Cathetometer

ಕಂಬ ದೂರದರ್ಶಕ _ ವಿಂಗಡಣೆಯ ಗುರುತುಗಳನ್ನು ಮಾಡಿದಂತಹ ಕಂಬಕ್ಕೆ ಕಟ್ಟಿದ, ಮೇಲೆ ಕೆಳಗೆ ಚಲಸುವ ಸಾಮರ್ಥ್ಯವುಳ್ಳ ದೂರದರ್ಶಕ. ಕೆಲವು ಅಡಿಗಳ ಅಂತರದಲ್ಲಿ ಉಂಟಾಗುವ ಸ್ಥಾನಪಲ್ಲಟಗಳನ್ನು ಅಳೆಯಲು ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ.

Cathode

 ಋಣ ಧ್ರುವ ಅಥವಾ ಋಣ ವಿದ್ಯುತ್‌ಧ್ರುವ _ ತಾಪ ವಿದ್ಯುದಣು ಕವಾಟದಲ್ಲಿ (ಥರ್ಮಿಯಾನಿಕ್ ವಾಲ್ವ್) ಎಲೆಕ್ಟ್ರಾನುಗಳನ್ನು ಹೊರಸೂಸುವ ಆಕರ.

Cathode rays

ಋಣಧ್ರುವ ಕಿರಣಗಳು – ವಿದ್ಯುತ್ ಸೂಸುವ ಒಂದು ನಳಿಗೆಯಲ್ಲಿ ಅತ್ಯಂತ ಕಡಿಮೆ ಒತ್ತಡ ಇದ್ದು, ಅದರ ವಿದ್ಯುತ್ ಧ್ರುವಗಳ ನಡುವೆ ಹೆಚ್ಚಿನ ಚಾಲಕ ಶಕ್ತಿಯನ್ನು ಕೊಟ್ಟಾಗ, ಋಣಧ್ರುವದಿಂದ ಹೊರಸೂಸುವಂತಹ ಎಲೆಕ್ಟ್ರಾನುಗಳ ಕಿರಣಗಳು.

Cathode ray oscilloscope

ಋಣಧ್ರುವ ಕಿರಣ ಬಿಂಬದರ್ಶಕ – ವಿದ್ಯುತ್‌ಪ್ರವಾಹವನ್ನು ಅಥವಾ ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.

Cation

ಧನ ವಿದ್ಯುದಣು – ಧನ ವಿದ್ಯುದಂಶವುಳ್ಳ ಒಂದು ಪರಮಾಣು. 

ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು.

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತಿದು. ಇದನ್ನು ಶಾಲಾ ತರಗತಿಗಳಲ್ಲಿ ಅಧ್ಯಾಪಕರು ಹೆಚ್ಚಾಗಿ ಬಳಸುತ್ತಾರೆ. ಚೆನ್ನಾಗಿ ಓದಿ ಒಳ್ಳೆಯ ಅಂಕ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಬರುಬರುತ್ತಾ ಓದಿನಲ್ಲಿ ಆಸಕ್ತಿ ಕಳೆದುಕೊಂಡು ಕಡಿಮೆ ಅಂಕ ತೆಗೆದುಕೊಳ್ಳಲಾರಂಭಿಸಿದಾಗ ಅಧ್ಯಾಪಕರು `ಏನಿದು? ಏನಾಯ್ತು ನಿಂಗೆ?  ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅಂದ ಹಾಗೆ ಆಯ್ತು ನೋಡು’ ಎಂದು ವಿದ್ಯಾರ್ಥಿಯನ್ನು ಗದರುತ್ತಾರೆ. ನಮ್ಮ ಜೀವನ ವಿಧಾನದ ನಂಬಿಕೆಗಳಲ್ಲಿ ಕುದುರೆ ಅನ್ನುವುದು ಕತ್ತೆಗಿಂತ ಉತ್ತಮ ಎಂಬ ಭಾವನೆ ಇದೆ. ಕುದುರೆಯ ಎತ್ತರ, ಅಂದ […]

ಹಾಡೆಂಬ ಸೇತುವೆಯ ಮೂಲಕ ಪಾಠವನ್ನು `ಮನ ಮುಟ್ಟಿಸುತ್ತಿದ್ದ’ ಕನ್ನಡ ಟೀಚರ್‌ಗಳು

ಮನಸ್ಸು ಬಾಲ್ಯಕ್ಕೆ ಹೋಯಿತೆಂದರೆ ಶಾಲೆಯಲ್ಲಿನ ಕನ್ನಡ ತರಗತಿಗಳು ನೆನಪಾಗುತ್ತವೆ.

ಮಂಗಳೂರಿಗೆ ಸೇರಿದ್ದ ಕಾಟಿಪಳ್ಳ ಮತ್ತು ಬೈಕಂಪಾಡಿ ಎಂಬ ಪುಟ್ಟ ಊರುಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ನನ್ನ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ನಡೆದದ್ದು. ಆ ಸರಳವಾದ ಹಳ್ಳಿಶಾಲೆಗಳಲ್ಲಿ ಎಷ್ಟು ಶ್ರದ್ಧಾವಂತ ಅಧ್ಯಾಪಕ-ಅಧ್ಯಾಪಕಿಯರಿರುತ್ತಿದ್ದರು! ಈಗ ನಾನೇ ಕಾಲೇಜು ಅಧ್ಯಾಪಕಿಯಾಗಿ ಅನೇಕ ವರ್ಷ ಕಳೆದ ಮೇಲೆ ಹಿನ್ನೋಟದ ಕಿಟಕಿಯಿಂದ ನೋಡುವಾಗ ಆ ಅಧ್ಯಾಪಕರ ಕಷ್ಟಸುಖಗಳು ಹೇಗಿದ್ದಿರಬಹುದು ಎಂದು ಯೋಚಿಸುವಂತಾಗುತ್ತದೆ.

Carnot’s Principle

ಕರ‍್ನಾಟ್‌ರ ಸಿದ್ಧಾಂತ – ಯಾವುದೇ ತಾಪಯಂತ್ರದ ಸಾಮರ್ಥ್ಯವು ಅದೇ ತಾಪಮಾನ ಶ್ರೇಣಿಯಲ್ಲಿ ಕೆಲಸ ಮಾಢುತ್ತಿರುವ, ಹಿಮ್ಮರಳಿಸಬಹುದಾದ ತಾಪಯಂತ್ರದ ಸಾಮರ್ಥ್ಯಕ್ಕಿಂತ ಹೆಚ್ಚಾಗಿರಲು ಸಾಧ್ಯ ಇಲ್ಲ.

Cascade 

 ಸಂಗ್ರಾಹಕ ಸರಣಿ – ಒಂದಕ್ಕೊಂದು ಜೋಡಿಸಲ್ಪಟ್ಟ ವಿದ್ಯುತ್ ಸಂಗ್ರಾಹಕಗಳ ಸರಣಿ.

Case hardening

ಮೇಲ್ಮೈಯ ಕಠಿಣಗೊಳಿಸುವಿಕೆ – ಉಪಕರಣಗಳಲ್ಲಿ ಮತ್ತು ಕೆಲವು ಯಂತ್ರಭಾಗಗಳಲ್ಲಿ ಬಳಸುವುದಕ್ಕಾಗಿ ಉಕ್ಕಿನ ಮೇಲ್ಮೈಯನ್ನು ಕಠಿಣಗೊಳಿಸುವುದು.

Page 95 of 113

Kannada Sethu. All rights reserved.