ಪ್ರಾಸಬದ್ಧವಾದ ಮತ್ತು ಅರ್ಥಪೂರ್ಣವಾದ ಒಂದು ಕನ್ನಡ ಗಾದೆಮಾತು ಇದು. ಜನರು ಸುಳ್ಳು, ಮೋಸ, ಕಳವು, ಪರಪೀಡನೆ, ಜೀವಹಿಂಸೆ ಮುಂತಾದ ಪರಪೀಡನೆಗಳಲ್ಲಿ ತೊಡಗಿ (ಅಂದರೆ ಅನೇಕ ಪಾಪಗಳನ್ನು ಮಾಡಿ), ನಂತರ, ದೇವರ ಪೂಜೆಯನ್ನು ಧೂಪ ದೀಪಗಳೊಂದಿಗೆ ವಿಜೃಂಭಣೆಯಿಂದ ಮಾಡಿಬಿಟ್ಟರೆ, ಅವರು ಮಾಡಿದ ಪಾಪಕಾರ್ಯಗಳು ಮಾಯವಾಗಿಬಿಡುವವೇನು? ಖಂಡಿತ ಇಲ್ಲ. ಹೀಗಾಗಿ ‘ಪಾಪಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಎಷ್ಟು ಧೂಪ ಹಾಕಿ ಪೂಜೆ ಮಾಡಿದರೂ ಈ ಕೆಟ್ಟ ಕೆಲಸಗಳ ಪರಿಣಾಮ ಹೋಗುವುದಿಲ್ಲ’ ಎಂಬುದು ಈ ಗಾದೆಮಾತು ಕಲಿಸುವ ಜೀವನಪಾಠವಾಗಿದೆ. Kannada […]
– ಹೋಮೋಪೋಲಾರ್ ಜನರೇಟರ್ ( ಫ್ಯಾರಡೇ ಡಿಸ್ಕ್)
– ಏಕಧ್ರುವ ವಿದ್ಯುದುತ್ಪಾದಕ ( ಫ್ಯಾರಡೇ ತಟ್ಟೆ) – ಒಂದು ಲೋಹದ ತಟ್ಟೆ ಹಾಗೂ ತನ್ನ ಮೇಲ್ಮೈಗೆ ಲಂಬಕೋನದಲ್ಲಿ ಸುತ್ತುತ್ತಿರುವ ಕಾಂತಕ್ಷೇತ್ರವನ್ನು ಹೊಂದಿರುವಂತಹ, ‘ನೇರ ವಿದ್ಯುತ್’ ಉತ್ಪಾದಕ ಇದು. ಈ ತಟ್ಟೆಯ ಕೇಂದ್ರ ಮತ್ತು ತುದಿಗಳ ನಡುವೆ ವಿದ್ಯುತ್ ಚಾಲಕ ಶಕ್ತಿಯು ಪ್ರೇರಿತಗೊಳ್ಳುತ್ತದೆ.
ಹೋಮೋಜೀನಸ್ ರಿಯಾಕ್ಟರ್ – ಸಮಜಾತೀಯ ಅಣುಸ್ಥಾವರ – ಅಣುಸ್ಥಾವರವೊಂದರಲ್ಲಿ ನ್ಯೂಟ್ರಾನುಗಳ ವಿದಳನ ಕಾರ್ಯಕ್ಕಾಗಿ ವಿದಳನ ವಸ್ತು ಮತ್ತು ಮಂದಕಾರಕಗಳನ್ನು ಚೆನ್ನಾಗಿ ಬೆರೆಸಿದ್ದರೆ( ಅಂದರೆ ಸಮಜಾತೀಯ ಮಿಶ್ರಣವಾಗುವಂತೆ) ಅದು ಸಮಜಾತೀಯ ಅಣುಸ್ಥಾವರ ಅನ್ನಿಸಿಕೊಳ್ಳುತ್ತದೆ.
ಹೋಲೋಗ್ರಫಿ – ಮೂರು ಆಯಾಮಗಳ ಛಾಯಾಚಿತ್ರ ಗ್ರಹಣ – ಲೇಸರ್ ಬೆಳಕು ಹಾಗೂ ಛಾಯಾಚಿತ್ರ ಫಲಕಗಳನ್ನು ಬಳಸಿ ಒಂದು ವಸ್ತುವಿನ ಬಿಂಬವನ್ನು ಮೂರು ಆಯಾಮಗಳಲ್ಲಿ ದಾಖಲಿಸುವುದು ಮತ್ತು ಪ್ರದರ್ಶಿಸುವುದು. ಹಂಗೇರಿಯ ಭೌತಶಾಸ್ತ್ರಜ್ಞರಾದ ಡೆನ್ನಿಸ್ ಗೇಬರ್ ಇದನ್ನು 1948ರಲ್ಲಿ ಕಂಡುಹಿಡಿದರು. ಇವರಿಗೆ ಈ ಸಂಶೋಧನೆಗಾಗಿ 1971ರಲ್ಲಿ ನೊಬೆಲ್ ಪ್ರಶಸ್ತಿ ಬಂತು.
ಹೋಲೋಗ್ರಾಂ – (ಮೂರು ಆಯಾಮಗಳ) ಪೂರ್ಣಚಿತ್ರ ದಾಖಲೆ – ಪೂರ್ಣಚಿತ್ರ ಗ್ರಹಣದಲ್ಲಿ ಮೂರು ಆಯಾಮಗಳ ಬಿಂಬವನ್ನು ಪುನರುತ್ಪತ್ತಿ ಮಾಡುವಾಗ ಬಳಸುವ ಒಂದು ಛಾಯಾಚಿತ್ರ ದಾಖಲೆ.
ಹೋಲ್ – ರಂಧ್ರ – ಒಂದು ಘನವಸ್ತುವಿನ ಕಿಂಡಿ ಚೌಕಟ್ಟಿನ (ಲ್ಯಾಟಿಸ್) ರಚನೆಯಲ್ಲಿ ಎಲೆಕ್ಟ್ರಾನೊಂದು ಇದ್ದು, ಈಗ ಖಾಲಿಯಾಗಿರುವ ಜಾಗ. ರಂಧ್ರವು ಒಂದು ‘ಸಂಚಾರಿ- ಧನಾತ್ಮಕ – ವಿದ್ಯುದಂಶ-ಒಯ್ಯಕ’ ದಂತೆ ಕೆಲಸ ಮಾಡುತ್ತದೆ.
ಹೋಡೋಸ್ಕೋಪ್ – ಗಮನ ಗ್ರಾಹಕ – ವಿದ್ಯುದಂಶ ಹೊಂದಿರುವ ( ಸಾಮಾನ್ಯವಾಗಿ ವಿಶ್ವಾತ್ಮಕ ಕಿರಣಗಳ) ಕಣಗಳ ಪಥವನ್ನು ಗೊತ್ತು ಮಾಡುವ ( ಅವುಗಳ ಜಾಡು ಹಿಡಿಯುವ) ಉಪಕರಣ.
Like us!
Follow us!