Constentan

ಕಾನ್ಸ್ಟೆಂಟನ್ – ತಾಮ್ರ ಮತ್ತು ತವರಗಳ ಒಂದು ಮಿಶ್ರಲೋಹ. ಉಷ್ಣತೆಯು ಬದಲಾದಾಗ ಈ ಲೋಹದ ವಿದ್ಯುತ್ ನಿರೋಧಕತೆಯಲ್ಲಿ‌ ತುಂಬ ಕಡಿಮೆ ವ್ಯತ್ಯಾಸ ಆಗುವುದರಿಂದ, ಇದನ್ನು ವಿದ್ಯುದುಷ್ಣತೆಯನ್ನು ಅಳೆಯುವ ಉಪಕರಣಗಳಲ್ಲಿ ಮತ್ತು ನಿಖರತಾ ರೆಸಿಸ್ಟರುಗಳಲ್ಲಿ ಬಳಸುತ್ತಾರೆ.

Constant

ಸ್ಥಿರಾಂಕ – ಬೇರೆ ಭೌತಿಕ ಸಂಗತಿಗಳು ಬದಲಾದರೂ ತಾನು ಬದಲಾಗದೆ ಉಳಿಯುವ ಒಂದು ಪರಿಮಾಣ ಅಥವಾ ಅಂಶ.

“ಬಿಸಿ Jalebiಯ Crispy ಬೈಟನ್ನು ಸವಿಯಿರಿ” – ಕನ್ನಡ ಭಾಷೆಯ ಹೊಸ ವ್ಯಾಪಾರಿ ರೂಪ!!??

ನನ್ನ ಮಗಳು ಓದುತ್ತಿರುವ ಮಣಿಪಾಲ(ಉಡುಪಿ ಜಿಲ್ಲೆ)ದ ಹೋಟಲೊಂದರಲ್ಲಿ ಹಾಕಿದ್ದ ಪ್ರಕಟಣಾ ಫಲಕದಲ್ಲಿ  ನನ್ನ ಕಣ್ಣಿಗೆ ಬಿದ್ದ ವಾಕ್ಯ ಇದು – “ಬಿಸಿ Jalebiಯ Crispy ಬೈಟನ್ನು ಸವಿಯಿರಿ”. ಐದು ಪದಗಳಿರುವ ಕನ್ನಡ ವಾಕ್ಯ ಇದು. ಇದರಲ್ಲಿ ‌’ಬಿಸಿ’ ಮತ್ತು ‘ಸವಿಯಿರಿ’ ಎರಡೂ ಅಚ್ಚ ಕನ್ನಡದ ಪದಗಳು. ಇನ್ನು ಮೂರು ಪದಗಳಲ್ಲಿ ಎರಡು ಇಂಗ್ಲಿಷ್ ಭಾಷೆಯಲ್ಲಿಯೇ ಬರೆದ ಪದಗಳಾದರೆ( Jalebi, Crispy), ಬೈಟನ್ನು ಪದ bite ಎಂಬ ಇಂಗ್ಲಿಷ್ ಕ್ರಿಯಾಪದವನ್ನು ಕನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯವಾದ ‘ಅನ್ನು’ವನ್ನು ಸೇರಿಸಿ‌ –  […]

ಕನ್ನಡ ಗಾದೆಮಾತು – ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.

ಚಿಕ್ಕವಯಸ್ಸಿನಲ್ಲಿ ನಾವು ಕಲಿತ ಶಾಲಾಪಾಠ ಅಥವಾ ಬದುಕಿನ ಪಾಠ ನಾವು ಮುದುಕರಾದರೂ ನಮ್ಮೊಂದಿಗೆ ಇರುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳ ತಂದೆತಾಯಿಗಳು, ಶಿಕ್ಷಕರು ಅವರಿಗೆ ತಾವು ಏನು ಕಲಿಸುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ‌ಚಿಕ್ಕವಯಸ್ಸಲ್ಲಿ ನಾವು ಕಲಿತ ಮಗ್ಗಿ, ಪದ್ಯಗಳು, ಕೇಳಿದ ಕಥೆಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತವೆಯಲ್ಲವೇ? ಅದನ್ನೇ ಈ ಗಾದೆಮಾತು ತುಂಬ ಪ್ರಾಸಬದ್ಧವಾಗಿ ಹೇಳಿದೆ.  Kannada proverb – Muuru varshada budhdhi nooru varahada thanaka( What is learnt at three stays […]

Conservative field

ನಿಯತ ಕ್ಷೇತ್ರ – ಶಕ್ತಿಯು ನಿಯತವಾಗಿರುವ ಭೌತಿಕ ವ್ಯವಸ್ಥೆಗಳ ಬಲಗಳನ್ನು‌ ಸೂಚಿಸುವ ದಿಶಾಯುತ(ದಿಕ್ಕುಳ್ಳ) ಕ್ಷೇತ್ರಗಳು. 

Conservation of mass and energy

ದ್ರವ್ಯರಾಶಿ ಮತ್ತು ಶಕ್ತಿಯ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ವ್ಯವಸ್ಥೆಯಲ್ಲಿ ವಿಶ್ರಾಂತ ದ್ರವ್ಯರಾಶಿ ಶಕ್ತಿ+ಚಲನ ಶಕ್ತಿ+ಅಂತಃ ಸಾಮರ್ಥ್ಯಶಕ್ತಿ ಇವುಗಳ‌ ಮೊತ್ತವು ಯಾವಾಗಲೂ ನಿಯತವಾಗಿರುತ್ತದೆ.

Conservation of energy, law of

ಶಕ್ತಿಯ ನಿಯತತೆಯ ನಿಯಮ – ಈ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ‌ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅದನ್ನು ‌ಪರಿವರ್ತಿಸಲು ಸಾಧ್ಯವಿದೆ.

Conservation of charge

ವಿದ್ಯುದಂಶದ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ಒಂದು‌ ವ್ಯವಸ್ಥೆಯಲ್ಲಿರುವ ವಿದ್ಯುದಂಶವು ನಿಯತವಾಗಿರುತ್ತದೆ(ನಿಯತ = ಸ್ಥಿರ = ಎಂದೂ ಬದಲಾಗದ್ದು).

Conjugate points

ಜೋಡಿ ಬಿಂದುಗಳು‌ – ಮಸೂರದ ಎರಡೂ ಬದಿಗಳಲ್ಲಿರುವ ಒಂದು‌ ಜೋಡಿ ಬಿಂದುಗಳಿವು. ಇವು ಹೇಗಿರುತ್ತವೆ ಅಂದರೆ ಒಂದು ಬಿಂದುವಿನಲ್ಲಿ ಇಟ್ಟ ಒಂದು ವಸ್ತುವಿನ ಬಿಂಬವು ಇನ್ನೊಂದರಲ್ಲಿ ಮೂಡುತ್ತದೆ.

“ಐ ಲವ್ ದ  ನಾಯಿಮರಿ ಸಾಂಗ್ ಮ್ಯಾಮ್”!

ನಮ್ಮ ಚಿತ್ರನಾಟ್ಯ ಫೌಂಡೇಶನ್ ಭರತನಾಟ್ಯ ಶಾಲೆಯ ಪುಟ್ಟ ಚಾರ್ವಿ ಹೇಳಿದ ಮಾತು ಇದು. ಮನೆಯಲ್ಲಿ ‌ಮಾರ್ವಾಡಿ ಭಾಷೆ ಮಾತಾಡುವ, ಬೆಣ್ಣೆ ಬೊಂಬೆಯ ಹಾಗೆ ಮುದ್ದಾಗಿರುವ, ಐದು ವರ್ಷ ವಯಸ್ಸಿನ ಮಗು ಅದು. ಕಳೆದ ಏಳೆಂಟು ತಿಂಗಳಿಂದ ನಮ್ಮಲ್ಲಿ ನಾಟ್ಯ ಕಲಿಯುತ್ತಿದೆ.         ಭರತನಾಟ್ಯದ ಪ್ರಾರಂಭದ ಹಂತದಲ್ಲಿ ಬರೀ ಅಡವು(ಹೆಜ್ಜೆ)ಗಳನ್ನು ಹೇಳಿಕೊಟ್ಟರೆ ಮಕ್ಕಳಿಗೆ ಬೇಸರ ಆಗಬಹುದೆಂದು ಪ್ರತಿ ತರಗತಿಯಲ್ಲೂ ಯಾವುದಾದರೊಂದು ಶಿಶುಗೀತೆಗೆ ಅವರಿಗೆ ನೃತ್ಯ ಹೇಳಿಕೊಡುವ ಅಭ್ಯಾಸ ನಮ್ಮದು. ಇದೇ ರೀತಿಯಲ್ಲಿ, ‘ಕನ್ನಡದ ಮಕ್ಕಳ ಸಾಹಿತ್ಯದ ರಾಜ […]

Page 82 of 112

Kannada Sethu. All rights reserved.