ಕಬ್ಬಿಣದ ಕಡಲೆಯಂತಹ ಹಳೆಗನ್ನಡ ಪಾಠಗಳು ಅಥವಾ ಅತ್ಯಂತ ಅಮೂರ್ತ ಹಾಗೂ ಸಂಕೀರ್ಣವಾಗಿರುವ ವೈಚಾರಿಕ ಪಾಠಗಳು ಕನ್ನಡ ಅಧ್ಯಾಪಕರ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ ನಿಜ. ಆದರೆ ತೀರಾ ಸರಳ ಭಾಷೆಯಲ್ಲಿರುವ ಲಲಿತ ಪ್ರಬಂಧಗಳು ಅಥವಾ ಪ್ರವಾಸ ಕಥನಗಳು ಪಠ್ಯಭಾಗವಾದಾಗ ಅಧ್ಯಾಪಕರಿಗೆ ಇನ್ನೊಂದು ರೀತಿಯ ಸವಾಲು ಎದುರಾಗುತ್ತೆ ನೋಡಿ. ಇದನ್ನು ವಿಚಿತ್ರ ಅನ್ನದೆ ವಿಧಿಯಿಲ್ಲ. ಅದರಲ್ಲೂ ಆ ಪಾಠದ ವಿಷಯವು ಸರಳವಾದ ಆದರೆ ರಸಹೀನವೆನ್ನಿಸುವ ಮಾಹಿತಿಯಿಂದ ಕೂಡಿದ್ದಾಗಲಂತೂ ಇದ್ದಿದ್ದೂ ಕಷ್ಟ. ಇದು ಹೇಗೆ ಎನ್ನುವಿರಾ? ವಿದ್ಯಾರ್ಥಿಗಳಿಗೆ ತಾವೇ ಓದಿ ಅರ್ಥ ಮಾಡಿಕೊಳ್ಳುವುದು […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.