ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಮೂವತ್ತೆರಡರ ಹರೆಯದಲ್ಲಿ ನಾನು ಕನ್ನಡದಲ್ಲಿ   ಬೆರಳಚ್ಚು ಕೌಶಲ್ಯ ಕಲಿತ ಪ್ರಸಂಗ!

ಜೀವನ ಎಂಬುದು ಅನೂಹ್ಯ ಘಟನಾವಳಿಯ ಸರಮಾಲೆ. ಸಣ್ಣ ಹುಡುಗಿಯಾಗಿದ್ದಾಗಿನಿಂದ ನಾನು ಶಾಲೆಗೆ ಹೋಗುವುದರ ಜೊತೆಜೊತೆಗೆ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯ ತರಗತಿಗೆ ಹೋಗುತ್ತಿದ್ದವಳು. ಪದವಿಪೂರ್ವ ಹಾಗೂ ಪದವಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ಓದಿದವಳು‌. ನಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎಂಬ ಮೂರು ದಾರಿಗಳು ಗೆರೆ ಕೊರೆದಂತೆ ಸ್ಪಷ್ಟವಾಗಿದ್ದವಲ್ಲ. ಇದರ ಜೊತೆಗೆ, ಬೆರಳಚ್ಚು ಮತ್ತು‌ ಶೀಘ್ರಲಿಪಿಗಳು ವಾಣಿಜ್ಯ ವಿದ್ಯಾರ್ಥಿಗಳು ಕಲಿಯುವ ವಿಷಯಗಳು ಎಂಬ ಭಾವನೆಯೂ ನನ್ನಲ್ಲಿ ಯಾಕೋ ಏನೋ ಬಹಳ ಗಟ್ಟಿಯಾಗಿತ್ತು!  ನಾನು […]

ಹತ್ರಲ್ಲಿ ಒಂದಕ್ಕೂ ಅರ್ಥ ಗೊತ್ತಿಲ್ಲ‌ ಮ್ಯಾಮ್!!

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗಳ ವ್ಯಾಸಂಗ ಕ್ರಮದಲ್ಲಿ, ಒಂದು ಅರ್ಧವರ್ಷ(ಸೆಮಿಸ್ಟರ್)ದಲ್ಲಿ ಕನ್ನಡ ಭಾಷಾ ಚಟುವಟಿಕೆಯ ಮೂಲಕ ವಿದ್ಯಾರ್ಥಿನಿಯರ ಬರಹವನ್ನು ತಿದ್ದುವ ಪ್ರಯತ್ನ ಮಾಡುತ್ತೇವೆ. ಇದರ ಅಂಗವಾಗಿ ಈಚೆಗೆ ಒಂದು ದಿನ, ಹೋಲಿಕೆ ಇರುವ ಪದಗಳ-ಅಕ್ಷರಗಳ ಉಚ್ಚಾರಣೆಗಳ ನಡುವಿನ ವ್ಯತ್ಯಾಸವನ್ನು ಕಲಿಸುತ್ತಿದ್ದಾಗ, ನನಗೆ ಒಂದು ಬೇಸ್ತು ಬೀಳಿಸುವ ಅನುಭವ ಆಯಿತು.  ಅಂದಿನ ಪಾಠದ ವಿಷಯ ‘ಅಕಾರ-ಹಕಾರದ ನಡುವಿನ ವ್ಯತ್ಯಾಸ’. ನಾನು ಮೊದಲು ಅಗಸ, ಅನ್ಯ, ಅಭ್ಯಂತರ, ಅಸಹಜ, ಅರವಟ್ಟಿಗೆ, ಅಕಾರಣ…..ಇಂತಹ, ಅಕಾರದಿಂದ ಶುರುವಾಗುವ ಅಷ್ಟೇನೂ ಕಷ್ಟವಲ್ಲದ ಹತ್ತು […]

ನಿಘಂಟು! ಇನ್ನೂ ಒಡೆಯದ ಖಜಾನೆಗಳ ಇಡುಗಂಟು.

ನಾವು ಕನ್ನಡ ಅಧ್ಯಾಪಕರು ನಮ್ಮ ಒಡನಾಡಿ ಎಂದು ಭಾವಿಸುವ ಯಾವುದಾದರೂ ಒಂದು ಪುಸ್ತಕ ಇದ್ದರೆ ಅದು ನಿಘಂಟು ಅಥವಾ ಪದಕೋಶ. ಪಾಠ ಸಿದ್ಧತೆಯ ಸಂದರ್ಭದಲ್ಲಿ ಕಷ್ಟ ಪದಗಳು ಬಂದಾಗ, ತಕ್ಷಣ ನಿಘಂಟಿನ ಮೊರೆ ಹೋಗುವವರು ನಾವು. ಅದು ರತ್ನಕೋಶದಂತಹ ಪುಟಾಣಿ ಕೈಪಿಡಿಯಾದರೂ ಸರಿ, ಅಥವಾ ಕಿಟೆಲ್ ವಿರಚಿತ ಬೃಹತ್ ಸಂಪುಟವಾದರೂ ಸರಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನ ಸರಣಿಯಾದರೂ ಸರಿ, ಅಥವಾ ಇಂಗ್ಲಿಷ್-ಇಂಗ್ಲಿಷ್ – ಕನ್ನಡ ಭಾರದ್ವಾಜ ನಿಘಂಟಾದರೂ ಸರಿ, ಅರ್ಥ  ಗೊತ್ತಿಲ್ಲದ ಪದವನ್ನು ಹುಡುಕುವುದು ನಮ್ಮ […]

‘ಎಕ್ಸ್ ಕ್ಯೂಸ್ ಮಿ’ ಮತ್ತು ‘ಪ್ಲೀಸ್ ‘ಗಳಿಗೆ ಯಾವ ಕನ್ನಡ ಪದ ಬಳಸೋದು? ಹೇಳ್ತೀರಾ ಸ್ವಲ್ಪ…

ಭಾಷೆಗಳು ಬೇರೆ ಭಾಷೆಯ, ಸಂಸ್ಕೃತಿಯ ಪದಗಳನ್ನು ತಮ್ಮದಾಗಿಸಿಕೊಳ್ಳುವ ರೀತಿ ತುಂಬ ಕುತೂಹಲ ಹುಟ್ಟಿಸುವಂಥದ್ದು‌. ನಮ್ಮ ಕನ್ನಡವು ಎರಡು ನಿರ್ದಿಷ್ಟ ಇಂಗ್ಲಿಷ್ ಪದಗಳನ್ನು ತನ್ನದಾಗಿಸಿಕೊಂಡ ಅಥವಾ ಕನ್ನಡದಲ್ಲಿ ಅದಕ್ಕೆ ಸಂವಾದಿಯಾಗಿ‌ ಬಳಕೆಯಾಗುತ್ತಿರುವ ಪದಗಳ ಬಗ್ಗೆ ಈಗ ಚರ್ಚಿಸಲಿದ್ದೇನೆ. ಹೊಸ ಪೀಳಿಗೆಯ ಮಕ್ಕಳಿಗೆ,  ಆಧುನಿಕ (ಇಂಗ್ಲಿಷ್ ಮಾಧ್ಯಮ ಎಂದು ಅರ್ಥೈಸಿಕೊಳ್ಳಬೇಕು) ಶಾಲೆಗಳಲ್ಲಿ  ಶಿಶುವಿಹಾರದಿಂದಲೂ, ‘excuse me , please, sorry, thank you’ ಮುಂತಾದ ‘ಮ್ಯಾಜಿಕ್ ವರ್ಡ್ಸ್’ ಗಳನ್ನು, ಜನರೊಡನೆ ವ್ಯವಹರಿಸುವಾಗ ಬಳಸಬೇಕು, ಅದು ನಾಗರಿಕತೆ, ಸೌಜನ್ಯಗಳ ಸಂಕೇತ’ ಎಂಬ […]

ಅತಿಥಿ ಮತ್ತು  ಅಭ್ಯಾಗತ – ಈ ಪದಗಳ ನಡುವಿನ  ವ್ಯತ್ಯಾಸ ಏನು?

ಇತ್ತೀಚೆಗೆ ನಡೆದ ಒಂದು ಸಮಾರಂಭವೊಂದರಲ್ಲಿ ನಿರೂಪಕರು ‘ಬಂದಿರುವ ಮಾನ್ಯ ಅಭ್ಯಾಗತರನ್ನು ವೇದಿಕೆಗೆ ಸ್ವಾಗತಿಸುತ್ತೇನೆ’ ಅಂದರು.‌  ಇಷ್ಟೇ ಅಲ್ಲದೆ ‘ ‘ಇಂದು ಅಭ್ಯಾಗತರಾಗಿ ಆಗಮಿಸಿರುವ’, ‘ ಅಭ್ಯಾಗತರು ಆಗಮಿಸಿರುವ ಸಂತೋಷಮಯ ಕ್ಷಣದಲ್ಲಿ’…..ಇಂತಹ ಪದಪುಂಜಗಳನ್ನು ಆ ನಿರೂಪಕರು ಮತ್ತೆ ಮತ್ತೆ ಬಳಸಿದರು. ಆಗ ನನಗೆ ಅತಿಥಿ ಮತ್ತು ಅಭ್ಯಾಗತ ಪದಗಳಿಗಿರುವ ವ್ಯತ್ಯಾಸ ಆ ನಿರೂಪಕರಿಗೆ ಗೊತ್ತಿಲ್ಲ ಅನ್ನಿಸಿತು‌. ಆಮಂತ್ರಣವನ್ನು ಪಡೆದು ಬಂದ ವ್ಯಕ್ತಿಯನ್ನು‌ ಅತಿಥಿ ಎಂದು ಆಮಂತ್ರಣವನ್ನು‌ ಪಡೆಯದೆ ಬಂದ ವ್ಯಕ್ತಿಯನ್ನು ಅಭ್ಯಾಗತ ಎಂದು‌ ಅರ್ಥೈಸುವುದು ವಾಡಿಕೆ. ‌ಹೀಗಾಗಿ‌ ವಿಶೇಷವಾಗಿ […]

ಆಲ್ಬಂ(Album)ಗೆ ಒಂದು ಕನ್ನಡ ಪದ ಹುಡುಕುತ್ತಾ……ಅಹ! ಸಿಕ್ಕೇಬಿಟ್ಟಿತು ನೋಡಿ!!

ವೃತ್ತಿಯಿಂದ ಕನ್ನಡ ಅಧ್ಯಾಪಕಿಯಾಗಿದ್ದು ಪ್ರವೃತ್ತಿಯಿಂದ ಲೇಖಕಿ, ಅನುವಾದಕಿ‌ ಆಗಿರುವ ನಾನು ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ಹುಡುಕುವ ಕೆಲಸವನ್ನು ಮಾಡುತ್ತಲೇ ಇರುತ್ತೇನೆ. ಹುಡುಕುತ್ತಿರುವಾಗ ಆ ನಿರ್ದಿಷ್ಟ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ‌ ಒಂದು ಸರಿಯಾದ ಸಂವಾದಿ ಪದ ಸಿಕ್ಕಿಬಿಟ್ಟರೆ ಏನೋ ಖುಷಿ ನನಗೆ. ಅವತ್ತೆಲ್ಲ ಆ ಪದವನ್ನು ನೆನೆದು ನೆನೆದು ಸಂಭ್ರಮಿಸ್ತಾ ಇರ್ತೇನೆ‌‌. ನನ್ನ ಈ ಪದಪ್ರಯಾಣದಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆದ ಪದ ಅಂದರೆ ಆಲ್ಬಂ( Album). ಈಗ ಐವತ್ತು ವರ್ಷ ದಾಟಿರುವ ನನ್ನ ಪೀಳಿಗೆಯವರಿಗೆ ನೆನಪಿರಬಹುದಾದಂತೆ, […]

ಕನ್ನಡ ಸಂಸ್ಕೃತಿಯ ಹೆಮ್ಮೆಯಾದ ಯಕ್ಷಗಾನವನ್ನು ಹಿಂದಿ ನಾಡಿಗೆ ಕೊಂಡೊಯ್ದ ಪ್ರತಿಭಾವಂತ ಕಲಾವಿದೆ – ಶ್ರೀಮತಿ  ವಿದ್ಯಾ ಕೋಳ್ಯೂರು

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ‘ಸಾಹಿತಿ ಹಾಗೂ ಕಲಾವಿದರ ಸಮಾವೇಶ’ದಲ್ಲಿ ಒಬ್ಬ ವಿಶಿಷ್ಟ ಕಲಾವಿದೆ – ಸಂಘಟಕಿಯನ್ನು ಭೇಟಿ ಆಗುವ ಸದವಕಾಶ ಬಂತು ನನಗೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಶ್ರೀಮತಿ‌ ವಿದ್ಯಾ ಕೋಳ್ಯೂರು ಎಂಬ ಮಹಿಳೆ ಅವರು. ಊಟದ ಬಿಡುವಿನಲ್ಲಿ ಹೀಗೆಯೇ ಪರಸ್ಪರ  ಪರಿಚಯಿಸಿಕೊಂಡು  ಲೋಕಾಭಿರಾಮವಾಗಿ ಮಾತಾಡುತ್ತಾ ಇದ್ದಾಗ ಅವರ ವಿಶಿಷ್ಟ ಕಲಾಕೈಂಕರ್ಯದ ಬಗ್ಗೆ ತಿಳಿದು ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ಆದವು. ಏಕೆ ಗೊತ್ತೇ? ಕಾಸರಗೋಡಿನ ಬಳಿ ಇರುವ ಕೋಳ್ಯೂರಿನ ಹಿರಿಯ […]

“ಮ್ಯಾಮ್ ಅನ್ನಕ್ಕೆ ಕನ್ನಡದಲ್ಲಿ ‌ಯಾವ ಪದ ಬಳಸ್ಬೇಕು ಮ್ಯಾಮ್?”

ತರಗತಿಗಳಲ್ಲಿ ಆದಷ್ಟೂ ಕನ್ನಡ ಪದಗಳನ್ನು ಬಳಸಬೇಕು ಎಂದು ಪ್ರಯತ್ನ ಮಾಡುವ ನಾನು ನನ್ನ ವಿದ್ಯಾರ್ಥಿನಿಯರಿಗೂ  (ಈಗ ನಾನು ಕೆಲಸ ಮಾಡುತ್ತಿರುವುದು ಒಂದು ಸರ್ಕಾರಿ ಮಹಿಳಾ ಕಾಲೇಜಾದ್ದರಿಂದ ನನ್ನ ತರಗತಿಗಳಲ್ಲಿ ಕೇವಲ ವಿದ್ಯಾರ್ಥಿನಿಯರಿರುತ್ತಾರೆ)  “ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡಿ ಮಕ್ಕಳೇ, ನಿಮ್ಮ‌  ಪದ ಸಂಪತ್ತು ಹೆಚ್ಚುತ್ತೆ” ಅಂತ ಹೇಳುತ್ತಿರುತ್ತೇನೆ. ಪಾಪ, ಅವರೂ ಕಲಿಯುವ ಉತ್ಸಾಹದಲ್ಲಿ ಈ ಪ್ರಯತ್ನವನ್ನು ಶದ್ಧೆಯಿಂದ ಪ್ರಾರಂಭಿಸುತ್ತಾರೆ.‌ ‘ನಾನು ಒಳಗೆ ಬರಬಹುದೇ?’, ಸಮಯ, ತರಗತಿ, ಪಾಠ, ಪಠ್ಯಪುಸ್ತಕ, ಕಿರುಪರೀಕ್ಷೆ, ಹಾಜರಾತಿ, ನಿಯೋಜಿತ ಕಾರ್ಯ, ಅಂಕ, […]

ನವಪದ ನಾಯಕಿ ಹಾಗೂ ಸೂಕ್ತಿ ಸಂಪಾದಕಿ   : ಶಾಲಾ-ಕಾಲೇಜಿನ ತರಗತಿಗಳು ಕನ್ನಡದ ಉಳಿವಿಗಾಗಿ  ತೆರೆಯಬಲ್ಲ  ಕಿಟಕಿ

 “ಅಧ್ಯಾಪಕರು ಚಿರಂತನ ಆಶಾವಾದಿಗಳು” ಎಂಬ ಒಂದು ಮಾತಿದೆ. ನಾಳೆಯ ಪ್ರಜೆಗಳಾದ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಕೆಲಸ ಮಾಡುವ ಅವರು ಮುಂದಿನ ಪೀಳಿಗೆಗಳ ಬಗ್ಗೆ ಭರವಸೆ ಕಳೆದುಕೊಳ್ಳಬಾರದು ಎಂಬ ಆಶಯ ಈ ಸೂಕ್ತಿಯ ಹಿಂದೆ ಇದೆ ಅನ್ನಿಸುತ್ತೆ. ‌ಈ ಹಿನ್ನೆಲೆಯಲ್ಲಿ ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಮುಂದಿನ ಪೀಳಿಗೆಗಳು ಕನ್ನಡವನ್ನು  ತಮ್ಮ  ಹೃದಯಕ್ಕೆ ಹತ್ತಿರವಿರಿಸಿಕೊಳ್ಳುವಂತೆ ಪ್ರೇರೇಪಿಸಲು ಏನು ಮಾಡಬಹುದು ಎಂದು‌  ಯೋಚಿಸುತ್ತಾ ಇರುತ್ತೇನೆ.  ಹೀಗೆ ಯೋಚಿಸಿದಾಗ ಈ ಅಧ್ಯಾಪಕಿಗೆ ತೋಚಿದ ಒಂದು ಸರಳ ಉಪಾಯ ಅಂದರೆ ಪ್ರತಿದಿನವೂ ತರಗತಿಯಲ್ಲಿ ಕರಿಹಲಗೆಯ […]

“ನನ್ನ ಹೆಸರು ಜಾನವಿ‌ ಮ್ಯಾಮ್…ಅದೇ… ನದಿ ಹೆಸರು…”

ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷದ  ತರಗತಿಗಳು ಪ್ರಾರಂಭವಾದಾಗ  ಅಧ್ಯಾಪಕರು ಹೊಸ ವಿದ್ಯಾರ್ಥಿನಿಯರ ಹೆಸರು ಕೇಳುವುದು ವಾಡಿಕೆ. ಹಾಗೆಯೇ ಈ ನಡುವೆ ನಾನು ಒಂದು ತರಗತಿಯ ವಿದ್ಯಾರ್ಥಿನಿಯರ ಹೆಸರು ಕೇಳುತ್ತಿದ್ದೆ.‌ ಒಬ್ಬ ವಿದ್ಯಾರ್ಥಿನಿ ನನ್ನ ಹೆಸರು ‘ಜಾನವಿ’ ಎಂದಳು. ಅದು ಜಾಹ್ನವಿ ಇರಬೇಕು ಅನ್ನಿಸಿ ನಾನು ”ಜಾಹ್ನವಿಯೇನಮ್ಮ ನಿನ್ನ ಹೆಸರು?” ಎಂದು ಕೇಳಿದೆ.‌ “ಅಲ್ಲ, ಅಲ್ಲ ಮ್ಯಾಮ್, ಜಾನವಿ,  ಅದೇ ಮ್ಯಾಮ್  ನದಿ ಹೆಸರು” ಅಂದಳು.‌  ಆಗ ನನಗೆ ಖಾತ್ರಿ ಆಯಿತು ಇವಳ ಹೆಸರು  ಖಂಡಿತ ಜಾಹ್ನವಿಯೇ, ಆದರೆ […]

Page 10 of 20

Kannada Sethu. All rights reserved.