ಕನ್ನಡ ಗಾದೆಮಾತು – ನುಂಗಿಕೊಂಡ ಸಂಕಟ ಬೆಂಕಿಗಿಂತ ಹೆಚ್ಚು.

ಕೆಲವು ಸಲ ಮನುಷ್ಯರು, ತಮಗೆ ಆದ ತೀವ್ರ ನೋವು, ಸಂಕಟ, ಅವಮಾನಗಳನ್ನು ನುಂಗಿಕೊಂಡು ಏನೂ ಹೇಳದೆ, ಪ್ರತಿಕ್ರಯಿಸದೆ, ಹಾಗೇ ಸುಮ್ಮನಿದ್ದುಬಿಡುತ್ತಾರೆ.‌ ಮೇಲ್ನೋಟಕ್ಕೆ ಅವರು ಆರಾಮಾಗಿ ಇದ್ದಾರೆ ಅನ್ನಿಸಿದರೂ ಆ ಸಂಕಟ ಒಳಗೇ ಅವರನ್ನು ತೀವ್ರವಾಗಿ ಸುಡುತ್ತಿರುತ್ತದೆ. ಆದರೆ ಕಾಲಾನಂತರ ಈ ಸಂಕಟವು ಯಾವುದಾದರೂ ದೈಹಿಕ, ಮಾನಸಿಕ ರೋಗವಾಗಿ ಪರಿವರ್ತನೆ ಆಗಬಹುದು‌. ಅಥವಾ ಈ ಸಂಕಟದ ಕಾರಣದಿಂದಾಗಿ ಆ ವ್ಯಕ್ತಿಯು ಇಡೀ ಲೋಕದ ವಿರುದ್ಧ ತಿರುಗಿ ಬೀಳಬಹುದು‌. ಆಧುನಿಕ ಮನೋವಿಜ್ಞಾನ ಸಹ ‘ತಾನು ನುಂಗಿಕೊಂಡ ಸಂಕಟವು ವ್ಯಕ್ತಿಯ ಮಟ್ಟಿಗೆ ವಿಷಕಾರಿಯಾಗುತ್ತದೆ, […]

ಬಟಾಟೆ ಪದದ ಗಮ್ಮತ್ತು, ‘ಆಲೂಗಡ್ಡೆ’ಯ ಕಿಮ್ಮತ್ತು!

ದಕ್ಷಿಣ ಕನ್ನಡದಲ್ಲಿ ಬೆಳೆದ ನನ್ನಂಥವರಿಗೆ ‘ಬಟಾಟೆ ಗಸಿ’ ತುಂಬ ಪರಿಚಿತ ಪದ. ತೆಂಗಿನಕಾಯಿ ತುರಿಯನ್ನು ರುಬ್ಬಿ‌ ಹಾಕಿ ಮಾಡುವ ಸಾಗುವಿನಂತಹ ಖಾದ್ಯ ಅದು. ಉಡುಪಿ ಶೈಲಿಯ ಅಡುಗೆಗಳಲ್ಲಿ ‘ಬಟಾಟೆ ಬಾಜಿ'( ಒಂದು ರೀತಿಯ ಪಲ್ಯ) ಸಹ ಒಂದು ಪ್ರಸಿದ್ಧ ವ್ಯಂಜನ.‌ ತುಂಬ ಸ್ವಾರಸ್ಯಕರವಾದ ವಿಷಯ ಅಂದರೆ ‘ಬಟಾಟ’ ಎಂಬ ಪೋರ್ಚುಗೀಸ್ ಭಾಷೆಯ ಪದವು, ಭಾರತದ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ, ಅಂದರೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ, ‘ಬಟಾಟೆ’ ಆಗಿ ಉಳಿದಿದೆ. ಕರ್ನಾಟಕದ ಉಳಿದ ಭಾಗಗಳಲ್ಲಿ ಇದಕ್ಕೆ ಆಲೂಗಡ್ಡೆ […]

Magnetic Induction

ಮ್ಯಾಗ್ನೆಟಿಕ್ ಇಂಡಕ್ಷನ್ – ಕಾಂತೀಯ ಪ್ರೇರಣೆ – ಬಾಹ್ಯ ಕಾಂತಕ್ಷೇತ್ರವೊಂದರಿಂದ ಒಂದು ವಸ್ತುವಿನ‌ ಅಯಸ್ಕಾಂತೀಕರಣ. ಕಾಂತೀಯ ವಸ್ತುವಿನ ತುಂಡೊಂದನ್ನು ಪ್ರಬಲ ಅಯಸ್ಕಾಂತದ ಪಕ್ಕದಲ್ಲಿಟ್ಟಾಗ ಅದರಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಆವಾಹಿತವಾಗುತ್ತವೆ. ಈಗ ಈ ಕಾಂತೀಯ ವಸ್ತುವಿನ ತುಂಡು ಒಂದು ಪ್ರೇರಿತ ಅಯಸ್ಕಾಂತದಂತೆ ವರ್ತಿಸುತ್ತದೆ ಮತ್ತು ಇನ್ನೊಂದು ಅಯಸ್ಕಾಂತದಿಂದ ಆಕರ್ಷಿತವಾಗುತ್ತದೆ.

Magnetic hysteresis

ಮ್ಯಾಗ್ನೆಟಿಕ್ ಹಿಸ್ಟೆರಿಸಿಸ್ – ಕಾಂತೀಯ ಉಳಿಕೆ ಪರಿಣಾಮ ( ವಿಲಂಬನ) – ಪ್ರಬಲ‌ ಕಾಂತವಸ್ತುಗಳನ್ನು ಕಾಂತಗೊಳಿಸಿಯಾದ ಮೇಲೆ, ಆ ಕಾಂತತ್ವವನ್ನು ತೆಗೆದ ಮೇಲೂ ಅವುಗಳಲ್ಲಿ ಸ್ವಲ್ಪ ಕಾಂತೀಯತೆ ಉಳಿದಿರುತ್ತದೆ. ಹೀಗೆ ಕಾಂತೀಯತೆಯು ಉಳಿಯುವುದನ್ನು ‘ಕಾಂತೀಯ ಉಳಿಕೆ ಪರಿಣಾಮ’ ಎನ್ನುತ್ತಾರೆ.

Magnetic head

ಮ್ಯಾಗ್ನೆಟಿಕ್ ಹೆಡ್ – ಕಾಂತೀಯ ಪ್ರಮುಖ – ಒಂದು‌ ಕಾಂತೀಯ ದಾಖಲುಕಾರಕದಲ್ಲಿ ವಿದ್ಯುತ್ತೀಯ ಕಂಪನಗಳನ್ನು ಕಾಂತೀಯ ಪಟ್ಟಿಯ ಮೇಲೆ ಸಂಗ್ರಹಿಸುವುದಕ್ಕಾಗಿ, ಕಾಂತೀಯ ಕಂಪನಗಳನ್ನಾಗಿ ಪರಿವರ್ತಿಸುವಂತಹ ಶಕ್ತಿ ನಿರ್ವಾಹಕ ಇದು‌.

Magnetic flux

ಮ್ಯಾಗ್ನೆಟಿಕ್ ಫ್ಲಕ್ಸ್ –  ಕಾಂತೀಯ ಬಲರೇಖೆಗಳು – ಒಂದು ಮೇಲ್ಮೈ ಯನ್ನು ಹಾದುಹೋಗುವ ಒಟ್ಟು ಪ್ರಚೋದನೆಯ ರೇಖೆಗಳ ಮೊತ್ತಕ್ಕೆ ಸಮ‌ ಇದು. ಇದರ ಮೂಲಮಾನ‌ Weber (ವೆಬರ್).

Magnetic field

ಮ್ಯಾಗ್ನೆಟಿಕ್ ಫೀಲ್ಡ್ – ಕಾಂತಕ್ಷೇತ್ರ – ಯಾವ ಪ್ರದೇಶದಲ್ಲಿ, ಒಂದು ಚಿಕ್ಕ ಅಯಸ್ಕಾಂತ ಅಥವಾ ವಿದ್ಯುತ್ತನ್ನು ಒಯ್ಯುತ್ತಿರುವ ಒಂದು ಮಂಡಲ( ತಂತಿಯ ಕುಣಿಕೆ) ಒಂದು ಬಲವನ್ನು ಅನುಭವಿಸುತ್ತದೋ ಆ ಪ್ರದೇಶ.

ಕನ್ನಡ ಗಾದೆ ಮಾತು – ಎಮ್ಮೆ ಮೇಲೆ ಮಳೆ ಬಿದ್ದಂಗೆ.

 ಎಮ್ಮೆಗೆ ನೀರೆಂದರೆ ಬಹಳ ಇಷ್ಟ ಎಂಬುದು‌ ಎಲ್ಲರಿಗೂ ಗೊತ್ತಿರುವ ವಿಷಯ. ಸದಾ ನೀರಿನಲ್ಲೇ ಇರಲು ಇಷ್ಟ ಪಡುವ ಪ್ರಾಣಿ ಅದು.‌ ಹೀಗಾಗಿ ಮಳೆ ಬಂತೆಂದರೆ ಮನುಷ್ಯರು ಅಥವಾ ಬೇರೆ ಪ್ರಾಣಿಗಳು ತಡಬಡಾಯಿಸಿ‌, ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರನ್ನು ಹುಡುಕಿಕೊಂಡು  ಓಡುವಂತೆ ಎಮ್ಮೆ ಓಡುವುದಿಲ್ಲ. ತನ್ನ ಮೇಲೆ ಧಾರಾಕಾರ ಮಳೆ ಬೀಳುತ್ತಿದ್ದರೂ ತನಗೆ ಏನೂ ಆಗಿಯೇ ಇಲ್ಲ ಎಂಬಂತೆ ಆರಾಮಾಗಿ ನಿಂತಿರುತ್ತದೆ ಅಥವಾ ನಡೆಯುತ್ತಿರುತ್ತದೆ. ಅದರ ಮೈಯಲ್ಲಿ ಸಾಕಷ್ಟು ಬೆವರು  ಗ್ರಂಥಿಗಳಿಲ್ಲ‌, ತನ್ನ ಮೈಯನ್ನು ತಂಪಾಗಿ ಇಟ್ಟುಕೊಳ್ಳಲು ಅದು […]

ದಕ್ಷಿಣ ಕನ್ನಡದ ಒಂದು ಹೂಕಟ್ಟಿನ  ಹೆಸರು ‘ಚೂಡಿ’‌ – ಈ ಪದದ ಜಾದೂ ನೋಡಿ!

ಮಂಗಳೂರಿನ ನನ್ನ ಬಾಲ್ಯದ ಅನೇಕ ಸ್ಮರಣೀಯ ಸಂಗತಿಗಳಲ್ಲಿ ‘ಚೂಡಿ’ ಒಂದು. ಏನಿದು ಚೂಡಿ? ಹೇಳ್ತೇನೆ ನಿಮ್ಗೆ …. ಆಯ್ತಾ? ಕನ್ನಡ ನಾಡಿನ ಕರಾವಳಿಯ ಭಾಗಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಎಂಬ ಕೊಂಕಣಿ ಮಾತಾಡುವ ಸಮುದಾಯ ನೆಲೆಸಿದೆ. ಮಂಗಳೂರಿನಲ್ಲಿ ಕೂಡ ಇರುವ ಈ ಜನರು ಕೊಂಕಣಿಯನ್ನು ಮನೆಯಲ್ಲೂ, ಕನ್ನಡ ಹಾಗೂ ತುಳು ಭಾಷೆಗಳನ್ನು ಹೊರ ಪ್ರಪಂಚದ ವ್ಯವಹಾರದಲ್ಲೂ ಬಳಸುತ್ತಾರೆ. ಈ ಮೂರು ಭಾಷೆಗಳಲ್ಲಿ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಲೀಲಾಜಾಲವಾಗಿ ಜಿಗಿಯುತ್ತಾ, ಸ್ಥಳೀಯ ತುಳು ಹಾಗೂ ಕನ್ನಡ ಭಾಷಿಗರೊಂದಿಗೆ […]

Magnetic equator

ಮ್ಯಾಗ್ನೆಟಿಕ್ ಈಕ್ವೇಟರ್ – ಕಾಂತೀಯ ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಅನಿಯಮಿತ, ಕಲ್ಪಿತ ರೇಖೆ ಇದು. ಇಲ್ಲಿ‌ ಭೂಮಿಯ ಕಾಂತೀಯ ಕ್ಷೇತ್ರರೇಖೆಗಳು ಮೇಲ್ಮೈಗೆ, ಬಹು ನಿಖರವಾಗಿ ಸಮಾನಾಂತರವಾಗಿರುತ್ತವೆ. 

Page 5 of 139

Kannada Sethu. All rights reserved.