ಭೂಮಿಯ ಅಯಸ್ಕಾಂತತೆ – ಭೂಮಿಯು ತನ್ನ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಹತ್ತಿರವಿರುವ ಬಿಂದುಗಳಲ್ಲಿ ಕಾಂತಕ್ಷೇತ್ರವನ್ನು ಹೊಂದಿರುವುದು ಗೊತ್ತಾಗಿರುವ ವಿಷಯವಾಗಿದೆ. ಹೆಚ್ಚೂಕಮ್ಮಿ ಉತ್ತರ ದಕ್ಷಿಣ ದಿಕ್ಕಿನಲ್ಲಿ ತನ್ನೊಳಗೆ ಒಂದು ಬೃಹತ್ ಗಾತ್ರದ ಪಟ್ಟಿ ರೂಪದ ಅಯಸ್ಕಾಂತವಿದೆಯೇನೋ ಎಂಬಂತೆ ವರ್ತಿಸುತ್ತದೆ ನಮ್ಮ ಭೂಮಿ.
ಭೂಮಿಯ ವಾತಾವರಣ – ಭೂಮಿಯನ್ನು ಸುತ್ತುವರಿದಿರುವ ಅನಿಲ. ಇದರಲ್ಲಿ ಅನೇಕ ಪದರಗಳಿರುತ್ತವೆ.
ಭೂಸ್ಪರ್ಶನ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವ ಪ್ರಕ್ರಿಯೆ.
ಭೂ ಪ್ರೇರಕ – ಒಂದು ಗೊತ್ತಾದ ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಗೊತ್ತಾದ ತಿರುವುಗಳಿರುವ ಒಂದು ದೊಡ್ಡ ಸುರುಳಿ. ಒಂದು ನಿರ್ದಿಷ್ಟ ಸ್ಥಳದಲ್ಲಿನ ಕಾಂತಕ್ಷೇತ್ರವನ್ನು ಅಳೆಯುವಾಗ ಇದನ್ನು ಬಳಸುತ್ತಾರೆ.
ಭೂಸ್ಪರ್ಶಿತ( ನೆಲ) ವಿದ್ಯುತ್ - ಯಾವುದಾದರೊಂದು ವಿದ್ಯುತ್ ಉಪಕರಣದ ಮೂಲಕ ಹರಿಯುತ್ತಿರುವ ವಿದ್ಯುತ್ತು ಸೋರುವ, ತಪ್ಪಾಗಿ ಹರಿಯುವ ಅಥವಾ ಮರಳುವ ಸಂದರ್ಭಕ್ಕೆ ಇದು ಸಂಬಂಧಿಸಿದೆ.