ಪದವಿ ಕಾಲೇಜುಗಳಲ್ಲಿ ಸುಮಾರು 2004 ನೇ ಇಸವಿಯವರೆಗೂ ವಾರ್ಷಿಕ ಪದ್ಧತಿಯ ಶೈಕ್ಷಣಿಕ ವಿನ್ಯಾಸ ಇತ್ತು. ಆಗ ಕವಿತೆಗಳು/ಸಣ್ಣಕಥೆಗಳು/ಪ್ರಬಂಧಗಳು ಮುಂತಾದವನ್ನು ಪಾಠ ಮಾಡುವ ಮುಂಚೆ ಅಥವಾ ವರ್ಷದ ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಾವಧಾನವಾಗಿ ವಿವರಿಸುವ ಅವಕಾಶ ಇತ್ತು. ಏಕೆಂದರೆ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಸಲ ವಾರ್ಷಿಕ ಪರೀಕ್ಷೆ ಇರುತ್ತಿತ್ತು. ಆದರೆ ಅರ್ಧವಾರ್ಷಿಕ ಪಾಠ ಪದ್ಧತಿ ಬಂದ ಮೇಲೆ ಈ ಚಿತ್ರ ಬದಲಾಯಿತು. ಪಾಠಕ್ಕೆ ಸಮಯ ಕಡಿಮೆ ಆಗಿ ಪರೀಕ್ಷೆಗೆ ಮಹತ್ವ ಹೆಚ್ಚಾಯಿತು. ಪರೀಕ್ಷೆ ಬರುವಷ್ಟರಲ್ಲಿ ಪಠ್ಯಭಾಗ ಮುಗಿಸುವುದೇ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.