ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೀರ್ ಎಂಬ ಧಾತುವಿನಿಂದ (ಪದಮೂಲ) ಪ್ರಾರಂಭವಾಗುವ ತಿಂಡಿ/ಖಾದ್ಯಗಳ ಹೆಸರು ಕೇಳಿ ಬರುತ್ತವೆ. ತಮಾಷೆಯೆಂದರೆ ಎಂದೂ ಆ ಹೆಸರು ಕೇಳದ ಪ್ರದೇಶದವರು “ಹಾಂ…!? ಹೀಗೂ ಒಂದು ತಿಂಡಿ ಇರುತ್ತಾ!? ” ಎಂದು ಆಶ್ಚರ್ಯ ಪಡುತ್ತಾರೆ, ಆದರೆ ತಮ್ಮ ಪ್ರದೇಶದಲ್ಲಿ ಇರುವ ನೀರ್ ಎಂಬ ಪದಮೂಲದ ಹೆಸರಿನ ತಿಂಡಿಯ ಬಗೆಗೆ ಅವರಿಗೆ ಅಚ್ಚರಿಯ ಭಾವ ಇರುವುದಿಲ್ಲ; ಏಕೆಂದರೆ ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ. ದಕ್ಷಿಣ ಕನ್ನಡದ ಕಡೆ ಅಕ್ಕಿ ನೆನೆ ಹಾಕಿ ಅದನ್ನು ಉಪ್ಪಿನೊಡನೆ ನುಣ್ಣಗೆ […]
ವಿದ್ಯುತ್ ಸಾಮರ್ಥ್ಯ ವಿಲೋಮ – ವಿದ್ಯುತ್ ಸಾಮರ್ಥ್ಯದ ವಿಲೋಮ ಇದು. ಇದನ್ನು ವಿಲೋಮ ಫ್ಯಾರಡ್ ಗಳಲ್ಲಿ ಅಳೆಯುತ್ತಾರೆ.
ಹೊರ ಹರಿಯುವಿಕೆ – ಒಂದು ಸಣ್ಣ ಕಿಂಡಿಯ ಮೂಲಕ ಅನಿಲವೊಂದರ ಹೊರ ಹರಿಯುವಿಕೆ, ಹೊರ ಚೆಲ್ಲುವಿಕೆ.
ಸುಳಿರೂಪೀ ವಿದ್ಯುತ್ಪ್ರವಾಹ- ಕಾಂತಕ್ಷೇತ್ರಗಳು ಬದಲಾಗುತ್ತಿದ್ದಾಗ ವಿದ್ಯುತ್ ವಾಹಕಗಳಲ್ಲಿ ಪ್ರಚೋದನೆಗೊಳ್ಳುವ ವಿದ್ಯುತ್ಪ್ರವಾಹಗಳು. ಇವುಗಳಿಂದಾಗಿ ಆ ವಾಹಕಗಳ ತಾಪಮಾನ ಏರಿ ಉಪಯುಕ್ತ ಶಕ್ತಿಯು ನಷ್ಟವಾಗುತ್ತದೆ.
ಗ್ರಹಣ – ಒಂದು ಆಕಾಶಕಾಯದ ನೆರಳು ಇನ್ನೊಂದರ ಮೇಲೆ ಬೀಳುವುದು ಅಥವಾ ಒಂದು ಆಕಾಶಕಾಯದ ನೆರಳು ಇನ್ನೊಂದನ್ನು ಕಾಂತಿಗುಂದಿಸುವುದು.
ಪ್ರತಿಧ್ವನಿ – ಒಂದು ಗಟ್ಟಿ ಮೇಲ್ಮೈಯು ಶಬ್ಧದ ಅಲೆಗಳನ್ನು ಪ್ರತಿಫಲಿಸಿದಾಗ ಉಂಟಾಗುವ ಪರಿಣಾಮ.
ಭೂಮಿಯ ಅಯಸ್ಕಾಂತತೆ – ಭೂಮಿಯು ತನ್ನ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಹತ್ತಿರವಿರುವ ಬಿಂದುಗಳಲ್ಲಿ ಕಾಂತಕ್ಷೇತ್ರವನ್ನು ಹೊಂದಿರುವುದು ಗೊತ್ತಾಗಿರುವ ವಿಷಯವಾಗಿದೆ. ಹೆಚ್ಚೂಕಮ್ಮಿ ಉತ್ತರ ದಕ್ಷಿಣ ದಿಕ್ಕಿನಲ್ಲಿ ತನ್ನೊಳಗೆ ಒಂದು ಬೃಹತ್ ಗಾತ್ರದ ಪಟ್ಟಿ ರೂಪದ ಅಯಸ್ಕಾಂತವಿದೆಯೇನೋ ಎಂಬಂತೆ ವರ್ತಿಸುತ್ತದೆ ನಮ್ಮ ಭೂಮಿ.
ಭೂಮಿಯ ವಾತಾವರಣ – ಭೂಮಿಯನ್ನು ಸುತ್ತುವರಿದಿರುವ ಅನಿಲ. ಇದರಲ್ಲಿ ಅನೇಕ ಪದರಗಳಿರುತ್ತವೆ.
Like us!
Follow us!