ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ನೀರ್ ದೋಸೆ, ನೀರ್  ಚಟ್ನಿ, ನೀರ್ ಪಲ್ಯ, ನೀರ್ ಗೊಜ್ಜು…. ಅಯ್ಯಯ್ಯೋ….

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೀರ್ ಎಂಬ ಧಾತುವಿನಿಂದ (ಪದಮೂಲ) ಪ್ರಾರಂಭವಾಗುವ ತಿಂಡಿ/ಖಾದ್ಯಗಳ ಹೆಸರು ಕೇಳಿ ಬರುತ್ತವೆ. ತಮಾಷೆಯೆಂದರೆ ಎಂದೂ ಆ ಹೆಸರು ಕೇಳದ ಪ್ರದೇಶದವರು‌ “ಹಾಂ…!? ಹೀಗೂ ಒಂದು ತಿಂಡಿ ಇರುತ್ತಾ!? ” ಎಂದು ಆಶ್ಚರ್ಯ ಪಡುತ್ತಾರೆ, ಆದರೆ ತಮ್ಮ ಪ್ರದೇಶದಲ್ಲಿ ಇರುವ ನೀರ್ ಎಂಬ ಪದಮೂಲದ ಹೆಸರಿನ ತಿಂಡಿಯ ಬಗೆಗೆ ಅವರಿಗೆ ಅಚ್ಚರಿಯ ಭಾವ ಇರುವುದಿಲ್ಲ; ಏಕೆಂದರೆ ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ.  ದಕ್ಷಿಣ ಕನ್ನಡದ ಕಡೆ ಅಕ್ಕಿ ನೆನೆ ಹಾಕಿ ಅದನ್ನು ಉಪ್ಪಿನೊಡನೆ ನುಣ್ಣಗೆ […]

ಜನಪದ ಗಾಯಕರ ಅದ್ಭುತ ಸಂವಹನ‌ ಶೈಲಿ…ಅದ್ಹೆಂಗಪ್ಪಾ ಅಂದ್ರೆ…

“ಏನು, ಹೆಂಗಿದೀರ? ಎಲ್ರೂ ನಾಷ್ಟ ಮಾಡಿದ್ರಾ ಮತ್ತೆ?..ನಮ್ಮ ಮಾಯ್ಕಾರ ಮಾದಪ್ನೋರು ಬರೋ ದಾರಿಯಲ್ಲಿ…” ಏನಾಯ್ತಪ್ಪಾ ಅಂದ್ರೆ ……..ಇದು ಕನ್ನಡ ಜನಪದ ಪುರಾಣಗಳ ಅದ್ಭುತ ಸಂವಹನ ಶೈಲಿ.         ಮಂಟೆಸ್ವಾಮಿ‌ ಕಥೆ, ಮಾದೇಶ್ವರನ ಪುರಾಣ, ಗೀಗೀಪದ ಮುಂತಾದ ಜನಪದ ಪುರಾಣ ಗಾಯನ ಹಾಗೂ ಗೀತ ಗಾಯನ ಸಂಪ್ರದಾಯವನ್ನು ವೀಕ್ಷಿಸಿದ ಯಾರಿಗೇ ಆದರೂ ಆ ಗಾಯಕರ ಉತ್ತಮ‌ ಸಂವಹನ ಕಲೆಯು‌ ಅಂದರೆ ಬಹಳ ಸರಾಗವಾಗಿ ಪ್ರೇಕ್ಷಕರನ್ನು ತಲುಪುವ ಗುಣವು ಗಮನಕ್ಕೆ ಬಂದಿರುತ್ತದೆ.‌ ಸ್ವಲ್ಪ ಮಾತು, ಸ್ವಲ್ಪ‌ […]

ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಒಂದು ಮುಖ್ಯ ಕನ್ನಡ ಕೆಲಸ

ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ…ತರಗತಿಯ ಹಂತ ಯಾವುದೇ ಇರಲಿ, ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಮತ್ತು ಕನ್ನಡಕ್ಕೆ ಈ ಸನ್ನಿವೇಶದಲ್ಲಿ ಅತ್ಯಂತ ಜರೂರಾಗಿ ಆಗಬೇಕಾದ ಕನ್ನಡದ ಕೆಲಸವೊಂದಿದೆ. ಅದೇನೆಂದರೆ, ಅವರು ತಮ್ಮ ಮಾತಿನಲ್ಲಿ ಮತ್ತು ಪಾಠದಲ್ಲಿ ಗರಿಷ್ಠ ಸಂಖ್ಯೆಯ ಕನ್ನಡ ಪದಗಳನ್ನು ಬಳಸುವ ಕೆಲಸ. ‘ ಇದರಲ್ಲಿ ಏನು ವಿಶೇಷ ಇದೆ? ಕನ್ನಡ ಅಧ್ಯಾಪಕರು ಆಡೋದೇ ಕನ್ನಡ ‌ಭಾಷೆ ಅಲ್ವಾ? ಬಳಸೋದೇ ಕನ್ನಡ ಪದಗಳಲ್ವಾ?’ ಎಂಬ ಪ್ರಶ್ನೆ ಹುಟ್ಟಬಹುದು.  ಜಾಗತೀಕರಣದ ನಂತರದ ಕನ್ನಡನಾಡಿನ ನಗರಗಳಲ್ಲಿ ( ಮುಖ್ಯವಾಗಿ ಬೆಂಗಳೂರು- […]

ಛಂದಸ್ಸಿನ ಪಾಠ ಅಕ್ಕಾ –  ನಿಜದಿ ತಲುಪಬೇಕು ಕಿವಿಗಳ ಮೂಲಕ

ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುವ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಭಾಗವಾಗಿ ಛಂದಸ್ಸನ್ನು ಓದುತ್ತಾರೆ. ಛಂದಸ್ಸು ಎಂದರೆ ಪದ್ಯರಚನೆಯ ನಿಯಮ ಎಂದು ಅರ್ಥ. ಒಂದು ಪದ್ಯದ ಲಯ, ಗತಿ, ಓಟ, ಪ್ರಾಸ, ತಾಳಕ್ಕೆ ಸಿಗುವ ಗುಣ ಇವೆಲ್ಲವನ್ನೂ ಅಧ್ಯಯನ ಮಾಡುವುದು ಛಂದಸ್ಸಿನ ಪರಿಧಿಯಲ್ಲಿ ಸೇರುತ್ತದೆ. ಛಂದಸ್ಸು ಎಂದರೆ ಹೊದಿಸುವುದು ಎಂದೂ ಅರ್ಥವಿದೆ. ಪದಗಳಿಗೆ ಲಯದ ಹೊದಿಕೆ ತೊಡಿಸುವುದು ಅನ್ನಬಹುದೇನೋ. ಛಂದಸ್ಸನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಅದು ಅಧ್ಯಾಪಕರಿಗೆ ಸವಾಲಿನ ವಿಷಯವೇ ಸರಿ. […]

ಎಮ್ಮೆಯ ಕನ್ನಡ!!

ಅಧ್ಯಾಪಕರ ಉದ್ಯೋಗದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಂಬುದು ತುಂಬ ಗಂಭೀರ ವಿಷಯ ಹಾಗೂ ಅತ್ಯಂತ ಜವಾಬ್ದಾರಿಯುತವಾಗಿ ಮಾಡಬೇಕಾದ ಕೆಲಸ.‌ ಆದಾಗ್ಯೂ ಕೆಲವೊಮ್ಮೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯವ ಉತ್ತರಗಳು, ಮಾಡುವ ತಪ್ಪುಗಳು ಮೌಲ್ಯಮಾಪಕರಿಗೆ ನಗೆಯುಕ್ಕಿಸಿ ಅವರ ಮನಸ್ಸನ್ನು ತುಸು ತಿಳಿಗೊಳಿಸುವುದು ಸುಳ್ಳಲ್ಲ. ಅಂತಹದೇ ಒಂದು ಪ್ರಸಂಗ ಈ ಅಧ್ಯಾಪಕಿಗೂ ಎದುರಾಯಿತು.  ಇಂಗ್ಲಿಷ್ ಮತ್ತು ಕನ್ನಡದ ಬಳಕೆಯನ್ನು ಕುರಿತು ಬರೆಯಬೇಕಾಗಿದ್ದ ಒಂದು ಉತ್ತರದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ” ನಮ್ಮ ಎಮ್ಮೆಯ ಕನ್ನಡ ಭಾಷೆಯು ತುಂಬ ಪ್ರಾಚೀನವಾದುದು” ಎಂದು ಬರೆದಿದ್ದಳು‌! […]

ಅರ್ಧವರ್ಷ ಪದ್ಧತಿಯಲ್ಲಿ ಕನ್ನಡ  ಸಾಹಿತ್ಯ ಚರಿತ್ರೆಯನ್ನು ಪಾಠ ಮಾಡುವ ಸವಾಲು.

ಪದವಿ ಕಾಲೇಜುಗಳಲ್ಲಿ ಸುಮಾರು 2004 ನೇ ಇಸವಿಯವರೆಗೂ ವಾರ್ಷಿಕ ಪದ್ಧತಿಯ ಶೈಕ್ಷಣಿಕ ವಿನ್ಯಾಸ ಇತ್ತು.‌ ಆಗ ಕವಿತೆಗಳು/ಸಣ್ಣಕಥೆಗಳು/ಪ್ರಬಂಧಗಳು ಮುಂತಾದವನ್ನು ಪಾಠ ಮಾಡುವ ಮುಂಚೆ ಅಥವಾ ವರ್ಷದ ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಾವಧಾನವಾಗಿ ವಿವರಿಸುವ ಅವಕಾಶ ಇತ್ತು.  ಏಕೆಂದರೆ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಸಲ ವಾರ್ಷಿಕ ಪರೀಕ್ಷೆ ಇರುತ್ತಿತ್ತು. ಆದರೆ  ಅರ್ಧವಾರ್ಷಿಕ ಪಾಠ ಪದ್ಧತಿ ಬಂದ ಮೇಲೆ ಈ ಚಿತ್ರ ಬದಲಾಯಿತು.‌‌ ಪಾಠಕ್ಕೆ ಸಮಯ ಕಡಿಮೆ ಆಗಿ ಪರೀಕ್ಷೆಗೆ ಮಹತ್ವ ಹೆಚ್ಚಾಯಿತು.‌ ಪರೀಕ್ಷೆ ಬರುವಷ್ಟರಲ್ಲಿ ಪಠ್ಯಭಾಗ ಮುಗಿಸುವುದೇ […]

ಸೇತುವೆಯಾದ ಸಂಗೀತ

ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮತ್ತು ಕನ್ನಡಿಗರ ಜೀವನಕ್ರಮವನ್ನು ತುಸು ಆಳವಾಗಿ ಗಮನಿಸಿದ ಯಾರಿಗೇ ಆದರೂ ಒಂದು ಸಂಗತಿ ಗಮನಕ್ಕೆ ಬಂದಿರುತ್ತದೆ. ಅದೇನೆಂದರೆ ಸಂಗೀತವು ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ಸೇತುವೆಯಾಗಿ ಕೆಲಸ ಮಾಡಿದೆ. ಈ ಮಾತು ಅನಕ್ಷರಸ್ಥ ಸಮುದಾಯದ ಮಟ್ಟಿಗಂತೂ  ಹೆಚ್ಚು ನಿಜ. ಮೊದಲಿಗೆ ಕನ್ನಡ ಸಾಹಿತ್ಯದ ತಾಯಿಬೇರಾದ ನಮ್ಮ ಜನಪದ ಸಾಹಿತ್ಯವನ್ನು ನೋಡುವುದಾದರೆ, ಅಲ್ಲಂತೂ ಹಾಡಿನ ಧಾಟಿಯು ಮಾತಿಗಿಂತ ಮೊದಲೇ ಅಥವಾ ಮಾತಿನೊಟ್ಟಿಗೆ ಬಂತೇನೋ ಎಂಬಂತೆ, ಗಳಸ್ಯ ಕಂಠಸ್ಯವಾಗಿ ಬಾಯಿಂದ ಬಾಯಿಗೆ ಧಾಟಿ ಸಮೇತ ಸಾಹಿತ್ಯ ಹರಿದುಬಂದಿದೆ. […]

ಕೊಸರಿನ ಧರ್ಮ, ಕನ್ನಡ ವ್ಯಾಪಾರದ ಒಳಮರ್ಮ

ಮೈಸೂರು, ಬೆಂಗಳೂರು ಮುಂತಾದ ಹಳೆ ಮೈಸೂರಿನ ಪ್ರದೇಶಗಳಲ್ಲಿ ಸ್ಥಳೀಯ ವ್ಯಾಪಾರಿಗಳ ಬಳಿ ಹೂವು, ತರಕಾರಿ ಮುಂತಾದವನ್ನು ಕೊಂಡವರಿಗೆ ‘ಕೊಸರು’ ಎಂಬ ಪದ ಹಾಗೂ ಪ್ರಕ್ರಿಯೆಯ ಪರಿಚಯ ಇರುತ್ತದೆ ಎಂದು ನಾವು ಭಾವಿಸಬಹುದು. ಉದಾಹರಣೆಗೆ ನಾಲ್ಕು ರಸ್ತೆಗಳು ಕೂಡುವ ವೃತ್ತದ ಬಳಿ ಹೂಮಾರಾಟ ಮಾಡುತ್ತಿರುವ, ಹಳೆಕಾಲದ ವ್ಯಾಪಾರಿಯೊಬ್ಬರ ಬಳಿ ನೀವು ಒಂದು ಮೊಳ ಮಲ್ಲಿಗೆ ಅಥವಾ ಕನಕಾಂಬರ ಹೂವನ್ನು ಕೊಂಡಿರಿ ಎಂದಿಟ್ಟುಕೊಳ್ಳೋಣ. ಬೆಲೆ ವಿಚಾರಿಸಿ ನಿಮಗೆ ಎಷ್ಟು ಬೇಕೋ ಅಷ್ಟನ್ನು ಕೊಡುವಂತೆ ಹೇಳಿ ವ್ಯಾಪಾರಿಗೆ ನೀವು ಹಣ ಕೊಟ್ಟು, […]

ಕನ್ನಡವನ್ನು ಸಬಲಗೊಳಿಸುವುದು ಅಂದರೆ ವಿವಿಧ ಪದಕೋಶಗಳ ನಿರ್ಮಾಣ.

ಕನ್ನಡವನ್ನು ಪ್ರೀತಿಸುವ ಉಳಿಸಿ ಬೆಳೆಸುವ ಆಸೆ ಇರುವ ಯಾರೇ ಆದರೂ ಅದನ್ನು ಸಬಲಗೊಳಿಸುವ ಬಗ್ಗೆ ಯೋಚಿಸುತ್ತಾರೆ. ಬಹುಶಃ ನಮ್ಮ ಭಾಷೆಯನ್ನು ಸಬಲಗೊಳಿಸುವ ಒಂದು ಮಾರ್ಗ ಅಂದರೆ  ಬೇರೆ ಬೇರೆ ಜ್ಞಾನಶಿಸ್ತುಗಳಲ್ಲಿ ಆಗುತ್ತಿರುವ ನೂತನ ಸಂಶೋಧನೆಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಾಗುವಂತೆ ಅದನ್ನು ಸಜ್ಜುಗೊಳಿಸುವುದು. ಉದಾಹರಣೆಗೆ, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮಾನವ ನಿರ್ಮಿತ ಬುದ್ಧಿಮತ್ತೆ, ಅರ್ಥ ಶಾಸ್ತ್ರ, ತತ್ವಶಾಸ್ತ್ರ ನಿರ್ವಹಣಾ ಶಾಸ್ತ್ರ ಮುಂತಾದ ಎಲ್ಲ ಶಾಸ್ತ್ರಗಳಲ್ಲೂ ಪ್ರತ್ಯೇಕ ಕನ್ನಡ ಪದಕೋಶಗಳನ್ನು, ಆಕ್ಸ್ ಫರ್ಡ್ ಪದಕೋಶಗಳ ಮಾದರಿಯಲ್ಲಿ ತಯಾರು ಮಾಡಿದರೆ […]

ಕನ್ನಡ ಅಧ್ಯಾಪಕರು ಹಾಗೂ ಭಾವ ಪ್ರಕಟಣೆ

ಭಾಷಾ ತರಗತಿಗಳು ಭಾವರಹಿತವಾದರೆ ಅವು ಪರಿಣಾಮಕಾರಿಯಾಗುವುದಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ  ನಾನು ಭಾವಿಸಿದ ಹಾಗೂ ಜೀವಿಸಿದ  ಅನುಭವವಿದು. ಭಾಷೆಯು ಸಾಹಿತ್ಯದ ಸಂದರ್ಭದಲ್ಲಿ ಅಥವಾ ಸಂವಹನ ಸಂದರ್ಭದಲ್ಲಿ ಬಳಕೆಯಾಗುವಾಗ ಭಾವಭರಿತವಾದ ರೂಪ, ಆಕಾರಗಳನ್ನು ಹೊಂದಿರುತ್ತದೆ. ವಿಜ್ಞಾನ, ವಾಣಿಜ್ಯ, ತರ್ಕ ಮುಂತಾದ ವಿಷಯಗಳನ್ನು ಬೋಧಿಸುವಾಗ ಅಥವಾ ಬರೆಯುವಾಗ ಭಾಷೆಯು ತನ್ನ ಭಾವರೂಪವನ್ನು ಹಿಂದಿಟ್ಟು ಜ್ಞಾನರೂಪವನ್ನು ಮುಂದಿಡುತ್ತದೇನೋ.  ಆದರೆ ಕನ್ನಡ ಅಥವಾ ಯಾವುದೇ ಭಾಷಾ/ಸಾಹಿತ್ಯ  ತರಗತಿಗಳಲ್ಲಿ ಅದು ಭಾವರೂಪಿಯಲ್ಲದೇ ಹೋದರೆ ತಾನು ಹೇಳಬೇಕಾದುದನ್ನು ಸಮರ್ಥವಾಗಿ‌ ಹೇಳಲಾಗದು. ಅಕ್ಷರ, ಪದ, ವಾಕ್ಯಗಳನ್ನು ಉಚ್ಚರಿಸುವಾಗ […]

Page 11 of 17

Kannada Sethu. All rights reserved.