ಕನ್ನಡನಾಡಿನ ಮಕ್ಕಳು ಕನ್ನಡ ಭಾಷೆಯನ್ನು ಮಾತಾಡಲು ಕಲಿಯುವ ಮೂರು ಜಾಗಗಳು ಅಂದರೆ ತಮ್ಮ ಮನೆ, ತಮ್ಮ ಶಾಲೆ-ಕಾಲೇಜು ಹಾಗೂ ತಮ್ಮನ್ನು ತಲುಪುವ ವಿವಿಧ ಮಾಧ್ಯಮಗಳು. ಈ ಹಿನ್ನೆಲೆಯಲ್ಲಿ ನೋಡಿದಾಗ ಶಾಲೆ-ಕಾಲೇಜುಗಳಲ್ಲಿನ ಅಧ್ಯಾಪಕರು ಮಾತಾಡುವ ಕನ್ನಡ ಭಾಷೆಯ ರೀತಿ-ರೂಪಗಳು ಬಹಳ ಮುಖ್ಯ. ಅವು ಎಳೆಯ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ತುಂಬ ಪರಿಣಾಮ ಬೀರುತ್ತವೆ. ಈ ವಿಷಯದಲ್ಲಿ, ಒಬ್ಬ ಕಾಲೇಜು ಕನ್ನಡ ಅಧ್ಯಾಪಕಿಯಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿರುವ ನನ್ನ ಅನಿಸಿಕೆ ಹೀಗಿದೆ. ‘ಕನ್ನಡ ಅಧ್ಯಾಪಕರ ಕನ್ನಡ ಗರಿಷ್ಠ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!