ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಐದೂ ಬೆಳ್ಳು ಒಂದೇ ಸಮಕ್ಕೆ ಇರ್ತವಾ?

ಜೀವನದ ದಾರಿಯಲ್ಲಿ ನಮಗೆ ಅಗತ್ಯವಾದ ಒಂದು ವಿವೇಕದ ಮಾತು ಇದು. ನಾವು ಯಾವುದೇ ಸಮುದಾಯದ ಜೊತೆ ಕೆಲಸ ಮಾಡುವಾಗ ಈ ಮಾತು ಬಹಳ ಉಪಯೋಗಕ್ಕೆ ಬರುತ್ತದೆ. ನಮ್ಮ ಕೈಬೆರಳುಗಳೆಲ್ಲವೂ ಒಂದೇ ಅಳತೆ, ಗಾತ್ರದಲ್ಲಿ ಇರುವುದಿಲ್ಲ. ಆದರೆ, ಬೆರಳುಗಳ ಅಸಮಾನ ನೆಲೆಯು ಅವು ಒಂದು ಮುಷ್ಟಿಯಾಗಲು ಮತ್ತು ಅಳತೆ, ಗಾತ್ರದ ಬೇರೆ ಬೇರೆ ವಸ್ತುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ಅಗತ್ಯ. ನಮ್ಮ ಬೆರಳುಗಳು ಹೀಗಿರುವುದು, ನೂರಾರು ವರ್ಷಗಳ ಜೀವವಿಕಾಸದ ಫಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಈಗ ಜನರೊಂದಿಗಿನ ನಮ್ಮ ಅನುಭವದ […]

ಕನ್ನಡ ಗಾದೆಮಾತು – ಮಟ್ಟು ತಿಳೀದೆ ಮಾತಾಡಬಾರ್ದು.

ಮಟ್ಟು ಎಂದರೆ ಧಾಟಿ, ರೀತಿ‌ ಎಂದು ಅರ್ಥ. ನಾವು ಯಾರೊಂದಿಗಾದರೂ ಸಂಭಾಷಣೆ ಮಾಡುವಾಗ ಅವರ ಮನ:ಸ್ಥಿತಿ, ಮಾತಿನ ಧಾಟಿ, ಸಮಯ ಸಂದರ್ಭ ಇವುಗಳನ್ನು ನೋಡಿಕೊಂಡು ಮಾತಾಡಬೇಕು. ಅವರು ನೇರವಾಗಿ, ಸರಳವಾಗಿ ಮಾತಾಡುತ್ತಿದ್ದಾರೆಯೊ ಇಲ್ಲವೆ ವ್ಯಂಗ್ಯದ ಧಾಟಿಯಲ್ಲಿ ಮಾತಾಡುತ್ತಿದ್ದಾರೆಯೊ ಎಂಬುದನ್ನು ಅರಿತು‌ ಮಾತಾಡಬೇಕು.‌ ಆಗ ಮಾತ್ರ ನಮ್ಮ ಮಾತಿಗೆ ಗೌರವ ಸಿಗುತ್ತದೆ. ಜನರೊಂದಿಗಿನ ಒಡನಾಟದಲ್ಲಿನ ಒಂದು ಸೂಕ್ಷ್ಮವನ್ನು ಈ‌ ಗಾದೆಮಾತು ಚೆನ್ನಾಗಿ ಹೇಳಿದೆ. ಏನಂತೀರಿ? Kannada proverb – Mattu thileedhe maathadabardu ( Do not speak […]

ಕನ್ನಡ ಗಾದೆಮಾತು – ನೀಡಿದ ಕೈಗೆ ನೆರವಾಗಬೇಕು. 

ಉತ್ತಮವಾದ ಜೀವನ ಮೌಲ್ಯವೊಂದನ್ಬು ಸರಳವಾಗಿ ಹೇಳುವ ಗಾದೆಮಾತು ಇದು. ನಮಗೆ ಅನ್ನ ನೀಡಿದ ಕೈಯಾಗಲಿ, ಸಹಾಯ ನೀಡಿದ ಕೈಯಾಗಲಿ ಆ ಸಮಯದಲ್ಲಿ ನಮಗೆ ಅಮೂಲ್ಯವಾದ ಉಪಕಾರ ಮಾಡಿರುತ್ತದೆ. ಆ ಕೈ ಅಂದರೆ ಅಂತಹ ಕೊಡುಗೈ ಮನಸ್ಸಿನ ವ್ಯಕ್ತಿಗಳು ಕಷ್ಟದಲ್ಲಿದ್ದಾಗ ಅಥವಾ ನಮ್ಮ ಸಹಾಯವು ಅವರಿಗೆ ಬೇಕಾದ ಪರಿಸ್ಥಿತಿ ಬಂದಾಗ, ನಾವು ಅವಶ್ಯವಾಗಿ ಈ‌ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿ, ಅವರಿಗೆ ಅಗತ್ಯವಾಗಿರುವ ಸೇವೆಯನ್ನು ನೀಡಬೇಕು. ಉಪಕಾರ ಸ್ಮರಣೆಯ ಮೌಲ್ಯವನ್ನು ಹೇಳಿಕೊಡುವಂತಹ ಉತ್ತಮ ಗಾದೆಮಾತಿದು. Kannada proverb – Needida kaige […]

ಕನ್ನಡ ಗಾದೆಮಾತು – ಕಷ್ಟವಿಲ್ಲದೆ ಇಷ್ಟ ಈಡೇರಲ್ಲ.

ಮನುಷ್ಯನು ಇಷ್ಟಪಟ್ಟ ಸಂಗತಿಗಳು ಅವನಿರುವಲ್ಲಿಗೇ ತಾನಾಗಿ ಬಂದುಬಿಡುವುದಿಲ್ಲ‌.  ಅವಕ್ಕಾಗಿ ನಾವು ಬಹಳ ಪರಿಶ್ರಮ ಪಡಬೇಕಾಗುತ್ತದೆ.‌  ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳ ಗಳಿಕೆ, ಉದ್ಯೋಗದಲ್ಲಿ ಉನ್ನತ ಹಂತ ಪಡೆಯುವಿಕೆ, ಹೆಚ್ಚಿನ ವಿದ್ಯಾರ್ಹತೆ, ಸಮಾಜದಲ್ಲಿ ಗೌರವಾರ್ಹ ಸ್ಥಾನಮಾನ – ಇವೆಲ್ಲಕ್ಕೂ ಛಲ ಬಿಡದ ನಿರಂತರ ಪರಿಶ್ರಮ ಬೇಕು‌.‌ ‘ಇಲ್ಲ, ನನಗೆ ಇಷ್ಟೆಲ್ಲ ಕಷ್ಟ ಪಡಲು ಆಗುವುದಿಲ್ಲ’ ಎನ್ನುವವರಿಗೆ ಯಶಸ್ಸೆಂಬ ದೇವತೆ ಒಲಿಯುವುದಿಲ್ಲ. ಹೀಗಾಗಿ ಈ ಗಾದೆಮಾತು ಒಂದು ವಾಸ್ತವಿಕ ವಿಷಯವನ್ನು ಹಾಗೂ ಯಶಗಳಿಕೆಯ ಬಗೆಗೆ ಒಂದು ಕಿವಿಮಾತನ್ನು ಹೇಳುತ್ತದೆ ಅನ್ನಬಹುದು‌. Kannada […]

ಕನ್ನಡ ಗಾದೆ ಮಾತು – ಹಸನ್ಮುಖಿ ಸದಾ ಸುಖಿ‌

ಎರಡೇ ಪದಗಳಿದ್ದರೂ ಎಷ್ಟೆಲ್ಲ ಅರ್ಥ ಇರುವ ಗಾದೆ ಮಾತು ಇದು! ಸದಾ ನಗೆಮೊಗದಿಂದ ಇರುವ ವ್ಯಕ್ತಿಯನ್ನು ಹಸನ್ಮುಖಿ ಎನ್ನುತ್ತಾರೆ. ಇಂತಹ ವ್ಯಕ್ತಿಗೆ ಬದುಕಿನ ಕಷ್ಟ, ಸವಾಲು, ಬೇಸರಗಳ ಕಡಲನ್ನು ದಾಟುವ ಸಂದರ್ಭದಲ್ಲಿ ಮುಗುಳ್ನಗುತ್ತಾ ಇರುವಂತಹ ಸಾಮರ್ಥ್ಯ ಇರುತ್ತದೆ. ಇದು ಅವನಲ್ಲಿ/ಅವಳಲ್ಲಿ ಮಾತ್ರವಲ್ಲ, ತನ್ನ ಬಳಿ ಬರುವ, ತಾನು ಭೇಟಿ ಮಾಡುವ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ಸಂತೋಷ, ನಿರಾತಂಕ ಭಾವವನ್ನು ಹುಟ್ಟಿಸುತ್ತದೆ. ಬದುಕಿನ ನಿಜ ಗೆಲುವು ಅಂದರೆ ಹಸನ್ಮುಖವೇ. ಇಂತಹ ವ್ಯಕ್ತಿಯು ಸದಾಸುಖಿಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.  ತನ್ನ […]

ಕನ್ನಡ ಗಾದೆ ಮಾತು – ಸೌಟಿಗೇನು ಗೊತ್ತು ಸಾರಿನ ರುಚಿ?

ಜೀವನದ ಒಂದು ವಿಪರ್ಯಾಸವನ್ನು ಈ ಗಾದೆಮಾತು ಹೇಳುತ್ತಿದೆ. ಸೌಟು ಸದಾಕಾಲವೂ ರುಚಿಕರವಾದ ಸಾರಿನಲ್ಲೇ ಇದ್ದರೂ ಅದಕ್ಕೆ ಸಾರಿನ ರುಚಿಯನ್ನು ಸವಿಯುವ ಸಾಮರ್ಥ್ಯ ಇರುವುದಿಲ್ಲ. ಇದೇ ರೀತಿಯಲ್ಲಿ ಮನೆ ತುಂಬಾ ಪುಸ್ತಕಗಳಿದ್ದರೂ ಒಂದು ಪುಸ್ತಕವನ್ನೂ ಓದದವರು, ಅತಿ ಸುಂದರವಾದ ಹೂವಿನ ತೋಟದಲ್ಲಿ ಓಡಾಡುತ್ತಿದ್ದರೂ ಒಂದೇ ಒಂದು ಹೂವಿನ ಅಂದವನ್ನೂ ಕಣ್ತುಂಬಿಕೊಳ್ಳದವರು, ಮುದ್ದಾದ ಮಕ್ಕಳ ನಡುವೆ ಇದ್ದರೂ ಒಂದೇ ಒಂದು ಮಗುವಿನ ಮುಗ್ಧ ಚೈತನ್ಯದ ಸಂತೋಷವನ್ನು ಅನುಭವಿಸದವರು, ಅವಕಾಶವಿದ್ದರೂ ಜೀವನ ಸಮೃದ್ಧಿಯಿಂದ ವಂಚಿತರಾಗುತ್ತಾರೆ. ಬದುಕಿನ ಒಂದು ನೈಜ ವಿಷಾದವನ್ನು ಈ […]

ಕನ್ನಡ ಗಾದೆಮಾತು – ಅನ್ನ ಹಾಕಿದ ಮನೆ ಕೆಡಲ್ಲ, ಗೊಬ್ಬರ ಹಾಕಿದ ಹೊಲ ಕೆಡಲ್ಲ.

ಜೀವನದ ಬಗ್ಗೆ ತಿಳುವಳಿಕೆ ಹೇಳುವ ಒಂದು ಗಾದೆ ಮಾತು ಇದು‌. ಬೇರೆಯವರಿಗೆ, ಕಷ್ಟದಲ್ಲಿರುವವರಿಗೆ, ಬಂದು ಹೋಗುವವರಿಗೆ ಒಟ್ಟಿನಲ್ಲಿ ತನ್ನ ನೆರಳಿಗೆ ಬರುವ ಯಾರಿಗೇ ಆದರೂ ಅನ್ನ ಹಾಕುವ ಮನೆ ಅಂದರೆ ಅದು ಒಂದು‌ ಒಳ್ಳೆಯ ಕೆಲಸ ಮಾಡುವ ಮನೆ. ಇಂತಹ ಮನೆಯ ಮೇಲೆ ಅಲ್ಲಿ ಊಟ ಮಾಡಿದವರ ಹಾರೈಕೆ ಮತ್ತು ದೇವರ ಆಶೀರ್ವಾದ ಸದಾ ಇರುತ್ತವೆ. ಹೀಗಾಗಿ ಅದು ಎಂದೂ ಹಾಳಾಗುವುದಿಲ್ಲ. ಹಾಗೆಯೇ ಗೊಬ್ಬರ ಹಾಕಿದ ಹೊಲ. ಅದು ಸದಾ ಫಲವತ್ತಾಗಿರುತ್ತದೆ, ಹಾಗೂ ಅದರಲ್ಲಿ ಬೆಳೆ ಚೆನ್ನಾಗಿ […]

ಕನ್ನಡ ಗಾದೆ ಮಾತು‌ – ಬಾವಿ ಬಳಸದೆ ಕೆಟ್ಟಿತು, ನೆಂಟಸ್ತಿಕೆ ನಡೆಸದೆ ಕೆಟ್ಟಿತು.

ಬಾವಿಯೊಂದರ ನೀರು ಯಾವಾಗ ಕುಡಿಯಲು, ಮೀಯಲು ಬಟ್ಟೆ ಮುಂತಾದವನ್ನು  ತೊಳೆಯಲು ಯೋಗ್ಯ ಆಗಿರುತ್ತೆ ಅಂದರೆ ಅದನ್ನು ಜನರು ನಿಯಮಿತವಾಗಿ ಬಳಸುತ್ತಿದ್ದಾಗ. ಇರುವ ನೀರನ್ನು ಬಳಸುತ್ತಾ ಇದ್ದು, ಹೊಸ ನೀರು ಬಾವಿಯಾಳದ ನೀರಿನ ಸೆಲೆಗಳಿಂದ ಬರುತ್ತಿದ್ದರೆ ಆ ಬಾವಿಯ ನೀರು ಬಳಸಲು ಯೋಗ್ಯವಾಗಿರುತ್ತದೆ.‌ ಹಾಗೆಯೇ ನಮ್ಮ ನೆಂಟಸ್ತನಗಳು ಉಳಿಯುವುದು ನಾವು ಅವನ್ನು ನಿಯಮಿತವಾಗಿ ನಡೆಸಿದಾಗ. ಅಂದರೆ ಆಗಾಗ ಕ್ಷೇಮಸಮಾಚಾರದ ಮಾತಾಡುವುದು, ಕಷ್ಟಸುಖ ವಿಚಾರಿಸುವುದು, ಪರಸ್ಪರರ ಮನೆಯ ಸಮಾರಂಭಗಳಿಗೆ ಹೋಗಿ ಬಂದು ಮಾಡುವುದು, ಒಬ್ಬರು ಇನ್ನೊಬ್ಬರ ಆಪತ್ತಿಗೆ ಒದಗುವುದು – […]

ಕನ್ನಡ ಗಾದೆಮಾತು – ಗಂಡು ಹುಟ್ಟಿದ್ರೆ ಅನ್ನ ಮರೀಬೇಕು, ಹೆಣ್ಣು ಹುಟ್ಟಿದ್ರೆ ಬಣ್ಣ ಮರೀಬೇಕು. 

ತುಂಬ ಜೀವನಾನುಭವ ಇರುವ ಒಂದು ಗಾದೆಮಾತು ಇದು ; ಒಬ್ಬ ತಾಯಿಯ ಅನುಭವವನ್ನು ಮನೋಜ್ಞವಾಗಿ ಹೇಳುವಂತಹ ಗಾದೆಮಾತು.  ಬೆಳೆಯುತ್ತಿರುವ ಗಂಡು ಮಕ್ಕಳಿಗೆ ಆಹಾರವು ತುಂಬ ಹೆಚ್ಚು ಪ್ರಮಾಣದಲ್ಲಿ ಬೇಕು‌‌. ಹೀಗಾಗಿ ತಾಯಿಯು ಎಲ್ಲರ ಊಟ-ತಿಂಡಿ ಆದ ಮೇಲೆ  ತನಗಾಗಿ ಮಾಡಿಟ್ಟುಕೊಂಡಿರುವ ದೋಸೆ/ಚಪಾತಿ/ಪೂರಿ/ಅನ್ನ ಮುಂತಾದ ಆಹಾರ ಪದಾರ್ಥಗಳನ್ನು ತೋಳದಂತಹ ಹಸಿವುಳ್ಳ ತನ್ಮ ಹದಿಹರೆಯದ ಮಗನಿಗೆ ಕೊಡಬೇಕಾಗಿ‌ ಬರಬಹುದು. ಹಾಗೆಯೇ, ಬೆಳೆಯುತ್ತಿರುವ ಹೆಣ್ಣು ಮಗಳಿದ್ದಾಳೆ  ಅಂದರೆ ತಾಯಿಯ ಒಳ್ಳೊಳ್ಳೆ ಸೀರೆ, ಒಡವೆ, ಮುಖಾಲಂಕಾರ ಸಾಮಗ್ರಿಗಳನ್ನು ತುಂಬ ಇಷ್ಟಪಟ್ಟು ಬಳಸಲಾರಂಭಿಸುತ್ತಾಳೆ.  ಏಕೆಂದರೆ, […]

ಕನ್ನಡ ಗಾದೆಮಾತು – ಎಂಜಲು ಕೈಯಿಂದ ಕಾಗೇನೂ ಅಟ್ಟೋನಲ್ಲ. 

ಕನ್ನಡದ ಬಹು ಪ್ರಸಿದ್ಧವಾದ ಹಾಗೂ ತುಂಬ ಚಿತ್ರಕಶಕ್ತಿಯ ಗಾದೆ ಮಾತು ಇದು. ನಮ್ಮ ನಡುವೆ ಇರುವ ಜಿಪುಣರನ್ನು ಕುರಿತು ಹೇಳಿರುವ ಮಾತು.‌ ಎಂಜಲು ಕೈ ಅಂದರೆ ಊಟ ಮಾಡಿ ಇನ್ನೂ ತೊಳೆಯದ ಕೈ‌. ಅದಕ್ಕೆ ಅನ್ನದ ಒಂದೆರಡು ಅಗುಳುಗಳು ಅಂಟಿಕೊಂಡಿರುವ ಸಾಧ್ಯತೆ ಇರುತ್ತದೆ. ಅದರಿಂದ ಕಾಗೆಯನ್ನು ಓಡಿಸಿದರೆ ಆ ಅಗುಳುಗಳು ನೆಲಕ್ಕೆ ಬಿದ್ದು ಜಿಪುಣನಿಗೆ ನಷ್ಟ ಆಗುತ್ತದಲ್ಲವೆ!? ಅದಕ್ಕಾಗಿಯೇ ಅವನು ಎಂಜಲು ಕೈಯಲ್ಲಿ ಕಾಗೆಯನ್ನು ಅಟ್ಟುವುದಿಲ್ಲ (ಓಡಿಸುವುದಿಲ್ಲ)! ಜಿಪುಣರನ್ನು ಲಘುವಾಗಿ ತಮಾಷೆ ಮಾಡುವ ಗಾದೆ ಮಾತು ಇದು.  Kannada […]

Page 1 of 16

Kannada Sethu. All rights reserved.