Lepton

ಲೆಪ್ಟಾನ್ – ಲೆಪ್ಟಾನು – ಎಲೆಕ್ಟ್ರಾನು, ಮ್ಯೂಯಾನು ( ಮತ್ತೆ ವಿಭಜಿಸಲು ಸಾಧ್ಯವಿಲ್ಲದ, ಋಣ ವಿದ್ಯುದಂಶ ಹೊಂದಿದ ಆದರೆ ಅದಕ್ಕಿಂತ ಹೆಚ್ಚು ದ್ರವ್ಯರಾಶಿಯುಳ್ಳ ಒಂದು ಅಂತರ್ಪರಮಾಣು – ಅಂದರೆ ಪರಮಾಣುವಿನೊಳಗಿನ -ಮೂಲಭೂತ ಕಣ) ಮತ್ತು ನ್ಯೂಟ್ರಾನುಗಳನ್ನು ಒಟ್ಟಾಗಿ ಸೂಚಿಸುವ ಒಂದು ಪದ.

Lenz’s law

ಲೆಂಜ್ ಸ್ ಲಾ – ಲೆಂಜ್ ರ ನಿಯಮ – ಒಂದು ವಿದ್ಯುನ್ಮಂಡಲದಲ್ಲಿ ಪ್ರೇರಿತ ವಿದ್ಯುತ್ ಸಾಮರ್ಥ್ಯ (ವಿದ್ಯುತ್ ಚಾಲಕ ಬಲ)ದ  ದಿಕ್ಕು, ತನ್ನನ್ನು ಉತ್ಪಾದಿಸುವುದರ ದಿಕ್ಕಿಗೆ ವಿರುದ್ಧವಾಗಿರುತ್ತದೆ.

ಕನ್ನಡ ಗಾದೆಮಾತು – ಬಂಧುಗಳಿಲ್ಲದಿರೋ ಬಡತನ ಎಂದಿಗೂ ಬೇಡ.

ಜೀವನದಲ್ಲಿ ನಮಗೆ ಕಷ್ಟಸುಖ, ನೋವು ನಲಿವುಗಳನ್ನು ಹಂಚಿಕೊಳ್ಳಲು ಬಂಧುಗಳು ಬೇಕು‌. ಬಂಧುಗಳು ಅಂದರೆ ನೆಂಟರು, ಸಂಬಂಧಿಕರು.‌ ನಮಗೆ ಯಾರ ಜೊತೆ ಬಂಧವಿರುತ್ತದೋ ಅವರು ಬಂಧುಗಳು.‌ ಎಷ್ಟು ಹಣಕಾಸು, ಐಶ್ವರ್ಯ, ವೈಭವ ಇದ್ದರೇನಂತೆ, ಜೊತೆಯಾಗಿ ಅರ್ಧ ಲೋಟ ಕಾಫಿ ಕುಡಿಯಲು, ನೋವಾದಾಗ ಹೆಗಲಿಗೊರಗಿ ಅಳಲು, ಖುಷಿಯಾದಾಗ ತಕ್ಷಣ ಅದನ್ನು ಹಂಚಿಕೊಳ್ಳಲು, ಹಬ್ಬ-ಹರಿದಿನಗಳಲ್ಲಿ ಜೊತೆಯಾಗಿ ಉಣ್ಣಲು ನಮಗೆ ಯಾರೂ ಇಲ್ಲ ಅಂದರೆ ನಾವು ಖಂಡಿತವಾಗಿಯೂ ಬಡವರೇ. ಅಲ್ಲವೆ? ಈ ಗಾದೆಮಾತು ಬದುಕಿನ ಬಹುಮುಖ್ಯ ಸಂಗತಿಯೊಂದನ್ನು ಬಹಳ ಅರ್ಥಪೂರ್ಣವಾಗಿ ಹೇಳುತ್ತಿದೆ.  Kannada […]

ಕನ್ನಡ ಉಳಿಸುವ ಒಂದೇ ವಿಧಾನ ಅಂದರೆ …

ಒಬ್ಬ ಕನ್ನಡಾಭಿಯಾನಿಯಾಗಿ ಹಾಗೂ ಕನ್ನಡದ ಅಧ್ಯಾಪಕಿಯಾಗಿ ಕನ್ನಡದ ಉಳಿವು, ಬೆಳವಣಿಗೆಗಳ ಬಗ್ಗೆ ನಾನು ಯೋಚಿಸುತ್ತಾ ಇರ್ತೇನೆ‌. ಕರ್ನಾಟಕ ಏಕೀಕರಣ ಆಗಿ ಎಪ್ಪತ್ತು ವರ್ಷಗಳಲ್ಲಿ ಕೃಷ್ಣೆ, ತುಂಗೆ, ಕಾವೇರಿಗಳಲ್ಲಿ ಬೇಕಾದಷ್ಟು ನೀರು ಹರಿದಿದೆ‌. ಇಷ್ಟು ವರ್ಷಗಳಲ್ಲಿ ನಡೆದ ಚಳುವಳಿಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ, ಉದ್ಯಮಿಗಳು ಹಾಗೂ ಜನಸಾಮಾನ್ಯರಿಂದ ಕನ್ನಡದ ಉಳಿವು ಮತ್ತು ಬೆಳವಣಿಗೆಗಳನ್ನು ಕುರಿತು ಆಗಿರುವ ಕೆಲಸ ಮತ್ತು ಚಿಂತನೆಗಳ ಸಾರಸಂಗ್ರಹವನ್ನು ಭಟ್ಟಿ ಇಳಿಸಿ ಹೇಳುವುದಾದರೆ, ಕನ್ನಡವನ್ನು ಗರಿಷ್ಠ ಮಟ್ಟದಲ್ಲಿ ಬಳಸುವುದು ಮತ್ತು ಕನ್ನಡಿಗರನ್ನು ಕಷ್ಟ‌ನಷ್ಟಗಳಿಗೆ ಒಳಗಾಗದಂತೆ […]

Lens

ಲೆನ್ಸ್ – ಮಸೂರ, ಬಾಗುಮೈ( ಯುಳ್ಳ) ಗಾಜು – ಬೆಳಕನ್ನು ಕೇಂದ್ರೀಕರಿಸುವ ಅಥವಾ ವಿಕೇಂದ್ರೀಕರಿಸುವ ಒಂದು ದೃಶ್ಯ ವಿಜ್ಞಾನೀಯ ಉಪಕರಣ ಅಥವಾ ಉಪಕರಣ ಭಾಗ.

Lenard tube

ಲೆನಾರ್ಡ್ ಟ್ಯೂಬ್ – ಲೆನಾರ್ಡ್ ಕೊಳವೆ – ಋಣ ವಿದ್ಯುದ್ವಾರಕ್ಕೆ ಇದಿರಾಗಿ ಋಣ ವಿದ್ಯುದ್ವಾರದ ಕಿರಣಗಳು ದಾಟಿ ಹೋಗಲು ಅನುಕೂಲವಾಗುವಂತೆ ಕಿಟಕಿಯೊಂದನ್ನು ಹೊಂದಿರುವ ವಿಸರ್ಜನಾ ಕೊಳವೆ.

Lenard rays

ಲೆನಾರ್ಡ್ ರೇಸ್ – ಲೇನಾರ್ಡ್ ಕಿರಣಗಳು – ಲೆನಾರ್ಡ್ ಕೊಳವೆಯ ಆಚೆಗೆ ಹೋಗಿರುವ ಋಣ ವಿದ್ಯುದ್ವಾರ ಕಿರಣಗಳು‌ ( ಫಿಲಿಪ್ ಎಡ್ಯುವರ್ಡ್ ಆಂಟನ್ ವಾನ್ ಲೆನಾರ್ಡ್ – ಋಣ ವಿದ್ಯುದ್ವಾರವನ್ನು ಕುರಿತು ಕೆಲಸ ಮಾಡಿದ್ದಕ್ಕಾಗಿ 1905 ರಲ್ಲಿ ನೊಬೆಲ್ ‌ಪ್ರಶಸ್ತಿ ಪಡೆದ ಜರ್ಮನಿ‌ ದೇಶದ ಭೌತವಿಜ್ಞಾನಿ : ಕಾಲ – 07-06-1862 ರಿಂದ 20-05-1947). 

Lee’s disc

ಲೀಸ್ ಡಿಸ್ಕ್ – ಲೀಯವರ ಬಿಲ್ಲೆ – ಕಡಿಮೆ ವಾಹಕತೆಯುಳ್ಳ ವಸ್ತುಗಳ ಉಷ್ಣವಾಹಕ ಸಾಮರ್ಥ್ಯವನ್ನು ಅಳೆಯಲು ಬಳಸುವ ಉಪಕರಣ. 

Leclanche Cell

ಲೆಕ್ಲಾಂಚೆ ಸೆಲ್ – ಲೆಕ್ಲಾಂಚೆ ಕೋಶ – ಒಂದು ಮೂಲರೂಪೀ ವಿದ್ಯುತ್ ಕೋಶ. ಫ್ರಾನ್ಸ್ ನ ಯಂತ್ರಜ್ಞಾನಿಯಾದ ಜಾರ್ಜ್ ಲೆಕ್ಲಾಂಚೆಯು 1866 ನೇ ವರ್ಷದಲ್ಲಿ ನಿರ್ಮಿಸಿದ್ದರಿಂದ ಇದಕ್ಕೆ ಅವನ ಹೆಸರನ್ನೇ ಇಡಲಾಗಿದೆ‌. ಇದರಲ್ಲಿ ಒದ್ದೆ ಮತ್ತು ಒಣ ಎಂದು ಎರಡು ರೂಪಗಳಿರುತ್ತವೆ‌.

ಕನ್ನಡ ಗಾದೆಮಾತು – ಜಾಣನಿಗೆ ಜಗಳವಿಲ್ಲ, ರಾಗಿಗೆ ರೋಗವಿಲ್ಲ. 

ಗ್ರಾಮೀಣ ಜನರ ಜೀವನಾನುಭವದಿಂದ ಹೊರಟ ವಿವೇಕವು ಅದೆಷ್ಟು ಸರಳ ಮತ್ತು ಸುಂದರ ನೋಡಿ. ಪೌಷ್ಟಿಕ ಆಹಾರ ರಾಗಿಯನ್ನು ತಿಂದವರಿಗೆ ರೋಗ ಬರುವುದಿಲ್ಲ, ಹಾಗೆಯೇ ಎಲ್ಲಿ ಮಾತಾಡಬೇಕು, ಹೇಗೆ, ಎಷ್ಟು‌ ಯಾವಾಗ ಮಾತಾಡಬೇಕು ಎಂದು ಗೊತ್ತಿರುವ ಜಾಣನು ಜಗಳ ಮಾಡುವುದಿಲ್ಲ‌ ; ಅನಗತ್ಯ ಕಿರಿಕಿರಿ ಇಲ್ಲದೆ ಅವನು‌ ಸನ್ನಿವೇಶಗಳನ್ನು ನಿಭಾಯಿಸುತ್ತಾನೆ. ಇದನ್ನು ಅರಿತು ನಾವು ಅನಗತ್ಯ ಜಗಳ ಮಾಡದೆ ನಮ್ಮ ಮಾನಸಿಕ ಆರೋಗ್ಯವನ್ನು ಮತ್ತು ಕಣ್ಣಿಗೆ ಅಂದವೆನಿಸುವ ಜಾಹೀರಾತು ಆಹಾರಗಳನ್ನು ತಿನ್ನದೆ ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಬೇಕು. ಅಲ್ಲವೆ? […]

Page 16 of 139

Kannada Sethu. All rights reserved.