Equinox

ಈಕ್ವಿನಾಕ್ಸ್ – ಸಮಕಾಲ – ಸೂರ್ಯನು ಭೂಮಧ್ಯರೇಖೆಯನ್ನು ದಾಟುವ ಕಾಲ, ಹಗಲು ಮತ್ತು ರಾತ್ರಿಗಳು ಸಮ ಅವಧಿಯನ್ನು  ಹೊಂದಿರುವ ಕಾಲ.

Equipotential 

ಈಕ್ವಿಪೊಟೆನ್ಶಿಯಲ್ – ಸಮವಿದ್ಯುತ್ ಅಂತಃಸಾಮರ್ಥ್ಯ – ತನ್ನ ಮೇಲಿರುವ ಎಲ್ಲ ಬಿಂದುಗಳೂ ಸಮಾನ ವಿದ್ಯುತ್ ಅಂತಃಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಿದ ಒಂದು ಮೇಲ್ಮೈ.

Equilibrium

ಈಕ್ವಿಲಿಬ್ರಿಯಂ – ಸಮತೋಲನ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಗಳ ಮೊತ್ತ ಸೊನ್ನೆ ಆಗಿದ್ದಾಗ ಆ ವಸ್ತು ಸಮತೋಲನದಲ್ಲಿದೆ ಎಂದು ಹೇಳಲಾಗುತ್ತದೆ.

Equilibrant

ಈಕ್ವಿಲಿಬ್ರೆಂಟ್ – ಸಮತೋಲಕ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ವಿವಿಧ ಬಲಗಳ ಫಲಿತಾಂಶಬಲಕ್ಕೆ ಸಮವಾದ ಮತ್ತು ವಿರುದ್ದವಾದ ಬಲ.

ಕನ್ನಡ ಗಾದೆಮಾತು – ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳಿದುಕೊಳ್ಳಬೇಕು. 

ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಕಲಿಕೆ ಎಂಬುದು ಎಂದಿಗೂ ಮುಗಿಯುವುದಿಲ್ಲ. ನಾವು ಜೀವನ ನಡೆಸುವಾಗ ಅನೇಕ ಕಷ್ಟನಷ್ಟಗಳು, ಅನಿರೀಕ್ಷಿತ ಸವಾಲುಗಳು ಎದುರಾಗುತ್ತ, ನಮ್ಮ ತಿಳುವಳಿಕೆಯ ಮಟ್ಟವನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಹೀಗಿರುವಾಗ ನಾವು ಕಲಿಕೆಯನ್ನು ನಿಲ್ಲಿಸುವ ಪ್ರಶ್ನೆಯೇ ಬರಬಾರದು, ಅಲ್ಲವೇ? ಒಂದು ಚಿಕ್ಕ ಮಗು ಕೂಡ ಕೆಲವು ಸಂದರ್ಭಗಳಲ್ಲಿ ನಮಗೆ ಗುರುವಾಗಬಹುದು. ಅದರಲ್ಲೂ ಭೂತ, ಭವಿಷ್ಯಗಳ ಚಿಂತೆ ಮಾಡದೆ ತಕ್ಷಣದ ವರ್ತಮಾನ ಕಾಲವನ್ನು ಅದು ಇರುವಂತೆಯೇ ಸವಿಯುವುದರಲ್ಲಿ ಮಕ್ಕಳು ಎತ್ತಿದ ಕೈ. ಹೀಗಾಗಿ ಜೀವನವನ್ನು ಚೆನ್ನಾಗಿ ನಡೆಸುವ ಯುಕ್ತಿಯ ಮಾತು […]

ಪುಟ್ಟ ಪುಟ್ಟ ವಾಕ್ಯಗಳ ನುಡಿಯಾನ – ಕನ್ನಡದ ಜಾಯಮಾನ

ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಒಂದು ಕಿರಿಕಿರಿಯ ಸಂದರ್ಭ ಎದುರಾಗುತ್ತದೆ.‌ ಅದೇನೆಂದರೆ ಹನುಮಂತನ ಬಾಲದಷ್ಟು ಉದ್ದುದ್ದ ವಾಕ್ಯಗಳನ್ನು ಓದುವ ಸನ್ನಿವೇಶ. ಎಷ್ಟೋ ಸಲ ವಚನ, ಕಾಲ, ಪ್ರಥಮ ಪುರುಷ, ಲೇಖನ ಚಿಹ್ನೆ ಮುಂತಾದ ವ್ಯಾಕರಣ ನಿಯಮಗಳೆಲ್ಲಾ ಗಾಳಿಗೆ ತೂರಲ್ಪಟ್ಟು ಆ ಉದ್ದಾನುದ್ದ ವಾಕ್ಯವು ಅರ್ಥಹೀನವಾಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡದ ಜಾಯಮಾನ ಚಿಕ್ಕ ಚಿಕ್ಕ ವಾಕ್ಯಗಳದ್ದಲ್ಲವೇ ಎಂಬ ವಿಷಯ ಮನಸ್ಸಿಗೆ ಪ್ರಧಾನವಾಗಿ ಭಾಸವಾಗುತ್ತದೆ.  ಉದಾಹರಣೆಗೆ ನಾವು ಸಂಭಾಷಣೆಗಳಲ್ಲಿ ಬಳಸುವ ವಾಕ್ಯಗಳನ್ನು  ಗಮನಿಸಿ. ಏನ್ಸಮಾಚಾರ?ಊಟ ಆಯ್ತಾ?ಇವತ್ತು […]

Equator 

ಈಕ್ವೇಟರ್ – ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಮಹಾರೇಖೆ ಇದು, ಭೂಮಿಯ ಮಹಾವರ್ತುಲ. ಇದು ಭೂಮಿಯ ಅಕ್ಷಕ್ಕೆ ಲಂಬವಾಗಿರುವ ಮೇಲ್ಮೈಯಲ್ಲಿರುತ್ತದೆ ಮತ್ತು ಎರಡೂ ಧ್ರುವಗಳಿಂದ ಸಮಾನ ದೂರದಲ್ಲಿರುತ್ತದೆ.

EPM ( Electron probe micro analysis)

ಎಲೆಕ್ಟ್ರಾನ್ ಪ್ರೋಬ್ ಮೈಕ್ರೋಅನಾಲಿಸಿಸ್ -ಎಲೆಕ್ಟ್ರಾನು‌ ಬಿಂಬಾಧಾರಿತ ವಸ್ತು ವಿಶ್ಲೇಷಣೆ – ಒಂದು ವಸ್ತುವಿನಲ್ಲಿ ಯಾವ ಯಾವ ಮೂಲವಸ್ತುಗಳಿವೆ ಎಂದು ಪತ್ತೆ ಹಚ್ಚಲು, ಆ ವಸ್ತುವಿನೊಳಗೆ ಎಲೆಕ್ಟ್ರಾನು ಕಿರಣಪುಂಜವನ್ನು ಹರಿಸಿ, ಹೊರಬರುವಂತಹ ವಸ್ತುವಿಶಿಷ್ಟ ಕ್ಷಕಿರಣವನ್ನು ಅಳೆಯುವುದು.

Epithermal neutron

ಎಪಿಥರ್ಮಲ್ ನ್ಯೂಟ್ರಾನ್ –  ಹೆಚ್ಚು ತಾಪದ ನ್ಯೂಟ್ರಾನು ‌- ತಾಪ ನ್ಯೂಟ್ರಾನಿನ ಶಕ್ತಿಗಿಂತ ಹೆಚ್ಚಾದ ಮತ್ತು ವೇಗದ ನ್ಯೂಟ್ರಾನಿಗಿಂತ ಕಡಿಮೆ ಶಕ್ತಿಯುಳ್ಳ ನ್ಯೂಟ್ರಾನು. 

Epitaxy

ಎಪಿಟ್ಯಾಕ್ಸಿ – ಪದರ ಬೆಳೆಸುವಿಕೆ – ಒಂದು ವಸ್ತುವಿನ ಏಕ ಹರಳಿನ ಮೇಲೆ ಇನ್ನೊಂದು ವಸ್ತುವಿನ ಪದರವೊಂದನ್ನು ಬೆಳೆಸುವುದು.

Page 83 of 140

Kannada Sethu. All rights reserved.