ಐಸೋಟೋಪಿಕ್ ನಂಬರ್ – ನ್ಯೂಟ್ರಾನ್ ಎಕ್ಸೆಸ್ – ಸಮಸ್ಥಾನಿ ಸಂಖ್ಯೆ (ನ್ಯೂಟ್ರಾನ್ ಆಧಿಕ್ಯ) – ಒಂದು ಸಮಸ್ಥಾನಿಯಲ್ಲಿ ಪ್ರೋಟಾನುಗಳ ಸಂಖ್ಯೆಗೂ ನ್ಯೂಟ್ರಾನುಗಳ ಸಂಖ್ಯೆಗೂ ಇರುವ ವ್ಯತ್ಯಾಸ.
ಐಸೋಟೋಪ್ ಸೆಪರೇಷನ್ – ಸಮಸ್ಥಾನಿಗಳ ಪ್ರತ್ಯೇಕೀಕರಣ – ಒಂದು ವಸ್ತುವಿನ ಸಮಸ್ಥಾನಿಗಳನ್ನು ಅವುಗಳ ಭೌತಿಕ ಗುಣಲಕ್ಷಣಗಳಲ್ಲಿರುವ ತುಸು ವ್ಯತ್ಯಾಸದ ಆಧಾರದ ಮೇಲೆ ಪ್ರತ್ಯೇಕಗೊಳಿಸುವುದು. ಇದನ್ನು ಮಾಡಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ.
ಐಸೋಟೋಪ್ಸ್ – ಸಮಸ್ಥಾನಿಗಳು – ಒಂದೇ ಪರಮಾಣು ಸಂಖ್ಯೆಯಿದ್ದು ಬೇರೆ ಬೇರೆ ದ್ರವ್ಯರಾಶಿ ಸಂಖ್ಯೆಗಳುಳ್ಳ ಒಂದು ವಸ್ತುವಿನ ಪರಮಾಣುಗಳು. ಇಂತಹ ಪ್ರಭೇದಗಳ ಪ್ರೋಟಾನು ಸಂಖ್ಯೆಯು ಸಮವಾಗಿದ್ದು, ನ್ಯೂಟ್ರಾನುಗಳ ಸಂಖ್ಯೆ ಭಿನ್ನವಾಗಿರುತ್ತದೆ. ಇವುಗಳಿಗೆ ಸಮಾನ ರಾಸಾಯನಿಕ ಗುಣಲಕ್ಷಣಗಳು ಹಾಗೂ ಭಿನ್ನವಾದ ಭೌತಿಕ ಗುಣಲಕ್ಷಣಗಳಿರುತ್ತವೆ.
ಐಸೋಟೋನ್ಸ್ – ಸಮಸಾರಿಗಳು ಅಥವಾ ಸಮಕೇಂದ್ರೀಯಗಳು – ಒಂದೇ ಸಂಖ್ಯೆಯ ನ್ಯೂಟ್ರಾನುಗಳನ್ನು ಆದರೆ ಬೇರೆ ಬೇರೆ ಸಂಖ್ಯೆಯ ಪ್ರೋಟಾನುಗಳನ್ನು ಹೊಂದಿರುವ ಬೀಜಕೇಂದ್ರಗಳು (ನ್ಯೂಕ್ಲೈಡುಗಳು).
ಐಸೋಥರ್ಮಲ್ ಟ್ರ್ಯಾನ್ಸ್ಫಾರ್ಮೇಷನ್ – ಸಮೋಷ್ಣ ಪರಿವರ್ತನೆ – ಉಷ್ಣಚಲನಾ ಶಾಸ್ತ್ರದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವ ಪದ. ಸ್ಥಿರವಾದ ಉಷ್ಣತೆಯಲ್ಲಿ ಒಂದು ವಸ್ತುವಿನಲ್ಲಿ ಉಂಟಾಗುವ ಬದಲಾವಣೆಯನ್ನು ಇದು ಹೇಳುತ್ತದೆ.
ಐಸೋಥರ್ಮಲ್ ಪ್ರೋಸೆಸ್ – ಸಮತಾಪ ಅಥವಾ ಸಮೋಷ್ಣ ಪ್ರಕ್ರಿಯೆ – ತನ್ನ ಉದ್ದಕ್ಕೂ ಉಷ್ಣತೆಯು ಸ್ಥಿರವಾಗಿರುವಂತಹ ಪ್ರಕ್ರಿಯೆ. ಇದರಲ್ಲಿ ವ್ಯವಸ್ಥೆಯು, ಬದಲಾವಣೆಯುದ್ದಕ್ಕೂ ತನ್ನ ಸುತ್ತಮುತ್ತಲ ಪರಿಸರದೊಂದಿಗೆ ಸಮತೋಲನದಲ್ಲಿರುತ್ತದೆ.
ಐಸೋಥರ್ಮ್ – ಸಮತಾಪರೇಖೆ – ಸಮ ಉಷ್ಣತೆಯುಳ್ಳ ಬಿಂದುಗಳು ಸೇರುತ್ತಾ ಹೋಗುವ ಒಂದು ರೇಖೆ ಅಥವಾ ರೇಖಾಚಿತ್ರ.
ಐಸೋಮಾರ್ಫಿಸಂ. – ಸಮರೂಪತೆ – ರಾಸಾಯನಿಕವಾಗಿ ಪರಸ್ಪರ ಸಂಬಂಧ ಹೊಂದಿರುವ ವಸ್ತುಗಳಲ್ಲಿನ ಹರಳುಗಳ ರೂಪ ಅಥವಾ ರಚನೆಯಲ್ಲಿನ ಸಮತೆ.
Like us!
Follow us!