ನಮಗೆ ಒಂದು ವಸ್ತು ಅಥವಾ ಒಂದು ವಿಷಯದ ಬಗ್ಗೆ ಆಸಕ್ತಿ ಇಲ್ಲದೆ ಇದ್ದರೆ ಅಥವಾ ಅದರ ಅಗತ್ಯ ನಮಗಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ನಮ್ಮ‌ ಮನಸ್ಸಿನಲ್ಲಿ ಆ ವಸ್ತುವಿನ ಮೌಲ್ಯ‌ ಕಡಿಮೆ ಆಗುತ್ತದೆ! ಹೊಟ್ಟೆ ತುಂಬ ಊಟ ಮಾಡಿದ್ದು, ‘ಇನ್ನು ಒಂದು ತುತ್ತು ಸಹ ಬೇಡ’ ಅನ್ನಿಸುವವರಿಗೆ ಎಷ್ಟೇ ಸಿಹಿಯಾದ ಹೋಳಿಗೆ ಕೊಟ್ಟರೂ ‘ ಅಯ್ಯೋ, ನಂಗೆ ಬೇಡ. ಇದು‌ ಸಪ್ಪೆ ಸಪ್ಪೆ’ ಎಂದಾರು ಅವರು! ನಮ್ಮಮ‌ನಸ್ಸು ಜೀವನವನ್ನು ನಾವು ನೋಡುವ ಕ್ರಮವನ್ನು ಎಷ್ಟು ಪ್ರಬಲವಾಗಿ ಪ್ರಭಾವಿಸುತ್ತದೆ ಎಂಬುದು ಈ ಗಾದೆಮಾತಿನಿಂದ ಅರ್ಥವಾಗುತ್ತದೆ.

Kannada proverb – Hotte tumbindre holige sapsappe( A full tummy makes the sweet roti insipid).

It is always mind over matter. For instance when have eaten more than we can, our tummy will be full. In such a circumstance, even if some one gives us the sweetest roti, we won’t find inclination to eat it.What more! We may even crib that the roti is not sweet enough! Therefore, when we are not interested in something, we tend to devalue it, though that particular thing may be actually quite valuable. Human behavior is sometimes like this!