ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

”ನೆರವಿಗೆ ಹೋಗಲ್ವಾ ನೀವು?…!”

ಒಮ್ಮೊಮ್ಮೆ ಹೊಸ ಕನ್ನಡ ಪದಗಳು ಅನಿರೀಕ್ಷಿತ ಸ್ಥಳಗಳಲ್ಲಿ ಸಿಕ್ಕಿಬಿಡುತ್ತವೆ. ಈಚೆಗೆ ಒಂದು ಸಲ, ರಾತ್ರಿ 9.00 ಗಂಟೆಯ ಸಮಯದಲ್ಲಿ ಹೆಬ್ಬಾಳದ ಕಡೆಯಿಂದ, ನಮ್ಮ ಮನೆ ಇರುವ ಹಂಪಿನಗರಕ್ಕೆ ಓಲಾ ಕ್ಯಾಬ್ ಹಿಡಿದು ಬರುತ್ತಿದ್ದೆ. ಆ ಗಾಡಿಯ ಚಾಲಕನು ಅಂದು ತುಂಬ ಮಾತಾಡುವ ಉಮೇದಿನಲ್ಲಿದ್ದ. ಇಡೀ ದಿನ ಕೆಲಸ ಮಾಡಿದ ಆಯಾಸದಿಂದಾಗಿ‌ ಪ್ರತಿಯಗಿ ಮಾತಾಡುವ ಹುರುಪು ನನ್ನಲ್ಲಿ ಅಷ್ಟೇನೂ ಇರಲಿಲ್ಲ‌‌. ಆದರೂ ಸೌಜನ್ಯಕ್ಕೆಂದು  ಅವನ ಮಾತುಗಳನ್ನು ಕೇಳಿಸಿಕೊಂಡು‌ ಹೂಂಗುಟ್ಟುತ್ತಿದ್ದೆ. ತಾನು‌ ಭಾಗವಹಿಸಿದ್ದ ಒಂದು ಭರ್ಜರಿ ಮದುವೆಯ ಬಗ್ಗೆ ಮಾತಾಡುತ್ತಿದ್ದನವನು.  […]

ಕನ್ನಡ ಉಳಿಸುವ ಒಂದೇ ವಿಧಾನ ಅಂದರೆ …

ಒಬ್ಬ ಕನ್ನಡಾಭಿಯಾನಿಯಾಗಿ ಹಾಗೂ ಕನ್ನಡದ ಅಧ್ಯಾಪಕಿಯಾಗಿ ಕನ್ನಡದ ಉಳಿವು, ಬೆಳವಣಿಗೆಗಳ ಬಗ್ಗೆ ನಾನು ಯೋಚಿಸುತ್ತಾ ಇರ್ತೇನೆ‌. ಕರ್ನಾಟಕ ಏಕೀಕರಣ ಆಗಿ ಎಪ್ಪತ್ತು ವರ್ಷಗಳಲ್ಲಿ ಕೃಷ್ಣೆ, ತುಂಗೆ, ಕಾವೇರಿಗಳಲ್ಲಿ ಬೇಕಾದಷ್ಟು ನೀರು ಹರಿದಿದೆ‌. ಇಷ್ಟು ವರ್ಷಗಳಲ್ಲಿ ನಡೆದ ಚಳುವಳಿಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ, ಉದ್ಯಮಿಗಳು ಹಾಗೂ ಜನಸಾಮಾನ್ಯರಿಂದ ಕನ್ನಡದ ಉಳಿವು ಮತ್ತು ಬೆಳವಣಿಗೆಗಳನ್ನು ಕುರಿತು ಆಗಿರುವ ಕೆಲಸ ಮತ್ತು ಚಿಂತನೆಗಳ ಸಾರಸಂಗ್ರಹವನ್ನು ಭಟ್ಟಿ ಇಳಿಸಿ ಹೇಳುವುದಾದರೆ, ಕನ್ನಡವನ್ನು ಗರಿಷ್ಠ ಮಟ್ಟದಲ್ಲಿ ಬಳಸುವುದು ಮತ್ತು ಕನ್ನಡಿಗರನ್ನು ಕಷ್ಟ‌ನಷ್ಟಗಳಿಗೆ ಒಳಗಾಗದಂತೆ […]

 “ಹಾಂ…ಗೊತ್ತು ಮೇಡಂ. ತುಂಡಂಗಿ!”

 ಪ್ರತಿ ಕನ್ನಡ ತರಗತಿಯಲ್ಲೂ ಒಂದು ಹೊಸ ಪದ ಹಾಗೂ ಕನ್ನಡ ಸೂಕ್ತಿ ಬರೆಸಿ ತರಗತಿ ಪ್ರಾರಂಭಿಸುವುದು ನನ್ನ ಅಭ್ಯಾಸ‌.‌ ಇದರ ಭಾಗವಾಗಿ ಈಚೆಗೆ ಒಂದು ದಿನ ಮಹಾರಾಣಿ ಕಾಲೇಜಿನ ನನ್ನ  ಒಂದು ತರಗತಿಯಲ್ಲಿ ‘ತೊಂಡಂಗಿ’ ಎಂಬ ಪದ ಬರೆದೆ‌. ಈ‌ ಪದದ ಅರ್ಥ ಜಿರಳೆ ಎಂದು.  ಹೆಣ್ಣು ಮಕ್ಕಳು ಮಾತ್ರ ಇದ್ದ ಒಂದು ಪದವಿ ತರಗತಿ ಅದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಜಿರಳೆಯನ್ನು ನೋಡಿದರೆ ಅಸಹ್ಯ ಪಟ್ಟು ಮಾರು ದೂರ ಎಗರುತ್ತಾರಲ್ಲವೆ? ಅದನ್ನು ನೆನೆದು ನಾನು ತಮಾಷೆಗೆ […]

ಅಡಿಗರ ಹುಟ್ಟುಹಬ್ಬದ ದಿನ ಅವರ ಶಬ್ದ ಪ್ರೀತಿಯ ನೆನಪು

ಇಂದು ಫೆಬ್ರವರಿ 18. ಕವಿ ಅಡಿಗರ ಜನ್ಮ ದಿನ( ಜನನ – 18-02-2018). ಅಡಿಗರು ಅಂದರೆ ನಮ್ಮ ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಮುಖ್ಯರಾದ ಮೊಗೇರಿ ಗೋಪಾಲಕೃಷ್ಣ ಅಡಿಗರು. ಇವರು ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದವರು‌. ಅವರ ಕವಿತೆಗಳೆಂದರೆ ಅಪರೂಪದ ಶಬ್ಧಗಳ ಖಜಾನೆಯೇ ಸರಿ. ಒಂದು ಉದಾಹರಣೆ ಕೊಡುವುದಾದರೆ, ಅವರ ಕವಿತೆಯೊಂದರಲ್ಲಿ ‘ಷಾಪಸಂದ್’ ಎಂಬ ಪದ ಬರುತ್ತದೆ. ಹಿಂದೊಮ್ಮೆ ಜ್ಞಾನಭಾರತಿಯಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ನಾನು ಆ ಕವಿತೆಯನ್ನು ಪಾಠ ಮಾಡಬೇಕಾಗಿದ್ದುದರಿಂದ,  ‘ಷಾಪಸಂದ್’ ಪದದ ಅರ್ಥ […]

“ಲೇಖನ ಚಿಹ್ನೆಗಳು ಅಂದ್ರೆ ಏನೇ?”

ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಒಮ್ಮೊಮ್ಮೆ ಬಹು ಸ್ವಾರಸ್ಯಕರ ಅನುಭವಗಳಾಗುತ್ತವೆ‌. ಈಚೆಗೆ ಬಿ.ಸಿ.ಎ. ತರಗತಿಯೊಂದರಲ್ಲಿ ಕನ್ನಡ ವಿಷಯದ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯರಿಗೆ ಪಾಠಕ್ಕೆ ಸಂಬಂಧ ಪಟ್ಟ ವಿಷಯವೊಂದನ್ನು ಬರೆಸುತ್ತಿದ್ದೆ‌. ನನ್ನ ಅನುಭವದಲ್ಲಿ, ಲೇಖನ ಚಿಹ್ನೆಗಳಿಗೆ ವಿದ್ಯಾರ್ಥಿಗಳು ಕೊಡಬೇಕಾದಷ್ಟು ಗಮನ ಕೊಡುವುದಿಲ್ಲ. ಹಾಗಾಗಿ ಅಂದು ಬರೆಸುತ್ತಿದ್ದಾಗ “ನೋಡಿ ಮಕ್ಳೇ, ಲೇಖನ ಚಿಹ್ನೆಗಳನ್ನು ಸರಿಯಾಗಿ ಹಾಕ್ಬೇಕು ನೀವು. ದಾರದಲ್ಲಿ ಮಣಿಗಳನ್ನು ಪೋಣಿಸಿ ಕೊನೆಯಲ್ಲಿ ಗಂಟು ಹಾಕೋದು ಎಷ್ಟು ಮುಖ್ಯಾನೋ, ವಾಕ್ಯದಲ್ಲಿ ಲೇಖನ ಚಿಹ್ನೆಗಳನ್ನು ಹಾಕೋದು ಅಷ್ಟೇ ಮುಖ್ಯ. ಗಂಟು ಹಾಕದ ಮಣಿಸರದಿಂದ […]

ಪಂದಿಕರಿ, ಕೂಟುಕರಿ, ಕಡಲ ಕರಿ, ವೆಜಿಟೆಬಲ್ ಕರಿ, ಉಪ್ಕರಿ…ಅರೆರೆ ಈ ‘ಕರಿ’ ಎಲ್ಲಿಂದ ಬಂತ್ರಿ!?

ಕೊಡಗಿನ ಜನ ಪಂದಿಕರಿ‌ ಎಂಬ ಪದ ಬಳಸುವುದನ್ನು ನಾವು ಕೇಳುತ್ತೇವೆ ಅಲ್ವಾ? ಕೊಡವ ಭಾಷೆಯಲ್ಲಿ ಮಲಯಾಳಂ ಪದಗಳೂ ಇರ್ತವೆ. ಮಲಯಾಳಿಗಳು ಸಾರಿಗೆ/ಪಲ್ಯಕ್ಕೆ ಕರಿ ಎಂಬ ಪದವನ್ನು ಕೆಲವೊಮ್ಮೆ ಬಳಸ್ತಾರೆ. ಕಡಲ ಕರಿ, ಕೂಟುಕರಿ..ಹೀಗೆ. ಇನ್ನು ನಾವು ದರ್ಶಿನಿ ಹೋಟೆಲ್ ಗೆ ಹೋದರೆ ‘ರೋಟಿ-ಕರಿ’ ಎಂಬ ಪದ ಬಳಸುತ್ತೇವೆ‌.‌ ಅಂದ ಹಾಗೆ, ದಕ್ಷಿಣ  ಕನ್ನಡದ ಪ್ರದೇಶದಲ್ಲಿ ಉಪ್ಕರಿ ಎಂಬ ಪದ ಬಳಸ್ತಾರೆ. ಉಡುಪಿ ಕುಂದಾಪುರ ಶೈಲಿಯ ಅಡುಗೆಯಲ್ಲಿ ಅವಲಕ್ಕಿ ಉಪ್ಕರಿ ಬಹು ಪ್ರಸಿದ್ಧ. ತಾಜಾ ತೆಂಗಿನತುರಿಗೆ ಹಸಿಮೆಣಸು, ಒಗ್ಗರಣೆ,  […]

‘ಸಿಮ್’ ಗೆ ಕನ್ನಡ ಪದ ಯಾವುದು?

ಸಂಚಾರಿ ದೂರವಾಣಿಯನ್ನು ಬಳಸದೆ ಇರುವವರು ತೀರಾ ಅಪರೂಪ ಎನ್ನುವ ಕಾಲ ಇದು. ‌ಈ ದೂರವಾಣಿಯ ಮಾತು ಬಂದಾಗಲೆಲ್ಲ ನಾವು ಬಳಸುವ ಒಂದು ಪದ ಅಂದರೆ ಸಿಮ್. “ನಿಮ್ಮ‌ ಸಿಮ್ ಯಾವುದು? ಏರ್ಟೆಲ್ಲಾ, ಜಿಯೋನಾ, ಬಿಎಸ್ಎನ್ನೆಲ್ಲಾ?” “ಫೋನು ಕಳ್ದು ಹೋಯ್ತಾ? ಬಿಡಿ, ಕಳ್ಳ ಬೇರೆ ಸಿಮ್ ಹಾಕಿರ್ತಾನೆ” “ನಂಗೆ ಇದೇ ನಂಬರ್ ಗೆ ಬೇರೆ ಸಿಮ್ ಸಿಗುತ್ತಾ?” “ನಿಮ್ಮ ಫೋನ್ ನಲ್ಲಿ ಒಂದು ಸಿಮ್ ಇದೆಯಾ? ಎರಡಾ?” ……. ಹೀಗೆ ನಾವು ಈ ಸಿಮ್ ಪದವನ್ನು ಬಳಸುತ್ತಲೇ ಇರುತ್ತೇವೆ. […]

ಮೆಂದು ವಡಾ!!?? ಅಲ್ಲ…ಅಯ್ಯಯ್ಯೋ…ಅದು ಮೆದು‌ವಡಾ!

 ಈಚೆಗೆ ನನಗೊಮ್ಮೆ ಮುಂಬೈಯಿಂದ ಗೋವಾಗೆ ಕೊಂಕಣ ರೈಲುಮಾರ್ಗದಲ್ಲಿ ಹೋಗುವ ‘ಮಾಂಡೊವಿ ಎಕ್ಸ್ ಪ್ರೆಸ್’ ಎಂಬ ಹೆಸರಿನ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿತ್ತು. ಬೆಟ್ಟಗಳು, ನದಿಗಳು, ಹಸಿರಾದ ಕಣಿವೆಗಳು, ಎತ್ತರದ ಸೇತುವೆಗಳು ಹಾಗೂ ಅನೇಕ ಸುರಂಗಗಳಿಂದ ಕೂಡಿದ ನಯನ ಮನೋಹರ ರೈಲು ಮಾರ್ಗ ಅದು‌. ಈ ಕಾರಣದಿಂದಾಗಿ ಹಗಲಿನಲ್ಲಿ ಈ ರೈಲಿನಲ್ಲಿ ಪಯಣಿಸುವುದು ಒಂದು ಸಂತಸದ ವಿಷಯ. ಇದರ ಜೊತೆಗೆ ಇನ್ನೊಂದು ಉಲ್ಲಾಸಕರ ವಿಷಯವೆಂದರೆ ಈ ರೈಲಿನಲ್ಲಿ ಬಗೆಬಗೆಯ ಬಹು ರುಚಿಕರವಾದ ತಾಜಾ ತಿಂಡಿಗಳು ಕೈಗೆಟಕುವ ಬೆಲೆಯಲ್ಲಿ […]

“ಏನ್ ಮೇಡಂ! ಇಷ್ಟೊಂದ್ ಕನ್ನಡ ಮಾತಾಡ್ತೀರಲ್ಲ!”

ಕನ್ನಡ ಅಧ್ಯಾಪಕಿಯಾದ ನನ್ನ ವೃತ್ತಿಜೀವನದಲ್ಲಿ ಒಮ್ಮೊಮ್ಮೆ ಕನ್ನಡ ಭಾಷೆಯ ಕಾರಣದಿಂದಲೇ ಕೆಲವು ಅಚ್ಚರಿಯ ಸಂಗತಿಗಳು ಜರುಗ್ತವೆ‌. ಇದೋ ಇಲ್ಲಿದೆ ಅಂತಹ ಒಂದು ಪ್ರಸಂಗ. ಈಚೆಗೆ ನಾನು ನಮ್ಮ ವಿಶ್ವವಿದ್ಯಾಲಯದ ಉತ್ತರಪತ್ರಿಕೆಗಳ ಸಂರಕ್ಷಣ ಘಟಕದಲ್ಲಿ ಕೆಲಸ ಮಾಡ್ತಿದ್ದೆ. ಎಲ್ಲ ಅಧ್ಯಾಪಕರೂ ಮೌಲ್ಯಮಾಪನ ಮಾಡಲು ಆ ಘಟಕಕ್ಕೆ ಬಂದು ಉತ್ತರಪತ್ರಿಕೆಗಳನ್ನು ಘಟಕದಿಂದ ತೆಗೆದುಕೊಳ್ಳೋದು, ಮೌಲ್ಯಮಾಪನ ಮಾಡಿ ಮರಳಿಸೋದು – ಇವನ್ನ ಮಾಡ್ತಾ ಇರ್ತಾರೆ. ಈ ಘಟಕಕ್ಕೆ ನಿರ್ಬಂಧಿತ ಪ್ರವೇಶ ಇರುತ್ತೆ‌.‌ ಹಾಗಾಗಿ ಬಾಗಿಲಿಗೆ ಒಂದು ಭಾರವಾದ ಮೇಜನ್ನೋ, ಇಳಿಮೇಜನ್ನೋ ( […]

 “ಅಮ್ಮಾ, ಅದು ಕೊರೆಮೊಗ್ಗು”!

ಅಚ್ಚಗನ್ನಡದ ಗ್ರಾಮೀಣ ಪದವೊಂದು ನನಗೆ ಪರಿಚಯವಾದದ್ದರ ಕುರಿತಾಗಿದೆ ಈ ವಾರದ ಕನ್ನಡ ಪ್ರಸಂಗ. ನನಗೆ ಮಲ್ಲಿಗೆ, ಸಂಪಿಗೆ, ಜಾಜಿಯಂತಹ ಪರಿಮಳಭರಿತ ಹೂಗಳೆಂದರೆ ಬಹಳ ಇಷ್ಟ.  ಬೇರೆಯವರು ಮುಡಿದದ್ದನ್ನು ನೋಡಿ ಸಂತೋಷ ಪಡುವುದು, ಹೂವಿನ ಮಾರುಕಟ್ಟೆಯಲ್ಲಿ ಈ ಹೂಗಳನ್ನು/ಹೂ ಮಾಲೆಗಳನ್ನು ಓರಣವಾಗಿ ಜೋಡಿಸಿರುವುದನ್ನು ನೋಡಿ ಆನಂದಿಸುವುದು , ನಾನು ಕೂಡ ಅವುಗಳನ್ನು ಹೆರಳಲ್ಲಿ ಮುಡಿದು ಸಂಭ್ರಮಿಸುವುದು ಇವನ್ನೆಲ್ಲ ಮಾಡುತ್ತಿರುತ್ತೇನೆ. ಬೆಂಗಳೂರಿನಲ್ಲಿ ಈಗ ಚಳಿಗಾಲ ಅಲ್ಲವೆ? ಹೀಗಾಗಿ ಮಲ್ಲಿಗೆ ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬಾರದೆ ಇರುವುದರಿಂದಾಗಿ ಅದರ ಬೆಲೆ ಜಾಸ್ತಿ. […]

Page 3 of 20

Kannada Sethu. All rights reserved.