ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಕ್ಯಾಲೆಂಡರ್ ಗೆ ಕನ್ನಡದಲ್ಲಿ ಯಾವ ಪದ ಬಳಸಬಹುದು…?

ನಾವು ವ್ಯವಹಾರ ಪ್ರಪಂಚದಲ್ಲಿ ಬಳಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ನಲ್ಲಿ ಜನವರಿ ಮೊದಲು ತಿಂಗಳು ತಾನೆ. ಈ ತಿಂಗಳಲ್ಲಿ ಎಲ್ಲರೂ ಹೊಸ ಕ್ಯಾಲೆಂಡರ್ ಕೊಳ್ಳುವುದರಲ್ಲಿ ಉದ್ಯುಕ್ತರಾಗ್ತಾರೆ. ಸರ್ಕಾರ, ವಿವಿಧ ಸಂಸ್ಥೆಗಳು, ವ್ಯಾಪಾರಕೇಂದ್ರಗಳು ತಮ್ಮ ತಮ್ಮ ಕ್ಯಾಲೆಂಡರ್ ಗಳನ್ನು ಮುದ್ರಿಸುತ್ತಾರೆ, ನಾವು ನಮಗೆ ಹೊಂದುವಂಥದನ್ನು ಕೊಂಡು ವರ್ಷವಿಡೀ ಬಳಸುತ್ತೇವೆ.  ಸರಿ, ಅನೇಕ ಕನ್ನಡ ಅಧ್ಯಾಪಕರಂತೆ ನನ್ನನ್ನೂ ಕಾಡಿದ ಒಂದು ಪ್ರಶ್ನೆ ಅಂದರೆ ‘ಕ್ಯಾಲೆಂಡರ್ ಗೆ ಕನ್ನಡ ಪದ ಏನು? ‘ ಎಂಬುದು. ನಿಘಂಟಿನಲ್ಲಿ ನೋಡಿದರೆ ಪಂಚಾಂಗ ಎಂಬ ಪದ ಸಿಕ್ಕುತ್ತೆ. […]

ವಲ್ಲಿಬಟ್ಟೆ, ಬೈರಾಸ, ಉತ್ತರೀಯ….ಅರೆರೆರೆ….!

ಈ ನಡುವೆ ನಮ್ಮ ಮನೆಗೆ ಚಾಮರಾಜನಗರದ ಕಡೆಯ ಪರಿಚಿತರೊಬ್ಬರು ಬಂದಿದ್ದರು. ರಾತ್ರಿ ಮಲಗಿಕೊಂಡಿದ್ದು ಬೆಳಿಗ್ಗೆ ಅವರು ಎದ್ದಾಗ, ಸ್ನಾನ ಮಾಡಲು ಹೊರಟವರು ‘ಒಂದು ವಲ್ಲಿಬಟ್ಟೆ ಇದ್ರೆ ಕೊಡ್ತೀರಾ?’ ಎಂದು ಕೇಳಿದರು. ನನಗೆ ತಕ್ಷಣ ಅರ್ಥ ಆಗಲಿಲ್ಲ. ‘ಹಾಗಂದ್ರೆ?’ ಎಂದು ಕೇಳಿದೆ. “ಅದೇ ಸ್ನಾನ ಮಾಡಿ ಮೈ ಒರೆಸ್ಕೋತೀವಲ್ಲ, ಅದು” ಅಂದರು. ಅಲ್ಲೇ ಇದ್ದು ಇದನ್ನು ಕೇಳಿಸಿಕೊಂಡ ನಮ್ಮನೆಯವರು “ಟವಲ್ ಕೇಳ್ತಿದಾರೆ ಕಣೆ, ಕೊಡು” ಅಂದರು. ಅರೆ! ಟವೆಲ್ ಗೆ ‘ವಲ್ಲಿಬಟ್ಟೆ’ ಅನ್ನುತ್ತಾರಾ! ನನಗೆ ಅಚ್ಚರಿ ಆಯ್ತು.  ಮಂಗಳೂರಿನ […]

ಓಹ್ ಕೈಚೌಕವೇ….ಎಲ್ಲಿ ಹೋದೆ ನೀನು!!

ನಲವತ್ತು ಐವತ್ತು ವರ್ಷಗಳ ಹಿಂದೆ ಅಂದರೆ ನಮ್ಮ ಬಾಲ್ಯಕಾಲದಲ್ಲಿ ಕರವಸ್ತ್ರ ಎಂಬ ಪದಕ್ಕೆ ( hand kerchief – ಇದಕ್ಕೆ ಮೂಲ‌ – ಫ್ರೆಂಚ್ ಭಾಷೆಯ ಪದ‌ – couvercheif – ತಲೆಯನ್ನು‌ ಮುಚ್ಚಿಕೊಳ್ಳಲು ಬಳಸುತ್ತಿದ್ದ ಚೌಕಾಕಾರದ ಅಥವಾ ತ್ರಿಕೋನಾಕಾರದ ಬಟ್ಟೆ)  ಸಂವಾದಿಯಾಗಿ ಮನೆಗಳಲ್ಲಿ ಬಳಸುತ್ತಿದ್ದ ಪದ ಅಂದರೆ ಕೈಚೌಕ.‌ ಆಗಿನ‌ ಕಾಲದಲ್ಲಿ ಮನೆಯಿಂದ ಹೊರಗೆ ಹೊರಟಾಗ, ಅಥವಾ ಶೀತ-ಜ್ವರದ ಬಾಧೆ ಇದ್ದಾಗ ಅಮ್ಮ ತನ್ನ ಮಕ್ಕಳಿಗೆ ಹೇಳಿಯೇ ಹೇಳುತ್ತಿದ್ದ ವಾಕ್ಯ ಅಂದ್ರೆ ‘ಕೈಚೌಕ ತಗೋ, ಮರೀಬೇಡ’. […]

‘ಕಲ್ಮಿನೇಟ್’ ಎಂಬ ಹೆಸರಿನ ತರಕಾರಿ ಅಂಗಡಿ!

ನೀವು ಎಂದಾದರೂ ಬಿಡುವಾಗಿದ್ದಾಗ, ಬೆಳಿಗ್ಗೆ 7-9 ಗಂಟೆ ಸಮಯದಲ್ಲಿ ಬೆಂಗಳೂರಿನ ನಮ್ಮ ವಿಜಯನಗರಕ್ಕೆ ಬನ್ನಿ. ಆಗ ವಿಜಯನಗರ ಕ್ಲಬ್ ಇರುವ ಮೊದಲನೆಯ ಮುಖ್ಯರಸ್ತೆಗೆ,  ಒಂಬತ್ತನೇ ಅಡ್ಡರಸ್ತೆಯೆಂಬ,  ಹಂಪಿನಗರದ ಈಜುಕೊಳ ರಸ್ತೆಯು ಸೇರುವ ವೃತ್ತಕ್ಕೆ ಬಂದಿರೆಂದರೆ, ಅಲ್ಲೇ ಪಕ್ಕದಲ್ಲಿ, ನಿಮಗೆ ‘ಕಲ್ಮಿನೇಟ್’ ಎಂಬ ‘ವಿಲಕ್ಷಣ’ ಹೆಸರುಳ್ಳ ತರಕಾರಿ ಅಂಗಡಿ ಕಾಣಿಸುತ್ತದೆ. ಅಂಗಡಿ ಮಾತ್ರವಲ್ಲ,  ಅದರ ತುಂಬ ಸಿಹಿತಿಂಡಿಗೆ ಇರುವೆ ಮುತ್ತಿದಂತೆ ತುಂಬಿರುವ ಜನರೂ ಕಾಣಿಸುತ್ತಾರೆ.  ಬಹಳ ತಾಜಾ ತರಕಾರಿಯನ್ನು ಕಡಿಮೆ ಬೆಲೆಗೆ ಮಾರುವುದರಿಂದ ಇದು ನಮ್ಮ ಬಡಾವಣೆಯಲ್ಲಿ ತುಂಬ […]

“ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ!”. 

ಕರ್ನಾಟಕದ ಸರಳ, ಪೌಷ್ಟಿಕ ಹಾಗೂ ಪ್ರಖ್ಯಾತ ಆಹಾರಗಳಲ್ಲಿ ರಾಗಿಮುದ್ದೆ ಒಂದು. ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಇದು  ಪ್ರಧಾನ‌ ದೈನಿಕ  ಆಹಾರವಾಗಿದೆ (ಸ್ಟೇಪಲ್ ಫುಡ್ ಎಂಬ ಅರ್ಥದಲ್ಲಿ). ಇದಕ್ಕೆ ‘ಹಿಟ್ಟು’ ಎಂಬ ಇನ್ನೊಂದು ಹೆಸರಿದೆ! ಮತ್ತೆ, ಇನ್ನೂ ಬೇಯಿಸದ ರಾಗಿಹಿಟ್ಟಿಗೆ ರಾಗಿಹಸಿಟ್ಟು (ರಾಗಿ ಹಸಿಹಿಟ್ಟು) ಅನ್ನುತ್ತಾರೆ ನೋಡಿ!  ತಾಯಿ ಮಂಗಳೂರಿನವರಾಗಿದ್ದು ತಂದೆ ತುಮಕೂರಿನವರಾಗಿದ್ದ ನಮ್ಮ ಮನೆಯಲ್ಲಿ ರಾಗಿಮುದ್ದೆ ದೈನಿಕ ಆಹಾರವಾಗಿರಲಿಲ್ಲ, ಆದರೆ ಅಪರೂಪಕ್ಕೆ ಮಾಡುವ ಒಂದು ವಿಶೇಷ ಆಹಾರವಾಗಿತ್ತು. ‘ರಾಗಿ‌ಮುದ್ದೆ ಮಾಡಿದ್ರೆ ಅದಕ್ಕೆ ಸರಿಯಾದ  ಹುಳಿ(ಸಾಂಬಾರ್) ಇರ್ಬೇಕು, […]

ಉಪಹಾರವೋ…ಉಪಾಹಾರವೋ…?

ನಗರ ಅಥವಾ ಪೇಟೆಯ ರಸ್ತೆಗಳಲ್ಲಿ ಓಡಾಡುವಾಗ ‘ಉಪಹಾರ ಗೃಹ’ ಎಂಬ ಪದವನ್ನು, ಮತ್ತು ಆಹ್ವಾನ ಪತ್ರಿಕೆಗಳಲ್ಲಿ ‘ಸಭೆಗೆ ಮುಂಚೆ ಲಘು ಉಪಹಾರದ ವ್ಯವಸ್ಥೆ ಇದೆ’ ಎಂಬ ಪದಪ್ರಯೋಗಗಳನ್ನು ನಾವೆಲ್ಲ ಗಮನಿಸಿರುತ್ತೇವಲ್ಲ.‌.‌ ಅದನ್ನು ನೋಡಿದಾಗೆಲ್ಲ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಚಿಮ್ಮುತ್ತಿತ್ತು. ಇದು ಉಪಹಾರವೋ ಉಪಾಹಾರವೋ ಎಂಬ ಪ್ರಶ್ನೆ ಅದು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ‌ನಿಘಂಟನ್ನು ನೋಡಿದಾಗ ಗೊಂದಲ ತಿಳಿಯಾಯಿತು.‌‌ ನಿಘಂಟಿನಲ್ಲಿ ಉಪಹಾರಕ್ಕೂ ಉಪಾಹಾರಕ್ಕೂ ತಿಂಡಿ, ಅಲ್ಪಾಹಾರ ಎಂದೇ ಅರ್ಥವಿದೆ (ಬೇರೆ ಅರ್ಥಗಳ ಜೊತೆಗೆ). ಒಂದೇ ಅರ್ಥ […]

ಊರೊಂದರ ಹೆಸರಿನಲ್ಲಿ ನವರಸ!

ನವರಸ ಅಂದ ತಕ್ಷಣ ಕನ್ನಡ ಸಾಹಿತ್ಯ ಮತ್ತು ಭರತನಾಟ್ಯ ಕ್ಷೇತ್ರದ ನನ್ನಂಥವರಿಗೆ ನೆನಪಾಗುವುದು ಶೃಂಗಾರ, ವೀರ, ಕಾರುಣ್ಯ, ಅದ್ಭುತ.‌..ಇಂಥವು ಒಂಬತ್ತು ಇರುವ ಬೇರೆ ಬೇರೆ ಮನಃಸ್ಥಿತಿಗಳು, ಕಲಾಸಂಬಂಧೀ ನೆಲೆಗಳು. ‌ಭರತನ ಕಾವ್ಯಮೀಮಾಂಸೆಯನ್ನು ಅಡಿಗಲ್ಲಾಗಿ ಇಟ್ಟುಕೊಂಡ ಎಲ್ಲ ಲಲಿತಕಲೆಗಳಿಗೂ ನವರಸಗಳು ಸಮಾನ ಅಂಶ‌ವಾಗಿರುತ್ತವೆ.‌ ಹೀಗಿರುವಾಗ ಪ್ರಯಾಣವೊಂದರಲ್ಲಿ ನವರಸ ಎಂಬುದು ಒಂದು ಊರಿನ ಹೆಸರಲ್ಲಿ ಕಾಣಿಸಿಕೊಂಡುಬಿಟ್ಟರೆ ಎಂತಹ ಸೋಜಿಗ ಅನ್ನಿಸಬಹುದು! ಅಲ್ಲವೇ?  ಈಚೆಗೆ ಸಾಹಿತ್ಯ ಕಾರ್ಯಕ್ರಮವೊಂದಕ್ಕಾಗಿ‌ ಬಿಜಾಪುರ( ಈಗ ವಿಜಯಪುರ) ಕ್ಕೆ ಹೋಗಬೇಕಿತ್ತು ನಾನು. ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಬಿಜಾಪುರದಲ್ಲಿ ಇಳಿದವಳನ್ನು […]

“ಮದರ್ ಟಂಗ್ ಕನ್ನಡ …ಫಾದರ್ ಟಂಗ್ ತಮಿಳ್ ಮ್ಯಾಮ್!!”

ನಾವು ಅಧ್ಯಾಪಕ ವೃತ್ತಿಯವರು ವಿದ್ಯಾರ್ಥಿಗಳೊಂದಿಗೆ ಒಡನಾಡುವಾಗ, ಕೆಲವೊಮ್ಮೆ ತುಸು ವಿನೋದಮಯ ಅನ್ನಬಹುದಾದ ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತೇವೆ. ಕೆಲವು ದಿನಗಳ ಹಿಂದೆ ನಡೆದ ಇಂತಹ ಒಂದು ಪ್ರಸಂಗವನ್ನು ಇಲ್ಲಿ ಹೇಳುತ್ತಿದ್ದೇನೆ ನೋಡಿ.  ನಾನು ಕನ್ನಡ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಮಹಾರಾಣಿ ಕಾಲೇಜಿನಲ್ಲಿ ಈಚೆಗೆ ಮೊದಲನೆಯ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಒಂದು ಕಿರುಪರೀಕ್ಷೆ ಕೊಟ್ಟಿದ್ದೆ. ಈ ಪರೀಕ್ಷೆಗೆ ಸಂಬಂಧಿಸಿದ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಮೂರು ಉತ್ತರಪತ್ರಿಕೆಗಳು ಒಂದೇ ರೀತಿ ಇದ್ದು, ಈ ವಿದ್ಯಾರ್ಥಿನಿಯರು ಒಬ್ಬರಿಂದ ಒಬ್ಬರು ನಕಲು ಮಾಡಿದ್ದಾರೆ ಎಂಬುದು ನನಗೆ ಅರಿವಾಯಿತು. […]

ವೃತ್ತಿಯಿಂದ  ಆಟೋ ಚಾಲಕ, ಪ್ರವೃತ್ತಿಯಿಂದ ಕನ್ನಡ ಚಿಂತಕ

ಸಾಮಾನ್ಯವಾಗಿ ನಾನು ಕಾಲೇಜಿಗೆ ಹೋಗುವುದು ಸ್ಕೂಟರಮ್ಮ ಎಂದು ನಾನು‌ ಮುದ್ದಿನಿಂದ ಕರೆಯುವ  ದ್ವಿಚಕ್ರ ವಾಹನದಲ್ಲಿ‌‌. ಆದರೆ ಒಮ್ಮೊಮ್ಮೆ ಮೆಟ್ರೋ ರೈಲಿನಲ್ಲಿ ಹೋಗುವುದುಂಟು.‌ ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ವಿಶ್ವೇಶ್ವರಯ್ಯ ನಿಲ್ದಾಣ ತಲುಪಿದವಳು ಮಳೆ ಬರುತ್ತಿದ್ದ ಕಾರಣ ನಿಲ್ದಾಣದ ಬಾಗಿಲಲ್ಲೇ  ನಿಲ್ಲಿಸಿದ್ದ ಆಟೋರಿಕ್ಷಾ ಬಳಿ ಹೋಗಿ, ಚಾಲಕರನ್ನು ”ಮಹಾರಾಣಿ ಕಾಲೇಜಿಗೆ ಬರ್ತೀರಾ?” ಎಂದು ಕೇಳಿದೆ.  “ಸರಿ, ಬನ್ನಿ” ಅಂದ ಚಾಲಕರು ನಾನು ಕುಳಿತುಕೊಳ್ಳುತ್ತಿದ್ದಂತೆಯೇ ‘ಫೋನ್ ಪೇನಾ, ಕ್ಯಾಷಾ?’ ಅಂತ ಕೇಳಿದರು.‌ ನಾನು ‘ಹಣ ಕೊಡ್ತೀನಪ್ಪ’ ಅಂದೆ. “ಹಣ! ನೀವು ಹಣ […]

ಕನ್ನಡ ಪಾಠವನ್ನು ಕುರಿತು ಇಂಗ್ಲಿಷ್ ಲಿಪಿಯಲ್ಲಿನ ಕನ್ನಡದಲ್ಲಿ ಹಿಮ್ಮಾಹಿತಿ‌( feed back) ಬರೆದ ವಿದ್ಯಾರ್ಥಿನಿ!

ಶೈಕ್ಷಣಿಕ ವರ್ಷದ ಅಥವಾ ಅರ್ಧವರ್ಷದ ಕೊನೆಯಲ್ಲಿ ನಾವು ಅಧ್ಯಾಪಕರು ನಮ್ಮ‌ ವಿದ್ಯಾರ್ಥಿಗಳಿಂದ ಹಿಮ್ಮಾಹಿತಿ (ಫೀಡ್ ಬ್ಯಾಕ್) ತೆಗೆದುಕೊಳ್ಳುವುದುಂಟು‌. ‘ನಾವು ಮಾಡಿದ ಪಾಠ ಅವರಿಗೆ ಅರ್ಥವಾಗಿದೆಯೇ?, ನಮ್ಮ ಪಾಠದ ರೀತಿಯಲ್ಲಿ ಬದಲಾವಣೆ ಬೇಕೇ?, ಅವರು ನಮ್ಮ ಪಾಠದಿಂದ ಯಾವ ಹೊಸ ಸಂಗತಿಗಳನ್ನು ಕಲಿತರು?’ …. ಈ ಮುಂತಾಗಿ ಅವರಿಂದ ಅಭಿಪ್ರಾಯ, ಅನಿಸಿಕೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಡುವಂತೆ ಹೇಳುತ್ತೇವೆ. ಅವರು ಅದರಲ್ಲಿ ‌ತಮ್ಮ  ಹೆಸರು‌ ಬರೆಯುವುದು ಕಡ್ಡಾಯವೇನಲ್ಲ.‌ ಅಂದ ಹಾಗೆ, ಒಳ್ಳೆಯ ಅಭಿಪ್ರಾಯ ‌ಮಾತ್ರವಲ್ಲ, ಪಾಠದ ವಿಷಯದಲ್ಲಿ ಅವರಿಗೆ ಉಂಟಾದ ಅತೃಪ್ತಿ, […]

Page 4 of 16

Kannada Sethu. All rights reserved.