Dry cell

ಒಣ ಕೋಶ – ತನ್ನಲ್ಲಿನ ವಿದ್ಯುತ್ ವಿಭಜಕವು ಹಣ್ಣುಪಾಕ ಅಥವಾ ಲೇಹ್ಯದಂತಹ ಹದದಲ್ಲಿ ಇರುವ ಒಂದು ವಿದ್ಯುತ್ ರಾಸಾಯನಿಕ ಕೋಶ. ಇದನ್ನು ಕೈದೀಪದಂತಹ, ಕೈಯಲ್ಲಿಟ್ಟುಕೊಂಡು ಓಡಾಡಿಸುವ ಉಪಕರಣಗಳಲ್ಲಿ ಬಳಸುತ್ತಾರೆ.

Driver

ಚಾಲಕ ವಿದ್ಯುನ್ಮಂಡಲ – ಒಂದು ಅಥವಾ ಅದಕ್ಕಿಂತ ಹೆಚ್ಚು ವಿದ್ಯುನ್ಮಂಡಲಗಳಿಗೆ ಒಳಹರಿವಿನ ವಿದ್ಯುತ್ ನೀಡುವಷ್ಟು  ಹೊರಹರಿವಿನ ಸಾಮರ್ಥ್ಯವುಳ್ಳ ವಿದ್ಯುನ್ಮಂಡಲ.

Drift velocity

ಗತಿಶೀಲತೆಯ ದಿಶಾವೇಗ – ಒಂದು ಅರೆವಾಹಕದಲ್ಲಿ, ಏಕಘಟಕ ವಿದ್ಯುತ್ ಕ್ಷೇತ್ರದಲ್ಲಿ ಬೇಕಾದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯುದಂಶ ಒಯ್ಯಕಗಳ ಸರಾಸರಿ ದಿಶಾವೇಗ.

ಕನ್ನಡ ಗಾದೆಮಾತು –  ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡಿದ್ರಂತೆ!

ಕೆಲವರಿಗೆ ಯಾವ ಕೆಲಸ ಕೊಟ್ಟರೂ ಅವರು ಅದನ್ನು ಸರಿಯಾಗಿ ಮಾಡುವುದಿಲ್ಲ. ಉದಾಹರಣೆಗೆ ಯಾವುದೋ ಸಾಮಾನು ತಾ ಅಂದರೆ ಇನ್ಯಾವುದನ್ನೋ‌ ತರುವುದು, ಅಡಿಗೆಗೆ ಒಂದು‌‌ ಹಿಡಿ‌ ಉಪ್ಪು ಹಾಕೆಂದರೆ ಮೂರು ಹಿಡಿ ಹಾಕಿಬಿಡುವುದು…..ಹೀಗೆ. ಇಂಥವರು ಪ್ರತಿಯೊಂದು ಕೆಲಸದಲ್ಲೂ ಯಡವಟ್ಟು ಮಾಡುತ್ತಾರೆ. ಇಂಥವರ ಬಗ್ಗೆ ಹೇಳಿರುವ ಮಾತಿದು. ಗಣೇಶನ ಮೂರ್ತಿಯನ್ನು ಮಾಡು ಎಂದರೆ ಅವರ ತಂದೆಯಾದ ಶಿವನ ಮೂರ್ತಿಯನ್ನು ಮಾಡಿದರೆ ಏನು ಮಾಡಬೇಕು ನೀವೇ ಹೇಳಿ! ಇಂತಹ ಯಡವಟ್ಟರಿಗಾಗಿಯೇ ಮಾಡಿರುವ ಗಾದೆ ಮಾತಿದು.  Kannada proverb – Ganeshanna maadu […]

ಎಮ್ಮೆಯ ಕನ್ನಡ!!

ಅಧ್ಯಾಪಕರ ಉದ್ಯೋಗದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಂಬುದು ತುಂಬ ಗಂಭೀರ ವಿಷಯ ಹಾಗೂ ಅತ್ಯಂತ ಜವಾಬ್ದಾರಿಯುತವಾಗಿ ಮಾಡಬೇಕಾದ ಕೆಲಸ.‌ ಆದಾಗ್ಯೂ ಕೆಲವೊಮ್ಮೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯವ ಉತ್ತರಗಳು, ಮಾಡುವ ತಪ್ಪುಗಳು ಮೌಲ್ಯಮಾಪಕರಿಗೆ ನಗೆಯುಕ್ಕಿಸಿ ಅವರ ಮನಸ್ಸನ್ನು ತುಸು ತಿಳಿಗೊಳಿಸುವುದು ಸುಳ್ಳಲ್ಲ. ಅಂತಹದೇ ಒಂದು ಪ್ರಸಂಗ ಈ ಅಧ್ಯಾಪಕಿಗೂ ಎದುರಾಯಿತು.  ಇಂಗ್ಲಿಷ್ ಮತ್ತು ಕನ್ನಡದ ಬಳಕೆಯನ್ನು ಕುರಿತು ಬರೆಯಬೇಕಾಗಿದ್ದ ಒಂದು ಉತ್ತರದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ” ನಮ್ಮ ಎಮ್ಮೆಯ ಕನ್ನಡ ಭಾಷೆಯು ತುಂಬ ಪ್ರಾಚೀನವಾದುದು” ಎಂದು ಬರೆದಿದ್ದಳು‌! […]

Drain

ಹೊರ ವಿದ್ಯುದ್ವಾರ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರುಗಳಲ್ಲಿ, ವಿದ್ಯುದಂಶಗಳು ವಿದ್ಯುದ್ವಾರದ ನಡುವಿನ ಜಾಗದಲ್ಲಿ ಯಾವ ವಿದ್ಯುದ್ವಾರದ ಮೂಲಕ‌ ಹೊರಬರುತ್ತವೋ ಆ ವಿದ್ಯುದ್ವಾರ. 

Doublet

ಯುಗಳ ಗೆರೆ/ಜೋಡಿ ಮಸೂರ – 

ಅ‌. ಒಂದುವರ್ಣಪಟಲದಲ್ಲಿ ತಮ್ಮ ಮೌಲ್ಯದಲ್ಲಿ‌ ‌‌ತುಂಬ ಹತ್ತಿರ ಇರುವ ತರಂಗಾಂತರಗಳನ್ನು ಹೊಂದಿರುವ ಎರಡು ರೇಖೆಗಳು.

ಆ. ಪರಸ್ಪರ ಸಂಪರ್ಕದಲ್ಲಿರುವ ಎರಡು ಮಸೂರಗಳನ್ನು ಹೊಂದಿರುವ ಒಂದು ಸಂಯುಕ್ತ ಮಸೂರ.

Double slit experiment 

ಥಾಮಸ್ ಯಂಗ್ ಎಂಬ ವಿಜ್ಞಾನಿಯು ಮಾಡಿದ ಇತಿಹಾಸ ಪ್ರಸಿದ್ಧ ಪ್ರಯೋಗ. ಈ ಪ್ರಯೋಗವು ಬೆಳಕಿನಲೆಗಳ ಅಡ್ಡಹಾಯುವಿಕೆಯನ್ನು ಪ್ರತ್ಯಕ್ಷವಾಗಿ‌ ರುಜುವಾತು ಪಡಿಸಿ, ಬೆಳಕನ್ನು ಕುರಿತ ‘ಅಲೆ ಸಿದ್ಧಾಂತ’ ಕ್ಕೆ ಗಟ್ಟಿ ಬೆಂಬಲ ನೀಡಿತು. 

Double refraction

ಇಮ್ಮಡಿ ವಕ್ರೀಭವನ – ಒಂದು‌ ಕಿರಣವು ತನ್ನ ಮೇಲೆ ಬಿದ್ದಾಗ ಅದನ್ನು ಎರಡು ವಕ್ರೀಭವಿತ ಕಿರಣಗಳನ್ನಾಗಿ ಮಾರ್ಪಡಿಸುವಂತಹ ವಿದ್ಯಮಾನ. ಕೆಲವು ಸ್ಫಟಿಕಗಳಿಗೆ ಈ  ಗುಣಲಕ್ಷಣವಿರುತ್ತದೆ.

Dot product

ದಿಶಾಯುತ ಉತ್ಪನ್ನ – ಎರಡು ದಿಶಾಯುತಗಳ ಉತ್ಪನ್ನ ಇದು‌‌, ತಾನು ಒಂದು ದಿಶಾರಹಿತ ಪರಿಮಾಣವಾಗಿರುತ್ತದೆ.

Page 74 of 117

Kannada Sethu. All rights reserved.