ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಕನ್ನಡ ಉಳಿಸುವುದಕ್ಕೂ ಪೆಟ್ರೋಲ್ ಉಳಿಸುವುದಕ್ಕೂ ಇರುವ ವ್ಯತ್ಯಾಸ ಏನು?

ಈ ತಿಂಗಳು ಅಂದರೆ ನವೆಂಬರ್ 2023ರ ಕಸ್ತೂರಿ ಮಾಸಪತ್ರಿಕೆಯಲ್ಲಿ ಒಂದು ಉತ್ತಮ ಲೇಖನ ಬಂದಿದೆ. ಜಯತನಯ ಎಂಬವರು ಬರೆದ  “ಕನ್ನಡ ಹಿತರಕ್ಷಣೆಗೆ ಏನು ಮಾಡಬೇಕು?” ಎಂಬ ಲೇಖನ ಅದು.‌ ಆ ಲೇಖನದಲ್ಲಿನ ಒಂದು ವಿಷಯ ನನ್ನ ಗಮನ ಸೆಳೆಯಿತು. ‌ ಪೆಟ್ರೋಲನ್ನು ಉಳಿಸಬೇಕು ಅಂದರೆ ಅದನ್ನು ಬಳಸಬಾರದು, ಆದರೆ ಕನ್ನಡವನ್ನು ಉಳಿಸಬೇಕು ಅಂದರೆ ಅದನ್ನು ಬಳಸಬೇಕು ಎಂಬ ಮಾತು ಅದು.  ಎಷ್ಟು ನಿಜ ಅಲ್ಲವೇ?  “ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ, ಭಾಷೆ ಬಳಸಿ ಬಳಸಿ ಮಾಡ್ಬೇಕ್ ನಾವೆ ಕನ್ನಡ […]

“ನಂಗೆ entertainment ಅನ್ನೋ ಪದಕ್ಕೆ ಕನ್ನಡದಲ್ಲಿ ಏನ್ ಬರೀಬೇಕು ಅಂತ ಗೊತ್ತೇ ಆಗ್ಲಿಲ್ಲ ಮ್ಯಾಮ್”. 

ಪದವಿ ತರಗತಿಗಳಿಗೆ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ ಭಾಷೆಯ ವಿಚಾರದಲ್ಲಿ ಆಗಾಗ ನೆನಪಿನಲ್ಲಿ ಉಳಿಯುವಂತಹ ಅನುಭವಗಳಾಗುತ್ತವೆ. ಈಗ ನಾನು ವಿವರಿಸಹೊರಟಿರುವುದು ಅಂತಹದೇ ಒಂದು ಅನುಭವ.           ಒಂದು ದಿನ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಭಾಗವಾಗಿ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು, ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದ ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನೊಂದಿಗೆ ಮಾತಾಡುತ್ತಾ, ” ಪರೀಕ್ಷೆ ಏನೋ ಸುಲಭಾನೇ ಇತ್ತು ಮ್ಯಾಮ್, ಆದ್ರೆ ನಂಗೆ entertainment ಅನ್ನೋ ಪದಕ್ಕೆ ಕನ್ನಡದಲ್ಲಿ ಏನ್ ಬರೀಬೇಕು […]

“ಇಲ್ಲ ಇಲ್ಲ ಮೇಡಂ, ನಂಗೆ ಸರಿಯಾಗಿ ಕನ್ನಡ ಬರಲ್ಲ…”

ಮೊನ್ನೆ ನಮ್ಮ ಬಡಾವಣೆಯ ತರಕಾರಿ ಅಂಗಡಿಗೆ ಹೋಗಿದ್ದಾಗ ಒಂದು ವಿಚಿತ್ರ ಅನುಭವ  ಆಯಿತು. ತರಕಾರಿ ಮಾರುತ್ತಿದ್ದವನ ಹತ್ತಿರ ‘ಈರುಳ್ಳಿ ಎಷ್ಟು?’ ಅಂದೆ. ಅವನು ‘ನಲವತ್ತು ರೂಪಾಯ್’ ಅಂದವನು‌ ತಕ್ಷಣ ‘ಫಾರ್ಟಿ ರೂಪೀಸ್’ ಅಂದ.‌ ನನ್ನ ಮನಸ್ಸಿನಲ್ಲಿ ‘ಯಾಕೆ ಇವನು ಹೀಗಂದ?’ ಎಂಬ ಪ್ರಶ್ನೆ ಮೂಡಿತು.‌  ”ಯಾಕಪ್ಪಾ, ನಂಗೆ ಕನ್ನಡ ಬರಲ್ಲ ಅನ್ನಿಸ್ತಾ? ತಕ್ಷಣ ಇಂಗ್ಲಿಷ್ನಲ್ಲಿ ಬೆಲೆ ಹೇಳಿದ್ರಲ್ಲಾ? ” ಎಂದು ಕೇಳಿದೆ. ನಮ್ಮ ಬಡಾವಣೆಯಲ್ಲಿ  ಮಾರವಾಡಿಗಳು, ಜೈನರು ತುಂಬ ಮಂದಿ ಇದ್ದಾರೆ. ನನ್ನನ್ನೂ ಅವರಲ್ಲಿ ಒಬ್ಬರು ಅಂದುಕೊಂಡಿರಬೇಕು […]

ಭಾಷೆ ಕೇವಲ ಉಪಕರಣವೋ ಅಥವಾ ವ್ಯಕ್ತಿತ್ವದ ಪ್ರತಿಬಿಂಬವೋ? 

ಪದವಿ ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ, ಆಗಷ್ಟೇ ಪದವಿಪೂರ್ವ ಹಂತವನ್ನು ದಾಟಿ ಬಂದಿರುವ ಮೊದಲ ವರ್ಷದ ಹಲವು ಪದವಿ ವಿದ್ಯಾರ್ಥಿಗಳಲ್ಲಿ, ಭಾಷೆಗಳ ಬಗ್ಗೆ ನಿರ್ಲಕ್ಷ್ಯ ಮೂಡಿರುವುದು ನಿಚ್ಚಳವಾಗಿ ಕಂಡುಬರುತ್ತದೆ. ‌ಇದಕ್ಕೆ ಕೇವಲ ವಿದ್ಯಾರ್ಥಿಗಳು ಕಾರಣರಲ್ಲ.‌ ಹತ್ತನೇ ತರಗತಿಯವರೆಗೆ ಕನ್ನಡವನ್ನು ಅತ್ಯಂತ ಇಷ್ಟದಿಂದ ಓದುವ ಅನೇಕ ವಿದ್ಯಾರ್ಥಿಗಳಿರುತ್ತಾರೆ.‌ ಆದರೆ ಪದವಿಪೂರ್ವ ಹಂತಕ್ಕೆ ಬಂದಾಗ ವಿಷಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯು ‘ಕೋರ್ಸ್ ಸಬ್ಜೆಕ್ಟ್ಸ್’ ಮತ್ತು ‘ಲ್ಯಾಂಗ್ವೇಜಸ್’ ಎಂದು ವಿಭಾಗಿಸುವುದನ್ನು  ಮತ್ತು ಇವುಗಳಲ್ಲಿ ಮೊದಲನೆಯವು ‘ಮುಖ್ಯ’ ಹಾಗೂ ಎರಡನೆಯವು ‘ಅಮುಖ್ಯ’ […]

ಧಾಟಿ ಮೊದಲೋ, ಶಬ್ದ ಮೊದಲೋ? 

ಸಾಹಿತ್ಯ-ಸಂಗೀತಗಳಲ್ಲಿ ಆಸಕ್ತಿ ಇರುವವರನ್ನು ಕಾಡುವ ಒಂದು ಕುತೂಹಲಕರ ಪ್ರಶ್ನೆ ಇದು. ಹಾಡುಗಳ ತಯಾರಿಯಲ್ಲಿ‌ ರಾಗ ಮೊದಲೋ ಅಥವಾ ಪದಸೃಷ್ಟಿ ಮೊದಲೋ? ಎಂಬುದು.‌ ಇಲ್ಲಿನ ಸ್ವಾರಸ್ಯಕರ ಸಂಗತಿ‌ ಅಂದರೆ ಕೆಲವು ಸಲ ಮಾತು ಮೊದಲು –  ಭಾವಗೀತೆಗಳಲ್ಲಿ ಆಗುವಂತೆ, ಕೆಲವು ಸಲ ರಾಗ ಮೊದಲು – ಸಿನಿಮಾ ಹಾಡುಗಳಲ್ಲಿ ಆಗುವಂತೆ. ಇನ್ನು ಹಳೆಯ ಜಾನಪದ ಧಾಟಿಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಾ ಹೋದಂತೆ, ಪ್ರತಿ‌ ಹೊಸ ಪೀಳಿಗೆಯೂ ಅದಕ್ಕೆ ತನ್ನದೇ ಆದ ಶಬ್ದಗಳನ್ನು ಸೇರಿಸುತ್ತದೆ, ಅಂದರೆ ಇಲ್ಲಿ ರಾಗ […]

ಪದಗಳ  ಉಚ್ಚಾರಣೆ ಅಂದರೆ ತೊಟ್ಟಿಲಲ್ಲಿ ಮಲಗಿರುವ ಎಳೆಮಗುವಿನ ಕೆನ್ನೆ ಮುಟ್ಟಿದಂತೆ….

ಈಚೆಗೆ ಬಿ.ಎಸ್ಸಿ. ಪದವಿಯ ತರಗತಿಯೊಂದರಲ್ಲಿ ಪುರಂದರ ದಾಸರ ‘ಉದರ ವೈರಾಗ್ಯವಿದು’ ಕೀರ್ತನೆಯ ಪಾಠ ಮಾಡುತ್ತಿದ್ದೆ. ಕಷ್ಟ ಪದಗಳ ಅರ್ಥಗಳನ್ನು ಬರೆಸಿ ಓದಿಸುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ‘ಉದರ = ಹೊಟ್ಟೆ’ ಎಂದು ಓದುವ ಸಂದರ್ಭದಲ್ಲಿ ‘ಉದಾರ’ ಎಂದು ಓದಿದಳು. ಆಗ ಆ ವಿದ್ಯಾರ್ಥಿನಿಯ ಉಚ್ಚಾರವನ್ನು ತಿದ್ದುವಾಗ ಒಂದೇ ಒಂದು‌ ದೀರ್ಘವು ಅರ್ಥದಲ್ಲಿ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂದು ಹೇಳಬೇಕಾಯಿತು.         ‘ಉದರ’ ಕ್ಕೆ ನಿಘಂಟಿನಲ್ಲಿ ಹೊಟ್ಟೆ, ಜಠರ, ಆಹಾರ, ಮಧ್ಯ ಭಾಗ ಎಂಬ ಅರ್ಥಗಳಿದ್ದರೆ, ‘ಉದಾರ’ಕ್ಕೆ […]

ಅಗಲಿದ ಸ್ನೇಹಿತನ‌ ಹೆಸರನ್ನು ತನ್ನ ಕಾವ್ಯನಾಮಕ್ಕೆ ಸೇರಿಸಿಕೊಂಡ ಕನ್ನಡ ಕವಿ

ಸಂತೆಬೆನ್ನೂರು ಫೈಜ್ನಟ್ರಾಜ್  – ವಿವಿಧ ಕನ್ನಡ ಪತ್ರಿಕೆಗಳಲ್ಲಿ ಈ ಹೆಸರು ಓದಿದಾಗ ನನಗೆ ಕುತೂಹಲ ಮೂಡುತ್ತಿತ್ತು.‌ ಇದೆಂತಹ ಹೆಸರು? ಫೈಜ್ ಎಂಬ ಮುಸಲ್ಮಾನ ಹೆಸರು ಮತ್ತು ನಟರಾಜ್ ಎಂಬ ಹಿಂದೂ ಹೆಸರುಗಳು ಒಟ್ಟು ಸೇರಿದ್ದು ಹೇಗೆ? ಇದು ಹಿರಿಯರು ತಮ್ಮ ಮನೆಯ ಮಗುವಿಗೆ ಇಟ್ಟಿರಬಹುದಾದ ಹೆಸರೇ? ಅಥವಾ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಕ್ಕಳಿಗೆ ಈ  ರೀತಿಯ ಹೆಸರುಗಳನ್ನೇನಾದರೂ ಇಡುತ್ತಾರೆಯೇ?……ಹೀಗೆ ಕೆಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತಿದ್ದವು.          ಈಚೆಗೆ ಒಂದು ದಿನ ಈ ಪ್ರಶ್ನೆಗೆ […]

ಊಟದ ತಟ್ಟೆಗೆ ಅದೆಷ್ಟು ಹೆಸರುಗಳು!!

ಹೀಗೆಯೇ ಮೊನ್ನೆ ಅಕ್ಕಮಹಾದೇವಿಯ ‘ಮರವಿದ್ದು ಫಲವೇನು’ ಎಂಬ ವಚನವೊಂದನ್ನು ಓದುತ್ತಿದ್ದಾಗ ‘ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ’ ಎಂಬ ಸಾಲನ್ನು ಓದಿದೆ. ‘ಅಗಲು’ ಎಂಬುದನ್ನು ನಾವು ಕ್ರಿಯಾಪದವಾಗಿ ದೂರವಾಗು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ ಅಲ್ಲವೇ? ಈ ಪದ ಕೇಳಿದ ತಕ್ಷಣ ಪ್ರೇಮಿಗಳ ‘ಅಗಲಿಕೆ’, ‘ಎಂದೆಂದೂ ನಿನ್ನನು ಅಗಲಿ ನಾನಿರಲಾರೆ’ ಎಂಬ ಅಣ್ಣಾವ್ರ ಹಾಡಿನ ಸಾಲು, ‘ಅಗಲಿ ಇರಲಾರೆನೋ ನಿನ್ನನ್ನ’ ಎಂಬ ರಂಗಗೀತೆ ನೆನಪಾಗುತ್ತವೆ ತಾನೇ.  ಇಲ್ಲಿ ಯಾವ ಅರ್ಥದಲ್ಲಿ ‘ಅಗಲು’ ಎಂಬ ಪದವನ್ನು ವಚನಕಾರ್ತಿ ಬಳಸಿರಬಹುದು ಎಂದು ಯೋಚಿಸುತ್ತಾ […]

ಕನ್ನಡ ಸಾಹಿತ್ಯಕ್ಕೂ‌ ಸಂಗೀತಕ್ಕೂ ಇರುವ ಕರುಳುಬಳ್ಳಿಯ ಸಂಬಂಧ 

ಮೌಖಿಕ ಸಾಹಿತ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಸುದೀರ್ಘ ಚರಿತ್ರೆಯನ್ನು ಗಮನಿಸಿದಾಗ‌ ಎದ್ದು ಕಾಣುವ ಒಂದು ಅಂಶವೆಂದರೆ, ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಆಳವಾದ ಸಂಬಂಧ. ಆಧುನಿಕ‌ ಕಾಲದಲ್ಲಿ ನವ್ಯ ಸಾಹಿತ್ಯದ ಘಟ್ಟವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲ ಘಟ್ಟಗಳಲ್ಲೂ ಸಂಗೀತದೊಂದಿಗೆ ಸಾಹಿತ್ಯದ ಸಂಬಂಧ ಗಟ್ಟಿಯಾಗಿರುವುದು ನಮ್ಮ ಅರಿವಿಗೆ ಬರುತ್ತದೆ. ಗರತಿಯ ಹಾಡುಗಳ ತ್ರಿಪದಿಯ ಧಾಟಿ, ‘ಮಾದೇಶ್ವರ‌ ಪುರಾಣ’, ‘ಮಂಟೇಸಾಮಿ ಕಥೆ’ಗಳ (ಜನಪದ ಪುರಾಣಗಳು) ಹಾಡಿನ ಮಟ್ಟುಗಳು, ಹಿಂದೆ ಗದುಗಿನ ಭಾರತ, ಜೈಮಿನಿ‌ ಭಾರತ ಮುಂತಾದವುಗಳನ್ನು ಗಮಕ‌ಶೈಲಿಯಲ್ಲಿ‌ ಹಾಡುತ್ತಿದ್ದುದು, ವಚನ ಗಾಯನ, […]

ಯಾರಾದರೂ ಧನ್ಯವಾದ ಎಂದಾಗ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?

  ದೈನಂದಿನ ಜೀವನದಲ್ಲಿ ನಾವು ನಮ್ಮ ಸಹಜೀವಿಗಳಿಗೆ ಏನಾದರೂ ಕೊಟ್ಟಾಗ, ಸಹಾಯ ಮಾಡಿದಾಗ ಅವರು ಇಂಗ್ಲಿಷ್ನಲ್ಲಿ ‘ಥ್ಯಾಂಕ್ಯೂ’ ಅಂದರೆ ನಾವು ‘ ಯು ಆರ್ ವೆಲ್ಕಮ್,  ‘ಮೆನ್ಷನ್ ನಾಟ್’,  ಅಥವಾ ‘ಇಟ್ ಇಸ್ ಆಲ್ರೈಟ್’ ಎಂದು ಹೇಳುವುದು ವಾಡಿಕೆ.‌ ಆದರೆ ಯಾರಾದರೂ ಕನ್ನಡದಲ್ಲಿ ಧನ್ಯವಾದ ಅಂತ ಹೇಳಿದರೆ ಅದಕ್ಕೆ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು?        ಸಾಮಾನ್ಯವಾಗಿ ಧನ್ಯವಾದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಏನು ಹೇಳುವುದೆಂದು ತೋಚದೆ ‘ಥ್ಯಾಂಕ್ಯೂ’ ಅಂದೋ, ‘ಓಹ್ ಪರವಾಗಿಲ್ಲ’ ಅಂದೋ,  ಅಥವಾ […]

Page 12 of 17

Kannada Sethu. All rights reserved.