ಕರ್ನಾಟಕದ ಸರಳ, ಪೌಷ್ಟಿಕ ಹಾಗೂ ಪ್ರಖ್ಯಾತ ಆಹಾರಗಳಲ್ಲಿ ರಾಗಿಮುದ್ದೆ ಒಂದು. ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಇದು ಪ್ರಧಾನ ದೈನಿಕ ಆಹಾರವಾಗಿದೆ (ಸ್ಟೇಪಲ್ ಫುಡ್ ಎಂಬ ಅರ್ಥದಲ್ಲಿ). ಇದಕ್ಕೆ ‘ಹಿಟ್ಟು’ ಎಂಬ ಇನ್ನೊಂದು ಹೆಸರಿದೆ! ಮತ್ತೆ, ಇನ್ನೂ ಬೇಯಿಸದ ರಾಗಿಹಿಟ್ಟಿಗೆ ರಾಗಿಹಸಿಟ್ಟು (ರಾಗಿ ಹಸಿಹಿಟ್ಟು) ಅನ್ನುತ್ತಾರೆ ನೋಡಿ! ತಾಯಿ ಮಂಗಳೂರಿನವರಾಗಿದ್ದು ತಂದೆ ತುಮಕೂರಿನವರಾಗಿದ್ದ ನಮ್ಮ ಮನೆಯಲ್ಲಿ ರಾಗಿಮುದ್ದೆ ದೈನಿಕ ಆಹಾರವಾಗಿರಲಿಲ್ಲ, ಆದರೆ ಅಪರೂಪಕ್ಕೆ ಮಾಡುವ ಒಂದು ವಿಶೇಷ ಆಹಾರವಾಗಿತ್ತು. ‘ರಾಗಿಮುದ್ದೆ ಮಾಡಿದ್ರೆ ಅದಕ್ಕೆ ಸರಿಯಾದ ಹುಳಿ(ಸಾಂಬಾರ್) ಇರ್ಬೇಕು, […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!