ಕಂಗ್ಲಿಷ್ ದ್ವಿರುಕ್ತಿಗಳು! ಹಾಂ, ಇವತ್ತಿನ ‘ಕನ್ನಡ ಪ್ರಸಂಗ’ದಲ್ಲಿ ನಾನು ಪ್ರಸ್ತಾಪಿಸಬೇಕೆಂದಿರುವುದು — ಕನ್ನಡ ಭಾಷೆಯಲ್ಲಿ, ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳ ಕನ್ನಡದಲ್ಲಿ ಆಗಾಗ್ಗೆ ಬಳಕೆಯಾಗುವ ಕಂಗ್ಲಿಷ್ ದ್ವಿರುಕ್ತಿಗಳ ಬಗ್ಗೆ. (ಕಂಗ್ಲಿಷ್ ಅಂದ್ರೆ ಇಂಗ್ಲಿಷ್ ಭಾಷೆ ಧಾರಾಳವಾಗಿ ಬೆರೆತ ಕನ್ನಡ ಅಂತ ಎಲ್ಲರಿಗೂ ಗೊತ್ತಿರುತ್ತೆ.) ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ನಮ್ಮ ತಾಯಿಯವರು, ನಾವು ಚಿಕ್ಕವರಿದ್ದಾಗ ‘ಇಟ್ ಅದು ಬಟ್ ಆದ್ರೆ ವ್ಹಾಟ್ ಏನು? ‘ ಎಂದು ಹೇಳಿ ನಮ್ಮನ್ನು ನಗಿಸುತ್ತಿದ್ದರು. ಇಂಗ್ಲಿಷ್ ಪದ ಮತ್ತು ಅದರ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!