ಕನ್ನಡ ಗಾದೆಮಾತು – ಮುರಿದ ಮನಸ್ಸು ಬೆರೆಯೋಲ್ಲ, ಒಡೆದ ಕನ್ನಡಿ ಕೂಡೋಲ್ಲ

ಈ‌ ಗಾದೆಮಾತು ಮಾನವ ಸಂಬಂಧಗಳ‌ಲ್ಲಿನ ಒಂದು ಕಟುಸತ್ಯವನ್ನು ತುಂಬ ಶಕ್ತವಾದ ಒಂದು ಉದಾಹರಣೆಯೊಂದಿಗೆ ಹೇಳುತ್ತಿದೆ. ಹೇಗೆ ಒಮ್ಮೆ ಮುರಿದ ಕನ್ನಡಿಯನ್ನು ಮತ್ತೆ ಕೂಡಿಸಲು ಸಾಧ್ಯ ಇಲ್ಲವೋ, ಕೂಡಿಸಿದರೂ ಕನ್ನಡಿಯ ಮೇಲ್ಮೈಯಲ್ಲಿ ಕಲೆ ಉಳಿಯುತ್ತದೋ, ಹಾಗೆಯೇ ಸಂಬಂಧಗಳಲ್ಲಿ ಮನಸ್ಸುಗಳು ಒಮ್ಮೆ ಮುರಿದವೆಂದರೆ ಮತ್ತೆ ಆ ಮನಸ್ಸುಗಳು ಬೆರೆಯುವುದಿಲ್ಲ. ಸುಳ್ಳು, ಮೋಸ, ಚಾಡಿ, ನಂಬಿಕೆದ್ರೋಹ ಮುಂತಾದ ಘಟಿತಗಳು ಮನಸ್ಸುಗಳನ್ನು ಮುರಿದುಬಿಡುತ್ತವೆ. ಹೀಗೆ ಒಮ್ಮೆ ಮುರಿದ ಮನಸ್ಸು ಮತ್ತೆ ಬೆರೆಯುವುದು ಅಸಾಧ್ಯವೇ ಸರಿ. ಬೆರೆಸಲು ಪ್ರಯತ್ನಿಸಿದರೂ ಹಳೆಯ ಕಹಿಗಳು ಕಾಡಿ, ಸಂಬಂಧವು  […]

‘ಕನ್ನಡ, ಇಂಗ್ಲಿಷ್ ಪಾಠ ಮಾಡಕ್ಕೆ ಅಧ್ಯಾಪಕರೇ ಇಲ್ಲದ’ ಕಾಲೇಜುಗಳು!

ಕಳೆದ ವಾರ ಪದವಿಪೂರ್ವ ಶಿಕ್ಷಣದ ಫಲಿತಾಂಶ ಬಂತಲ್ಲ, ಎಲ್ಲ ಮಾಧ್ಯಮಗಳಲ್ಲೂ ಅದರದೇ ಸುದ್ದಿ.  ಎಲ್ಲರೂ ಇದರ ಬಗ್ಗೆಯೇ ಮಾತಾಡುತ್ತಾ, ಚರ್ಚಿಸುತ್ತಾ ಇದ್ದ ಸಂದರ್ಭದಲ್ಲಿ, ನನಗೆ ಪರಿಚಿತರಾದ ಕನ್ನಡ ಅಧ್ಯಾಪಕ ಮಿತ್ರರೊಬ್ಬರು ತಮ್ಮ ಮಗಳ ಪ.ಪೂ. ತರಗತಿಯ ಫಲಿತಾಂಶದ ಬಗ್ಗೆ ಹೇಳುತ್ತಾ, “ಅವ್ಳಿಗೆ 69% ಅಂಕ ಬಂದಿದೆ ಮೇಡಂ . ಕನ್ನಡ, ಇಂಗ್ಲಿಷ್ ನಲ್ಲೇ ಕಡಿಮೆ.‌ ಅವರ ಕಾಲೇಜಲ್ಲಿ ಕನ್ನಡ, ಇಂಗ್ಲಿಷ್ ಗೆ ಸರಿಯಾಗಿ ಅಧ್ಯಾಪಕರೇ ಇಲ್ಲ. ನಾನೇ ಒಂದಿಷ್ಟು ಭಾಷಾಭ್ಯಾಸ ಹೇಳ್ಕೊಟ್ಟಿದ್ದೆ ಅವಳಿಗೆ ಕೊನೆಯಲ್ಲಿ,  ಆದ್ರೂ ಹೇಳಿಕೊಳ್ಳುವಂತಹ […]

Liquefied petroleum gas (LPG)

ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ – ದ್ರವೀಕೃತ ಪೆಟ್ರೋಲಿಯಂ ಅನಿಲ‌ – ವಿವಿಧ ಪೆಟ್ರೋಲಿಯಂ ಅನಿಲಗಳು, ಮುಖ್ಯವಾಗಿ ಪ್ರೋಪೇನ್ ಮತ್ತು ಬ್ಯೂಟೇನ್ ಗಳನ್ನು ಒತ್ತಡ ಹಾಕಿ ದ್ರವಸ್ಥಿತಿಯಲ್ಲಿ ಇಟ್ಟಿರುವಂಥದ್ದು‌. ಇದನ್ನು ಚಾಲಕಯಂತ್ರದ ಇಂಧನವಾಗಿ ಬಳಸುತ್ತಾರೆ. ‘ಸಿಲಿಂಡರ್ ಹೆಡ್’ ಎಂಬ ಯಂತ್ರಭಾಗದಲ್ಲಿ ಈ ವಸ್ತುವು ತುಂಬ ಕಡಿಮೆ ಗಷ್ಟು ಅಥವಾ ಶೇಷ ಉಳಿಸುತ್ತದೆ ಎಂಬುದು ಇದಕ್ಕಿರುವ ಉತ್ತಮ ಗುಣವಾಗಿದೆ‌. 

Liquification  of gases

ಲಿಕ್ವಿಫಿಕೇಷನ್ ಆಫ್ ಗ್ಯಾಸಸ್ – ಅನಿಲಗಳ ದ್ರವೀಕರಣ – ಒಂದು ಅನಿಲದ ತಾಪಮಾನವು ಅದರ ನಿರ್ಧಾರಕ ತಾಪಮಾನಕ್ಕಿಂತ ಕಡಿಮೆ ಇದ್ದಾಗ, ಆ ಅನಿಲದ ಮೇಲೆ ಬಾಹ್ಯ ಒತ್ತಡವನ್ನು‌ ಹಾಕಿದಾಗಷ್ಟೇ ಅದನ್ನು ದ್ರವೀಕರಿಸಬಹುದು.

Line spectrum

ಲೈನ್ ಸ್ಪೆಕ್ಟ್ರಮ್ – ರೇಖಾತ್ಮಕ ವರ್ಣಪಟಲ – ಪ್ರತ್ಯೇಕ ಏಕರೇಖೆಗಳಿಂದ ಕೂಡಿರುವಂತಹ ಹೊರಸೂಸುವಿಕೆಯ ಅಥವಾ ಹೀರುವಿಕೆಯ ವರ್ಣಪಟಲ. ಇದರಲ್ಲಿ ಪ್ರತಿಯೊಂದು ಗೆರೆಯೂ ಒಂದು ಸ್ಪಷ್ಟವಾಗಿ ನಿರೂಪಿತವಾದ ತರಂಗಾಂತರಕ್ಕೆ ಸಂಬಂಧಿಸಿರುತ್ತದೆ.

Line of force ( electric)

ಲೈನ್ ಆಫ್ ಫೋರ್ಸ್ ( ಎಲೆಕ್ಟ್ರಿಕ್) – ಬಲರೇಖೆ (ವಿದ್ಯುತ್) – ಒಂದು ವಿದ್ಯುತ್ ಕ್ಷೇತ್ರ ಅಥವಾ ಕಾಂತಕ್ಷೇತ್ರದಲ್ಲಿನ ಕಲ್ಪಿತ ರೇಖೆ ಇದು‌. ಇದರ ಯಾವುದೇ ಬಿಂದುವಿನಲ್ಲಿನ ಸ್ಪರ್ಶರೇಖೆಯು ( ಟ್ಯಾಂಜೆಂಟ್) ಆ ಬಿಂದುವಿನಲ್ಲಿನ ವಿದ್ಯುತ್ ಕ್ಷೇತ್ರದ ದಿಕ್ಕನ್ನು ತೋರಿಸುತ್ತದೆ‌ . ಈ ಬಲರೇಖೆಗಳು ಎಂದೂ ಒಂದನ್ನೊಂದು ದಾಟುವುದಿಲ್ಲ.

Linear motor

ಲೀನಿಯರ್ ಮೋಟಾರ್ – ರೇಖಾತ್ಮಕ ಯಂತ್ರಚಾಲಕ (ರೇಖಾತ್ಮಕ ಮೋಟಾರು) – ಒಂದು ರೀತಿಯ ವಿದ್ಯುತ್ ಪ್ರೇರಕ ಯಂತ್ರಚಾಲಕ‌.‌ ಇದರಲ್ಲಿನ ಚಲಿಸದ ಭಾಗ(ಸ್ಟೇಟರ್) ಮತ್ತು ಚಲಿಸಿವ ಭಾಗ ( ರೋಟರ್) ಗಳು ಗುಂಡುಕಂಬದಂತಿರದೆ ನೇರವಾಗಿರುತ್ತವೆ  ಹಾಗೂ ಸಮ ಅಕ್ಷವನ್ನು ಹೊಂದಿರುವ ಬದಲು ಸಮಾನಾಂತರವಾಗಿರುತ್ತವೆ‌.

ಕನ್ನಡ ಗಾದೆಮಾತು – ಯುಕ್ತಿಯ ಮಾತು  ಮಕ್ಕಳಿಂದಾದರೂ ತಿಳ್ಕೋ‌

ಜೀವನವು ಎಷ್ಟು ಸಂಕೀರ್ಣ ಹಾಗೂ ಅನೂಹ್ಯ ಎಂಬುದು ಎಲ್ಲ ಪ್ರಬುದ್ಧ ವಯಸ್ಕರಿಗೂ, ಒಂದಲ್ಲ‌ ಒಂದು ಸಲ  ಭಾಸವಾಗಿಯೇ ಆಗುವ  ಸತ್ಯ. ಹೀಗಾಗಿ ವಿನಯ ಹಾಗೂ ನಿರಂತರ ಕಲಿಕೆಯ ಮನ:ಸ್ಥಿತಿ ಮಾತ್ರ ಜೀವನದ ಅಸಾಧ್ಯ ಏರುತಗ್ಗುಗಳ ಪಯಣದಲ್ಲಿ ನಮ್ಮ ಆಧಾರಗಳಾಗಬಲ್ಲವು. ಕಲಿಕೆ ಮುಖ್ಯ ಎಂದಾದಾಗ ನಾವು ಕಲಿಸುವವರ ವಯಸ್ಸು, ವಿದ್ಯೆ, ಸ್ಥಾನಮಾನ ನೋಡದೆ ಕಲಿಯಬೇಕು‌. ಅದರಲ್ಲೂ ವಯಸ್ಕ ಜೀವನದ ಇಕ್ಕಟ್ಟುಗಳಿಗೆ ಇನ್ನೂ ಪರಿಚಿತರಾಗದ ಚಿಕ್ಕ ಮಕ್ಕಳು ತಮ್ಮ ಬೆರಗು, ನಗು, ಸರಳ-ಮುಗ್ಧ ಮನೋನೆಲೆಗಳಿಂದ ಜೀವನದ ಬಗ್ಗೆ ಅತ್ಯಂತ ನೂತನ […]

‘ಶ್ರಗ್’ ಎಂಬ ಅಂಗಿಗೆ ಕನ್ನಡದಲ್ಲಿ ಏನಂತಾರೆ?

ಈಗಿನ‌ ಹುಡುಗಿಯರು, ಮಹಿಳೆಯರು ಜೀನ್ಸು ಪ್ಯಾಂಟು/ಲಂಗ/ ಅಂಗಿ ತೊಟ್ಟಾಗ ಅದರ ಮೇಲೆ ‘ಶ್ರಗ್’ ಎಂಬ ಸಡಿಲವಾದ, ಗುಂಡಿರಹಿತ ಕೋಟ್ ನಂತೆ ತೋರುವ, ಸಾಮಾನ್ಯವಾಗಿ ತೆಳುವಾದ ಬಟ್ಟೆಯಲ್ಲಿ ಹೊಲಿದಿರುವ, ತೋಳುಗಳಿರುವ, ಒಂದು ಮೇಲಂಗಿಯನ್ನು ತೊಡುವುದನ್ನು ನಾವು ಗಮನಿಸುತ್ತೇವಲ್ಲ, ಅದನ್ನು ಇಂಗ್ಲಿಷ್ ನಲ್ಲಿ Shrug ಎನ್ನುತ್ತಾರೆ‌. ಆ ಭಾಷೆಯಲ್ಲಿ ಶ್ರಗ್ ಎಂಬ ಪದಕ್ಕೆ  “ಔದಾಸೀನ್ಯ, ಅಸಹಾಯಕತೆ, ತಿರಸ್ಕಾರ, ಕೋಪ ಮೊದಲಾದವುಗಳನ್ನು ಸೂಚಿಸುವುದಕ್ಕಾಗಿ ಭುಜ ಎಗರಿಸು, ಹೆಗಲು ಹಾರಿಸು” ಎಂಬ ಅರ್ಥವು, ಅದು ಕ್ರಿಯಾಪದ ಆದಾಗ ಬರುತ್ತೆ. ಇನ್ನು, ಅದು ನಾಮಪದ […]

Linear modulation

ಲೀನಿಯರ್ ಮಾಡ್ಯುಲೇಷನ್ – ರೇಖಾತ್ಮಕ ಅಲೆಪರಿವರ್ತನೆ – ಒಯ್ಯಕ ಅಲೆಯ ಪರಿವರ್ತಿತ ಗುಣಲಕ್ಷಣವು ಶ್ರವ್ಯ ಆವರ್ತನಗತಿಯ ಒಂದು ಶ್ರೇಣಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಸಮಾನುಪಾತದಲ್ಲಿದ್ದರೆ, ಅದನ್ನು ರೇಖಾತ್ಮಕ ಅಲೆ ಪರಿವರ್ತನೆ ಎನ್ನುತ್ತಾರೆ.

Page 12 of 139

Kannada Sethu. All rights reserved.