ಕನ್ನಡಿಗರ ಸಂಭಾಷಣೆಗಳಲ್ಲಿ ಆಗಾಗ ಕೇಳಿಬರುವ ಗಾದೆಮಾತು ಇದು. ಜನರು ಬಹಳ ಸಲ ತಮ್ಮಲ್ಲಿರುವ ಒಳ್ಳೆಯ ಅಥವಾ ಕೆಟ್ಟ ಗುಣವನ್ನು, ಇನ್ನೊಬ್ಬರ ಮೇಲೆ ಬೀರುವ ಕೆಲಸ ಮಾಡುತ್ತಾರೆ(projection). ಉದಾಹರಣೆಗೆ, ತಾವು ಸಮಯಪ್ರಜ್ಞೆಗೆ ತುಂಬ ಮಹತ್ವ ಕೊಡುತ್ತೇವೆ ಅಂದರೆ ಬೇರೆಯವರು ಸಹ ಕೊಡುತ್ತಾರೆ ಎಂದು ಭಾವಿಸುವುದು, ಭಿಕ್ಷುಕರಿಗೆ ಹಣ ಕೊಡಬಾರದು ಎಂದು ತಾವು ಭಾವಿಸುವಂತೆ ಬೇರೆಯವರೂ ಭಾವಿಸುತ್ತಾರೆ ಎಂದು ತಿಳಿಯುವುದು, ತಾವು ಪರೀಕ್ಷೆಯಲ್ಲಿ ನಕಲು ಮಾಡಿ ತೇರ್ಗಡೆ ಆಗಿದ್ದರೆ ಬೇರೆಯವರು ಸಹ ಹಾಗೇ ತೇರ್ಗಡೆ ಆಗಿರುತ್ತಾರೆ ಎಂದು ಭಾವಿಸುವುದು….ಹೀಗೆ. ಇದೇ ರೀತಿಯಲ್ಲಿ […]
ಹೀಟ್ ಪಂಪ್ – ತಾಪ ರೇಚಕ – ಉಷ್ಣತೆಯು ಕಡಿಮೆ ಇರುವ ಪ್ರದೇಶದಿಂದ ಉಷ್ಣತೆಯು ಹೆಚ್ಚು ಇರುವ ಪ್ರದೇಶಕ್ಕೆ ಉಷ್ಣತೆಯನ್ನು ವರ್ಗಾಯಿಸುವ ಉಪಕರಣ. ಉದಾಹರಣೆಗೆ ತಂಪು ಪೆಟ್ಟಿಗೆ (ರೆಫ್ರಿಜಿರೇಟರ್).
ಹೀಟ್ ಎಕ್ಸಚೇಂಜರ್ – ತಾಪ ವಿನಿಮಯಕ – ಒಂದು ದ್ರವದಿಂದ ಮತ್ತೊಂದು ದ್ರವಕ್ಕೆ ತಾಪವನ್ನು ವರ್ಗಾಯಿಸುವ ಉಪಕರಣ. ಇದು ಕೊಳವೆಗಳ ಒಂದು ಸರಣಿಯನ್ನು ಹೊಂದಿರುತ್ತದೆ. ಕಾರಿನ ತಂಪುಕಾರಕ ಯಂತ್ರ (ರೇಡಿಯೇಟರ್) ಇದಕ್ಕೊಂದು ಉದಾಹರಣೆ.
ಹೀಟ್ ಇಂಜಿನ್ – ತಾಪಯಂತ್ರ (ಉಷ್ಣ ಚಲನಾ ಯಂತ್ರ) – ಉಷ್ಣತೆಯನ್ನು ಕಾರ್ಯವಾಗಿ ಪರಿವರ್ತಿಸುವ ಒಂದು ಯಂತ್ರ.
ಹೀಟ್ ಕೆಪ್ಯಾಸಿಟಿ – ಉಷ್ಣತಾ ಸಾಮರ್ಥ್ಯ ಅಥವಾ ತಾಪ ಸಾಮರ್ಥ್ಯ – ಒಂದು ವಸ್ತುವಿನ ತಾಪಮಾನವನ್ನು ಒಂದು ಏಕಘಟಕ ಅಳತೆಗೆ ಏರಿಸಲು ಬೇಕಾಗಿರುವ ಶಕ್ತಿ. ಇದನ್ನು ಸಾಮಾನ್ಯವಾಗಿ ಜೌಲ್ಸ್ ಪರ್ ಕೆಲ್ವಿನ್ ನಲ್ಲಿ ಹೇಳಲಾಗುತ್ತದೆ.
ಹೀಟ್ – ಉಷ್ಣತೆ – ಹೆಚ್ಚು ತಾಪಮಾನವುಳ್ಳ ಪ್ರದೇಶದಿಂದ ಕಡಿಮೆ ತಾಪಮಾನವುಳ್ಳ ಪ್ರದೇಶಕ್ಕೆ ವರ್ಗಾವಣೆಯಾಗುವ ಶಕ್ತಿಯನ್ನು ಸಾಮಾನ್ಯವಾಗಿ ಉಷ್ಣತೆ ಎಂಬ ಹೆಸರಿನಿಂದ ಕರೆಯುತ್ತಾರೆ.
ಹಾರ್ಮೋನಿಕ್ ಮೋಷನ್ – ಸಂಗತ ಆವರ್ತನ ಅಥವಾ ಸಮರಸ ಚಲನೆ – ನಿಯಮಿತವಾಗಿ ಪುನರಾವರ್ತನೆಗೊಳ್ಳುವ ಸರಣಿ. ಇದನ್ನು ಸೈನ್ ತರಂಗಗಳ (ಅಲೆಗಳ) ಒಂದು ಮೊತ್ತವಾಗಿ ನಿರೂಪಿಸಬಹುದು (ತನ್ನ ಆಕಾರವನ್ನು ಸದಾ ಉಳಿಸಿಕೊಳ್ಳುವ ಅಲೆಯೇ ಸೈನ್ ಅಲೆ).