ಎಪಿಡಿಯಾಸ್ಕೋಪ್ – ಬಿಂಬ ದರ್ಶಕ – ಬೋಧನಾ ವೃತ್ತಿಯಲ್ಲಿರುವವರು ಬಳಸುವ ಒಂದು ದೃಶ್ಯೋಪಕರಣ ಇದು. ಒಂದು ಪಾರದರ್ಶಕ ಅಥವಾ ಅಪಾರದರ್ಶಕ ವಸ್ತುವೊಂದರ ಹಿಗ್ಗಲಿಸಿದ ಬಿಂಬವನ್ನು ಪರದೆಯ ಮೇಲೆ ಬೀರಲು ಈ ಉಪಕರಣವನ್ನು ಬಳಸುತ್ತಾರೆ.
ಅಧಿಚಕ್ರ – ಇದು ಒಂದು ಚಿಕ್ಕ ವೃತ್ತ/ಚಕ್ರ. ಇದರ ಕೇಂದ್ರವು ಒಂದು ಸ್ಥಳದಲ್ಲಿ ಸ್ಥಿರವಾಗಿಟ್ಟ ದೊಡ್ಡ ವೃತ್ತವೊಂದರ ಪರಿಧಿಯುದ್ದಕ್ಕೂ ಉರುಳುತ್ತದೆ.
ಎಪಿಸೆಂಟರ್ – ಭೂಕಂಪ ಅಧಿಕೇಂದ್ರ – ಒಂದು ಭೂಕಂಪಸ್ಥಳದ ಕೇಂದ್ರಗಮನ ಬಿಂದುವಿನ ರೇಖೆಯಲ್ಲೇ ಭೂಮಿಯ ಮೇಲ್ಮೈ ಮೇಲೆ ಇರುವ ಒಂದು ಬಿಂದು ಅಥವಾ ಅಣುಸ್ಫೋಟದ ಬಿಂದುವಿನ ರೇಖೆಯಲ್ಲೇ ಅದರ ಮೇಲೆ ಅಥವಾ ಕೆಳಗೆ ಇರುವ ಬಿಂದು.
ಎಫಿಮೆರಿಸ್ ಟೈಮ್ – ಖಗೋಳ ಪಂಚಾಂಗ ಸಮಯ – ಭೂಮಿ, ಚಂದ್ರ ಮತ್ತು ಗ್ರಹಗಳ ಕಕ್ಷಾ ಚಲನೆಯಿಂದ ಅಳೆಯುವಂತಹ ಸಮಯ.
ಎಮಿಸಿವ್ ಪವರ್ – ಒಂದು ಸೆಕೆಂಡಿಗೆ ವಸ್ತುವಿನ ಏಕಘಟಕ ವಿಸ್ತೀರ್ಣ ಅಳತೆಯ ಮೇಲ್ಮೈಯು ಹೊರಸೂಸುವ ಒಟ್ಟು ಶಕ್ತಿ.
ಎಮಿಷನ್ ಸ್ಪೆಕ್ಟ್ರಮ್ - ಹೊರಸೂಸುವಿಕೆಯ ವರ್ಣಪಟಲ – ಬೆಳಕಿನ ಆಕರವೊಂದರಿಂದ ಹೊರ ಬರುತ್ತಿರುವ ಬೆಳಕನ್ನು ಅದು ಬರುತ್ತಿದ್ದಂತೆಯೇ ವರ್ಣಪಟಲ ದರ್ಶಕ
( ಸ್ಪೆಕ್ಟ್ರೋಸ್ಕೋಪ್)ದಿಂದ ಪರಿಶೀಲಿಸಿದಾಗ ಕಂಡುಬರುವ ವರ್ಣಪಟಲ.
Like us!
Follow us!