ಲೇಟಸ್ ರೆಕ್ಟಮ್ – ಶಂಕುಕೇಂದ್ರ ರೇಖೆ – ಒಂದು ಶಂಕುವಿನ ಕೇಂದ್ರದ ಮೂಲಕ ಹಾದುಹೋಗುವ ರೇಖೆ.
ಲ್ಯಾಟಿಸ್ ವೈಬ್ರೇಷನ್ಸ್ – ಜಾಲಕ ಕಂಪನಗಳು – ಪರಮಾಣುಗಳು, ವಿದ್ಯುದಣುಗಳು ಮತ್ತು ಅಣುಗಳು ಹರಳು ಜಾಲಕದಲ್ಲಿ ನಿಯತಕಾಲಿಕವಾಗಿ ಕಂಪಿಸುವುದು. ಕಾಯಿಸಿದಾಗ ಕಂಪನಗಳು ತುಂಬ ಹೆಚ್ಚಾಗಿ, ಈ ವಸ್ತುಕಣಗಳು ಅದೆಷ್ಟು ಕಂಪಿಸುತ್ತವೆ ಅಂದರೆ ಹರಳು ರಚನೆ ಮುರಿಯುತ್ತದೆ.
ಲ್ಯಾಟಿಸ್ ಎನರ್ಜಿ- ಜಾಲಕ ಶಕ್ತಿ – ಒಂದು ಹರಳು ಜಾಲಕದ ಸ್ಥಿರತೆಯ ಅಳತೆ ಇದು. ಇದನ್ನು ಅನಂತ ದೂರಗಳಲ್ಲಿರುವ ಪರಮಾಣುಗಳು, ಅಣುಗಳು ಹಾಗೂ ವಿದ್ಯುದಣುಗಳನ್ನು ಹತ್ತಿರ ತಂದು ಹರಳನ್ನು ರೂಪಿಸಹೊರಟಾಗ ಬಿಡುಗಡೆಯಾಗುವ ಶಕ್ತಿ ಎಂದು ತಿಳಿಯಲಾಗುತ್ತದೆ.
ಲ್ಯಾಟಿಸ್ – ಜಾಲಕ ( ಕಿಂಡಿ ಚೌಕಟ್ಟು) – ಒಂದು ಘನವಸ್ತುವಿನ ಹರಳೊಂದರಲ್ಲಿ ಅಣುಗಳ, ವಿದ್ಯುದಣುಗಳ ಅಥವಾ ಪರಮಾಣುಗಳ ನಿಯತವಾದ ಜೋಡಣೆ.
ಲ್ಯಾಟಿಟ್ಯೂಡ್ ಅಂಡ್ ಲಾಂಗಿಟ್ಯೂಡ್ – ಅಕ್ಷಾಂಶ ಮತ್ತು ರೇಖಾಂಶ – (ಅ). ಭೂಗೋಳ ಶಾಸ್ತ್ರದಲ್ಲಿ – ಅಕ್ಷಾಂಶ – ಭೂಪಟದಲ್ಲಿ ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿ ಎಳೆದ ರೇಖೆ.
ರೇಖಾಂಶ – ಭೂಮಂಡಲದ ಉತ್ತರಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆದಂತಹ ಕಲ್ಪಿತ ಮುನ್ನೂರ ಅರವತ್ತು ರೇಖೆಗಳು. ಇವು ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ಸೇರುತ್ತವೆ.
(ಆ). ಖಗೋಳ ಶಾಸ್ತ್ರದಲ್ಲಿ ಅಕ್ಷಾಂಶ – ಒಂದು ನಕ್ಷತ್ರದ ಅಥವಾ ಯಾವುದಾದರೂ ಆಕಾಶಕಾಯದ ಅಂತರಿಕ್ಷ ಅಕ್ಷಾಂಶ ಅಂದರೆ ಸೂರ್ಯಪಥಕ್ಕೆ ಸಂಬಂಧಿಸಿದಂತೆ ಅದರ ದೂರ.
ರೇಖಾಂಶ – ಅಂತರಿಕ್ಷ ರೇಖಾಂಶ ಅಂದರೆ ಸೂರ್ಯನು ಸಮಭಾಜಕ ರೇಖೆಯನ್ನು ದಾಟುವ ದಿಕ್ಕಿಗೆ ಸಂಬಂಧಿಸಿದಂತೆ ಅಳೆಯಲಾಗುವ ಆಕಾಶಕಾಯದ ದೂರ.
ಲೇಟೆಂಟ್ ಹೀಟ್ – ಗುಪ್ತೋಷ್ಣ ( ಅಂತರ್ಗತ ಉಷ್ಣ) – ಒಂದು ವಸ್ತುವು ಘನಸ್ಥಿತಿಯಿಂದ ದ್ರವಸ್ಥಿತಿಗೆ, ದ್ರವಸ್ಥಿತಿಯಿಂದ ಅನಿಲ ಸ್ಥಿತಿಗೆ ತನ್ನ ಸ್ಥಿತಿಯನ್ನು ಬದಲಾಯಿಸಿದಾಗ ಉಂಟಾಗುವ ಶಕ್ತಿ ವರ್ಗಾವಣೆ.
ಲ್ಯಾಟರಲ್ ವೆಲೋಸಿಟಿ – ಪಾರ್ಶ್ವ ವೇಗ – ಒಂದು ಆಕಾಶಕಾಯದ ಕಣ್ ನೇರ ಸಮ ವೇಗಕ್ಕೆ 90 ಡಿಗ್ರಿಯಲ್ಲಿರುವ ವೇಗ.
ಲೇಸರ್ – ಲೇಸರ್ – ಪ್ರಚೋದಿತ ವಿಕಿರಣವನ್ನು ಹಾಯಿಸುವುದರ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಂಡಂತಹ ಬೆಳಕು ಹಾಗೂ
ಸುಸಂಬದ್ಧವಾದ, ಒಂದೇ ತರಂಗಾಂತರವುಳ್ಳ, ಸಮಾನಾಂತರ ಹಾಗೂ ತೀಕ್ಷ್ಣವಾದ ಮತ್ತು ಅತಿ ಹೆಚ್ಚು ಶಕ್ತಿಯನ್ನು ಹೊಂದಿರುವ ವಿಕಿರಣದ ಪುಂಜವೊಂದನ್ನು ಉತ್ಪತ್ತಿ ಮಾಡುವ ಶಕ್ತಿಯುಳ್ಳ ಸಾಧನ. ಯುಕ್ತವಾದ ಒಂದು ವಸ್ತುವಿಗೆ ( ಘನ, ದ್ರವ ಅಥವಾ ಅನಿಲ) ತುಂಬ ವೇಗವಾಗಿ ಶಕ್ತಿಯನ್ನು ಹಾಯಿಸಿ ಈ ಲೇಸರ್ ಅನ್ನು ಉತ್ಪತ್ತಿ ಮಾಡುತ್ತಾರೆ.
Like us!
Follow us!