ಮೊನ್ನೆ ಬ್ರೆಡ್ಡು, ಸಾದಾ ಕೇಕುಗಳನ್ನು ಕೊಳ್ಳಲು ಒಂದು ಬೇಕರಿಗೆ ಹೋಗಿದ್ದೆ. ನಮ್ಮ ಹಂಪಿನಗರದಲ್ಲಿರುವ ಒಂದು ‘ಹಾಸನ ಅಯ್ಯಂಗಾರ್’ ಬೇಕರಿ ಅದು. ನನಗೆ ಆ ತಿನಿಸುಗಳನ್ನು ಕೊಟ್ಟ ಹುಡುಗನನ್ನು “ಏನಪ್ಪಾ, ಇವು ತಾಜಾ ಇದಾವಾ?” ಎಂದು ಕೇಳಿದೆ. ಅವನಿಗೆ ತುಂಬ ಗಾಬರಿಯಾಯಿತು! “ಅಯ್ಯೋ. ತಾಜಾ ಅನ್ನೋ ಹೆಸರಿನ್ ತಿಂಡಿ ಇಲ್ಲ ಮೇಡಂ” ಎಂದು ಆತಂಕದಿಂದ ಹೇಳಿದ. ಸಾಮಾನ್ಯವಾಗಿ ಜನ ‘ಫ್ರೆಷ್’ ಅನ್ನುವ ಪದ ಬಳಸ್ತಾರಲ್ಲ, ಅದರ ಬದಲು ನಾನು ‘ತಾಜಾ’ ಎಂಬ ಪದ ಬಳಸಿದ್ದು ಅವನಿಗೆ ಹೀಗೆ ಗಾಬರಿ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!