ಆರೋಗ್ಯವನ್ನು ಕಾಪಾಡಿಕೊಳ್ಳುವ ಇಚ್ಛೆ ಇರುವವರು ಇಟ್ಟುಕೊಳ್ಳಬಾರದ ಒಂದು ಅಭ್ಯಾಸದ ಬಗ್ಗೆ ಗಮನ ಸೆಳೆಯುವ, ಕನ್ನಡದ ಒಂದು ಗಾದೆಮಾತು ಇದು. ನಾವು ಸೇವಿಸುವ ಎರಡು ಊಟಗಳ/ತಿಂಡಿಗಳ ನಡುವೆ ಸುಮಾರು ಐದು ಗಂಟೆಯ ಬಿಡುವು ಇರಬೇಕೆಂದು ಆರೋಗ್ಯತಜ್ಞರು ಹೇಳುತ್ತಾರೆ. ಏಕೆಂದರೆ ತೆಗೆದುಕೊಂಡ ಆಹಾರವನ್ನು ಜೀರ್ಣವಾಗಿಸಿ ಅದರಲ್ಲಿನ ಪೋಷಕಾಂಶಗಳನ್ನು ರಕ್ತಗತವಾಗಿಸಲು ನಮ್ಮ ಜೀರ್ಣಾಂಗಗಳಿಗೆ ಅಷ್ಟು ಸಮಯಾವಕಾಶ ಬೇಕಾಗುತ್ತದೆ. ಆದರೆ ನಾವು ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇದ್ದರೆ ನಮ್ಮ ಜೀರ್ಣಾಂಗಗಳ ಮೇಲೆ ನಿರಂತರ ಒತ್ತಡ ಬಿದ್ದು ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಕೆಡುತ್ತದೆ. ಅದಕ್ಕಾಗಿಯೇ […]
ಎಸ್ಕೇಪ್ ವೆಲಾಸಿಟಿ – ಒಂದು ಉಪಗ್ರಹ ಅಥವಾ ಚಂದ್ರದ ಮೇಲ್ಮೈ ಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೋಗಲು ಒಂದು ವಸ್ತುವು ಹೊಂದಿರಬೇಕಾದ ಕನಿಷ್ಠ ವೇಗ.
ಎರ್ಗೋಮೀಟರ್ – ಶಕ್ತಿಮಾಪಕ – ಯಾವುದೇ ಉಪಕರಣವು ಮಾಡಿದ ಕೆಲಸದಿಂದ ಉತ್ಪನ್ನವಾದ ಶಕ್ತಿಯನ್ನು ಅಳೆಯುವ ಉಪಕರಣ.
ಎರಿಯೋಮೀಟರ್ – ಕಿರು ವ್ಯಾಸಮಾಪಕ – ಬೆಳಕಿನಲೆಯ ಹಬ್ಬುವಿಕೆ
(ಡಿಫ್ರ್ಯಾಕ್ಷನ್) ಯನ್ನು ಬಳಸಿಕೊಂಡು ಅತಿ ಚಿಕ್ಕ ವ್ಯಾಸವನ್ನು ಅಳೆಯಲು ಉಪಯೋಗಿಸುವಂತಹ ಉಪಕರಣ.
ಎರೆಕ್ಟ್ – ನೆಟ್ಟಗೆ ನಿಂತ, ಸೀದಾ – ವಸ್ತು ಹೇಗೆ ನಿಂತಿದೆಯೋ ಅದೇ ರೀತಿಯಲ್ಲೇ ನಿಂತ ಬಿಂಬವನ್ನು ವರ್ಣಿಸುವ ರೀತಿ.
ಈಕ್ವಿವೇಲೆಂಟ್ ಫೋಕಲ್ ಲೆಂಗ್ತ್ – ಸಮಸಮಾನ ಸಂಗಮ ದೂರ – ಪ್ರಧಾನ ಬಿಂದುವಿನಿಂದ ಅದರ ತತ್ಸಂಬಂಧಿತ
(corresponding) ಪ್ರಧಾನ ಸಂಗಮ ಬಿಂದುವಿಗೆ ಇರುವಂತಹ ದೂರ.
ಈಕ್ವಿವೇಲೆಂಟ್ ಸರ್ಕ್ಯೂಟ್ – ಸಮಸಮಾನ ವಿದ್ಯುನ್ಮಂಡಲ – ತನಗಿಂತ ಹೆಚ್ಚು ಸಂಕೀರ್ಣವಾದ ವಿದ್ಯುನ್ಮಂಡಲ ಅಥವಾ ಉಪಕರಣದ ವಿದ್ಯುತ್ತೀಯ ಗುಣಲಕ್ಷಣಗಳನ್ನೇ ಕೆಲವು ನಿರ್ದಿಷ್ಟೀಕೃತ ಸನ್ನಿವೇಶಗಳಲ್ಲಿ ಹೊಂದಿರುವ, ಆದರೆ ಹೋಲಿಕೆಯಲ್ಲಿ ಸರಳವಾಗಿರುವ ಒಂದು ವಿದ್ಯುನ್ಮಂಡಲ.
Like us!
Follow us!