ನಾವು ಚಿಕ್ಕಮಕ್ಕಳಿದ್ದಾಗಿನಿಂದ ಕೇಳಿ ನಮ್ಮ ಮನಸ್ಸುಗಳಲ್ಲಿ ಅಚ್ಚೊತ್ತಿರುವ ಮಾತು ಇದು. ಇದರ ಅರ್ಥವೇನೆಂದರೆ, ಬೇರೆಯವರ ಆಸ್ತಿ ಅಥವಾ ಹಣವು ನಮ್ಮ ಮಟ್ಟಿಗೆ ವಿಷ ಇದ್ದ ಹಾಗೆ. ಅದನ್ನು ನಾವು ಮುಟ್ಟಬಾರದು. ಹಣದ ವಿಷಯದಲ್ಲಿ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಬುದ್ಧಿಮಾತು ಇರಲು ಸಾಧ್ಯವೇ? ಲಂಚಕೋರರು, ಮೋಸಗಾರರು ಅವಶ್ಯವಾಗಿ ಅರಿಯಬೇಕಾದ ಮಾತೆಂದರೆ ಇದೇ. Kannada saying – Parasoththu Pashaana( Other’s asset or money is poison to us). This good old saying in Kannada […]
ವಾಹಕತೆ – ವಸ್ತುವಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಆ ವಸ್ತುವಿನ ಚಲನೆಯಿಲ್ಲದೆ ಶಕ್ತಿಯು ಹರಿಯುವ ಕ್ರಿಯೆ. ಉದಾಹರಣೆಗೆ – ಉಷ್ಣವಾಹಕತೆ, ವಿದ್ಯುತ್ ವಾಹಕತೆ.
ವಾಹಕತ್ವ – ಒಂದು ವಸ್ತುವಿನಲ್ಲಿ ಎಷ್ಟು ಸುಲಭವಾಗಿ ವಿದ್ಯುತ್ ಹರಿಯಬಲ್ಲುದು ಎಂಬುದರ ಅಳತೆಯೇ ಅದರ ವಾಹಕತ್ವ.
ವಿದ್ಯುತ್ ಸಂಗ್ರಾಹಕ – ವಿದ್ಯುದಂಶವನ್ನು ಸಂಗ್ರಹಿಸಬಲ್ಲ ವಾಹಕ ಅಥವಾ ವಾಹಕಗಳಿಂದ ಕೂಡಿದ ಒಂದು ವ್ಯವಸ್ಥೆ. ಇದಕ್ಕೆ capacitor ಎಂಬ ಹೆಸರೂ ಇದೆ.
ಹನಿಗಟ್ಟುವಿಕೆ ಅಥವಾ ಬಾಷ್ಪೀಭವನ – ವಸ್ತುವಿನ ಅವಸ್ಥೆಯು ಆವಿಯಿಂದ ದ್ರವರೂಪಕ್ಕೆ ಬದಲಾಗುವುದು.
ಸ್ವರಮೈತ್ರಿ – ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವರಗಳು ಒಟ್ಟಿಗೆ ಸೇರಿ, ಕಿವಿಗೆ ಇಂಪಾಗುವಂತಹ ಧ್ವನಿಸಂಯೋಜನೆಯನ್ನು ಉಂಟುಮಾಡುವುದು.
ತಗ್ಗು-ಉಬ್ಬು ಅಥವಾ ನಿಮ್ನ-ಪೀನ – ತನ್ನ ಒಂದು ಮೇಲ್ಮೈಯಲ್ಲಿ ಉಬ್ಬಿದ್ದು ಇನ್ನೊಂದು ಮೇಲ್ಮೈಯಲ್ಲಿ ತಗ್ಗಿರುವ ಗಾಜು ಅಥವಾ ಮಸೂರ.
ತಗ್ಗು ಅಥವಾ ನಿಮ್ನ – ತನ್ನ ಮೇಲ್ಮೈಯಲ್ಲಿ ಒಳಮುಖಿಯಾಗಿ ತಗ್ಗಿದ ಅಥವಾ ಬಾಗಿದ ಒಂದು ಗಾಜು ಅಥವಾ ಮಸೂರ.
ಗಣಕ ಯಂತ್ರ – ಒಂದು ವಿದ್ಯುನ್ಮಾನ ಉಪಕರಣ. ಒಂದು ಸೂಚಿತ ಕ್ರಮಬದ್ಧ ಕಾರ್ಯಪಟ್ಟಿ(ಪ್ರೋಗ್ರಾಂ)ಯ ಪ್ರಕಾರ ಮಾಹಿತಿಯನ್ನು ಸಂಸ್ಕರಿಸುತ್ತದೆ. ಗಣಕ ಯಂತ್ರದ ಯಂತ್ರಾಂಶವು(ಹಾರ್ಡ್ವೇರ್) ವಾಸ್ತವಿಕ ವಿದ್ಯುನ್ಮಾನ ಅಥವ ಯಾಂತ್ರಿಕ ಉಪಕರಣಗಳನ್ನು ಒಳಗೊಂಡಿರುತ್ತದೆ, ಹಾಗೂ ಅದರ ತಂತ್ರಾಂಶವು(ಸಾಫ್ಟ್ವೇರ್) ಕ್ರಮಬದ್ಧ ಕಾರ್ಯಪಟ್ಟಿ ಮತ್ತು ದತ್ತಾಂಶಗಳನ್ನು ಒಳಗೊಂಡಿರುತ್ತದೆ.
ಕಾಂಪ್ಟನ್ ಪರಿಣಾಮ – ಕ್ಷ-ಕಿರಣ ಅಥವಾ ಗಾಮಾಕಿರಣಗಳಲ್ಲಿನ ಫೋಟಾನು(ಬೆಳಕು ಶಕ್ತಿಯ ಕಣಗಳು)ಗಳನ್ನು ಮುಕ್ತ ಎಲೆಕ್ಟ್ರಾನಗಳು ಚದುರಿಸಿದಾಗ ಆ ಫೋಟಾನುಗಳ ಶಕ್ತಿಯು ಕಡಿಮೆಯಾಗುವ ವಿದ್ಯಮಾನ. ಈ ಪರಿಣಾಮವನ್ನು ೧೯೨೩ರಲ್ಲಿ ಅಮೆರಿಕದ ವಿಜ್ಞಾನಿ ಎ.ಎಚ್.ಕಾಂಪ್ಟನ್‌ರು ಮೊಟ್ಟಮೊದಲು ಗಮನಿಸಿದರು.
Like us!
Follow us!