ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಪಿಯರ್ ಹಣ್ಣಿಗೆ ಕನ್ನಡದ ಹೆಸರು ಹುಡುಕಿದ ಪ್ರಸಂಗ

ನಾವು ( ಅಂದರೆ ಈಗ ಐವತ್ತು ವರ್ಷದ ಆಸುಪಾಸಿನಲ್ಲಿರುವ ಮಂದಿ)  ಚಿಕ್ಕವರಾಗಿದ್ದಾಗ ನಮಗೆ ‘ಸ್ಥಳೀಯ’ ಹಣ್ಣುಗಳಾದ ಬಾಳೆ, ಮಾವು, ಸೀಬೆ, ಹಲಸು ಮುಂತಾದವುಗಳ ಪರಿಚಯ ಇತ್ತೇ ಹೊರತು ಸ್ಟ್ರಾಬೆರಿ, ಪ್ಲಮ್, ಪಿಯರ್, ಡ್ರ್ಯಾಗನ್ ಫ್ರೂಟ್, ಟ್ಯಾಂಜಾರಿನ್, ಕಿವಿ ಮುಂತಾದ ವಿದೇಶೀ ಫಲಾವಳಿಯ ಪರಿಚಯ ಇರಲಿಲ್ಲ. ಕಥೆ, ಕಾದಂಬರಿ, ವೃತ್ತಪತ್ರಿಕೆಗಳಲ್ಲಿ ಇಂಥವುಗಳ ಹೆಸರುಗಳನ್ನು  ಓದುತ್ತಿದ್ದೆವೇ ಹೊರತು,ಆ ಹಣ್ಣುಗಳನ್ನು  ನಿಜವಾಗಿ ನೋಡಿ, ಮುಟ್ಟಿ, ತಿನ್ನುವ ಪ್ರಶ್ನೆಯೇ ಇರಲಿಲ್ಲ.‌ ಆದರೆ, ಇಂದು ಜಾಗತೀಕರಣವಾಗಿ ಮೂವತ್ತು ವರ್ಷಗಳೇ ಆಗಿಹೋಗಿರುವ  ಸನ್ನಿವೇಶದಲ್ಲಿ, ಕೇವಲ ದೊಡ್ಡ […]

ಎ.ಎನ್.ಮೂರ್ತಿರಾಯರನ್ನು ನೆನಪಿಸಿದ ಸೋಫಾ ಪುರಾಣ

ಈಚೆಗೆ ನಾನು ನಮ್ಮ ಕುಟುಂಬದ ಒಬ್ಬ ಸ್ನೇಹಿತರ ಮನೆಗೆ  ಸಮಾರಂಭವೊಂದಕ್ಕಾಗಿ ಹೋಗಿದ್ದೆ. ಇನ್ನೂ ಕೆಲವು ನೆಂಟರಿಷ್ಟರು ಅಲ್ಲಿ ಸೇರಿದ್ದರು.‌ ಅಲ್ಲಿ ಎಲ್ಲರ ಮಾತಿನ ಆಸಕ್ತಿಗೆ ಕಾರಣವಾದದ್ದು ಒಂದು ಸೋಫಾ ಸೆಟ್ಟು! ಇದಕ್ಕೆ ಕಾರಣವೇನೆಂದರೆ ಅಂದು ಅತಿಥೇಯರ ಮನೆಯ ಪಡಸಾಲೆಯ ನಡುಮಧ್ಯದಲ್ಲಿ ಒಂದು ಹೊಸ ಸೇಫಾ ಸೆಟ್ಟು ವಿರಾಜಮಾನವಾಗಿತ್ತು.‌ ಹೆಚ್ಚು ಕಮ್ಮಿ ಬಿಳಿಬಣ್ಣದ್ದೇ ಅನ್ನಬಹುದಾದ ನೀಲಿಯ ಅತಿ ತಿಳಿ ಛಾಯೆಯ  ಪೀಠಾವಳಿ ಅದು.‌ ‘ಮೂರು ಲಕ್ಷ ರೂಪಾಯಿ ಕೊಟ್ಟು ಅದನ್ನು ಕೊಂಡಿದ್ದೀವಿ, ಆದರೆ ಈಗ ಅದರ ಮೇಲೆ ಒಂದು […]

“ಯಕ್ಷಗಾನ ಹಾಗೂ ತಾಳಮದ್ದಳೆಯ ಮಾತು…ಕನ್ನಡ ಮಾತಿನ ರೀತಿಯ ಒಂದು ವಿಶೇಷ ಗತ್ತು”.

ಯಕ್ಷಗಾನ. ಈ ಪದ ಕೇಳಿದ ತಕ್ಷಣ ಚಂಡೆ ವಾದ್ಯದ ಶ್ರೀಮಂತ ಧ್ವನಿ, ಅರಳಿ ಎಲೆಯಾಕಾರದ ಸುಂದರ ಕಿರೀಟವಿಟ್ಟ ಪಾತ್ರಧಾರಿಗಳು, ಅವರ ಬಣ್ಣಬಣ್ಣದ ಉಡುಪು – ಒಡವೆಗಳು, ಕಣ್ಸೆಳೆವ ಮುಖಬಣ್ಣ…ಜೊತೆಗೆ ಆಕರ್ಷಕ ಕುಣಿತ, ಅಷ್ಟೇ ಅಲ್ಲದೆ ಶೈಲಿಯುತ ಮಾತು….ಇವೆಲ್ಲ ನೆನಪಾಗುತ್ತವೆ ಅಲ್ಲವೇ? ನಮ್ಮ  ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎರಡೂ ಜಿಲ್ಲೆಗಳಲ್ಲಿ ತುಂಬ ಪ್ರಸಿದ್ಧವಾಗಿರುವ ಪರಂಪರಾನುಗತ ಕಲೆ ಇದು. ‌’ಕಡಲ ತೀರದ ಭಾರ್ಗವ’ನೆಂದು ಹೆಸರಾದ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ.ಕೆ.ಶಿವರಾಮ ಕಾರಂತರು ತುಂಬ ಇಷ್ಟ ಪಟ್ಟು […]

“ಪ್ಲೀಸ್ ಮ್ಯಾಮ್ ಪ್ಲೀಸ್… ಇನ್ನು ಎರಡು ಮಾರ್ಕ್ಸ್ ಕೊಟ್ಬಿಡಿ….”

ಈಗ ಬರೆಯುತ್ತಿರುವ ಪ್ರಸಂಗವು ಒಬ್ಬ ಕನ್ನಡ ಪ್ರಾಧ್ಯಾಪಕಿಯಾಗಿ ನನಗೆ ತುಂಬ ಬೇಸರ ಹುಟ್ಟಿಸಿದ ಪ್ರಸಂಗ. ನಾನು ಕೆಲಸ ಮಾಡುತ್ತಿರುವ ಕಾಲೇಜಿನ ನಮ್ಮ ಕನ್ನಡ ವಿಭಾಗಕ್ಕೆ ಈಚೆಗೆ ಒಬ್ಬ ವಿದ್ಯಾರ್ಥಿನಿ ಬಂದಿದ್ದಳು‌. ಸದ್ಯದಲ್ಲಿ ಅಂತಿಮ ವರ್ಷದ ಪದವಿಯಲ್ಲಿ ‌ಓದುತ್ತಿರುವ ವಿದ್ಯಾರ್ಥಿನಿ‌ ಅವಳು. ನಾಲ್ಕನೇ ಅರ್ಧವರ್ಷದ ಅಂತಿಮ ಕನ್ನಡ ಪರೀಕ್ಷೆಯಲ್ಲಿ‌ ಅವಳಿಗೆ  100 ಕ್ಕೆ 38 ಅಂಕ ಬಂದು ತಾನು  ನಪಾಸಾಗಿದ್ದಳು( ಉತ್ತೀರ್ಣರಾಗಲು 100 ಕ್ಕೆ 40 ಅಂಕ ಬರಬೇಕು). ಅವಳಿಗೆ ಸಿಕ್ಕಿದ ಕನ್ನಡ ಆಂತರಿಕ ಪರೀಕ್ಷೆಯ ಅಂಕ‌( 16) ಗಳನ್ನು 18 […]

   “ಮ್ಯಾಮ್…. ಈ ಪಾಠದ ಸಮ್ಮರಿ ‌ ಹೇಳಿ …..ಪ್ಲೀಸ್”

ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ಎಲ್ಲ ಅಧ್ಯಾಪಕರ ಕಿವಿಗಳಿಗೂ ಪರೀಕ್ಷಾ ಸಮಯದಲ್ಲಿ ತಲುಪಿಯೇ  ತಲುಪುವ ಒಂದು ಕೋರಿಕೆ ಇದು.‌ ತರಗತಿಗೆ ಬಂದರೋ ಬಿಟ್ಟರೋ, ಪಾಠ ಕೇಳಿದರೋ ಬಿಟ್ಟರೋ ವಿದ್ಯಾರ್ಥಿಗಳು ತಮ್ಮ ಕನ್ನಡ ವಿಷಯದ ಪರೀಕ್ಷೆಗೆ ಒಂದು ಅಥವಾ ಎರಡು ದಿನ ಇದ್ದಾಗ ತಮ್ಮ ಅಧ್ಯಾಪಕರ ಮುಂದೆ ಈ  ‘ ಸಮ್ಮರಿ ಕೋರುವ’  ವಿನಂತಿಯನ್ನಂತೂ ಇಟ್ಟೇ ಇಡುತ್ತಾರೆ.‌  ಸಿರಿಗನ್ನಡವನ್ನು ಅವರು ನೆನಪಿಸಿಕೊಳ್ಳುವ ಪರಿ ಇದು!!          ‌    “ಅಯ್ಯಯ್ಯೋ …ಏನೂ ಓದಿಲ್ವಲ್ಲಪ್ಪಾ…    […]

ಅಲ್ಲ ಅಲ್ಲ ಮ್ಯಾಮ್…..ಫೇರ್ವೆಲ್ ಫಂಕ್ಷನ್ನು!!

ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ,  ಯಾವುದಾದರೂ ವಿಭಾಗದ ಹಿರಿಯ ವಿದ್ಯಾರ್ಥಿಗಳಿಗೆ ಅದೇ ವಿಭಾಗದ ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುಗೆ ಕೊಡುವುದು ವಾಡಿಕೆ.‌ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಆ ವಿಭಾಗದ ಹಿರಿಯ ವಿದ್ಯಾರ್ಥಿಗಳು ಸ್ವಾಗತ ಸಮಾರಂಭ ಏರ್ಪಡಿಸುವುದೂ ಸಾಮಾನ್ಯ ಅನ್ನಿ.‌  ನಮ್ಮ ಕಾಲೇಜಿನ ಸಭಾಂಗಣವು ಕನ್ನಡ ವಿಭಾಗದ ಪಕ್ಕವೇ ಇದೆ.‌ ಹೀಗಾಗಿ ನಮಗೆ ಈ ಸ್ವಾಗತ ಸಮಾರಂಭ, ಬೀಳ್ಕೊಡುಗೆಗಳಾಗುವಾಗ ಚಂದಚಂದದ ಬಟ್ಟೆ ತೊಟ್ಟ ವಿದ್ಯಾರ್ಥಿನಿಯರ ಸರಬರ ಓಡಾಟ, ಅವರ ಖುಷಿಖುಷಿ ಹಾಡು, ನೃತ್ಯ, ಅಧ್ಯಾಪಕರ ಹಾರೈಕೆಯ ನುಡಿ…ಇತ್ಯಾದಿಗಳಿಗೆ […]

ಅಚ್ಚಗನ್ನಡ ಮಾತಾಡುವ ಅಧ್ಯಾಪಕಿಯ ಪ್ರಯೋಗ

ಕನ್ನಡ ಅಧ್ಯಾಪಕಿಯಾಗಿ ಕೆಲವು ವರ್ಷಗಳಿಂದ ನಾನು ಕನ್ನಡ  ಭಾಷಾಬಳಕೆಯಲ್ಲಿ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ. ಅದೇನೆಂದರೆ, ಮಾತಾಡುವಾಗ  ಗರಿಷ್ಠ ಪ್ರಮಾಣದಲ್ಲಿ ಕನ್ನಡದ್ದೇ ಆದ ಪದಗಳನ್ನು ಬಳಸುವ ಪ್ರಯೋಗ. ದಿನ ಬಳಕೆಯ ಮಾತಿನಲ್ಲಿ ಮತ್ತು ತರಗತಿಯ ಪಾಠದಲ್ಲಿ ಕನ್ನಡ ಪದಗಳು ಸಿಗುವ ಸಾಧ್ಯತೆ ಇರುವಲ್ಲೆಲ್ಲಾ ಕನ್ನಡ ಪದಗಳನ್ನೇ ಬಳಸುವುದು ನನ್ನ ಪ್ರಯತ್ನವಾಗಿರುತ್ತದೆ. ಉದಾಹರಣೆಗೆ : Class – ತರಗತಿ                        Test – ಕಿರುಪರೀಕ್ಷೆ   […]

“ತರಂ……ಗ…….ತರಂ……ಗ…..”  ರಿಂಗಣಿಸುತ್ತಿದ್ದ ಪೇಪರ್ ತಾತನ ಧ್ವನಿ

ಸುಧಾ, ಕರ್ಮವೀರ ಮುಂತಾದ ಕನ್ನಡ ವಾರಪತ್ರಿಕೆಗಳ ಸಾಲಿನಲ್ಲಿ ಬರುವ ಒಂದು ವಾರಪತ್ರಿಕೆ ‘ತರಂಗ’.‌ ನಲವತ್ತೆರಡು ವರ್ಷಗಳ ಹಿಂದೆ ಪ್ರಾರಂಭವಾಯಿತು.‌ ಉದಯವಾಣಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಮಣಿಪಾಲ್ ಪಬ್ಲಿಕೇಷನ್ಸ್ ನವರು ತರಲಾರಂಭಿಸಿದ ವಾರಪತ್ರಿಕೆ ಇದು‌‌.  ನನ್ನ ಬಾಲ್ಯಕಾಲದ ನೆನಪುಗಳಲ್ಲಿ ‘ತರಂಗ’ ಆಪ್ತವಾಗಿ‌ ಸೇರಿ ಹೋಗಿದೆ. ಇದಕ್ಕೆ, ಮಂಗಳೂರಿನಲ್ಲಿ ಕಳೆದ ನನ್ನ ಬಾಲ್ಯದಲ್ಲಿ ಪುಸ್ತಕ ಪ್ರಿಯರಾದ ನನ್ನ ತಂದೆತಾಯಿಯರು ಮನೆಗೆ ತರಿಸುತ್ತಿದ್ದ ತರಂಗ ವಾರಪತ್ರಿಕೆ ಹಾಗೂ ಅದರಲ್ಲಿನ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣಗಳು ಒಂದು ಕಾರಣವಾದರೆ, ಸೈಕಲ್ ಮೇಲೆ ಪತ್ರಿಕೆ ತರುವಾಗ ‘ತರಂ…ಗ…..ತರಂ…ಗ ‌…’ […]

“ಇವತ್ತು ಏನಾಯ್ತು ಗೊತ್ತಾ…?” …….. ಕಥೆ ಕೇಳುವ ಮತ್ತು ಕಥೆ ಹೇಳುವ ಕನ್ನಡ ಮಾತಿನ ಶೈಲಿ.

ನಮ್ಮ ದೈನಂದಿನ ಮಾತುಕತೆಯಲ್ಲಿ ಕತೆ/ಕಥೆ ಎಂಬ ಪದ ಮತ್ತು ಪರಿಕಲ್ಪನೆಯ ಪ್ರಯೋಗವನ್ನು ಎಷ್ಟು ವಿಪುಲವಾಗಿ ಮಾಡುತ್ತೇವೆ ಎಂದು ಗಮನಿಸಿದರೆ ಆಶ್ಚರ್ಯ ಆಗುತ್ತದೆ. ಮಾತುಕತೆ ಎಂಬ ಪದದಲ್ಲೇ ಕತೆ ಇದೆ! ಮಾತುಕತೆ ಅನ್ನುವ ಪದವನ್ನು ಕುಟುಂಬದ ಆಸ್ತಿ ಹಂಚಿಕೆ, ಮದುವೆ, ವ್ಯಾಪಾರ ಮುಂತಾದ ಅನೇಕ‌ ಸಂದರ್ಭಗಳಲ್ಲಿ ಬಳಸುತ್ತೇವಲ್ಲ ನಾವು!  ಇನ್ನು ನಾವು  ಕನ್ನಡಿಗರು ‌‌ಆಗಾಗ ಬಳಸುವ ವಾಕ್ಯಗಳನ್ನು ಗಮನಿಸೋಣ..   ಅಯ್ಯೋ ಅದೊಂದು ದೊಡ್ಡ ಕಥೆ. ನನ್ ಕಥೆ ಏನೂಂತ ಹೇಳಲಪ್ಪಾ.. ಅಯ್ಯೋ‌ ಕತಿಯಾ…! ಏನೇ ಇದು ನಿನ್ನ ಕಥೆ! […]

“ಅದು ಮಲ್ಲಿಗೆ, ಜಾಸ್ಮಿನ್ ಮೇಡಂ…ಫೋರ್ಟಿ ರುಪೀಸ್”

ಹೂ ಮಾರುವವರ ಜೊತೆಯಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆಗುವಂತಹ ಅನುಭವಗಳು ತುಂಬ ಸ್ವಾರಸ್ಯಕರವಾಗಿರುತ್ತವೆ. ಇತ್ತೀಚೆಗೆ, ನಾನು ವಾಸ ಇರುವ ಬೆಂಗಳೂರಿನ ಹಂಪಿನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಹೂ ಮಾರುತ್ತಿದ್ದ ಒಬ್ಬ ವ್ಯಾಪಾರಿಯ ಬಳಿ ಹೂ ಕೊಳ್ಳಲು ಹೋಗಿದ್ದೆ. ‌ಅಲ್ಲಿ ಮೊಲ್ಲೆ ಹೂವು ಮತ್ತು ಮಲ್ಲಿಗೆ ಹೂವು ಪಕ್ಕ ಪಕ್ಕ ಇದ್ದವು‌. ನಾನು ಮೊಲ್ಲೆ ಹೂವನ್ನು ತೋರಿಸಿ ”ಎಷ್ಟು ಇದಕ್ಕೆ?” ಅಂತ ಕೇಳಿದೆ. “ಮೂವತ್ತು ರೂಪಾಯಿ‌ ಮೊಳ” ಅಂದ ಆ ವ್ಯಾಪಾರಿ.‌ ಪಕ್ಕದಲ್ಲಿದ್ದ ಮಲ್ಲಿ ಗೆಯನ್ನು ತೋರಿಸಿ ” […]

Page 8 of 17

Kannada Sethu. All rights reserved.