ಕೆಲವರಿಗೆ ಏನಾದರೂ ಒಂದು ಕೆಲಸ ಹೇಳಿದರೆ, ಅದನ್ನು ತಮಗೆ ಮಾಡಲು ಸಾಧ್ಯ ಇದ್ದರೂ, ಬಿಡುವಿದ್ದರೂ ತಾವು ಮಾಡುವುದಿಲ್ಲ. ಬದಲಿಗೆ ಆ ಕೆಲಸವನ್ನು ತಮ್ಮ ಪಕ್ಕದಲ್ಲಿರುವವರಿಗೋ, ಸ್ನೇಹಿತರಿಗೋ, ತಮ್ಮ ಸಿಬ್ಬಂದಿಗೋ ಹೇಳುತ್ತಾರೆ. ತರಗತಿಯಲ್ಲಿ ವಿದ್ಯಾರ್ಥಿಗಳು, ಮನೆಯಲ್ಲಿ ಕುಟುಂಬ ಸದಸ್ಯರು ಹೀಗೆ ಮಾಡುವುದುಂಟು. ಹೀಗಾದಾಗ ಆ ಕೆಲಸ ಆಗೇ ಆಗುತ್ತದೆ ಎಂದು ನಾವು ಖಾತ್ರಿಯಾಗಿ ಹೇಳಲು ಸಾಧ್ಯ ಆಗುವುದಿಲ್ಲ. ಏಕೆಂದರೆ, ತಾವು ಮಾಡಬೇಕಾದ/ಮಾಡಬಹುದಾದ ಕೆಲಸವನ್ನು ಬೇರೆಯವರಿಗೆ ಜಾರಿಸುವವರನ್ನು ನೆಚ್ಚಿಕೊಳ್ಳಲು, ನಂಬಲು ಸಾಧ್ಯ ಆಗದು. ಇಂತಹ ವರ್ತನೆಯು ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!