ದ ಮತ್ತು ಧ ಕಾರಗಳು ವಿದ್ಯಾರ್ಥಿಗಳಿಗೆ ಮಾಡುವ ಗೊಂದಲ ಅಷ್ಟಿಷ್ಟಲ್ಲ. ವಿದ್ಯಾರ್ಥಿ ಎಂದು ಬರೆಯಬೇಕಾದಾಗ ವಿಧ್ಯಾರ್ಥಿ ಎಂದು ಬರೆಯುವುದು, ಧನಲಕ್ಷ್ಮಿ ಎಂದು ಬರೆಯಲು ದನಲಕ್ಷ್ಮಿ ಎಂದು ಬರೆಯುವುದು, ಆದ್ಯತೆ ಎಂದು ಬರೆಯಬೇಕಾದಾಗ ಆಧ್ಯತೆ ಎಂದು ಬರೆಯುವುದು, ಧನ್ಯವಾದ ಎಂದು ಬರೆಯಬೇಕಾದಲ್ಲಿ ದನ್ಯವಾದ ಎಂದು ಬರೆಯುವುದು……,ಹೀಗೆ. ಇದಕ್ಕೆ ಇರುವ ಒಂದೇ ಪರಿಹಾರ ಅಂದರೆ ವಿದ್ಯಾರ್ಥಿಗಳು ಉಚ್ಚಾರಕ್ಕೆ ಗಮನ ಕೊಡುವಂತೆ ಮಾಡಿ ಆ ಪದಗಳ ಅರ್ಥ ವ್ಯತ್ಯಾಸವನ್ನು ಅವರಿಗೆ ತಿಳಿಸಿಕೊಡುವುದು. ಇದು ಶಾಲೆಯಲ್ಲಿ ಅಧ್ಯಾಪಕರು ಮತ್ತು ಮನೆಯಲ್ಲಿ ತಂದೆತಾಯಿಗಳು ಮಾಡಬೇಕಾದ ಕೆಲಸ. […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!