ಲೀನಿಯರ್ ಎಕ್ಸ್ ಪ್ಯಾನ್ಶನ್ – ರೇಖಾತ್ಮಕ ವಿಸ್ತರಣೆ – ಒಂದು ವಸ್ತುವನ್ನು ಕಾಯಿಸಿದಾಗ ಅದರ ಉದ್ದದಲ್ಲಿ ಆಗುವ ಬದಲಾವಣೆ.
ಲೀನಿಯರ್ ಡಿಸ್ಟಾರ್ಷನ್ – ರೇಖಾತ್ಮಕ ವಿರೂಪಣೆ – ವಿದ್ಯುದಲೆಯ ಎತ್ತರಕ್ಕೆ ಯಾವುದೇ ಸಂಬಂಧವಿಲ್ಲದಂತಹ ಯಾವುದೇ ರೂಪದ ಕೊಂಕು ಅಥವಾ ವಿರೂಪಣೆ.
ಲೀನಿಯರ್ ಡಿಟೆಕ್ಟರ್ – ರೇಖಾತ್ಮಕ ಪತ್ತೆಯಂತ್ರ – ಹೊರಬರುವ ವಿದ್ಯುದ್ಬಲಕ್ಕೂ ಒಳಹೋಗುವ ವಿದ್ಯುದ್ಬಲಕ್ಕೂ ತನ್ನ ಉಪಯೋಗಕರ ಶ್ರೇಣಿಗೆ ಸಂಬಂಧಪಟ್ಟಂತೆ ನೇರ ಅನುಪಾತವುಳ್ಲ ಪತ್ತೆಯಂತ್ರ.
ಲೀನಿಯರ್ ಆಂಪ್ಲಿಫೈಯರ್ – ರೇಖಾತ್ಮಕ ಬಲವರ್ಧಕ – ತನ್ನೊಳಗೆ, ತತ್ಕ್ಷಣದ ಧನವಿದ್ಯುದ್ವಾರದ ವಿದ್ಯುತ್ ಗೂ ಹಾಗೂ ನೀಡಲಾಗುತ್ತಿರುವ ವಿದ್ಯುದ್ಬಲಕ್ಕೂ ನೇರ ರೇಖಾತ್ಮಕ ಸಂಬಂಧವುಳ್ಳ ಬಲವರ್ಧಕ.
ಲಿಮಿಟಿಂಗ್ ಫ್ರಿಕ್ಷನ್ – ಘರ್ಷಣೆಯ ಗರಿಷ್ಠ ಮಿತಿ – ಒಂದು ವಸ್ತುವು ಇನ್ನೊಂದು ವಸ್ತುವಿನ ಮೇಲೆ ಚಲಿಸಿದಾಗ ಉಂಟಾಗುವ ಗರಿಷ್ಠ ಮಟ್ಟದ ಪ್ರತಿರೋಧ ಬಲ.
ಲಿಮಿಟಿಂಗ್ ಕರೆಂಟ್ (ಡಿಫ್ಯೂಷನ್ ಕರೆಂಟ್) – ಮಿತಗೊಳಿಸುವ ವಿದ್ಯುತ್ ( ಚೆಲ್ಲಾಪಿಲ್ಲಿ ಚಲನೆಯ ವಿದ್ಯುತ್) – ವಿದ್ಯುತ್ ವಿಭಜನೆಯಲ್ಲಿ ವಿದ್ಯುದ್ವಾರದ ಕಡೆಗೆ ಚೆಲ್ಲಾಪಿಲ್ಲಿಯಾಗಿ ಚಲಿಸುವ ವಿದ್ಯುದಣುಗಳ ಗತಿಯು ಅವು ಉತ್ಪತ್ತಿಯಾಗಿ ಹೊರಬೀಳಿವ ಗತಿಗೆ ಸಮನಾಗಿರುವುದಿಲ್ಲ. ಹೀಗಾಗಿ ವಿದ್ಯುತ್ ವಿಭಜಕದ ಗುಣಲಕ್ಷಣಗಳು ಮತ್ತು ವಿದ್ಯುದಣುಗಳ ಕೇಂದ್ರೀಕರಣಗಳ ನಿರ್ದಿಷ್ಟ ಸನ್ನಿವೇಶಗಳನ್ನು ಅವಲಂಬಿಸಿ ನಾವು ಹರಿಯಿಸಬಲ್ಲ ವಿದ್ಯುತ್ತಿಗೆ ಒಂದು ಮಿತಗೊಳಿಸುವ ಮೌಲ್ಯ ಇರುತ್ತದೆ.
ಲಿಮಿಟರ್ – ಮಿತಕಾರಕ – ಒಂದು ವ್ಯವಸ್ಥೆಯು ಹೊರಕ್ಕೆ ನೀಡುವಂತಹ ಯಾವುದಾದರೂ ಗುಣಲಕ್ಷಣ (ಉದಾಹರಣೆಗೆ ಆವರ್ತನ ಗತಿ) ವನ್ನು ಒಂದು ನಿರ್ದಿಷ್ಟ ಮೌಲ್ಯವನ್ನು ದಾಟದಂತೆ, ತಾನೇ ತಕ್ಷಣ ಸ್ವಯಂಚಾಲಿತವಾಗಿ ತಡೆಯುವ ಉಪಕರಣ.
ಲಿಮಿಟ್ – ಮಿತಿ – ಒಂದು ಸ್ವತಂತ್ರ ಚರಾಂಕವು ಒಂದು ನಿಶ್ಚಿತ ಮೌಲ್ಯವನ್ಜು ಸಮೀಪಿಸುವಾಗ ಒಂದು ಗಣಿತ ಕ್ರಿಯೆಯು ಸಮೀಪಿಸುವ ಮೌಲ್ಯ.
Like us!
Follow us!