ಜೋಲಿ ಸ್ಟೀಮ್ ಕೆಲೊರಿಮೀಟರ್ – ಜೋಲಿ ಹಬೆಯ ಕೆಲೊರಿ( ಉಷ್ಣ) ಮಾಪಕ – ಸ್ಥಿರ ಪರಿಮಾಣದಲ್ಲಿ ಒಂದು ಅನಿಲದ ನಿರ್ದಿಷ್ಟ ( ಸ್ಪೆಸಿಫಿಕ್) ತಾಪ ಸಾಮರ್ಥ್ಯವನ್ನು ಅಳೆಯಲು ಬಳಸುವ ಒಂದು ಉಪಕರಣ.
ಜೋಹಿ ಎಫೆಕ್ಟ್ – ಜೋಹಿ ಪರಿಣಾಮ – ಅನಿಲ ವಿಸರ್ಜನ ದಲ್ಲಿ ವಿಸರ್ಜನೆಗೊಳ್ಳುತ್ತಿರುವ ವಿದ್ಯುತ್ತಿನ ಮೇಲೆ ಬೆಳಕು ಉಂಟು ಮಾಡುವ ಪರಿಣಾಮ.
ಜಾನ್ಸನ್ ನಾಯ್ಸ್ – ಜಾನ್ಸನ್ ರ ಶಬ್ಧ – ವಿದ್ಯುನ್ಮಾನ ಶಾಸ್ತ್ರಕ್ಕೆ ಸಂಬಂಧಿಸಿದ ಪದ ಇದು. ಇದರ ವಾಹಕಗಳಲ್ಲಿನ ಎಲೆಕ್ಟ್ರಾನುಗಳಲ್ಲಿ ಉಂಟಾದ ತಾಪಮೂಲೀಯ ಕ್ಷೋಭೆಯಿಂದಾಗಿ ಉಂಟಾಗುವ ಶಬ್ಧ.
ಜಾಗಿಂಗ್ – ಜಗ್ಗಾಡಿಸುವುದು – ಚಲಾಯಿಸಲು ಆರಂಭಿಸಿರುವ ಒಂದು ಯಂತ್ರದಲ್ಲಿ ಚಲನೆಯನ್ನುಂಟು ಮಾಡಲಿಕ್ಕಾಗಿ ವಿದ್ಯುನ್ಮಂಡಲವನ್ನು ಬೇಗ ಬೇಗ, ಮತ್ತೆ ಮತ್ತೆ ತೆರೆಯುವ ಮತ್ತು ಮುಚ್ಚುವ ಕ್ರಿಯೆ.
ಜಿಟ್ಟರ್ಸ್ – ಅದುರುವ ಚಿತ್ರದೋಷ – ಕ್ರಿಪ್ರ ವೀಕ್ಷಕ ಹಾಗೂ ದಾಖಲೆದಾರ ಉಪಕರಣದ ನಡುವೆ ಆಗುವುದಕ್ಕೆ ಹೊಂದಾಣಿಕೆಯ ವ್ಯತ್ಯಾಸದಿಂದಾಗಿ ದೂರದರ್ಶನದ ಚಿತ್ರದಲ್ಲಿ ಅಥವಾ ಪ್ರತಿಬಿಂಬ ಚಿತ್ರದಲ್ಲಿ ಉಂಟಾದ ಕ್ಷಣಿಕ ದೋಷಗಳು.
ಜೆಟ್ ಪ್ರೊಪಲ್ಶನ್(ರಿಯಾಕ್ಷನ್ ಪ್ರೊಪಲ್ಶನ್) – ಧಾರಾಬುಗ್ಗೆಯಿಂದ ಮುನ್ನೂಕುವಿಕೆ – ಧಾರಾಬುಗ್ಗೆಯ ರೂಪದಲ್ಲಿ ದ್ರವವೊಂದನ್ನು ಚಿಮ್ಮಿಸುವ ಮೂಲಕ ಉತ್ಪತ್ತಿಯಾದ ಬಲಗಳಿಂದ ಒಂದು ವಸ್ತುವನ್ನು ಮುನ್ನೂಕುವುದು. ಇಲ್ಲಿ, ಹಿಂದು ಹಿಂದಕ್ಕೆ ಚಲಿಸುವ ಧಾರಾಬುಗ್ಗೆಯು ತನ್ನನ್ನು ಉತ್ಪತ್ತಿ ಮಾಡಿದ ವಸ್ತುವನ್ನು, ನ್ಯೂಟನ್ ರ ಮೂರನೆಯ ನಿಯಮದ ಪ್ರಕಾರ ಮುಂದುಮುಂದಕ್ಕೆ ನೂಕುತ್ತದೆ.
ಜರ್ಕ್ – ಕುಲುಕು – ಯಂತ್ರಚಲನ ಶಾಸ್ತ್ರದಲ್ಲಿ ಬಳಸುವ ಪದ. ಇದನ್ನು ಒಂದು ವ್ಯವಸ್ಥೆಯ ವೇಗೋತ್ಕರ್ಷದ ಗತಿಯಲ್ಲಿ ಉಂಟಾಗುವ ಬದಲಾವಣೆ ಎಂದು ನಿರೂಪಿಸಲಾಗುತ್ತದೆ.
ಐಸೋಟ್ರೋಪಿಕ್ – ಸಮವರ್ತಿ – ಒಂದು ಮಾಧ್ಯಮದ ಗುಣಲಕ್ಷಣಗಳು ಎಲ್ಲ ದಿಕ್ಕುಗಳಲ್ಲೂ ಅವವೇ ಆಗಿದ್ದರೆ, ಅಂದರೆ, ಆ ಭೌತಿಕ ಗುಣಲಕ್ಷಣಗಳಿಗೂ ಅದರ ದಿಕ್ಕಿಗೂ ಸಂಬಂಧವಿಲ್ಲ ಎನ್ನುವುದಾದರೆ ಅದನ್ನು ಸಮವರ್ತಿ ಎನ್ನುತ್ತಾರೆ.
Like us!
Follow us!