ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು –  ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.

ಕೆಲವು ಸಂದರ್ಭಗಳಿರುತ್ತವೆ‌‌. ಅಪಹರಣಕಾರರು ತಾವು ಹಿಡಿದಿಟ್ಟುಕೊಂಡ ಒತ್ತೆಯಾಳುಗಳನ್ನು, ಶತ್ರು ದೇಶದ ಸೈನಿಕರನ್ನು ಸೆರೆ ಹಿಡಿದ ಸೈನ್ಯಾಧಿಕಾರಿಗಳು ತಮ್ಮ ಸೆರೆಯಾಳುಗಳನ್ನು ನಡೆಸಿಕೊಳ್ಳುವ ಕ್ರಮವು ಮೇಲೆ ಹೇಳಿದ ಗಾದೆ ಮಾತನ್ನು ನೆನಪಿಸಬಹುದು.‌ ಬೆಕ್ಕು ಇಲಿಯನ್ನು ತಿನ್ನುವ ಮೊದಲು ಚಿನ್ನಾಟ, ಚೆಲ್ಲಾಟ ಆಡಬಹುದು, ಆದರೆ ಇಲಿಗೆ ತನಗೆ ಸಾವು ಕಾದಿದೆ ಎಂದು ಗೊತ್ತಿರುವುದರಿಂದ ಕ್ಷಣಕ್ಷಣವೂ  ಆ ಪಾಪದ ಜೀವಿಗೆ ಪ್ರಾಣವೇ ಬಾಯಿಗೆ ಬಂದ ಹಾಗೆ ಆಗುತ್ತಿರುತ್ತದೆ.  Kannada proverb – Bekkige chellata, ilige praana Sankata( It is a […]

ಕನ್ನಡ ದಾಸವಾಣಿ – “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ”

ಇದು ಪುರಂದರದಾಸರ ಒಂದು ಪ್ರಸಿದ್ಧ ಕೀರ್ತನೆಯ ಮೊದಲ ಸಾಲು‌‌. ಇಂದು ಇದ್ದು, ನಾಳೆ ಇಲ್ಲವಾಗುವ    ಭೂಮಿಯ ಜೀವನದ ಅರ್ಥಹೀನತೆ, ನಶ್ವರತೆಗಳನ್ನು ಈ ಸಾಲು ಅತ್ಯಂತ ಸರಳವಾಗಿ  ಹೇಳುತ್ತದೆ. ಮಾಳಿಗೆ ಮನೆ, ಮಡದಿ ಮಕ್ಕಳು ಎಂದು ಒದ್ದಾಡುವ ಮನುಷ್ಯನು ತನ್ನ ನಿಜವಾದ ಮನೆಯಾದ ದೇವರ ಮನೆಯನ್ನು ಮರೆತುಬಿಡುತ್ತಾನೆ, ಹಾಗೆ ಮಾಡಬಾರದು ಎಂಬುದೇ ಇದರ ತಾತ್ಪರ್ಯವಾಗಿದೆ. Kannada poet speak – Allide nammane, illuruvudu summane( My actual home is there, I am simply […]

ಕನ್ನಡ ಗಾದೆಮಾತು – ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದನಂತೆ. 

ಲೋಕಾನುಭವದ ಸಾರರೂಪವೇ ಗಾದೆಮಾತುಗಳು. ಅದಕ್ಕೆ  ಮೇಲಿನದೂ  ಅಪವಾದ ಅಲ್ಲ.  ಜನ ಏನಾದರೂ ಕೆಲಸವನ್ನು ಪ್ರಾರಂಭಿಸುವಾಗ ಬಲು ಉತ್ಸಾಹದಿಂದ ಪ್ರಾರಂಭಿಸುತ್ತಾರೆ, ನೋಡುವವರು ಆಹಾ ಎನ್ನುವಂತೆ. ಪ್ರಾರಂಭದಲ್ಲಿ ಅಗಸನು ಯಕಃಶ್ಚಿತ್ ಗೋಣಿಚೀಲವನ್ನು ಸಹ ಎತ್ತಿ ಎತ್ತಿ ಒಗೆದಂತೆ.‌ ಆದರೆ, ದಿನ ಕಳೆಯುತ್ತಾ ಹೋದಂತೆ ಅವರ ಉತ್ಸಾಹ ಕುಗ್ಗಿ ಕೆಲಸದ ಗುಣಮಟ್ಟವು ಕಡಿಮೆ ಆಗುತ್ತದೆ. ಇಂತಹ ಮಾತಿಗೆ ಅವಕಾಶ ಕೊಡದಂತೆ ನಾವು ಕೆಲಸದ ಗುಣಮಟ್ಟ‌ ಮತ್ತು‌ ನಮ್ಮ ಉತ್ಸಾಹವನ್ನು ಯಾವಾಗಲೂ ಒಂದೇ ಸಮನಾಗಿರುವಂತೆ  ಕಾಪಾಡಿಕೊಳ್ಳಬೇಕು. Kannada proverb – Hosadaralli agasa […]

ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.

ಮಣ ಅಂದರೆ ಕನ್ನಡ ನಾಡಿನಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ತೂಕದ ಒಂದು ಅಳತೆ. ಇದು ಸುಮಾರು ನಲವತ್ತು ಸೇರಿನಷ್ಟು ಇರುತ್ತದೆ. ಕಣ ಅಂದರೆ ಪದಾರ್ಥವೊಂದರ ತೀರಾ ಸಣ್ಣ ಚೂರು ಅಥವಾ ಅತ್ಯಂತ ಸೂಕ್ಷ್ಮವಾದ ಅಂಶ ಎಂದು ಅರ್ಥ. ‌ಕೆಲವರು ತಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು  ಬಡಾಯಿ ಕೊಚ್ಚುತ್ತಾ ಮಾತಿನಲ್ಲೇ ಮಹಲು‌ ಕಟ್ಟುತ್ತಾರೆ. ಇದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ, ಪ್ರಯೋಜನವಿರಲಿ ಬೇಡದೆ ಇರುವ ಮಾತು ಕೇಳಿದ ಬೇಸರ ಬರುತ್ತದೆ ಅಷ್ಟೇ. ಇದರ ಬದಲು ಒಂದೇ ಒಂದು ಕಣದಷ್ಟು […]

ಕನ್ನಡ ಗಾದೆಮಾತು – ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನವಲ್ಲ

ಜೀವನದಲ್ಲಿ ಕೆಲವು ಸಂಗತಿಗಳು ತಮ್ಮ ಹೊರ ರೂಪ, ಥಳುಕು, ಮಿಂಚಾಟದಿಂದ ತುಂಬ ಆಕರ್ಷಕವಾಗಿ, ತುಂಬ ಮೌಲ್ಯಯುತವಾದವೇನೋ ಎಂಬಂತೆ ಕಾಣುತ್ತವೆ. ಬೇಗಡೆ ಕಾಗದ ನಿಜವಾದ ಚಿನ್ನದಂತೆ ಕಾಣಬಹುದು, ಬಿಳಿಯಾದ ಯಾವುದೋ ದ್ರವ ಹಾಲಿನಂತೆ ಕಾಣಬಹುದು. ಆದುದರಿಂದ ನಾವು ಜೀವನದಲ್ಲಿ ಮೇಲ್ನೋಟಕ್ಕೆ ಆಕರ್ಷಕವಾಗಿ‌ ಕಾಣುವ ಸಂಗತಿಗಳನ್ನು ಮತ್ತೆ ಮತ್ತೆ ಪರಿಶೀಲಿಸಿಯೇ ನಂಬಬೇಕು. Kannada proverb – Bellagirodella haalalla, holeyodella chinnavalla( All that looks white is not milk, and all that glitters is not […]

ಕನ್ನಡ ಗಾದೆ ಮಾತು – ತಾಳಿದವನು ಬಾಳಿಯಾನು.

ತಾಳ್ಮೆ ಎಂಬ ಸದ್ಗುಣದ ಮಹತ್ವವನ್ನು ಹೇಳುವ ಮಾತು ಇದು. ಮೋಡ ಕರಗಿ ಹನಿಯೊಡೆಯಲು, ಬೀಜ ಸಸಿಯಾಗಲು, ಕಾಯಿ ಹಣ್ಣಾಗಲು ಅದರದ್ದೇ ಆದ ಸಮಯ ಬೇಕು‌. ಇದಕ್ಕಾಗಿ ನಾವು ಕಾಯಬೇಕಾಗುತ್ತದೆ. ಹೀಗೆಯೇ ಒಬ್ಬರನ್ನು ತಪ್ಪು ತಿಳಿಯುವ ಮೊದಲು, ಯಾರ ಮೇಲಾದರೂ ಕೋಪಿಸಿಕೊಳ್ಳುವ ಮೊದಲು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನ ಮಾಡಬೇಕು. ಇಂತಹ ತಾಳ್ಮೆಯ ಗುಣ ಯಾರಿಗೆ ಇರುತ್ತದೋ ಅವರು ಚೆನ್ನಾಗಿ ಬಾಳುವುದರಲ್ಲಿ ಅನುಮಾನವಿಲ್ಲ. Kannada proverb : Taalidavanu baaliyanu( One who has patience […]

ಕನ್ನಡ ಗಾದೆಮಾತು – ರಾತ್ರಿ ಕಂಡ ಬಾವಿಗೆ ಹಗಲು ಬಿದ್ರಂತೆ. 

ಜೀವನದಲ್ಲಿ ಕೆಲವು ಸಲ ಜನರು ಗೊತ್ತಿದ್ದೂ ಗೊತ್ತಿದ್ದೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.‌ ತಮ್ಮ ಅಳತೆ ಮೀರಿ ಸಾಲ ಮಾಡುವುದು, ಮೋಸಗಾರರು ಎಂದು ಒಳ ಮನಸ್ಸಿಗೆ ಗೊತ್ತಿದ್ದರೂ ಅಂತಹವರನ್ನು ನಂಬುವುದು, ಈ ಸಮಕಾಲೀನ ಸಂದರ್ಭದಲ್ಲಿ ಕ್ಷಣಿಕ ವ್ಯಾಮೋಹಕ್ಕೆ, ಅತಿಯಾಸೆಗೆ ಒಳಗಾಗಿ  ಅಂತರ್ಜಾಲ ಅಪರಾಧಗಳಿಗೆ( ಸೈಬರ್ ಕ್ರೈಮ್) ಬಲಿಪಶುವಾಗುವುದು.‌…ಇಂಥವು.‌ ಹೀಗೆ, ಜನ ಹಳ್ಳ ಇದೆಯೆಂದು ಗೊತ್ತಿದ್ದರೂ ಹೋಗಿ ಅದರಲ್ಲಿ ತಾವಾಗಿ ಬಿದ್ದರೆ  ‘ಅಯ್ಯೋ ನೋಡಿ, ರಾತ್ರಿ ಕಂಡ ಬಾವಿಗೆ ಹಗಲು‌ ಬಿದ್ರಂತೆ’ ಎಂದು ಅವರ ಜೊತೆಗಾರರು, ಪರಿಚಿತರು ಉದ್ಗರಿಸುವುದು ವಾಡಿಕೆ.  Kannada […]

ಕನ್ನಡ ನಾಣ್ಣುಡಿ – ಮಾಡಿದ್ದುಣ್ಣೋ ಮಹಾರಾಯ.

ಕನ್ನಡದ ಒಂದು ಪ್ರಸಿದ್ಧ ನಾಣ್ಣುಡಿ ಇದು.‌ ನಾವು‌ ನಮಗಾಗಿ ಮಾಡಿಕೊಂಡ ಅಡಿಗೆಯನ್ನು ನಾವೇ ಉಣ್ಣಬೇಕು.‌ ಹಾಗೆಯೇ ನಮ್ಮ ಕೆಲಸದಲ್ಲಿನ‌ ಸರಿತಪ್ಪುಗಳ ಫಲವನ್ನು ನಾವೇ ಅನುಭವಿಸಬೇಕು.‌ ಈ‌ ನುಡಿಯನ್ನು ನೆನೆದು  ಬದುಕಿನಲ್ಲಿ  ನಾವು ಎಚ್ಚರಿಕೆಯಿಂದ ನಮ್ಮ ಹೆಜ್ಜೆಗಳನ್ನು ಇಡಬೇಕು.‌  Kannada saying – Madiddunno maharaya( Eat what you cooked sir!). This is a very popular saying in Kannada. We have to eat what we cooked. Just like this […]

ಕನ್ನಡ ಗಾದೆಮಾತು –  ಹೊಟ್ಟೆ ತುಂಬಿದ್ರೆ ಹೋಳಿಗೆ ಸಪ್ಸಪ್ಪೆ.‌

ನಮಗೆ ಒಂದು ವಸ್ತು ಅಥವಾ ಒಂದು ವಿಷಯದ ಬಗ್ಗೆ ಆಸಕ್ತಿ ಇಲ್ಲದೆ ಇದ್ದರೆ ಅಥವಾ ಅದರ ಅಗತ್ಯ ನಮಗಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ನಮ್ಮ‌ ಮನಸ್ಸಿನಲ್ಲಿ ಆ ವಸ್ತುವಿನ ಮೌಲ್ಯ‌ ಕಡಿಮೆ ಆಗುತ್ತದೆ! ಹೊಟ್ಟೆ ತುಂಬ ಊಟ ಮಾಡಿದ್ದು, ‘ಇನ್ನು ಒಂದು ತುತ್ತು ಸಹ ಬೇಡ’ ಅನ್ನಿಸುವವರಿಗೆ ಎಷ್ಟೇ ಸಿಹಿಯಾದ ಹೋಳಿಗೆ ಕೊಟ್ಟರೂ ‘ ಅಯ್ಯೋ, ನಂಗೆ ಬೇಡ. ಇದು‌ ಸಪ್ಪೆ ಸಪ್ಪೆ’ ಎಂದಾರು ಅವರು! ನಮ್ಮಮ‌ನಸ್ಸು ಜೀವನವನ್ನು ನಾವು ನೋಡುವ ಕ್ರಮವನ್ನು ಎಷ್ಟು ಪ್ರಬಲವಾಗಿ ಪ್ರಭಾವಿಸುತ್ತದೆ […]

ಕನ್ನಡ ಗಾದೆ ಮಾತು – ಮುತ್ತು ಕಳೆದರೆ ಸಿಕ್ಬಹುದು, ಹೊತ್ತು ಕಳೆದರೆ ಸಿಕ್ತದಾ? 

ಸಮಯದ ಮಹತ್ವವನ್ನು ತುಂಬ ಪರಿಣಾಮಕಾರಿಯಾಗಿ ಹೇಳುವ ಗಾದೆ ಮಾತಿದು.‌ ಮುತ್ತು‌ ಬೆಲೆಬಾಳುವ ವಸ್ತು ನಿಜ.‌ ಅದು ಒಂದು ವೇಳೆ ಕಳೆದುಹೋದರೆ, ಕಳಕೊಂಡವರ  ಅದೃಷ್ಟ ಚೆನ್ನಾಗಿದ್ದರೆ  ಆ ಮುತ್ತು ಮರಳಿ ಸಿಗುವ ಸಾಧ್ಯತೆ ಇದೆ.‌ ಆದರೆ ವ್ಯರ್ಥವಾಗಿ ಕಳೆದ ಸಮಯ ಮಾತ್ರ ಏನು‌ ಮಾಡಿದರೂ ಮತ್ತೆ ಸಿಗುವುದಿಲ್ಲ.‌ ಅದು ಶಾಶ್ವತವಾಗಿ ಹೊರಟು ಹೋದಂತೆಯೇ ಸರಿ.‌ ಅದಕ್ಕಾಗಿಯೇ ನಾವು ಹೊತ್ತನ್ನು ಮುತ್ತಿಗಿಂತ ಹೆಚ್ಚು ಮೌಲ್ಯಯುತವಾದುದು ಎಂದು ಅರಿತು ಜೋಪಾನ ಮಾಡಬೇಕು.   Kannada proverb – Muththu kaledare sikbahudu, hoththu […]

Page 10 of 16

Kannada Sethu. All rights reserved.