ನಮ್ಮ ತಂದೆಯವರು ನಮ್ಮ ಬಾಲ್ಯ ಕಾಲದಲ್ಲಿ ‘ತನ್ನ ತಂದೆ( ಅಂದರೆ ನಮ್ಮ ತಾತ) ಹೇಳುತ್ತಿದ್ರು’ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಮಾತಿದು ; “ಕಸುಬು ಕಲೀಬೇಕು ಕಣ್ರಪ್ಪಾ, ಕಸುಬು ಕಲೀರೋ..”. ಬಹುಶಃ ಕನ್ನಡಿಗರು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಬಳುವಳಿಯಾಗಿ ಕೊಟ್ಟ ಜೀವನವಿವೇಕದ ಒಂದು ಮುಖ್ಯ ತುಣುಕು ಈ ಮಾತು ಎಂದು ನನ್ನ ಅನಿಸಿಕೆ. ನನ್ನ ಈ ಅನಿಸಿಕೆಗೆ ಕಾರಣ ಹೇಳುತ್ತೇನೆ. ಕಸುಬು( ಕಸಬು ಎಂದು ಕೂಡ ಬರೆಯುತ್ತಾರೆ) ಎಂಬ ಪದಕ್ಕೆ ಇರುವ ಮುಖ್ಯ ಅರ್ಥ ಎಂದರೆ ಉದ್ಯೋಗ, ಕೆಲಸ […]
ಹ್ಯೂರಿಸ್ಟಿಕ್ – ಮಾಡಿಕಲಿಯುವ ಅಥವಾ ಸ್ವಂತ ಅನ್ವೇಷಣೆಯ ವಿಧಾನ – ಸಮಸ್ಯೆಯನ್ನು ಪರಿಹಾರ ಮಾಡುವ ಯಾವುದೇ ಕ್ರಮವಿಧಿ ಇಲ್ಲದೆ ಇದ್ದಾಗ, ಮತ್ತೆ ಮತ್ತೆ ಮಾಡಿ ಮಾಡಿ ಸರಿಯಾದ ಪರಿಹಾರ ಹುಡುಕಿಕೊಳ್ಳುವ ರೀತಿ. ಬೇರೆ ಪದಗಳಲ್ಲಿ ಹೇಳಬೇಕೆಂದರೆ ಪ್ರಯತ್ನ ಮತ್ತು ತಪ್ಪುಗಳಿಂದ ( Trial and error) ಪರಿಹಾರ ಕಂಡುಕೊಳ್ಳುವ ವಿಧಾನ.
ಹೆಟಿರೋಡೈನ್ – ಅಲೆಸಂಯೋಜಕ ಅಥವಾ ಭಿನ್ನ ಅಲೆ ಮಿಶ್ರಕ – ಒಳಬರುತ್ತಿರುವ ಅಲೆಯೊಂದರ ಮೇಲೆ ತಾನೇ ಉತ್ಪತ್ತಿ ಮಾಡಿದ ರೇಡಿಯೋ ( ವಿದ್ಯುತ್ ಕಾಂತೀಯ) ಅಲೆಯೊಂದನ್ನು ಹಾಯಿಸಿ, ಬಡಿತವು ಉತ್ಪತ್ತಿಯಾಗುವಂತೆ ಮಾಡುವ ಉಪಕರಣ ಅಥವಾ ವಿಧಾನ.
ಹೆಟಿರೋಜೀನಸ್ ರಿಯಾಕ್ಟರ್ – ಭಿನ್ನವಸ್ತು ಮಿಶ್ರಿತ ಅಣುಸ್ಥಾವರ – ಇಂಧನವನ್ನು ಮಂದಕ ( moderator) ದಿಂದ ಪ್ರತ್ಯೇಕವಾಗಿ ಇರಿಸಿದ ಅಣುಸ್ಥಾವರ. ಇಲ್ಲಿ ನೂಟ್ರಾನುಗಳಿಗೆ ಭಿನ್ನವಸ್ತುಗಳಿಂದ ಕೂಡಿದ ಒಂದು ಮಿಶ್ರಣ ದೊರಕುತ್ತದೆ.
ಹರ್ಟ್ಝ್( Hz) – ಪುನರಾವರ್ತನೆಯ ಎಸ್.ಐ.ಮೂಲಮಾನ- 1 ಹರ್ಟ್ಝ್ – 1 ಸೆಕೆಂಡಿಗೆ ಒಂದು ಸುತ್ತು ಅಥವಾ 1 ಸೆಕೆಂಡಿಗೆ ಒಂದು ಆವರ್ತನ. ಜರ್ಮನಿಯ ವಿಜ್ಞಾನಿ ಹೇನ್ರಿಚ್ ಹರ್ಟ್ಝ್ ರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಕಾಂತೀಯ ಅಲೆಗಳ ಅಸ್ತಿತ್ವವನ್ನು ವಾಸ್ತವಿಕವಾಗಿ ಮೊದಲ ಬಾರಿಗೆ ತೋರಿಸಿಕೊಟ್ಟವರಿವರು.
ಹೆನ್ರಿ( H) – ಹೆನ್ರಿ ( H) – ಸ್ವಯಂ ವಿದ್ಯುತ್ ಪ್ರೇರಕತೆ ಅಥವಾ ಪರಸ್ಪರ ವಿದ್ಯುತ್ ಪ್ರೇರಕತೆಯ ಎಸ್.ಐ.ಮೂಲಮಾನ ಇದು. 1H = 1 ವೆಬರ್ /ಆಂಪಿಯರ್. ಜೋಸೆಫ್ ಹೆನ್ರಿ (1797-1878) ಎಂಬ ಅಮೆರಿಕಾದ ಭೌತಶಾಸ್ತ್ರಜ್ಞರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಪ್ರೇರಕತೆಯನ್ನು ಕಂಡು ಹಿಡಿದ ವಿಜ್ಞಾನಿ ಇವರು.
ಹೀಲಿಯಂ ನಿಯಾನ್ ಲೇಸರ್ – ಹೀಲಿಯಂ ನಿಯಾನ್ ತೀಕ್ಷ್ಣ ಬೆಳಕು – ಹೀಲಿಯಂ ಮತ್ತು ನಿಯಾನ್ ಅನಿಲಗಳನ್ನು ಬಳಸುವ ಪರಮಾಣೀಯ ತೀಕ್ಷ್ಣ ಬೆಳಕು.
ಹೆಲಿಕ್ಸ್ – ಸುರುಳಿ – ನೈಸರ್ಗಿಕವಾಗಿ ದೊರೆಯುವ ಅನೇಕ ದೊಡ್ಡ ಗಾತ್ರದ ಅಣುಗಳು, ಉದಾಹರಣೆಗೆ, ಪ್ರೋಟೀನುಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳು ಸುರುಳಿಯಾಕಾರದಲ್ಲಿರುತ್ತವೆ.