ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಬಳಸುತ್ತಿರುವುದು ರವಷ್ಟು, ಇರುವುದು ಬೆಟ್ಟದಷ್ಟು.

ವೃತ್ತಿಯಿಂದ ಕನ್ನಡ ಪಾಠ ಮಾಡುವ ಹಾಗೂ ಪ್ರವೃತ್ತಿಯಿಂದ ಕನ್ನಡ ಬರೆಯುವ ನಾನು ಕನ್ನಡ ನಿಘಂಟು, ಶಬ್ದಕೋಶಗಳನ್ನು ಆಗಾಗ ಬಳಸಬೇಕಾಗುತ್ತದೆ. ಪ್ರತಿ ಸಲ ನಿಘಂಟು ತೆರೆದಾಗಲೂ ನನಗೆ ಒಂದು ವಿಷಯ ಮನಸ್ಸಿಗೆ ಬರುತ್ತದೆ. ಅದೇನೆಂದರೆ ನಾವು ಸಾಮಾನ್ಯವಾಗಿ ಮಾತಿನಲ್ಲಿ ಹಾಗೂ ಬರವಣಿಗೆಯಲ್ಲಿ ಬಳಸದೆ ಇರುವ ಅನೇಕಾನೇಕ ಪದಗಳು ಕನ್ನಡ ನಿಘಂಟಿನಲ್ಲಿ ಪ್ರತಿ ಅಕ್ಷರದಲ್ಲೂ ಸಿಗುತ್ತವೆಯಲ್ಲ(!) ಎಂಬುದು. ಉದಾಹರಣೆಗೆ , ಅದ್ದೆ = ಬೇರೊಬ್ಬನ ಸ್ಥಾನದಲ್ಲಿಯ, ಬದಲಿ ಅಪ್ಪುನಿಧಿ = ಸಮುದ್ರ, ಕಡಲು ಆರೇಚನ = ( ಕಣ್ಣುಗಳು) ಮುಚ್ಚಿಕೊಳ್ಳುವುದು […]

ಪಠ್ಯ ಪುಸ್ತಕ ಯಾವ್ದು…!?      ಮರ್ತ್ಹೋಗಿದೆ  ಮ್ಯಾಮ್.. ಒಂದ್ನಿಮಿಷ …ಫ್ರೆಂಡ್ನ ಕೇಳ್ಬಿಟ್ಟು….

ಈ ನಡುವೆ ಒಂದು ದಿನ  ಸಂಜೆ ನನ್ನ ದೂರವಾಣಿ ರಿಂಗಣಿಸಿತು.‌ ಬಿ.ಎಸ್ಸಿ. ವಿದ್ಯಾರ್ಥಿನಿಯೊಬ್ಬಳು ಮಾತಾಡುತ್ತ ” ನಾನು ಈಗ ಮೂರನೇ ವರ್ಷ ಬಿ.ಎಸ್ಸಿ.ಓದ್ತಾ ಇದ್ದೀನಿ ಮ್ಯಾಮ್.‌ ನಾನು ಹಿಂದಿನ ವರ್ಷದ ಕನ್ನಡ ಪರೀಕ್ಷೆ ತಗೋಬೇಕು, ಯಾವ ಟೆಕ್ಸ್ಟ್ ( ಪಠ್ಯಪುಸ್ತಕ) ಓದ್ಬೇಕು ಅಂತ ಗೊತ್ತಾಗ್ತಾ ಇಲ್ಲ, ಪ್ಲೀಸ್ ಹೇಳಿ ಮ್ಯಾಮ್” ಅಂದಳು.  ನಾನು “ನಾಳೆ ಕಾಲೇಜಿಗೆ ಬಾಮ್ಮ,  ನೋಡಿ ಹೇಳ್ತೀನಿ” ಅಂದೆ.  ಸರಿ, ಸೂಚನೆಯ ಪ್ರಕಾರ ಮೇಲೆ ಹೇಳಿದ ವಿದ್ಯಾರ್ಥಿನಿ ಕಾಲೇಜಿಗೆ ನಮ್ಮ ಕನ್ನಡ ವಿಭಾಗಕ್ಕೆ ಬಂದಳು‌. […]

ಕವನ ವಾಚನ ಕಲೆ – ವಿದ್ಯಾರ್ಥಿಗಳಿಗೆ ಭಾವವನ್ನು ತಲುಪಿಸುವ ನೆಲೆ.

ಯಾವುದೇ ಕವಿತೆಯ ಕೇಂದ್ರವೆಂದರೆ ಅದು ಭಾವ. ಕವಿಯ ಅನುಭವದ ಅಭಿವ್ಯಕ್ತಿ ಅಥವಾ ಭಾವದ ಭಾಷಾರೂಪೀ ಪ್ರಕಟಣೆಯೇ ಕವಿತೆ.‌ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕವಿತೆಯನ್ನು ಪಾಠ ಮಾಡುವಾಗ ಅದನ್ನು ವಾಚಿಸುವ ರೀತಿಯು ಬಹಳ ಮುಖ್ಯ ವಾಗುತ್ತದೆ. ಏಕೆಂದರೆ ಸರಿಯಾದ ಒತ್ತು, ಸ್ವರಭಾರ, ಧ್ವನಿಯ ಏರಿಳಿತಗಳು ಕವಿತೆಯ ಭಾವದ ಜಾಡು ಹಿಡಿಯುತ್ತವೆ. ಉದಾಹರಣೆಗೆ, ‘ಸಾಮಾನ್ಯನೇ ಈ ಗಾಂಧಿ’ ಎಂಬ ಸಾಲು.‌ ಸಾಮಾನ್ಯನೇ ಎಂಬುದನ್ನು ಉಚ್ಚರಿಸುವ  ಎರಡು ಬೇರೆ ಬೇರೆ ರೀತಿಗಳಿಂದ ಗಾಂಧಿ ಎಲ್ಲರಂತೆ ಸಾಮಾನ್ಯನೇ ಅನ್ನುವ ಅರ್ಥವೂ‌ ಬರಬಹುದು, ಅಥವಾ ಅವನು […]

 ‘ಬೆಳಗಿನ ಶುಭೋದಯ’ ಏಕೆ, ಶುಭೋದಯ ಸಾಕಲ್ಲವೇ?

ಗುಡ್ ಮಾರ್ನಿಂಗ್ ಎಂದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಬದಲು  ಕನ್ನಡದಲ್ಲಿ ಅದನ್ನು ಹೇಳಬಯಸುವವರು ‘ಬೆಳಗಿನ ಶುಭೋದಯ’ ಎಂದು ಹೇಳುವುದನ್ನು ನಾವು ಅನೇಕ ಸಾರಿ ಗಮನಿಸುತ್ತೇವೆ. ಶುಭೋದಯ ಎಂಬ ಒಂದು ಪದದಲ್ಲಿ ಗುಡ್( ಶುಭ) ಮತ್ತು ಉದಯ( ಮಾರ್ನಿಂಗ್) ಎಂಬ ಎರಡೂ ಪದಗಳಿವೆ! ಹೀಗಾಗಿ ಬೆಳಗಿನ ಶುಭೋದಯ ಎಂದು ಹೇಳಿದಾಗ ಗುಡ್ ಮಾರ್ನಿಂಗ್ ಆಫ್ ಮಾರ್ನಿಂಗ್ ಎಂಬ ಅರ್ಥ ಬರುತ್ತದೆ! ಹೀಗಾಗಿ‌ ಶುಭೋದಯ ಸಾಕು. ‘ಬೆಳಗಿನ ಶುಭೋದಯ’ ಬೇಡ. ಇನ್ನು ಕೆಲವರು ಗುಡ್ ಆಫ್ಟರ್ ನೂನ್ ಗೆ ಕನ್ನಡದಲ್ಲಿ […]

ದ ಧ ಗಳ ಗೊಂದಲ…ವಿಸ್ತರಿಸುತ್ತಿರುವ ಅಕ್ಷರ ತಪ್ಪುಗಳ ಗೋಲ ..ಅಯ್ಯೋ…!

ದ ಮತ್ತು ಧ ಕಾರಗಳು‌ ವಿದ್ಯಾರ್ಥಿಗಳಿಗೆ ಮಾಡುವ ಗೊಂದಲ ಅಷ್ಟಿಷ್ಟಲ್ಲ.‌ ವಿದ್ಯಾರ್ಥಿ  ಎಂದು ಬರೆಯಬೇಕಾದಾಗ  ವಿಧ್ಯಾರ್ಥಿ ಎಂದು ಬರೆಯುವುದು, ಧನಲಕ್ಷ್ಮಿ ಎಂದು ಬರೆಯಲು ದನಲಕ್ಷ್ಮಿ ಎಂದು ಬರೆಯುವುದು, ಆದ್ಯತೆ ಎಂದು ಬರೆಯಬೇಕಾದಾಗ ಆಧ್ಯತೆ ಎಂದು ಬರೆಯುವುದು, ಧನ್ಯವಾದ‌ ಎಂದು‌ ಬರೆಯಬೇಕಾದಲ್ಲಿ ದನ್ಯವಾದ ಎಂದು ಬರೆಯುವುದು……,ಹೀಗೆ.‌ ಇದಕ್ಕೆ ಇರುವ ಒಂದೇ ಪರಿಹಾರ ಅಂದರೆ ವಿದ್ಯಾರ್ಥಿಗಳು ಉಚ್ಚಾರಕ್ಕೆ ಗಮನ ಕೊಡುವಂತೆ ಮಾಡಿ ಆ ಪದಗಳ ಅರ್ಥ ವ್ಯತ್ಯಾಸವನ್ನು ಅವರಿಗೆ ತಿಳಿಸಿಕೊಡುವುದು. ಇದು ಶಾಲೆಯಲ್ಲಿ ಅಧ್ಯಾಪಕರು ‌ಮತ್ತು ಮನೆಯಲ್ಲಿ ತಂದೆತಾಯಿಗಳು ಮಾಡಬೇಕಾದ ಕೆಲಸ. […]

ನೀರ್ ದೋಸೆ, ನೀರ್  ಚಟ್ನಿ, ನೀರ್ ಪಲ್ಯ, ನೀರ್ ಗೊಜ್ಜು…. ಅಯ್ಯಯ್ಯೋ….

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೀರ್ ಎಂಬ ಧಾತುವಿನಿಂದ (ಪದಮೂಲ) ಪ್ರಾರಂಭವಾಗುವ ತಿಂಡಿ/ಖಾದ್ಯಗಳ ಹೆಸರು ಕೇಳಿ ಬರುತ್ತವೆ. ತಮಾಷೆಯೆಂದರೆ ಎಂದೂ ಆ ಹೆಸರು ಕೇಳದ ಪ್ರದೇಶದವರು‌ “ಹಾಂ…!? ಹೀಗೂ ಒಂದು ತಿಂಡಿ ಇರುತ್ತಾ!? ” ಎಂದು ಆಶ್ಚರ್ಯ ಪಡುತ್ತಾರೆ, ಆದರೆ ತಮ್ಮ ಪ್ರದೇಶದಲ್ಲಿ ಇರುವ ನೀರ್ ಎಂಬ ಪದಮೂಲದ ಹೆಸರಿನ ತಿಂಡಿಯ ಬಗೆಗೆ ಅವರಿಗೆ ಅಚ್ಚರಿಯ ಭಾವ ಇರುವುದಿಲ್ಲ; ಏಕೆಂದರೆ ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ.  ದಕ್ಷಿಣ ಕನ್ನಡದ ಕಡೆ ಅಕ್ಕಿ ನೆನೆ ಹಾಕಿ ಅದನ್ನು ಉಪ್ಪಿನೊಡನೆ ನುಣ್ಣಗೆ […]

ಜನಪದ ಗಾಯಕರ ಅದ್ಭುತ ಸಂವಹನ‌ ಶೈಲಿ…ಅದ್ಹೆಂಗಪ್ಪಾ ಅಂದ್ರೆ…

“ಏನು, ಹೆಂಗಿದೀರ? ಎಲ್ರೂ ನಾಷ್ಟ ಮಾಡಿದ್ರಾ ಮತ್ತೆ?..ನಮ್ಮ ಮಾಯ್ಕಾರ ಮಾದಪ್ನೋರು ಬರೋ ದಾರಿಯಲ್ಲಿ…” ಏನಾಯ್ತಪ್ಪಾ ಅಂದ್ರೆ ……..ಇದು ಕನ್ನಡ ಜನಪದ ಪುರಾಣಗಳ ಅದ್ಭುತ ಸಂವಹನ ಶೈಲಿ.         ಮಂಟೆಸ್ವಾಮಿ‌ ಕಥೆ, ಮಾದೇಶ್ವರನ ಪುರಾಣ, ಗೀಗೀಪದ ಮುಂತಾದ ಜನಪದ ಪುರಾಣ ಗಾಯನ ಹಾಗೂ ಗೀತ ಗಾಯನ ಸಂಪ್ರದಾಯವನ್ನು ವೀಕ್ಷಿಸಿದ ಯಾರಿಗೇ ಆದರೂ ಆ ಗಾಯಕರ ಉತ್ತಮ‌ ಸಂವಹನ ಕಲೆಯು‌ ಅಂದರೆ ಬಹಳ ಸರಾಗವಾಗಿ ಪ್ರೇಕ್ಷಕರನ್ನು ತಲುಪುವ ಗುಣವು ಗಮನಕ್ಕೆ ಬಂದಿರುತ್ತದೆ.‌ ಸ್ವಲ್ಪ ಮಾತು, ಸ್ವಲ್ಪ‌ […]

ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಒಂದು ಮುಖ್ಯ ಕನ್ನಡ ಕೆಲಸ

ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ…ತರಗತಿಯ ಹಂತ ಯಾವುದೇ ಇರಲಿ, ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಮತ್ತು ಕನ್ನಡಕ್ಕೆ ಈ ಸನ್ನಿವೇಶದಲ್ಲಿ ಅತ್ಯಂತ ಜರೂರಾಗಿ ಆಗಬೇಕಾದ ಕನ್ನಡದ ಕೆಲಸವೊಂದಿದೆ. ಅದೇನೆಂದರೆ, ಅವರು ತಮ್ಮ ಮಾತಿನಲ್ಲಿ ಮತ್ತು ಪಾಠದಲ್ಲಿ ಗರಿಷ್ಠ ಸಂಖ್ಯೆಯ ಕನ್ನಡ ಪದಗಳನ್ನು ಬಳಸುವ ಕೆಲಸ. ‘ ಇದರಲ್ಲಿ ಏನು ವಿಶೇಷ ಇದೆ? ಕನ್ನಡ ಅಧ್ಯಾಪಕರು ಆಡೋದೇ ಕನ್ನಡ ‌ಭಾಷೆ ಅಲ್ವಾ? ಬಳಸೋದೇ ಕನ್ನಡ ಪದಗಳಲ್ವಾ?’ ಎಂಬ ಪ್ರಶ್ನೆ ಹುಟ್ಟಬಹುದು.  ಜಾಗತೀಕರಣದ ನಂತರದ ಕನ್ನಡನಾಡಿನ ನಗರಗಳಲ್ಲಿ ( ಮುಖ್ಯವಾಗಿ ಬೆಂಗಳೂರು- […]

ಛಂದಸ್ಸಿನ ಪಾಠ ಅಕ್ಕಾ –  ನಿಜದಿ ತಲುಪಬೇಕು ಕಿವಿಗಳ ಮೂಲಕ

ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುವ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಭಾಗವಾಗಿ ಛಂದಸ್ಸನ್ನು ಓದುತ್ತಾರೆ. ಛಂದಸ್ಸು ಎಂದರೆ ಪದ್ಯರಚನೆಯ ನಿಯಮ ಎಂದು ಅರ್ಥ. ಒಂದು ಪದ್ಯದ ಲಯ, ಗತಿ, ಓಟ, ಪ್ರಾಸ, ತಾಳಕ್ಕೆ ಸಿಗುವ ಗುಣ ಇವೆಲ್ಲವನ್ನೂ ಅಧ್ಯಯನ ಮಾಡುವುದು ಛಂದಸ್ಸಿನ ಪರಿಧಿಯಲ್ಲಿ ಸೇರುತ್ತದೆ. ಛಂದಸ್ಸು ಎಂದರೆ ಹೊದಿಸುವುದು ಎಂದೂ ಅರ್ಥವಿದೆ. ಪದಗಳಿಗೆ ಲಯದ ಹೊದಿಕೆ ತೊಡಿಸುವುದು ಅನ್ನಬಹುದೇನೋ. ಛಂದಸ್ಸನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಅದು ಅಧ್ಯಾಪಕರಿಗೆ ಸವಾಲಿನ ವಿಷಯವೇ ಸರಿ. […]

ಎಮ್ಮೆಯ ಕನ್ನಡ!!

ಅಧ್ಯಾಪಕರ ಉದ್ಯೋಗದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಂಬುದು ತುಂಬ ಗಂಭೀರ ವಿಷಯ ಹಾಗೂ ಅತ್ಯಂತ ಜವಾಬ್ದಾರಿಯುತವಾಗಿ ಮಾಡಬೇಕಾದ ಕೆಲಸ.‌ ಆದಾಗ್ಯೂ ಕೆಲವೊಮ್ಮೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯವ ಉತ್ತರಗಳು, ಮಾಡುವ ತಪ್ಪುಗಳು ಮೌಲ್ಯಮಾಪಕರಿಗೆ ನಗೆಯುಕ್ಕಿಸಿ ಅವರ ಮನಸ್ಸನ್ನು ತುಸು ತಿಳಿಗೊಳಿಸುವುದು ಸುಳ್ಳಲ್ಲ. ಅಂತಹದೇ ಒಂದು ಪ್ರಸಂಗ ಈ ಅಧ್ಯಾಪಕಿಗೂ ಎದುರಾಯಿತು.  ಇಂಗ್ಲಿಷ್ ಮತ್ತು ಕನ್ನಡದ ಬಳಕೆಯನ್ನು ಕುರಿತು ಬರೆಯಬೇಕಾಗಿದ್ದ ಒಂದು ಉತ್ತರದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ” ನಮ್ಮ ಎಮ್ಮೆಯ ಕನ್ನಡ ಭಾಷೆಯು ತುಂಬ ಪ್ರಾಚೀನವಾದುದು” ಎಂದು ಬರೆದಿದ್ದಳು‌! […]

Page 9 of 16

Kannada Sethu. All rights reserved.