ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

‘ಪೂಜೆ – ಪುನಸ್ಕಾರ’ ಈ ಜೋಡಿ ಪದದಲ್ಲಿ ಪುನಸ್ಕಾರ ಪದದ ಅರ್ಥವೇನು?

“ಓಹ್….ನಮ್ಮ ಅತ್ತೆ ಮನೆಯಲ್ಲಿ ಪೂಜೆ ಪುನಸ್ಕಾರ ಹೆಚ್ಚು”, ” ನಾನು ಬೆಳಿಗ್ಗೆ ಪೂಜೆ ಪುನಸ್ಕಾರ ಮುಗಿಸೋ ಹೊತ್ತಿಗೆ ಬೆಳಿಗ್ಗೆ ಹನ್ನೊಂದು ಗಂಟೆ ಆಗುತ್ತೆ”, “ಆಚಾರವಂತ್ರಪ್ಪಾ. ಪೂಜೆ ಪುನಸ್ಕಾರ ಮುಗಿಸ್ದೆ ಬರ್ತಾರಾ!” – ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವಲ್ಲ? ನಾನು ಈ ಪುನಸ್ಕಾರ ಎಂಬ‌ ಪದ ಕೇಳಿದಾಗಲೆಲ್ಲ ಏನು ಈ‌ ಪದದ ಅರ್ಥ ಎಂದು ಯೋಚಿಸುತ್ತಿದ್ದೆ. ಒಂದಷ್ಟು ಪರಾಮರ್ಶನ ಮಾಡಿ, ಗೂಗಲಿಸಿ, ಭಾಷಾಪ್ರಿಯರ ಜೊತೆಗೆ ಚರ್ಚಿಸಿ, ಕೊನೆಗೆ ನನಗೆ ಪರಿಚಯವಿರುವ ಸಂಸ್ಕೃತ ಪಂಡಿತರಾದ ಡಾ.ಹಯವದನ ಎಂಬವರ ಬಳಿ […]

“ಅಯ್ಯೋ… ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ‌ ಮೇಡಂ”

ಮೊನ್ನೆ ಬ್ರೆಡ್ಡು, ಸಾದಾ ಕೇಕುಗಳನ್ನು ಕೊಳ್ಳಲು ಒಂದು ಬೇಕರಿಗೆ ಹೋಗಿದ್ದೆ. ನಮ್ಮ ಹಂಪಿನಗರದಲ್ಲಿರುವ ಒಂದು ‘ಹಾಸನ ಅಯ್ಯಂಗಾರ್’ ಬೇಕರಿ ಅದು. ನನಗೆ ಆ ತಿನಿಸುಗಳನ್ನು ಕೊಟ್ಟ  ಹುಡುಗನನ್ನು “ಏನಪ್ಪಾ, ಇವು ತಾಜಾ ಇದಾವಾ?” ಎಂದು ಕೇಳಿದೆ. ಅವನಿಗೆ ತುಂಬ ಗಾಬರಿಯಾಯಿತು! “ಅಯ್ಯೋ. ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ ಮೇಡಂ” ಎಂದು ಆತಂಕದಿಂದ ಹೇಳಿದ. ಸಾಮಾನ್ಯವಾಗಿ ಜನ ‘ಫ್ರೆಷ್’ ಅನ್ನುವ ಪದ ಬಳಸ್ತಾರಲ್ಲ, ಅದರ ಬದಲು ನಾನು ‘ತಾಜಾ’ ಎಂಬ ಪದ ಬಳಸಿದ್ದು ಅವನಿಗೆ ಹೀಗೆ ಗಾಬರಿ […]

ಕನ್ನಡ ನಾಡಿನ ಒಂದು ಸರಳ ಪ್ರಾದೇಶಿಕ ಖಾದ್ಯ – ಕಲ್ಲನ್ನ

ಕನ್ನಡ ನಾಡಿನ ಪ್ರಕೃತಿ ಸಿರಿಯಂತೆ ಸಂಸ್ಕೃತಿ ಸಂಪತ್ತು ಸಹ ವೈವಿದ್ಯಮಯವಾದದ್ದು ಹಾಗೂ ಕೌತುಕ ಹುಟ್ಟಿಸುವಂಥದ್ದು.‌ ಇದರಲ್ಲಿ ಅದ್ಭುತವಾದ ಖಾದ್ಯವಿಶೇಷಗಳೂ ಸೇರಿವೆ. ‌ಇವುಗಳಲ್ಲಿ ತುಂಬ ಸರಳವಾದ ಆದರೆ ಅಚ್ಚರಿ ಹುಟ್ಟಿಸುವಂತಹ ಒಂದು ತಿನಿಸು ಅಂದರೆ ಕಲ್ಲನ್ನ.  ಉತ್ತರ ಕನ್ನಡದ ಸಿರ್ಸಿಯಿಂದ ಶಿವಮೊಗ್ಗದ ತನಕ ಈ ತಿನಿಸು ರೂಢಿಯಲ್ಲಿದೆ. ನದೀತೀರದಲ್ಲಿರುವ ನಿಂಬೆ-ಕಿತ್ತಳೆ ಗಾತ್ರದ ಬೆಣಚು ಕಲ್ಲುಗಳನ್ನು ಮನೆಗೆ ತಂದು, ತೊಳೆದು ಒರೆಸಿ, ಸೌದೆ ಒಲೆಯೊಳಗೆ ಹಾಕಿ ಅವುಗಳನ್ನು ಕೆಂಪಗೆ ಕಾಯಿಸುತ್ತಾರಂತೆ. ನಂತರ ಬಾಳೆ ಎಲೆ ಅಥವಾ ಅರಿಶಿನದ ಎಲೆಯ ಮೇಲೆ ಬಿಸಿ […]

“ನೀವು ಕಾಲ್ ತೊಳ್ಕೋಬೇಕಾ?”

ಮೈಸೂರಿನ ಕೆಲವು ಸಮುದಾಯಗಳ ಕನ್ನಡ ಭಾಷೆಯು ತುಂಬ ನಯ ನಾಜೂಕಿನಿಂದ ಕೂಡಿರುತ್ತದೆ. ನನಗೆ ಇದರ ಅನುಭವ ಸುಮಾರು ಮೂವತ್ತೆರಡು ವರ್ಷಗಳ ಹಿಂದೆ, ಅಂದರೆ ನನ್ನ ಮದುವೆಯಾದ ಹೊಸದರಲ್ಲಿ ಆಯಿತು.  ನನ್ನ ದಿವಂಗತ ಅತ್ತೆ, ಶ್ರೀಮತಿ ಗೌರಮ್ಮ ಒಬ್ಬ ಮೃದುಮಾತಿನ, ಒಳ್ಳೆಯ ಮನಸ್ಸಿನ, ಪ್ರೀತಿಯುತ ವ್ಯಕ್ತಿಯಾಗಿದ್ದರು. ನನ್ನ ಮದುವೆಯ ಸಮಯದಲ್ಲಿ ಅವರನ್ಬು ವಿಪರೀತವಾಗಿ ಬಾಧಿಸುತ್ತಿದ್ದ ಸಂಧಿವಾತ (Rheumatoid Arthritis) ಸಹ ಅವರ ಮುಗುಳ್ನಗು ಮತ್ತು ಜೀವನ ಪ್ರೀತಿ ಮಾಸಿರಲಿಲ್ಲ.  ಇವರು ಯಾರಾದರೂ ಹೆಂಗಸರು ದೂರ ಪ್ರಯಾಣ ಮಾಡಿ ಮನೆಗೆ […]

ಕನ್ನಡದಿಂದ ಇಂಗ್ಲಿಷ್ ಗೆ ಹೋದ ಒಂದು ಪದ ದೋಲೆ!

ಏನಿದು!? ಯಾವ ಪದ ಇದು, ಕನ್ನಡದಿಂದ ಇಂಗ್ಲಿಷ್ ಭಾಷೆಗರ ಹೋದದ್ದು ಅನ್ನಿಸಿತಾ ಓದುಗರೇ? ಹೇಳ್ತೇನೆ.  ವನ್ಯ ಜೀವಿಗಳಿಗೆ ಸಂಬಂಧಿಸಿದ ಇಂಗ್ಲಿಷ್ ಪುಸ್ತಕಗಳಲ್ಲಿ ‘ದೋಲೆ’ ಎಂಬ ಪದವನ್ನು ನಾನು ಗಮನಿಸಿದ್ದೆ. ನಾವು  ಕನ್ನಡದಲ್ಲಿ ತೋಳ ಎಂದು ಕರೆಯುವ ಪ್ರಾಣಿಗೆ  ಈ ಪದವನ್ನು  ಬಳಸುತ್ತಾರೆ.  Asiatic wild dog ಎಂಬ ತೋಳ ಮತ್ತು ನಾಯಿಯ ಮಿಶ್ರಲಕ್ಷಣಗಳನ್ನು ಹೊಂದಿದ ಒಂದು ಜಾತಿಯ ಪ್ರಾಣಿಯನ್ನು ಗುರುತಿಸಲು ನಿರ್ದಿಷ್ಟವಾಗಿ ಬಳಕೆಯಾಗುವ ಪದ ಇದು. ಬ್ರಿಟಿಷ್ ಭಾರತದಲ್ಲಿ 1808ರಲ್ಲಿ ಥಾಮಸ್ ವಿಲಿಯಂಸನ್ ಎಂಬ ಸೈನಿಕನೊಬ್ಬ ಈ […]

ಮಗುವಿಗಿಟ್ಟ ಹೆಸರು ಕ್ಷಣಿಕ! ಅರ್ಥ ಗಮನಿಸದೆ ಹೆಸರಿಡುವುದು ಯಾಕ?

ಮೊನ್ನೆ ಒಂದು ವಿದ್ಯಾಸಂಸ್ಥೆಯ ಸಮಾರಂಭಕ್ಕೆ ಹೋಗಿದ್ದೆ. ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಅದು. ಅಲ್ಲಿನ ಸಾಧಕ ಕಿಶೋರ – ಕಿಶೋರಿಯರ ಮತ್ತು ಬೆಂಬಲಿಸಿದ ಅವರ ಅಪ್ಪ-ಅಮ್ಮ, ಅಜ್ಜಿ-ತಾತಂದಿರ ಸಂತೋಷ, ಸಂಭ್ರಮಗಳು ನನ್ನ ಅಧ್ಯಾಪಕ ಮನಸ್ಸಿಗೆ ಬಹು ಮುದ ತಂದವು.  ಮಕ್ಕಳ ಹೆಸರು ಕರೆಯುತ್ತಿದ್ದಂತೆ ಅವರು ವೇದಿಕೆಗೆ ಬಂದು ಪುರಸ್ಕಾರವನ್ನು ಸ್ವೀಕರಿಸಿ ತೆರಳುತ್ತಿದ್ದರು‌. ಈ ಹಿಗ್ಗಿನ ತೇರು ಸಾಗುತ್ತಿದ್ದಂತೆ ಒಂದು ಹೆಸರನ್ನು ಕರೆಯಲಾಯಿತು. ‘ಕ್ಷಣಿಕ’ ಎಂಬ ಹೆಸರು ಅದು‌.‌ ಹೆಣ್ಣುಮಗಳೊಬ್ಬಳು ಬಂದು ಅದನ್ನು […]

ಇಂಗ್ಲಿಷ್ ನಾಮಫಲಕ ಪ್ರಿಯ ಬೆಂಗಳೂರಿಗರು!

“ಶ್ರೀ ರಾಘವೇಂದ್ರ ಗ್ರ್ಯಾಂಡ್… ಜ್ಯೂಸಸ್, ಚಾಟ್ಸ್, ಚೈನೀಸ್, ನಾರ್ತ್ ಇಂಡಿಯನ್, ಸೌತ್ ಇಂಡಿಯನ್….” ಇಂಡಿಯನ್ ಟಯರ್ಸ್ ಕಮಲ ಆರ್ಟ್ಸ್ ನವಗ್ರಹ ಬಾಯ್ಸ್ ಖುಷಿ ಈಟಿಂಗ್ ಚಾಯ್ಸ್ ಎಕ್ಸ್ಟ್ರಾ ಚಟ್ನಿ ಮನೋಜ್ ಫ್ರೇಮ್ಸ್ ಇನ್‌ಟೈಂ ಸ್ಟುಡಿಯೋ. ಏನಿವು ಅಂದುಕೊಂಡಿರೇ? ಇವು ಬೆಂಗಳೂರಿನ ಬಹುತೇಕ  ಬಡಾವಣೆಗಳಲ್ಲಿ ಕಾಣಿಸುವ ಅಂಗಡಿಗಳ ನಾಮಫಲಕಗಳು! ಇಂಗ್ಲಿಷ್ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆದಂಥವು. ಜೊತೆಗೆ ಇಂಗ್ಲಿಷ್ ಫಲಕವಂತೂ ಅದರ ಕೆಳಗೆ ಇದ್ದೇ ಇರುತ್ತೆ ಬಿಡಿ.  ಹೌದೂ…ಯಾಕೆ ನಾವು ಮತ್ತು ನಮ್ಮವರು ಹೀಗೆ!?  ಇಂಗ್ಲಿಷ್ ಬಳಸಿದರೆ ಪ್ರತಿಷ್ಠೆ […]

  ಚಿತ್ರಬಟಾಣಿ ಕೇಳಿದ ಪುಟಾಣಿ

ಮಕ್ಕಳಿಗೆ ಊಟತಿಂಡಿ ಮಾಡಿ ಹಾಕುವ ತಾಯಂದಿರಿಗೆ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಸಂದರ್ಭದಲ್ಲಿ  ಕೆಲವೊಮ್ಮೆ ನಗೆ ಹುಟ್ಟಿಸುವ  ಅನುಭವಗಳಾಗುತ್ತವೆ. ನಮ್ಮ ಮನೆಯಲ್ಲೂ ಇತ್ತೀಚೆಗೆ ಇಂತಹ ಒಂದು ಅನುಭವ ಆಯಿತು.   ನನ್ನ ಚಿಕ್ಕ ಮಗಳು ಪ್ರಣತಿ ತುಂಬ ಸೂಕ್ಷ್ಮವಾದ ರುಚಿಪ್ರಜ್ಞೆ ಇರುವ ಹುಡುಗಿ ; ಕೇವಲ ಪರಿಮಳ ನೋಡಿ ಖಾದ್ಯಪದಾರ್ಥ ತನಗೆ ಬೇಕೋ ಬೇಡವೋ ಎಂದು ನಿರ್ಧರಿಸಿಬಿಡುತ್ತಾಳೆ! ಅವಳು ಎಳೆಯ ಪುಟಾಣಿ ಆಗಿದ್ದಾಗಿನಿಂದಲೂ ಅವಳಿಗೆ ಇಷ್ಟವಾಗುವಂತೆ ತಿಂಡಿ-ಅಡಿಗೆ ಮಾಡುವುದು ನನಗೆ ಮತ್ತು ನಮ್ಮ‌ ಮನೆಗೆಲಸ ಸಹಾಯಕರಾದ ಯಲ್ಲಮ್ಮರಿಗೆ ಸವಾಲಿನ ಸಂಗತಿಯೇ. […]

‘ಆಲ್ಟ್ರೇಷನ್ ಟೈಲರ್’ ಗೆ  ಸಂವಾದಿಯಾದ ಕನ್ನಡ ಪದ ಯಾವುದು? 

ಬೆಂಗಳೂರಿನ (ಹಾಗೂ ಬಹುಶಃ ಭಾರತದ ಎಲ್ಲ ನಗರಗಳ) ಎಲ್ಲ‌ ಬಡಾವಣೆಗಳ ಮುಖ್ಯ ರಸ್ತೆಗಳು ಮತ್ತು ಕೆಲವು ಗಲ್ಲಿಗಳಲ್ಲಿ, ‘ಆಲ್ಟ್ರೇಷನ್ ಟೈಲರ್ಸ್’, ‘ಇಲ್ಲಿ  ಎಲ್ಲ ರೀತಿಯ ಆಲ್ಟ್ರೇಷನ್ ಕೆಲಸಗಳನ್ನು ಮಾಡಿ ಕೊಡಲಾಗುತ್ತದೆ’ ಎಂಬ ಫಲಕಗಳನ್ನು ನಾವು  ನೋಡಿರುತ್ತೇವಲ್ಲವೆ? ಈ ಕೆಲಸ ಮಾಡುವವರು ಬಹಳ  ಚಿಕ್ಕದಾದ ಅಂಗಡಿಗಳಲ್ಲಿ, ಕೆಲವರಂತೂ ರಸ್ತೆಯ ಬದಿಯಲ್ಲಿಯೇ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು, ಬಂದಂತಹ ಗಿರಾಕಿಗಳು ತರುವ ದೊಗಲೆ ಬಟ್ಟೆಗಳನ್ನು ಕತ್ತರಿಸಿ ಹೊಲಿದು ಅವರ ಅಳತೆಗೆ ತಕ್ಕಂತೆ ಸರಿ ಮಾಡಿಕೊಡುತ್ತಿರುತ್ತಾರೆ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು […]

 “ಚಾರುಲತ ಅಂದರೆ ಏನಮ್ಮ ಮಗು?”

ಶೈಕ್ಷಣಿಕ ವರ್ಷ ಪ್ರಾರಂಭ ಆದಾಗ ನಾವು ಅಧ್ಯಾಪಕರು ಹೊಸ ಹೊಸ ವಿದ್ಯಾರ್ಥಿಗಳನ್ನು ಭೇಟಿ ಮಾಡ್ತೇವೆ. ಹೊಸ ಹೊಸ ಮುಖಗಳು, ಹೊಸ ಹೊಸ ಹೆಸರುಗಳು, ಹೊಸ ಹೊಸ ಅನುಭವಗಳು.  ಹೀಗೆಯೇ ಮೊನ್ನೆ ಒಂದು ತರಗತಿಯಲ್ಲಿ ಹಾಜರಿ ಹಾಕ್ತಾ ಇದ್ದಾಗ ‘ಚಾರುಲತ’  ಎಂಬ ಹೆಸರನ್ನು ಕರೆದೆ. ಒಬ್ಬಳು ಹುಡುಗಿ ಓಗೊಟ್ಟಳು.‌ ‘ತನ್ನ ಹೆಸರಿನ ಅರ್ಥವು ಈ ಕಿಶೋರಿಗೆ ಗೊತ್ತಿರಬಹುದೇ?’ ಎಂಬ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಮೂಡಿ, “ಚಾರುಲತ ಅಂದರೆ ಏನಮ್ಮ ಮಗು?” ಎಂದು  ಅವಳನ್ನು ನಾನು ಕೇಳಿದೆ. ಆ ಪ್ರಶ್ನೆಯನ್ನು […]

Page 1 of 16

Kannada Sethu. All rights reserved.