ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಆಟೋರಿಕ್ಷಾದ ಹಿಂದೆ ಬರೆದಿದ್ದ ಸಾಲು…ಕನ್ನಡನಾಡಿನಲ್ಲಿ‌ ಜ್ಞಾನ ಸಿಗುವುದು ಅನಿರೀಕ್ಷಿತ ಸ್ಥಳಗಳಲ್ಲೂ!

ಮೊನ್ನೆ ದಿನ, ಎಂದಿನಂತೆ ನನ್ನ ದ್ವಿಚಕ್ರಿಣಿಯಲ್ಲಿ( ಹೊಂಡಾ ಆಕ್ಟಿವಾ ಸ್ಕೂಟರು) ನಾನು ಕಾಲೇಜಿಗೆ ಹೋಗುತ್ತಿದ್ದಾಗ, ರಾಜಾಜಿನಗರ ಪ್ರವೇಶಸ್ಥಳದಲ್ಲಿ ( ಎಂಟ್ರೆನ್ಸ್) ರಸ್ತೆಗಳು  ಕೂಡುವ ಬಿಂದುವಿನಲ್ಲಿ ಸಂಚಾರದೀಪ ಕೆಂಪಾಯಿತು. ಸರಿ, ಗಾಡಿ ನಿಲ್ಲಿಸಿ, ಆ ದೀಪ ಹಸಿರಾಗಲು ಕಾಯುತ್ತಿದ್ದೆ. ಆಗ ನನ್ನ ಮುಂದೆ ನಿಂತಿದ್ದ ಆಟೋರಿಕ್ಷಾ ಒಂದರ ಹಿಂದೆ ಬರೆದಿದ್ದ ಬರಹವೊಂದು ನನ್ನ ಗಮನ ಸೆಳೆಯಿತು.  “ಹೇಳಿ ಮಾಡಿಸಿದ ಜೋಡಿ ಅನ್ನುವುದು ಸಿಗುವುದು ಚಪ್ಪಲಿಯ ವಿಷಯದಲ್ಲಿ ಮಾತ್ರ, ಇನ್ನೆಲ್ಲ‌ ಹೊಂದಾಣಿಕೆ” ಎಂಬ ಸಾಲು ಅದು! ಅಬ್ಬ ಅನ್ನಿಸಿತು‌. ಬದುಕಿನ […]

ಪ್ರೆಶರ್ ಕುಕ್ಕರ್ ಗೆ ಕನ್ನಡ ಪದ ಯಾವುದು?

ಬೆಳಿಗ್ಗೆ ಎದ್ದು ಅಡುಗೆ ಮಾಡುವುದು ಅಂದರೆ ‘ಕುಕ್ಕರಿಡುವುದು’ ಎಂಬಷ್ಟರ ಮಟ್ಟಿಗೆ ಪ್ರೆಶರ್ ಕುಕ್ಕರ್ ನಮ್ಮ ಜೀವನದ ಭಾಗ ಆಗಿಬಿಟ್ಟಿದೆ, ಅಲ್ಲವೆ? ಅಡಿಗೆ ಕೆಲಸದ ಸಮಯ, ಚಿಂತೆಗಳನ್ನು ಕಡಿಮೆ ಮಾಡುವ ಈ ಅಡುಗೆ ಉಪಕರಣವನ್ನು ಬಳಸದ ಮನೆಗಳು ನಮ್ಮ ನಾಡಿನಲ್ಲಿ ಅಪರೂಪ ಅನ್ನಬಹುದು. ಒತ್ತಡ ಹೆಚ್ಚಿಸಿ, ಆ ಮೂಲಕ ತಾಪಮಾನವನ್ನು ಹೆಚ್ಚಿಸಿ ಅಡುಗೆಯು ಬೇಗ ಆಗುವ ತಂತ್ರಜ್ಞಾನವನ್ನು ಕಂಡುಹಿಡಿದದ್ದು 1679 ರಲ್ಲಿ, ಫ್ರಾನ್ಸ್ ನ ಡೇನಿಸ್ ಪಾಪಿನ್ ಎಂಬ ಭೌತಶಾಸ್ತ್ರಜ್ಞರು. ಇದನ್ನು  ಸ್ಟೀಮ್ ಡೈಜೆಸ್ಟರ್, ಪಾಪಿನ್ಸ್ ಡೈಜೆಸ್ಟರ್ ಎಂದು […]

ಲೆಸ್ಸಾ ಪ್ಲಸ್ಸಾ?! ಕನ್ನಡನಾಡಿನಲ್ಲಿ ಕಾಫಿ ಸರಬರಾಜಿನ ಹೊಸ ಪರಿಭಾಷೆ

ನಮ್ಮ ಕನ್ನಡ ನಾಡಿನ ಜನಪ್ರಿಯ ಪೇಯ ಕಾಫಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ! ನನ್ನದೂ  ಸೇರಿ ನಮ್ಮ ನಾಡಿನ ಅನೇಕರ ದಿನ ಪ್ರಾರಂಭವಾಗುವುದೇ ಈ ಮೋಹಕ, ಘಮಘಮ ನಿದ್ರಾಉಚ್ಛಾಟಿನಿಯಿಂದ! ದಕ್ಷಿಣ ಭಾರತದ ಕಾಫಿಸೇವಕರಲ್ಲಿ 31 ಶೇಕಡಾ ಜನರು ಕರ್ನಾಟಕದವರೇ ಅಂತೆ! ಹದಿನೇಳನೆಯ ಶತಮಾನದಲ್ಲಿ ಬಾಬಾ ಬುಡನ್ ಅವರು ಯೆಮನ್ ನಿಂದ ಏಳು ಕಾಫಿಬೀಜಗಳನ್ನು ತಮ್ಮ ಊರುಗೋಲಿನಲ್ಲಿ ಅಡಗಿಸಿಕೊಂಡು ಚಿಕ್ಕಮಗಳೂರಿನಲ್ಲಿ ನೆಟ್ಟಿದ್ದು, ನಂತರ ಕರ್ನಾಟಕವು ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ನಾಡಾಗಿ‌ ಹೆಸರು ಪಡೆದದ್ದು ಇದನ್ನೆಲ್ಲ ಕೇಳಿ […]

ಹುಡುಗ ಮತ್ತು ಹುಡುಗಿ ಇಬ್ಬರಿಗೂ ಇಡಬಹುದಾದ ಹೆಸರುಗಳು! 

ವಸಂತ, ಮೋಹನ, ನವೀನ, ಅರುಣ, ಕಿರಣ, ಪ್ರಜ್ವಲ್ – ಇಂತಹ ಪದಗಳ ವಿಶೇಷತೆ ಬಲ್ಲಿರಾ? ಇದನ್ನು ಗಂಡು ಮಗು ಮತ್ತು ಹೆಣ್ಣುಮಗು ಇಬ್ಬರಿಗೂ ಇಡಬಹುದು.‌ ಬಹುದು ಏನು, ಇಡುತ್ತಾರೆ ಸಹ.‌   ಕೆಲವೊಮ್ಮೆ ಇಂತಹ ಹೆಸರುಗಳು ಗೊಂದಲ ಮಾಡಿಬಿಡುತ್ತವೆ.‌ ಉದಾಹರಣೆಗೆ ‘ಶರುರಾಜ್’ ಎಂಬ ಹೆಸರು.‌ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಒಮ್ಮೆ, ಚುನಾವಣಾ ಕೆಲಸಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ಇವರನ್ನು ಪುರುಷ ಎಂದು ಭಾವಿಸಿ ಆಯ್ಕೆ ಮಾಡಿದ್ದರು. ಆದರೆ ವಾಸ್ತವದಲ್ಲಿ ಅವರು ಒಬ್ಬ ಮಹಿಳೆ! ಇದೇ ರೀತಿಯಲ್ಲಿ ನಾನು […]

‘ಕನ್ನಡ ಕಲಿಯಿರಿ, ನಮ್ಮಲ್ಲೊಬ್ಬರಾಗಿರಿ’ -ಅಂಗಡಿಯೊಂದರಲ್ಲಿ ಕಂಡ ವಿಶಿಷ್ಟ ಕನ್ನಡ ಜಾಗೃತಿ ಸಂದೇಶ

ಈಚೆಗೆ ಜಯನಗರದ ಒಂದು ಅನುಕರಣಾ ಒಡವೆ ( ಇಮಿಟೇಷನ್ ಜುವೆಲ್ರಿ) ಅಂಗಡಿಗೆ ಹೋಗಿದ್ದೆ‌. ಅಲ್ಲಿ ಕಂಡ ಒಂದು ಆಂಗ್ಲಭಾಷಾ ಸೂಚನಾಫಲಕವು ನನಗೆ ಅಚ್ಚರಿ, ಸಂತಸ ತಂದದ್ದಲ್ಲದೆ ನನ್ನ ಮನಸ್ಸನ್ನು ಯೋಚನೆಗೂ ಹಚ್ಚಿತು. ಆ ಸೂಚನಾಫಲಕದಲ್ಲಿ ಹೀಗೆ ಬರೆಯಲಾಗಿತ್ತು‌ –  ‘Dear customer, if you live here and do not know Kannada, please learn and be one among us. Do not be a guest forever’. ( ಪ್ರಿಯ ಗ್ರಾಹಕ, […]

‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ – ಕನ್ನಡದ ಒಂದು ವಿಶಿಷ್ಟ ನುಡಿಗಟ್ಟು

ಪ್ರತಿಯೊಂದು ಭಾಷೆಗೂ ಅವರದ್ದೇ ಆದ ಕೆಲವು ವಿಶಿಷ್ಟ ನುಡಿಗಟ್ಟುಗಳಿರುತ್ತವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ. ಕನ್ನಡ ಭಾಷೆಯಲ್ಲಿರುವ ಅನೇಕ ನುಡಿಗಟ್ಟುಗಳಲ್ಲಿ ‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ ಎಂಬ ನುಡಿಗಟ್ಟು ಸಹ ಒಂದು‌. ಬೆಣ್ಣೆ ಎಂಬುದು ಕನ್ನಡ ನಾಡಿನ ಜನರು  ಬಹಳವಾಗಿ  ಇಷ್ಟ ಪಟ್ಟು ಬಳಸುವ ಹೈನು ಪದಾರ್ಥ.‌ ಯಾವುದಾದರೂ  ನಯವಾದ, ಮೃದುವಾದ ಪದಾರ್ಥವನ್ನು ಮೆಚ್ಚಬೇಕಾದರೆ  ಅದನ್ನು ಬೆಣ್ಣೆಗೆ ಹೋಲಿಸುವುದು ರೂಢಿ. ಆದರೆ ಬೆಣ್ಣೆಯಿಂದ ಕೂದಲು ತೆಗೆಯುವುದು ಎಂಬುದು ಕನ್ನಡದಲ್ಲಿ ಒಂದು ವಿಶೇಷ ಭಾಷಾ ಪ್ರಯೋಗ. ತುಂಬ ನಾಜೂಕಾದ […]

ಹೊಟ್ಟೆಕಿಚ್ಚು ಸರಿ. ‘ಹೊಟ್ಟೆಕಚ್ಚು’ ಅಂದ್ರೆ ಏನು!?

‘ಅಸೂಯೆ’ ಎಂಬ ಪದಕ್ಕೆ ಹೊಟ್ಟೆಕಿಚ್ಚು, ಹೊಟ್ಟೆಯುರಿ, ಮತ್ಸರ( ಇಂಗ್ಲಿಷ್ ನಲ್ಲಿ jealousy) ಎಂಬ ಸಂವಾದಿ ಪದಗಳಿರುವುದು ನಮಗೆ ಗೊತ್ತಲ್ಲವೆ? ಮೊನ್ನೆ ಒಂದು ಪುಸ್ತಕದ ವಿಷಯಕ್ಕಾಗಿ ನನಗೆ ಕರೆ ಮಾಡಿದ್ದ ಲೇಖಕ ಮಿತ್ರ ಹಾಡ್ಲಹಳ್ಳಿ ನಾಗರಾಜ್ ಅವರು ಮಾತಿನ ಮಧ್ಯೆ ‘ಹೊಟ್ಟೆಕಚ್ಚು’ ಎಂಬ ಪದವನ್ನು ಬಳಸಿದರು‌. ಆ ಪದದ ಬಗ್ಗೆ ಕುತೂಹಲ ಹುಟ್ಟಿ ನಾನು ಅದರ ಅರ್ಥ ಕೇಳಿದಾಗ ‘ಹೊಟ್ಟೆಯಲ್ಲಿ ಜಂತುಹುಳು ಮುಂತಾದ ಹುಳುಗಳ ಬಾಧೆಯಿಂದ ಮಕ್ಕಳು ಹೊಟ್ಟೆನೋವಿಂದ ನರಳುತ್ತಾರಲ್ಲ, ಅದನ್ನು ನಮ್ಮ ಕಡೆ ಹೊಟ್ಟೆಕಚ್ಚು ಅಂತಾರೆ’ ಅಂದರು. […]

ಅಪ್ಲೋಡ್, ಡೌನ್ಲೋಡ್ – ಇವುಗಳಿಗೆ ಕನ್ನಡ ಸಂವಾದಿ ಪದಗಳು ಯಾವುವು?

ಅಂತರ್ಜಾಲ ಆಧಾರಿತ ಇಂದಿನ ಕಾರ್ಯಪ್ರಪಂಚದಲ್ಲಿ ನಾವು ಬಹಳವಾಗಿ ಬಳಸುವ ಎರಡು ಪದಗಳು – ಅಪ್ಲೋಡ್ ಹಾಗೂ ಡೌನ್ಲೋಡ್. ಒಂದು ನಿರ್ದಿಷ್ಟ ದಾಖಲೆ, ಬರವಣಿಗೆ, ಚಿತ್ರವನ್ನು ಯಾವುದಾದರೂ ಅಂತರ್ಜಾಲ ತಾಣಕ್ಕೆ ಏರಿಸುವುದು, ಸೇರಿಸುವುದು ‘ಅಪ್ಲೋಡ್’ ಅನ್ನಿಸಿಕೊಳ್ಳುತ್ತೆ. ಅಲ್ಲವೆ? ಈ ಪದಕ್ಕೆ ‘ಮೇಲ್ಸಲ್ಲಿಕೆ’ ಎಂಬ ಕನ್ನಡ ಪದ ಸೂಕ್ತವಾಗಬಹುದೆ?  ‘ಮೇಲ್ಸಲ್ಲಿಕೆ’ ಪದವನ್ನು ನಾನು ಕೆಲವು ಸಲ ಬಳಸುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಯಾವುದಾದರೂ ಜಾಲತಾಣದಿಂದ ಅಥವಾ ಮಿಂಚಂಚೆ ವಿಳಾಸದಿಂದ ಒಂದು  ನಿರ್ದಿಷ್ಟ ದಾಖಲೆ, ಬರವಣಿಗೆ ಅಥವಾ ಚಿತ್ರವನ್ನು ನಮ್ಮ ಗಣಕಯಂತ್ರ […]

ಕಪ್ಪೆಚಿಪ್ಪಿನಲ್ಲಿ ಕಪ್ಪೆ ಇರುತ್ತಾ?

ಮೊನ್ನೆ ಹೀಗೇ ತತ್ರಾಪಿ ಮಾತಾಡ್ತಾ (ಅದೂ ಇದೂ, casual ಎಂಬ ಅರ್ಥದಲ್ಲಿ) ನನ್ನ  ಚಿಕ್ಕ ಮಗಳು  “ಅಮ್ಮ ಸೀ ಶೆಲ್ ಗೆ ಕಪ್ಪೆಚಿಪ್ಪು ಅಂತಾರಲ್ಲ, ಯಾಕೆ? ಕಪ್ಪೆಚಿಪ್ಪಲ್ಲಿ ಕಪ್ಪೆ ಇರಲ್ಲ ಅಲ್ವಾ?” ಅಂತ ಕೇಳಿದಳು. ಅವಳ ಪ್ರಶ್ನೆ ನನ್ನನ್ನ ತುಂಬ ಯೋಚನೆಗೆ ಹಚ್ತು.  ಸಮುದ್ರ ದಂಡೆಗೆ ಹೋದವರು ಅಲ್ಲಿ ಬಿದ್ದಿರುವ ವಿವಿಧ ಅಳತೆ, ಬಣ್ಣಗಳ ಚಿಪ್ಪುಗಳನ್ನು ನೋಡಿದಾಗ ಅವನ್ನು ಆರಿಸಿಕೊಳ್ಳುವುದು, ತಮ್ಮ ಸಮುದ್ರ ಪ್ರವಾಸದ ನೆನಪಿಗಾಗಿ ಮನೆಗೆ ತಂದು ಇಟ್ಟುಕೊಳ್ಳುವುದು ಹೀಗೆ ಮಾಡುತ್ತಾರೆ ಅಲ್ಲವೆ? ಇಂಥವನ್ನು ಕನ್ನಡದಲ್ಲಿ […]

ಇಟ್ ಅದು ಬಟ್ ಆದ್ರೆ ವ್ಹಾಟ್ ಏನು! ಕಂಗ್ಲಿಷ್ ದ್ವಿರುಕ್ತಿಗಳ ತಮಾಷೆ ಪ್ರಪಂಚ

ಕಂಗ್ಲಿಷ್ ದ್ವಿರುಕ್ತಿಗಳು! ಹಾಂ, ಇವತ್ತಿನ ‘ಕನ್ನಡ ಪ್ರಸಂಗ’ದಲ್ಲಿ ನಾನು ಪ್ರಸ್ತಾಪಿಸಬೇಕೆಂದಿರುವುದು — ಕನ್ನಡ ಭಾಷೆಯಲ್ಲಿ, ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳ ಕನ್ನಡದಲ್ಲಿ ಆಗಾಗ್ಗೆ ಬಳಕೆಯಾಗುವ ಕಂಗ್ಲಿಷ್ ದ್ವಿರುಕ್ತಿಗಳ ಬಗ್ಗೆ. (ಕಂಗ್ಲಿಷ್ ಅಂದ್ರೆ ಇಂಗ್ಲಿಷ್ ಭಾಷೆ ಧಾರಾಳವಾಗಿ ಬೆರೆತ ಕನ್ನಡ ಅಂತ ಎಲ್ಲರಿಗೂ ಗೊತ್ತಿರುತ್ತೆ.) ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ನಮ್ಮ ತಾಯಿಯವರು, ನಾವು ಚಿಕ್ಕವರಿದ್ದಾಗ ‘ಇಟ್ ಅದು ಬಟ್ ಆದ್ರೆ ವ್ಹಾಟ್ ಏನು? ‘ ಎಂದು ಹೇಳಿ ನಮ್ಮನ್ನು ನಗಿಸುತ್ತಿದ್ದರು‌‌‌. ಇಂಗ್ಲಿಷ್ ಪದ ಮತ್ತು ಅದರ […]

Page 3 of 17

Kannada Sethu. All rights reserved.