್ಟ ಪಟ್ಟವರು ನೊಂದುಕೊಂಡಾಗ […]
ಹೈಗ್ರೋಮೀಟರ್ – ತೇವಾಂಶ ಮಾಪಕ – ವಾತಾವರಣದಲ್ಲಿರುವ ತೇವಾಂಶವನ್ನು ಅಳೆಯುವಂತಹ ಉಪಕರಣ. ಇದರಲ್ಲಿ ವಿವಿಧ ಬಗೆಗಳಿವೆ. ಯಾಂತ್ರಿಕ, ವಿದ್ಯುತ್ ಬಳಕೆಯ, ಇಬ್ಬನಿ ಬಳಕೆಯ, ತೇವ ಮತ್ತು ಒಣ ಬುರುಡೆಯ …ಹೀಗೆ.
ಹೈಡ್ರೋಮ್ಯಾಗ್ನೆಟಿಕ್ಸ್ – ಜಲಕಾಂತತ್ವ – ವಾಹಕವಾಗಿರುವ ಒಂದು ದ್ರಾವಣವನ್ನು ಏಕಕಾಲದಲ್ಲಿ ವಿದ್ಯುತ್ ಕಾಂತೀಯತೆ ಮತ್ತು ಜಲಚಲನಾ ನಿಯಮಗಳಡಿಯಲ್ಲಿ ಬರುವಂತೆ ಮಾಡಿದಾಗ ಅದರ ಅಧ್ಯಯನ ಮಾಡುವುದು. ಇದನ್ನು ಕಾಂತೀಯ ಜಲಚಲನಾ ಶಾಸ್ತ್ರ ( MHD – Magneto hydrodynamics) ಎಂದೂ ಕರೆಯುತ್ತಾರೆ.
ಹೈಡ್ರೋಮೀಟರ್ – ಜಲಸಾಂದ್ರತಾ ಮಾಪಕ – ದ್ರವಗಳ ಸಾಂದ್ರತೆಯನ್ನು ಅಥವಾ ಸಾಪೇಕ್ಷ (ತುಲನೀಯ) ಸಾಂದ್ರತೆಯನ್ನು ಅಳೆಯಲು ಬಳಸುವ ಉಪಕರಣ.
ಹೈಡ್ರೋಜನ್ ಬಾಂಬ್ – ಜಲಜನಕ ಸ್ಫೋಟವಸ್ತು (ಬಾಂಬು) – ಅತ್ಯಂತ ಹೆಚ್ಚಿನ ಉಷ್ಣತೆಯಲ್ಲಿ ಜಲಜನಕ ಬೀಜಕೇಂದ್ರಗಳ ಸೇರುವಿಕೆಯ ಪ್ರಕ್ರಿಯೆಗಳಿಂದ ನಿರ್ಮಿತವಾಗುವ ಬಲಾಢ್ಯ ಸ್ಫೋಟಕ ವಸ್ತು ಇದು. ಈ ಸೇರುವಿಕೆಯು ಉಷ್ಣತೆಯ ರೂಪದಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
ಹೈಡ್ರೋ ಎಲೆಕ್ಟ್ರಿಕ್ ಪವರ್ – ಜಲವಿದ್ಯುತ್ ಶಕ್ತಿ – ನೀರಿನ ಹರಿಯುವಿಕೆಯಿಂದ ಉತ್ಪತ್ತಿ ಮಾಡಿದ ವಿದ್ಯುಚ್ಛಕ್ತಿ. ಸಹಜ ಜಲಪಾತಗಳು ಈ ಶಕ್ತಿಗೆ ಆಕರವನ್ನು ಒದಗಿಸುತ್ತವೆ.
ಹೈಡ್ರೋಡೈನಮಿಕ್ಸ್ – ಜಲಚಲನಾ ಶಾಸ್ತ್ರ – ಒತ್ತರಿಸಲಾಗದ ( ಇನ್ಕಂಪ್ರೆಸ್ಸಿಬಲ್) ದ್ರವಗಳ ಚಲನೆ ಮತ್ತು ತಮ್ಮ ಸೀಮೆಗಳ ಜೊತೆ ಈ ದ್ರವಗಳ ಅಂತರ್ ಕ್ರಿಯೆಗಳನ್ನು ಕುರಿತ ಅಧ್ಯಯನ.