ಇದು ವಾಸ್ತವಿಕವಾಗಿ ನಡೆದ ಘಟನೆ. 12-07-2026ನೇ ಭಾನುವಾರ ನಮ್ಮ ಕುಟುಂಬ ಸ್ನೇಹಿತರಾದ ಶ್ರೀ ಶಂಕರ್ ಶಾಸ್ತ್ರಿಯವರು, ತಮ್ಮ ಮಗಳು ಶರ್ಮಿಳಾ, ( ನನ್ನ ಭರತನಾಟ್ಯ ಶಿಷ್ಯೆ) ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಸಂತೋಷಕ್ಕಾಗಿ, ವಿಜಯನಗರದ ಹತ್ತಿರದ ಪಿಎಫ್ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಏರ್ಪಡಿಸಿದ್ದರು. ಸಾಂಗವಾಗಿ ನಡೆದ ಪೂಜೆಯ ನಂತರ ಅವರು ಏರ್ಪಡಿಸಿದ್ದ ಭೋಜನದ ಸಮಯದಲ್ಲಿ ನಡೆದದ್ದು ಈಗ ನಾನು ವಿವರಿಸಲಿರುವ ಪದಪ್ರಾಪ್ತಿ ಘಟನೆ. ಆ ಸಮಾರಂಭಕ್ಕೆ ಶಂಕರ್ ಶಾಸ್ತ್ರಿಯವರಿಗೆ ಪರಿಚಿತರಾದ […]
ಮ್ಯಾಗ್ನೆಟಿಕ್ ಶೀಲ್ಡಿಂಗ್ – ಕಾಂತೀಯ ತೆರೆ – ಅತಿ ಹೆಚ್ಚು ಪ್ರವೇಶಸಾಧ್ಯತೆ ಇರುವ ಒಂದು ವಸ್ತುವಿನಿಂದ ಮಾಡಲ್ಪಟ್ಟಂತಹ ಒಂದು ಪರದೆ. ಇದನ್ನು ಯಾವುದಾದರೂ ಉಪಕರಣಗಳನ್ನು ಅನಗತ್ಯ ಕಾಂತಕ್ಷೇತ್ರಗಳ ಪರಿಣಾಮದಿಂದ ರಕ್ಷಿಸಲು ಬಳಸುತ್ತಾರೆ.
ಮ್ಯಾಗ್ನೆಟಿಕ್ ಸ್ಕ್ಯಾಟರಿಂಗ್ – ಕಾಂತೀಯ ಚದುರುವಿಕೆ – ಪರಮಾಣುಗಳ ತಿರುಗುಬಲದೊಂದಿಗೆ ನ್ಯೂಟ್ರಾನುಗಳ ತಿರುಗುಬಲವು ಅಂತರ್ ಕ್ರಿಯೆ ನಡೆಸಿ ( ಅಂದರೆ ತೊಡಗಿಕೊಂಡು) ನ್ಯೂಟ್ರಾನುಗಳು ಚದುರುವಂತಹ ಪ್ರಕ್ರಿಯೆ ಇದು.
ಮ್ಯಾಗ್ನೆಟಿಕ್ ರೆಸಿಸ್ಟೆನ್ಸ್ – ಕಾಂತೀಯ ಪ್ರತಿರೋಧ – ಇದು ಕಾಂತೀಯ ಚಾಲಕ ಬಲಕ್ಕೂ ಕಾಂತೀಯ ಬಲರೇಖೆಗಳಿಗೂ ಇರುವ ಅನುಪಾತ. ಇದು ಕಾಂತೀಯ ಬಲರೇಖೆಗಳಿಗಿರುವ ವಿರೋಧವನ್ನು ಸೂಚಿಸುತ್ತದೆ.
ಮ್ಯಾಗ್ನೆಟಿಕ್ ಪ್ರೋಬ್ – ಕಾಂತೀಯ ಪತ್ತೆ ಸಾಧನ – ಒಂದು ಚಿಕ್ಕ ವಾಹಕ ಸುರುಳಿ ಇದು. ಇದನ್ನು ಒಂದು ಕಾಂತಕ್ಷೇತ್ರದಲ್ಲಿ ಇಟ್ಟು ಆ ಕಾಂತಕ್ಷೇತ್ರದ ಸಾಮರ್ಥ್ಯದಲ್ಲಿ ಆಗುವ ಬದಲಾವಣೆಗಳನ್ನು ಅಳೆಯುತ್ತಾರೆ.
ಮ್ಯಾಗ್ನೆಟಿಕ್ ಪೊಟೆನ್ಶಿಯಲ್ – ಕಾಂತೀಯ ಅಂತಸ್ಥ ಬಲ – ಕಾಂತೀಯ ಚಾಲಕ ಬಲ. ಇದು ಒಂದು ವಿದ್ಯುನ್ಮಂಡಲದಲ್ಲಿನ ಚಾಲಕ ಬಲಕ್ಕೆ ಸಂವಾದಿಯಾಗಿರುವಂಥದ್ದು ಎನ್ನಬಹುದು.
ಮ್ಯಾಗ್ನೆಟಿಕ್ ಪೋಲ್ ಸ್ಟ್ರೆಂಗ್ತ್ – ಕಾಂತೀಯ ಧ್ರುವ ಶಕ್ತಿ – ಒಂದು ಅಯಸ್ಕಾಂತದ ಧ್ರುವಶಕ್ತಿಯನ್ನು ಆ ಅಯಸ್ಕಾಂತಕ್ಕೆ ವಸ್ತುಗಳು ಆಕರ್ಷಿತವಾಗುವ ಬಲವೆಂದು ವ್ಯಾಖ್ಯಾನಿಸಲಾಗುತ್ತದೆ.
ಮ್ಯಾಗ್ನೆಟಿಕ್ ಪೋಲ್ – ಕಾಂತೀಯ ಧ್ರುವ ( ಕಾಂತ ಧ್ರುವ) – ಒಂದು ಅಯಸ್ಕಾಂತದ ಪ್ರತಿಯೊಂದು ತುದಿಯಲ್ಲೂ ಕಾಂತಕ್ಷೇತ್ರವು ಅತ್ಯಂತ ಪ್ರಬಲವಾಗಿರುತ್ತದೆ. ಈ ತುದಿಯನ್ನು ಕಾಂತೀಯ ಧ್ರುವ ಅಥವಾ ಕಾಂತ ಧ್ರುವ ಎನ್ನುತ್ತಾರೆ.
Like us!
Follow us!