ಸಮಯ ಅನ್ನುವುದು ಪ್ರತಿ ಬೆಳಿಗ್ಗೆ, ಬದುಕಿರುವ ಎಲ್ಲ ಮನುಷ್ಯರಿಗೂ, ಇಪ್ಪತ್ನಾಲ್ಕು ಗಂಟೆಗಳ ಲೆಕ್ಕದಲ್ಲಿ ಸಮಾನವಾಗಿ ಸಿಗುವ ಅತ್ಯಮೂಲ್ಯ ಸಂಪತ್ತು. ಇದನ್ನು ಕೂಡಿಡಲಾಗದು, ಒಮ್ಮೆ ಕಳೆದರೆ ಏನು ಮಾಡಿದರೂ ಮರಳಿ ಪಡೆಯಲಾಗದು. ಇದು ಗೊತ್ತಿದ್ದರೂ ನಾವು ಮನುಷ್ಯರು ನಾವು ಮಾಡಬೇಕಾದ ಮುಖ್ಯ ಕೆಲಸಗಳನ್ನು ‘ನಾಳೆ ಮಾಡಿದರಾಯಿತು ಬಿಡು’ ಎಂದು ಮುಂದಕ್ಕೆ ಹಾಕುತ್ತಲೇ ಇರ್ತೇವೆ. ಆದರೆ ಆ ‘ನಾಳೆ’ ಬರದೆಯೇ ಹೋಗಬಹುದು ಅನ್ನುವುದು ಜೀವನದ ಒಂದು ರುದ್ರ ಸತ್ಯ. ಸಾಂಸಾರಿಕ ತಾಪತ್ರಯ, ಅನಾರೋಗ್ಯ, ವ್ಯವಹಾರದಲ್ಲಿ ಕಷ್ಟನಷ್ಟ, ಪ್ರಕೃತಿ ವೈಪರೀತ್ಯ, ಕೊನೆಗೆ […]
ಫೀಲ್ಡ್ ಮ್ಯಾಗ್ನೆಟ್ – ಕ್ಷೇತ್ರ ಅಯಸ್ಕಾಂತ – ಒಂದು ವಿದ್ಯುತ್ ಉಪಕರಣದಲ್ಲಿ ಕಾಂತಕ್ಷೇತ್ರವನ್ನು ನೀಡುವಂತಹ ಅಯಸ್ಕಾಂತ. ಕೆಲವು ಚಿಕ್ಕ ವಿದ್ಯುಜ್ಜನಕ ಅಥವಾ ವಿದ್ಯುದುತ್ಪಾದಕ ಯಂತ್ರಗಳಲ್ಲಿ ಇದು ಶಾಶ್ವತ ಅಯಸ್ಕಾಂತವಾಗಿರುತ್ತದೆ, ಆದರೆ ಬಹುತೇಕ ಯಂತ್ರಗಳಲ್ಲಿ ಇದೊಂದು ವಿದ್ಯುತ್ ಕಾಂತವಾಗಿರುತ್ತದೆ.
ಫೀಲ್ಡ್ ಲೆನ್ಸ್ – ಕ್ಷೇತ್ರ ಮಸೂರ – ಬೆಳಕುವಿಜ್ಞಾನದ ಒಂದು ಉಪಕರಣದಲ್ಲಿನ ಮಸೂರಸಂಯೋಜನೆಗಳಲ್ಲಿ, ಕಣ್ಣಿನಿಂದ ಗರಿಷ್ಠ ದೂರದಲ್ಲಿರುವ ಮಸೂರ.
ಫೀಲ್ಡ್ ಐಯೋನೈಸೇಷನ್ ಮೈಕ್ರೋಸ್ಕೋಪ್ – ಇದು ಕ್ಷೇತ್ರೀಯ ಹೊರಸೂಸುವಿಕೆಯುಳ್ಳ ಸೂಕ್ಷ್ಮದರ್ಶಕದಂತೆಯೇ ಕೆಲಸ ಮಾಡುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ, ಲೋಹದ ಚೂಪುತುದಿಯನ್ನು ನಿರ್ವಾತದಲ್ಲಿಡುವ ಬದಲು ಕಡಿಮೆ ಒತ್ತಡವುಳ್ಳ ಅನಿಲವೊಂದರಲ್ಲಿ ( ಉದಾಹರಣೆಗೆ ಹೀಲಿಯಂ) ಇಟ್ಟಿರುತ್ತಾರೆ.
ಫೀಲ್ಡ್ ಎಮಿಷನ್ ಮೈಕ್ರೋಸ್ಕೋಪ್ – ಕ್ಷೇತ್ರೀಯ ಹೊರಸೂಸುವಿಕೆಯುಳ್ಳ ಸೂಕ್ಷ್ಮದರ್ಶಕ – ಇದು ಒಂದು ರೀತಿಯ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ. ಇದರಲ್ಲಿ ನಿರ್ವಾತದಲ್ಲಿರುವ ಲೋಹದ ಚೂಪುತುದಿಯೊಂದಕ್ಕೆ ಹೆಚ್ಚಿನ ವಿದ್ಯುತ್ ಸಾಮರ್ಥ್ಯವ್ಯತ್ಯಾಸವನ್ನು ನೀಡಿ, ಎಲೆಕ್ಟ್ರಾನುಗಳು ಹೊರಸೂಸುವಂತೆ ಮಾಡಲಾಗುತ್ತದೆ.
ಫೀಲ್ಡ್ ಎಮಿಷನ್ – ಕ್ಷೇತ್ರೀಯ ಹೊರಸೂಸುವಿಕೆ – ಕಾಯಿಸಿದರೂ ತನ್ನ ತಾಪಮಾನವು ಹೆಚ್ಚಾಗದಿರುವ ಮೇಲ್ಮೈ ಯೊಂದರಿಂದ, ತನ್ನಲ್ಲಿರುವ ಪ್ರಬಲ ವಿದ್ಯುತ್ ಕ್ಷೇತ್ರದಿಂದಾಗಿ ಎಲೆಕ್ಟ್ರಾನುಗಳು ಹೊರಸೂಸುವುದು.
ಫೀಲ್ಡ್ ಎಫೆಕ್ಟ್ ಟ್ರ್ಯಾನ್ಸಿಸ್ಟರ್ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರು – ಇದು ಒಂದು ರೀತಿಯ ಕಾಂತೀಯ ಟ್ರ್ಯಾನ್ಸಿಸ್ಟರು. ಇದು ಅರೆವಾಹಕದಲ್ಲಿನ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ವಿದ್ಯುತ್ ಕ್ಷೇತ್ರವನ್ನು ಬಳಸುತ್ತದೆ.
Like us!
Follow us!