ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಹೆಂಗಸು `ರಾಷ್ಟ್ರಪತಿ’ಯಾದಾಗ ಅವರನ್ನು ಏನೆಂದು ಕರೆಯಬೇಕು?

ಪ್ರಪಂಚದ ಬಹುತೇಕ ದೇಶಗಳು ಪುರುಷ ಪ್ರಧಾನ ವ್ಯವಸ್ಥೆಯನ್ನು ಹೊಂದಿರುವುದರಿಂದ ಮಹಿಳೆಯೊಬ್ಬರು ದೇಶದ ಪ್ರಥಮ ಪ್ರಜೆಯಾಗುವುದೆಂದರೆ ಅದು ವಿಶೇಷವಾದ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. ೨೫-೦೭-೨೦೦೭ರಂದು ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಭಾರತದ ಮೊಟ್ಟಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾದಾಗ ಅವರನ್ನು ಏನೆಂದು ಕರೆಯುವುದು ಎಂದು ಗೊಂದಲವಾಯಿತು. ಅವರನ್ನು ರಾಷ್ಟ್ರಪತಿ ಎಂದು ಕರೆಯಲಾಗದು. ಪತಿ ಎಂಬ ಪುಲ್ಲಿಂಗನಾಮವನ್ನು ಮಹಿಳೆಗೆ ಬಳಸುವುದು ಹೇಗೆ? ಇನ್ನೂ ಕೆಲವು ಪದಗಳಿವೆ. ಉದಾಹರಣೆಗೆ ಕಾಲೇಜುಗಳಲ್ಲಿ ಅಧ್ಯಾಪಕಿಯರಿಗೆ ಬಳಸುವ ಪದ ಮೇಡಂ, ಮ್ಯಾಮ್. ಇದಕ್ಕೆ ಯಾವ ಕನ್ನಡ ಪದ […]

ಹಾಡೆಂಬ ಸೇತುವೆಯ ಮೂಲಕ ಪಾಠವನ್ನು `ಮನ ಮುಟ್ಟಿಸುತ್ತಿದ್ದ’ ಕನ್ನಡ ಟೀಚರ್‌ಗಳು

ಮನಸ್ಸು ಬಾಲ್ಯಕ್ಕೆ ಹೋಯಿತೆಂದರೆ ಶಾಲೆಯಲ್ಲಿನ ಕನ್ನಡ ತರಗತಿಗಳು ನೆನಪಾಗುತ್ತವೆ.

ಮಂಗಳೂರಿಗೆ ಸೇರಿದ್ದ ಕಾಟಿಪಳ್ಳ ಮತ್ತು ಬೈಕಂಪಾಡಿ ಎಂಬ ಪುಟ್ಟ ಊರುಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ನನ್ನ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ನಡೆದದ್ದು. ಆ ಸರಳವಾದ ಹಳ್ಳಿಶಾಲೆಗಳಲ್ಲಿ ಎಷ್ಟು ಶ್ರದ್ಧಾವಂತ ಅಧ್ಯಾಪಕ-ಅಧ್ಯಾಪಕಿಯರಿರುತ್ತಿದ್ದರು! ಈಗ ನಾನೇ ಕಾಲೇಜು ಅಧ್ಯಾಪಕಿಯಾಗಿ ಅನೇಕ ವರ್ಷ ಕಳೆದ ಮೇಲೆ ಹಿನ್ನೋಟದ ಕಿಟಕಿಯಿಂದ ನೋಡುವಾಗ ಆ ಅಧ್ಯಾಪಕರ ಕಷ್ಟಸುಖಗಳು ಹೇಗಿದ್ದಿರಬಹುದು ಎಂದು ಯೋಚಿಸುವಂತಾಗುತ್ತದೆ.

ಕನ್ನಡ ತರಗತಿಯಲ್ಲಿ ಡಯಾನಳ ಇಂಗ್ಲಿಷ್ ಟಿಪ್ಪಣಿ

ತರಗತಿಯೆಂದ ಮೇಲೆ ಅಲ್ಲಿ ನಾನಾ ರೀತಿಯ, ನಾನಾ ಸ್ವಭಾವದ ವಿದ್ಯಾರ್ಥಿಗಳು ಇರುವುದು ಸಹಜ. ಕೆಲವು ವಿದ್ಯಾರ್ಥಿನಿಯರು ತಮ್ಮ ಕೆಲವು ವಿಶಿಷ್ಟ ಚರ್ಯೆ, ನಡವಳಿಕೆಗಳಿಂದ ಅಧ್ಯಾಪಕರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ನನ್ನ ಮನಸ್ಸಿನಲ್ಲಿ ಹೀಗೆ ಉಳಿದುಕೊಂಡ ಒಬ್ಬ ವಿದ್ಯಾರ್ಥಿನಿಯೆಂದರೆ ಡಯಾನಾ. ಈಕೆಯು ಎರಡನೆ ಬಿ.ಎಸ್ಸಿಗೆ ನಾನು ಕನ್ನಡ ಪಾಠ ಮಾಡುತ್ತಿರುವಾಗ ನನಗೆ ಪರಿಚಿತಳಾದವಳು.

`ತುಂತುರು’ ಮೂಲಕ ಕನ್ನಡ ಒದಲು ಕಲಿತ ರಶ್ಮಿ ಪುಟ್ಟಿ

ಓದುವ ಆಸಕ್ತಿ ಇರುವ ಮನೆಯಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಅವರಿಗೇ ಅರಿವಿಲ್ಲದಂತೆ ಪುಸ್ತಕಗಳು ಸಂಗಾತಿಗಳಾಗಿಬಿಡುತ್ತವೆ. ನಾನು ಇಂತಹದೊಂದು ಮನೆಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಅನ್ನಬೇಕು. ವೃತ್ತಿಯಿಂದ ನಗರ ಯೋಜನ ಇಲಾಖೆಯಲ್ಲಿ ಕಿರಿಯ ಯಂತ್ರಜ್ಞಾನಿ(ಇಂಜಿನಿಯರ್) ಆಗಿದ್ದ ನನ್ನ ತಂದೆಯವರು, ತಮ್ಮ ಸೋದರರ ಹಾಗೂ ಸೋದರಿಯ ಕಾರಣದಿಂದಾಗಿ, ರಾಮಕೃಷ್ಣಾಶ್ರಮದ ಗಾಢವಾದ ಪರಿಚಯ, ಸಂಪರ್ಕಗಳನ್ನು ಹೊಂದಿದ್ದರು.

ಕನ್ನಡದ ಡಿಜಿಟಲ್ ನವೋದಯ

ಕನ್ನಡದ ಡಿಜಿಟಲ್ ನವೋದಯ’ ಎಂಬ ಪದಗುಚ್ಛವೇ ರೋಮಾಂಚ ಹುಟ್ಟಿಸುವಂಥದ್ದು. ಕನ್ನಡವನ್ನು ಪ್ರೀತಿಸುವ ಯಾರೇ ಆದರೂ ಅದು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಮತ್ತು ನವೀಕರಣಗೊಳ್ಳಬೇಕು ಎಂದು ಒಪ್ಪುತ್ತಾರೆ. ಎಲ್ಲ ಜೀವಂತ ಭಾಷೆಗಳಂತೆ ಕನ್ನಡವೂ ಕಾಲದ ಕರೆಗೆ ಓಗೊಟ್ಟು ಬದಲಾಗುತ್ತಾ, ಹೊಸದಾಗುತ್ತಾ ಬಂದಿದೆ. ಮಾಹಿತಿ ತಂತ್ರಜ್ಞಾನ ಯುಗದ ಅಂತರ್ಜಾಲ ಪ್ರಪಂಚದಲ್ಲಿ ಕನ್ನಡ ಪಡೆದಿರುವ ಹೊಸ ರೂಪ ಅಂದರೆ ಅದು ಡಿಜಿಟಲ್ ರೂಪ.

`ಕಾಂಚಾಣ್ಣ’ಳು  ಕನ್ನಡ ಬರವಣಿಗೆ ಕಲಿತದ್ದು!

ಪದವಿ ತರಗತಿಗಳಲ್ಲಿ ಹೊಸ ತಂಡ ಬಂದ ಮೊದಲ ದಿನ ಇನ್ನೂ ಅಧಿಕೃತ (ಕಾಲೇಜಿನ ಕಛೇರಿ ಮೂಲಕ ಬರುವಂಥದ್ದು) ಪ್ರವೇಶಾತಿ ಪಟ್ಟಿ ಬಂದಿಲ್ಲದಿರುವುದರಿಂದ, ಹಾಜರಾಗಿರುವ ವಿದ್ಯಾರ್ಥಿನಿಯರಿಂದಲೇ ಒಂದು ಹಾಳೆಯಲ್ಲಿ ಹೆಸರು ಬರೆಸಿಕೊಳ್ಳುವ ಬಗ್ಗೆ ಹಿಂದಿನ ಕನ್ನಡ ಪ್ರಸಂಗವೊಂದರಲ್ಲಿ ಬರೆದಿದ್ದೆ. ವಿದ್ಯಾರ್ಥಿನಿಯರು ಹೆಸರು ಬರೆಯುವ ರೀತಿಯಲ್ಲೇ ನಮಗೆ ಅವರ ಕನ್ನಡ ಬರವಣಿಗೆಯ ಗುಣಮಟ್ಟದ ಅರಿವು ತಕ್ಕ ಮಟ್ಟಿಗೆ ಆಗುತ್ತದೆ.

“ನಾನು ಸತ್ತಿದ್ದೆ ಅಂದ್ಕೊಂಡು ಅಂಗಳದಲ್ಲಿ ಚಾಪೆ ಮೇಲೆ ಮಲಗಿಸಿದ್ರಂತೆ ಮ್ಯಾಮ್”

ನಾವು ಕನ್ನಡ ಅಧ್ಯಾಪಕರು ತರಗತಿಗಳಲ್ಲಿ ಕೆಲವೊಮ್ಮೆ ಅನೂಹ್ಯವಾದ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತೇವೆ. ಈಗ ನಾನು ವಿವರಿಸಲಿರುವುದು ಅಂತಹ ಒಂದು ಸನ್ನಿವೇಶ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ ೮ರ ಸಂದರ್ಭದಲ್ಲಿ ಇದನ್ನು ಹಂಚಿಕೊಳ್ಳುವುದು ಸೂಕ್ತ ಅನ್ನಿಸಿತು.

ಕನ್ನಡ ರತ್ನಕೋಶ, ಪಾರ್ವತಿ ಟೀಚರ್ ಮತ್ತು ಪಾನಿಪುರಿ

ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ ರತ್ನಕೋಶವು ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಕಲಿಸುವ ಅಧ್ಯಾಪಕರಿಗೆ ತುಂಬ ಉಪಯುಕ್ತವಾದ ಕೃತಿ. ಅದರಲ್ಲಿ ನೂರಾರು ಕನ್ನಡ ಪದಗಳಿಗೆ ಅಕಾರಾದಿಯಲ್ಲಿ ಅರ್ಥಗಳಿರುವುದು ಮಾತ್ರವಲ್ಲ, ಕನ್ನಡ ನುಡಿಗಟ್ಟುಗಳು, ಸಂಖ್ಯಾಯುತ ವಿಷಯಪದಗಳಿಗೆ ವಿಸ್ತರಣೆಗಳು(ಉದಹರಣೆಗೆ ಪಂಚಲೋಹ, ಸಪ್ತರ್ಷಿ, ನವರತ್ನ ಇತ್ಯಾದಿ)

“ಓ, ಸಂಪೂರ್ಣಾನ? ಶೂನ್ಯ ನೋಡಿ’’!!

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಿಂದ ರಾಜಾಜಿನಗರದ ಪ್ರವೇಶದ್ವಾರ (ಎಂಟ್ರೆನ್ಸ್)ಕ್ಕೆ ಹೋಗುವ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ. ಒಂದು ಬೆಳಿಗ್ಗೆ ನಾನು ಹೊಂಡಾ ಆಕ್ಟಿವಾ ಎಂಬ ನಾಮಧೇಯದ ನನ್ನ ದ್ವಿಚಕ್ರ ರಥದ ಹೊಟ್ಟೆ ತುಂಬಿಸಲು ಅಲ್ಲಿಗೆ ಹೋಗಿದ್ದೆ. ಸಾಲಲ್ಲಿ ನಿಂತಿದ್ದವಳು ನನ್ನ ಸರದಿ ಬಂದಾಗ ಪೆಟ್ರೋಲು ಹಾಕುವ ಹುಡುಗನಿಗೆ `ಪೂರ್ತಿ ಟ್ಯಾಂಕ್ ಹಾಕಪ್ಪ’ ಎಂದೆ.

ಪ್ರಣತಿ ಮತ್ತು ಕರ್ವಾಲೋ

ಪ್ರಣತಿ ನನ್ನ ಇಬ್ಬರು ಮಕ್ಕಳಲ್ಲಿ ಚಿಕ್ಕವಳು. ಈಗ ಅವಳಿಗೆ ಹದಿನೆಂಟು ವರ್ಷ. ಎರಡು ವರ್ಷಗಳ ಹಿಂದೆ ಅಂದರೆ ಅವಳಿಗೆ ಹದಿನಾರು ವರ್ಷವಾಗಿದ್ದಾಗ ನಡೆದಿದ್ದ ಪ್ರಸಂಗವೊಂದನ್ನು ಇಲ್ಲಿ ಬರೆಯುತ್ತಿದ್ದೇನೆ.

Page 15 of 17

Kannada Sethu. All rights reserved.