ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Continuous wave

ನಿರಂತರ ಅಲೆ – ಆಕಾಶವಾಣಿಯ ಸಂವಹನದಲ್ಲಿ‌ ಆಗುವಂತೆ ಒಂದು‌ ಕಾಲಾವಧಿಯಲ್ಲಿ ನಿರಂತರವಾಗಿ‌‌ ಪ್ರಸಾರಿಸಿದ ಒಂದು ವಿದ್ಯುತ್ಕಾಂತೀಯ ಅಲೆ. ‌

Control grid

ನಿಯಂತ್ರಕ ಸರಳು‌ – ಉಷ್ಣ ವಿದ್ಯುದಣು ಕವಾಟ ಅಥವಾ ಋಣಕಿರಣ ಕೊಳವೆಯಲ್ಲಿ ಇರಿಸಿದ ಲೋಹಪರದೆಯ ರೂಪದ ವಿದ್ಯುತ್ ಧ್ರುವ. ಇದು ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ಹರಿಯುವ ಎಲೆಕ್ಟ್ರಾನುಗಳನ್ನು‌ ನಿಯಂತ್ರಿಸುತ್ತೆ.

Convection

ಸ್ವತಃಚಲನಾ ಉಷ್ಣ ವರ್ಗಾವಣೆ – ಒಂದು ದ್ರವದಲ್ಲಿ ಆ ದ್ರವದ ಚಲನೆಯಿಂದಲೇ ಉಷ್ಣತೆಯು ಅದರ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆಯಾಗುವುದು.

Converging lens or mirror

ಕೂಡುವ ಮಸೂರ ಅಥವಾ ಕನ್ನಡಿ – ಬೆಳಕಿನ‌ ಒಂದು ಸಮಾನಾಂತರ ಕಿರಣ ಸಮೂಹವನ್ನು ಒಂದು ಬಿಂದುವಿನಲ್ಲಿ ಕೂಡುವಂತೆ ವಕ್ರೀಭವಿಸುವ ಅಥವಾ ಪ್ರತಿಫಲಿಸುವ ಮಸೂರ ಅಥವಾ ಕನ್ನಡಿ.‌ ಹೀಗೆ ಮಾಡುವ ಕನ್ನಡಿಯು ತಗ್ಗಿರುತ್ತದೆ ಮತ್ತು‌‌ ಮಸೂರವು‌ ಮಧ್ಯದಲ್ಲಿ ಉಬ್ಬಿರುತ್ತದೆ.

Coolant

ತಂಪುಕಾರಕ – ಉಷ್ಣ ವರ್ಗಾವಣೆಯ ವಿಧಾನದಿಂದ ಬಿಸಿ ಚಾಲಕ ಯಂತ್ರದಿಂದ ಶಕ್ತಿಯನ್ನು ತೆಗೆದುಬಿಡುವ ದ್ರವ.

Cornea

ಕಣ್ಗುಡ್ಡೆ ಮೇಲ್ಪೊರೆ – ಕಣ್ಣಿನ ಪಾರದರ್ಶಕ ಭಾಗ.

Corona

ಪ್ರಭಾವಲಯ – ಸೂರ್ಯನ ವಾತಾವರಣದ ಹೊರ ಅಂಚು.

Corpuscular theory of light

ಬೆಳಕಿನ ಕಣ ಸಿದ್ದಾಂತ – ಬೆಳಕು ಕಣಗಳ ರೂಪದಲ್ಲಿ ಪ್ರಯಾಣಿಸುತ್ತದೆ ಎಂದು ಊಹಿಸುವ ವಾದ.

Cosmic rays

ವಿಶ್ವಾತ್ಮಕ ಅಲೆಗಳು‌ – ಬಾಹ್ಯಾಕಾಶದಿಂದ ಹೊರಟು ಭೂಮಿಯನ್ನು ತಲುಪುವಂತಹ ತುಂಬ ಶಕ್ತವಾದ ವಿಕಿರಣ.

Counter

ಎಣಿಕೆ ಉಪಕರಣ – ಕಣಗಳನ್ನು ಮತ್ತು ವಿದ್ಯುತ್ ಕಾಂತೀಯ ವಿಕಿರಣವನ್ನು ಎಣಿಸಲು ಬಳಸುವ ಉಪಕರಣ. 

Page 13 of 15

Kannada Sethu. All rights reserved.